Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಧನಲಾಭವಾದರೂ ಮನಸ್ಸಿನಲ್ಲಿ ಬೇಸರ ತುಂಬಿ ಇರುವುದು

| Updated By: Rakesh Nayak Manchi

Updated on: Aug 11, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಧನಲಾಭವಾದರೂ ಮನಸ್ಸಿನಲ್ಲಿ ಬೇಸರ ತುಂಬಿ ಇರುವುದು
ಪ್ರಾತಿನಿಧಕ ಚಿತ್ರ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 11 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣಮ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ವ್ಯರಿಯಾನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ರಿಂದ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:47 ರಿಂದ 05:21ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28 ರ ವರೆಗೆ.

ಧನು ರಾಶಿ: ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿದ್ದು ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರಬಹುದು. ಸಹೋದರನ ಕಡೆಯಿಂದ ನಿಮಗೆ ಸಹಾಯವಾಗುವುದು. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಗೌರವ ಸಿಗಬಹುದು. ವ್ಯವಹಾರದ ಅಭಿವೃದ್ಧಿಯಾಗಿ ವಿದೇಶಿ ಸಂಪರ್ಕವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ನೀವೇ ಕಲ್ಪನೆಯನ್ನು ಮಾಡಿಕೊಂಡು ನಿಮ್ಮವರನ್ನು ದೂರವಿಡುವಿರಿ. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ.ಸಂಗಾತಿಯ ಮಾತುಗಳು ನಿಮಗೆ ಪಥ್ಯವಾಗಬಹುದು. ತಂದೆಗೆ ಇಂದು ನೀವು ಸಹಾಯ ಮಾಡುವಿರಿ.

ಮಕರ ರಾಶಿ: ಹಿತಶತ್ರುಗಳು ನಿಮಗೆ ಬರುವ ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷದಲ್ಲಿ ಇರುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳಬಹುದು. ದುಂದುವೆಚ್ಚವನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾದೀತು. ನೌಕರರಿಂದ ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಹೆಚ್ಚು ಕೇಳಿಬರಬಹುದು. ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸು ಕೂಡದು. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಏಕಾಂತವು ಬೇಸರ ತರಿಸಿದ್ದು ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ.

ಕುಂಭ ರಾಶಿ: ಪತ್ನಿಯ ಆರೋಗ್ಯದ ಚಿಂತೆ ನಿಮ್ಮನ್ನು ಕಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ಬೇಸರ ತುಂಬಿ ಇರುವುದು. ವೃತ್ತಿಯ ಒತ್ತಡವನ್ನು ಮನೆಗೆ ತರುವುದು ಬೇಡ. ನಿಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಿ. ನೀವು ಪರಿಚಿತರಿಂದ ಪ್ರಯೋಜನ ಪಡೆಯಲು ಬಯಸುವಿರಿ. ವೃತ್ತಿಜೀವನದಲ್ಲಿ ಅಧಿಕಾರಿಗಳು ನಿಮ್ಮ ಮಾತನ್ನು ಕೇಳಿ, ಬೇಕಾದುದನ್ನು ಮಾಡಿಕೊಡುವರು. ಯಂತ್ರಗಳ ವ್ಯವಹಾರದಲ್ಲಿ ಹೆಚ್ಚು ಲಾಭ ಇರಲಿದೆ. ಈ ಸಮಯವು ಪ್ರೇಮಕ್ಕೆ ಒಳ್ಳೆಯದು. ನಿಮ್ಮಿಂದ ಯಾರಿಗೂ ಅಗೌರವ ಕೊಡುವುದು ಬೇಡ. ಸಹೋದ್ಯೋಗಿಗಳ ಕೆಲಸದಿಂದ ನಿಮಗೆ ಸಿಟ್ಟು ಬರಬಹುದು. ಅದನದನು ಅಲ್ಲಿಯೇ ನುಂಗಿಕೊಳ್ಳಿ. ತಪ್ಪು ನಿರ್ಧಾರವನ್ನು ನಡುವೆ ಇವು ತೆಗೆದುಕೊಂಡು ಪಶ್ಚಾತ್ತಾಪ ಪಡಬೇಕಾದೀತು.

ಮೀನ ರಾಶಿ: ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವರು. ಆದರೆ ಅಲ್ಲಿಯವರೆಗೆ ತಾಳ್ಮೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿ ಇರಲಿ. ಧಾರ್ಮಿಕ ಆಚರಣೆಯಲ್ಲಿ ತೊಡಕಿಕೊಳ್ಳುವಿರಿ. ವೃತ್ತಿಜೀವನದಲ್ಲಿ ನಿಮ್ಮ ವೇತನವು ಅಧಿಕವಾಗಬಹುದು. ನಿಮ್ಮ ವ್ಯವಹಾರವು ಅಧಿಕ ಲಾಭವನ್ನು ಗಳಿಸಬಹುದು. ಅಧಿಕಾರಿ ವರ್ಗ ನಿಮ್ಮ ಮೇಲೆ ಕಣ್ಣಿಡಬಹುದು. ವಾಗ್ವಾದಗಳಿಗೆ ನೀವು ಅವಕಾಶ ಕೊಡುವುದು ಬೇಡ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ದೀರ್ಘಾವಧಿಯ ಹೂಡಿಕೆಯು ನಿಮಗೆ ಲಾಭವಾಗಲಿದೆ. ನಿಮಗೆ ಸಂಗಾತಿಯ ಸಹಾಯವು ಸಿಗಬಹುದು. ಸಹೋದರನಿಂದ ಮನೆಯಲ್ಲಿ ಕಿರಿಕಿರಿ ಆಗಬಹುದು. ಶಿವಕವಚನ್ನು ಪಠಿಸಿ ಇಂದಿನ ಕಾರ್ಯದಲ್ಲಿ ಪ್ರವೃತ್ತರಾಗಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ