AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ನಿಮ್ಮ ಸ್ಥಿರಾಸ್ತಿ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ನಿಮ್ಮ ಸ್ಥಿರಾಸ್ತಿ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 11, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 11 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ರಿಂದ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:24 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:14ರ ವರೆಗೆ.

ಮೇಷ: ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಕಾರಣಾಂತರಗಳಿಂದ ನಿಮ್ಮ‌ ಯಾತ್ರೆಯು ಸ್ಥಗಿತವಾದೀತು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಇಂದು ಗೋವುಗಳ ಸಹವಾಸವನ್ನು ಮಾಡಲಿದ್ದೀರಿ. ಕೆಲವು ಸಮಯದ ಅಧ್ಯಾತ್ಮದ ಚಿಂತನೆಯನ್ನು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಹೆಸರನ್ನು ಗಳಿಸಲು ನಿಮಗೆ ನಾನಾ ದಾರಿಗಳು ಸಿಗಬಹುದು. ತಾಯಿಯ ಆರೋಗ್ಯವು ಸುಧಾರಿಸಬಹುದು. ಹೆಚ್ಚು ಮಾತನಾಡುವುದು ಅಪಾಯವೆನಿಸುವ ಸಾಧ್ಯತೆ ಇದೆ.

ವೃಷಭ: ಇರುವುದನ್ನು ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ನಿಮ್ಮನ್ನು ನೀವೇ ತಳ್ಳಿಕೊಳ್ಳುವಿರಿ. ನೀವು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಲು ಬಯಸುವಿರಿ. ಕೆಲವು ನಿಮಿತ್ತಗಳು ನಿಮಗೆ ಭವಿಷ್ಯದ ಸೂಚನೆಯನ್ನು ಕೊಡಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೂ ಇರಬಹುದು. ನಿಮ್ಮ‌ ನೌಕರರನ್ನು ಬಹಳ ಕೆಳದೃಷ್ಟಿಯಿಂದ ನೋಡುವಿರಿ. ಅಧಿಕಾರಿಗಳು ನಿಮ್ಮ ಉತ್ತರವನ್ನು ಪಡೆಯಲು ನಾನಾ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ಸಿಕ್ಕಿ ಹಾಕಿಸಬಹುದು. ಇನ್ನೊಬ್ಬರ ಇಚ್ಛೆಯಂತೆ ನಡೆಯಲಿದ್ದು ನೀವು ಎಲ್ಲದಕ್ಕೂ ಸಾಕ್ಷಿಯಾಗಿರುವಿರಿ‌.

ಮಿಥುನ: ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ‌ ನಿಮಗೆ ಗೊಂದಲವು ಬರಬಹುದು. ಕಛೇರಿಯಲ್ಲಿ ನಿಮ್ಮ ಮಾತನ್ನು ಕೇಳುವರು. ವಿದೇಶೀ ವಿನಿಮಯದಲ್ಲಿ ಲಾಭವಿರಲಿದೆ. ನಿಮ್ಮ ಕೆಲಸವನ್ನು ಬೇರೆಯವರು ಮಾಡಬೇಕಾದೀತು. ಮನೆಯಬಕೆಲಸವನ್ನು ಬೇಗನೆ ಮುಕ್ತಾಗೊಳಿಸುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದವರೇ ಹೊರಗೆ ಹೋಗಲು ಇಚ್ಛಿಸುವಿರಿ. ಕೆಲಸವನ್ನು ಸರಳ ಮಾಡಿಕೊಂಡು ಎಲ್ಲರಿಂದ ಪ್ರಶಂಸೆ ಗಳಿಸುವಿರಿ. ನಿದ್ರೆಯನ್ನು ಕಡಿಮೆ‌ ಮಾಡುವಿರಿ.

ಕಟಕ: ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ನಿಮಗೆ ಆಗದು. ಅಶಿಸ್ತಿನ ಕಾರಣ ನೀವು ಹಿರಿಯರಿಂದ ಬೈಸಿಕೊಳ್ಳಬೇಕಾಗಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರಬಹುದು. ಭೂಮಿಯ ಉತ್ಪನ್ನದಿಂದ ಲಾಭವಾಗಕಿದೆ. ಕಲೆಯಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ಬಂಧುಗಳಿಂದ ದೂರವಿರುವಿರಿ.

ಸಿಂಹ: ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ನಿಮಗೆ ವಹಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ನಿಮ್ಮ ನಡತೆಯ ಪರೀಕ್ಷೆಯೂ ನಡೆಯಲಿದೆ. ವೃಥಾ ಕಾಲಹರಣವನ್ನು‌ ಮಾಡಿ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಪಡೆಯುವಿರಿ. ಅಹಂಕಾರವನ್ನು ಎಲ್ಲರದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ನಿಲುವನ್ನು ಸಂಗಾತಿಯು ಪ್ರೋತ್ಸಾಹಿಸಬಹುದು.

ಕನ್ಯಾ: ಸಾಲವನ್ನು ಮರುಪಾವತಿ‌ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಆರಂಭಿಸುವುದಕ್ಕಿಂತ ಸಾಮರ್ಥ್ಯವನ್ನು ಕಂಡುಕೊಂಡು ಮಾಡುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆತು ನಿಮ್ಮ ಎಲ್ಲ‌ ಕೆಲಸಗಳನ್ನು ಬದಿಗಿರಿಸುವುದು. ಕಾನೂನು ಸಮರದಲ್ಲಿ ಸೋಲಾಗಬಹುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಪ್ರಬಲವಾಗಬೇಕಿದೆ. ನಿಮ್ಮ‌ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇದು ನಿಮ್ಮನ್ನು ಉದ್ವೇಗಕ್ಕೆ ಒಳಗಾಗಿಸುವುದು. ವಿಷ್ಣುವಿನ ಸ್ತೋತ್ರವನ್ನು ಮಾಡಿ.

ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್