Horoscope Today: ರಾಶಿಭವಿಷ್ಯ, ಈ ರಾಶಿಯವರಿಗೆ ಹಣದ ಹೊಂದಾಣಿಕೆಯು ಇಂದು ಕಷ್ಟವಾಗಬಹುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 01) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 10:59 ರಿಂದ 12:33ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:38 ರಿಂದ 05:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 07:54 ರಿಂದ 09:27ರ ವರೆಗೆ.
ಧನು ರಾಶಿ : ಬಂಧುಗಳ ಸ್ಥಿರಾಸ್ತಿಯ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಅನಾರೋಗ್ಯದ ಕಾರಣ ಇಂದು ನಿಮ್ಮ ಕಾರ್ಯವು ತೃಪ್ತಿಯಾಗಿ ಇಲ್ಲದಂತೆ ಕಾಣಿಸುತ್ತದೆ. ನಿಮ್ಮ ಗಾಂಭಿರ್ಯವು ನಿಮ್ಮರಿಗೆ ಭಯವನ್ನು ತರಿಸುವುದು. ಆಸ್ತಿಗೆ ಸಂಬಂಧಪಟ್ಟ ಹಳೆಯ ದಾಖಲೆಗಳನ್ನು ನೀವು ಪರಿಶೀಲಿಸುವಿರಿ. ಸಂತಾನದಿಂದ ನಿಮಗೆ ಸಂತೋಷವಾಗಲಿದೆ. ಯಂತ್ರಗಳಿಗಾಗಿ ನೀವು ಹಣವನ್ನು ಖರ್ಚುಮಾಡಬೇಕಾದೀತು. ಇಂದಿನ ನಿಮ್ಮ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಯಾರ ಮಾತನ್ನೂ ಕೇಳುವ ಮನಃಸ್ಥಿತಿಯು ನಿಮ್ಮದಾಗಿ ಇರುವುದಿಲ್ಲ.
ಮಕರ ರಾಶಿ : ವಿದ್ಯಾಭ್ಯಾಸದಲ್ಲಿ ಒಂದು ಮಟ್ಟಿನ ಪ್ರಗತಿಯು ಇರಲಿದೆ. ಹಣದ ಹೊಂದಾಣಿಕೆಯು ಇಂದು ಕಷ್ಟವಾಗಬಹುದು. ವ್ಯಾವಹಾರಿಕ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚು ಮಾಡುವಿರಿ. ನಿಮಗೆ ಸಂಬಂಧಿಸಿದ ಕಾರ್ಯವನ್ನಷ್ಟೇ ಮಾಡಿ. ಇನ್ನೊಬ್ಬರ ಕೆಲಸದ ಬಗ್ಗೆ ನಿಮ್ಮ ಸಲಹೆಯು ಬೇಡ. ಇಂದಿನ ಕೆಲವು ಸಂದರ್ಭವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅತಿಯಾದ ಕೋಪವು ನಿಮ್ಮ ದಿನವನ್ನು ಕೆಡಿಸುವುದು. ವಾಹನದಿಂದ ನಿಮಗೆ ಅಪಘಾತವೂ ಆಗುವ ಸಾಧ್ಯತೆ ಇದೆ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು.
ಕುಂಭ ರಾಶಿ : ಸಹೋದರರ ಶೀತಲ ಸಮರವು ಇಂದು ಎಲ್ಲರಿಗೂ ತಿಳಿಯಬಹುದು. ವ್ಯಾಪಾರವನ್ನು ನಿರ್ಲಕ್ಷ್ಯದಿಂದ ನಷ್ಟ ಮಾಡಿಕೊಳ್ಳುವಿರಿ. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾದ ಸ್ಥಿತಿಯು ಬರಬಹುದು. ಅಲ್ಪ ಆದಾಯಕ್ಕೆ ತೃಪ್ತಿಪಡಬೇಕಾಗುವುದು. ಇಂದು ಖುಷಿಯಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ದಾಂಪತ್ಯವು ಆನಂದದಿಂದ ಇರಲು ಒಂದು ಕಡೆಯಿಂದ ಮಾತ್ರ ಸಹಕಾರ ಸಾಲದು. ಅಕ್ಷಮ್ಯ ತಪ್ಪಿಗೂ ಕ್ಷಮೆಯನ್ನು ನೀಡಿ ದೊಡ್ಡವರಾಗುವಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಉದಗವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ. ಸ್ನೇಹಿತರ ಇಚ್ಛೆಯನ್ನು ಪೂರೈಸಲು ನೀವು ಸಮರ್ಥರಾಗುವಿರಿ.
ಮೀನ ರಾಶಿ : ಮನಸ್ಸು ಬಿಚ್ಚಿ ಇಂದು ನೀವು ಯಾವ ಕಾರ್ಯವನ್ನೂ ಮಾಡುವುದಿಲ್ಲ. ಎಲ್ಲದಕ್ಕೂ ನಿಮ್ಮೊಳಗೆ ಭಯವಿರುವುದು. ಅತಿಯಾದ ಸುಖವು ನಿಮ್ಮ ಕ್ರಿಯಾತ್ಮಕತೆಯನ್ನು ಕೊಲ್ಲುವುದು. ನಿಮಗೆ ಕೃತ್ರಿಮದ ಬಗ್ಗೆ ಸಂದೇಹ ಬರಲಿದೆ. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದು ನಿಮ್ಮ ಸ್ವಭಾವವಗಳಲ್ಲಿ ಒಂದು. ವಾಹನದ ಖರೀದಿಯನ್ನು ಮಾಡಬೇಕಾಗಿ ಬಂದಿರುವುದುರಿಂದ ಅನಿವಾರ್ಯವಾಗಿ ಸಾಲವನ್ನು ಮಾಡುವಿರಿ. ತಾಯಿಯ ಜೊತೆ ಜಗಳ ಮಾಡಿಕೊಳ್ಳುವಿರಿ. ಇಂದು ಮನೆಯ ಕೆಲಸಗಳು ಪರ್ವತಾಕಾರದಲ್ಲಿ ಹಾಗೆಯೇ ಇರುವುದು. ಸಂಗಾತಿಯ ಮೇಲೆ ನಿಮಗೆ ಅನುಮಾನ ಹೊಗೆ ಕಾಣಿಸಬಹುದು. ಪ್ರೇಮವು ಮುರಿದು ಹೋಗುವ ಸಾಧ್ಯತೆ ಇದೆ.
-ಲೋಹಿತಶರ್ಮಾ 8762924271 (what’s app only)