Daily horoscope: ಈ ರಾಶಿಯವರು ಉದ್ಯೋಗದಲ್ಲಿ ಜವಾಬ್ದಾರಿಯುತ ಸ್ಥಾನ ಪಡೆಯಲಿದ್ದಾರೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 02:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:48 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:30ರ ವರೆಗೆ.
ಮೇಷ: ವ್ಯಾಪಾರದಿಂದ ಅಧಿಕ ಹಣವು ಉಳಿತಾಯವಾಗಲು ಚಿಂತನೆ ನಡೆಸುವಿರಿ. ಕೆಲಸವನ್ನು ಮಾಡಿಸಿಕೊಳ್ಳಲು ಜಾಣ್ಮೆಯಿಂದ ಮಾತನಾಡುವಿರಿ. ವಿದ್ಯಾರ್ಥಿಗಳು ಮುಂದಿನ ಓದಿಗೆ ಬೇಕಾದ ತಯಾರಿ ನಡೆಸುವರು. ಉದ್ಯೋಗದಲ್ಲಿ ಜವಾಬ್ದಾರಿಯುತ ಸ್ಥಾನವವನ್ನು ಪಡೆಯುವಿರಿ. ಬಂಧುಗಳ ಬೆಂಬಲ ನಿಮ್ಮ ಕಾರ್ಯಕ್ಕೆ ಸದಾ ಇರಲಿದೆ. ಇಂದು ನಿಧಾನವಾಗಿ ಕೆಲಸಕಾರ್ಯಗಳು ನಡೆಯಲಿವೆ. ಪುಣ್ಯಕ್ಣೇತ್ರಗಳ ಭೇಟಿಯನ್ನು ಮಾಡುವಿರಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಾಲಬಾಧೆಯಿಂದ ನೀವು ಮುಕ್ತಾರಾಗಲಿದ್ದೀರಿ. ಮನೆಯ ಹಿರಿಯರ ಬಗ್ಗೆ ಪ್ರೀತಿ ಹೆಚ್ಚಾಗಬಹುದು.
ವೃಷಭ: ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಸಂತೋಷದಿಂದ ಇಂದು ಇರುವಿರಿ. ನಿಮ್ಮ ಕಾರ್ಯಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ. ನಿಮ್ಮನ್ನು ಪರಿಚಿತರು ಮಾತನಾಡಿಸದೇ ಇರಬಹುದು. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ವೃತ್ತಿಪರರು ಬಹಳ ಉತ್ಸಾಹದಿಂದ ಕಛೇರಿಯಲ್ಲಿ ಕೆಲಸವನ್ನು ಮಾಡುವರು. ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ಜೀವನವೂ ಹಾಳಾಗುತ್ತದೆ ಎಂಬ ಸತ್ಯವು ನೆನಪಿನಲ್ಲಿ ಇರಲಿ. ಸಂಪತ್ತಿನ ವಿಚಾರದಲ್ಲಿ ಜಾಗಕರೂಕರಾಗಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಅತಿಥಿಗಳ ಜೊತೆ ಒಡನಾಡುವಿರಿ.
ಮಿಥುನ: ಮಾತನಾಡಲು ಬಹಳ ಮುಜುಗರವಾದೀತು. ನಿಮಗೆ ಬೇಕಾದುದನ್ನೇ ಮಾಡಿಸಿಕೊಳ್ಳುವ ಜಾಯಮಾನದವರಾಗಿದ್ದೀರಿ. ಆನ್ ಲೈನ್‌ಶಾಪಿಂಗ್ ನಿಂದ ಅಧಿಕ ಹಣವನ್ನು ಖರ್ಚು ಮಾಡುವಿರಿ. ಒಳ್ಳೆಯ ಸಮಯವನ್ನು ನಿರೀಕ್ಷಿಸಿ. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ಹೆಚ್ಚಿನ ಜವಾಬ್ದಾರಿಗಳು ಸಿಗಬಹುಸು. ಓಡಾಟದಿಂದ ದೇಹಾಯಾಸವಾಗಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ಮಾತಿನಿಂದ ಕಲಹವಾಗಬಹುದು. ತಂದೆಗೆ ಸಮಾನರಾದವರ ಜೊತೆ ಕಲಹವನ್ನು ಮಾಡಿಕೊಳ್ಳಬೇಡಿ.
ಕಟಕ: ಆಗಿಹೋದ ವಿಷಯವನ್ನು ಮತ್ತೆ ನೆನಪಿಸಿಕೊಂಡು ದಾಂಪತ್ಯದಲ್ಲಿ ಜಗಲಕವಾಗಬಹುದು. ಶತ್ರುಗಳಿಂದ ಸಣ್ಣ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ಆರ್ಥಿಕಸ್ಥಿತಿಯನ್ನು ಊರ್ಜಿತಗೊಳಿಸಲು ಬಹಳ ಶ್ರಮ ಪಡುವಿರಿ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ಪಾಲುದಾರಿಕೆಯ ವಿಚಾರದಲ್ಲಿ ನೀವು ಆತುರಪಡಬಾರದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ಇಂದು ಎಲ್ಲವನ್ನೂ ಅಳೆದು ತೂಗಿ ಮಾಡಬೇಕಾದ ಸ್ಥಿತಿ ಬರಬಹುದು. ಅತಿಯಾಗಿ ಮಾತಾನಾಡಿ ಗುಟ್ಟನ್ನು ರಟ್ಟು ಮಾಡುವಿರಿ.
-ಲೋಹಿತಶರ್ಮಾ ಇಡುವಾಣಿ