Horoscope 11 August: ಉದ್ಯೋಗದಲ್ಲಿ ವರ್ಗಾವಣೆ, ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಉಂಟಾಗಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ: ಶುಕ್ರ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ವ್ಯರಿಯಾನ್, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03: 47 ರಿಂದ ಸಂಜೆ 05:21 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ.
ಮೇಷ ರಾಶಿ: ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ಇಂದಿನ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಕಾರ್ಮಿಕ ವಿಚಾರದಲ್ಲಿ ನಿಮಗೆ ಅಸಮಾಧಾನವು ಇರುವುದು. ಸಂಗಾತಿಗೆ ನೀವು ಸುಳ್ಳು ಹೇಳಿ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಯಾರ ಮೇಲೂ ಪಕ್ಷಪಾತ ಮಾಡದೇ ಇರಬೇಕಾಗುವುದು. ನಿಮ್ಮ ನಿರೀಕ್ಷೆ ಸಂಪೂರ್ಣ ಸರಿಯಾಗದು. ವೃತ್ತಿಯ ಕೆಲಸಗಳ ನಡುವೆ ಕುಟುಂಬವನ್ನು ಮರೆತಿರುವಿರಿ. ನೋವನ್ನು ದೊಡ್ಡ ಮಾಡಿಕೊಂಡು ಕಷ್ಟಡಬಹುದು. ಮಾತನ್ನು ನೀವು ಇಂದು ಕಡಿಮೆ ಮಾಡಿದ್ದೀರಿ.
ವೃಷಭ ರಾಶಿ: ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಕಾಲಾವಕಾಶದ ಕೊರತೆ ಇರುವುದು. ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಮಗ್ನರಾಗುವಿರಿ. ವಿವಾಹದ ಮಾತುಕತೆಗಳು ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ಅಪರಿಚಿತರ ಒಡನಾಟ ಹೆಚ್ಚು ಶ್ರೇಯಸ್ಕರ ಅಲ್ಲ. ನಿಮ್ಮ ಅನುಕೂಲಕ್ಕೆ ತಕ್ಕ ಕೆಲಸವನ್ನು ಮಾಡಿ. ಯಾರಾದರೂ ನಿಮ್ಮ ಬಳಿ ಕೆಲಸ ಮಾಡಿಕೊಡಲು ಸಹಾಯವನ್ನು ಕೇಳಬಹುದು. ಗೊತ್ತಿರುವುದನ್ನು ಹಂಚಿಕೊಳ್ಳಿ. ನೀವು ವಿರೋಧ ಮಾಡುವ ಯಾವ ಮಾತನ್ನು ಆಡುವುದು ಬೇಡ.
ಮಿಥುನ ರಾಶಿ: ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಲಾಭವು ನಿಮ್ಮದಾಗಬಹುದು. ಸಮಯಾದ ಅಭಾವದಿಂದ ಇಂದಿನ ಕೆಲಸಗಳು ಹಾಗೆಯೇ ಇರಬಹುದು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆಯುವರು. ನೀವು ಹಿರಿಯರ ಜೊತೆ ವಾಗ್ವಾದಕ್ಕೆ ಇಳಿಯುವಿರಿ. ಮನೆಯ ಕೆಲಸದಲ್ಲಿ ಸಮಯ ಕಳೆದಿದ್ದು ಗೊತ್ತಾಗದು. ಮಕ್ಕಳಿಗೆ ಪ್ರಿಯವಾದುದನ್ನು ಮಾಡುವಿರಿ. ಧನಸಹಾಯವನ್ನು ಮಾಡಲು ನಿಮಗೆ ಇಷ್ಟವಾಗದು. ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವಿರಿ. ನಿಮಗೆ ಮಕ್ಕಳು ಅವಶ್ಯಕತೆ ಇರುವ ಹಣದ ಸಹಾಯವನ್ನು ಮಾಡುವರು.
ಕಟಕ ರಾಶಿ: ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಉತ್ತಮ ಅವಕಾಶಗಳಿಂದ ನೀವು ವಂಚಿತರಾಗುವ ಸಾಧ್ಯತೆಬಿದೆ. ಕುಟುಂಬದ ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಸೋಲುವಿರಿ. ಅಪರಿಚಿತರ ಜೊತೆ ವ್ಯವಹಾರವನ್ನು ಮಾಡುವಾಗ ಗುಟ್ಟನ್ನು ಬಿಟ್ಟಕೊಡಬೇಡಿ. ಅತಿಥಿ ಸತ್ಕಾರವನ್ನು ಇಂದು ನೀವು ಮಾಡುವಿರಿ. ಮನಸ್ಸಿಗೆ ಸಂತೋಷ ಎನಿಸಬಹುದು. ಕುಲದೇವರ ಆರಾಧನೆಯನ್ನು ಹೆಚ್ಚು ಮಾಡುವುದು ಉತ್ತಮ.
ಸಿಂಹ ರಾಶಿ: ಶಿಕ್ಷಕರಾಗಿದ್ದರೆ ನಿಮ್ಮ ಶಿಷ್ಯರಿಂದ ಉಡುಗೊರೆ ಸಿಗಬಹುದು. ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ದೂರದ ಊರಿಗೆ ನಿಮ್ಮ ಪ್ರಯಾಣವು ಇರಲಿದೆ. ಉತ್ಸಾಹದಿಂದ ನಿಮ್ಮ ಇಂದಿನ ಕೆಲಸವು ಆಗಲಿದೆ. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆಗಳು ನಿಮ್ಮ ತಲೆನೋವಿಗೆ ಕಾರಣವಾಗುವುದು. ಸಹೋದನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ನಿಮ್ಮವರಿಗೆ ಕಿರಿಕಿರಿ ಆಗಬಹುದು. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ರಾಜಕಾರಣಿಗಳಿಗೆ ಇಂದು ಸ್ಥಾನಮಾನಗಳು ಸಿಗಬಹುದು. ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಲಿ.
ಕನ್ಯಾ ರಾಶಿ: ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ ಸಣ್ಣ ಉಳಿತಾಯಕ್ಕೆ ಇಂದು ಬಹಳ ಬೆಲೆಬರಲಿದೆ. ಏನಾದರೂ ಮಾಡುತ್ತ ತಮ್ಮನ್ನು ತೊಡಗಿಸಿಕೊಳ್ಳುವಿರಿ. ವಿವೇಕಮತಿಯಾಗಿ ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವೃತ್ತಿಜೀವನದಲ್ಲಿ ಆನಂದದ ವಾತಾವರಣವು ಇರಲಿದೆ. ಹೊಸ ಉದ್ಯಮವಾದರೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವಿರಿ. ಪ್ರಭಾವೀ ಜನರ ಜೊತೆ ಆತ್ಮೀಯತೆಯು ಬೆಳೆಯಬಹುದು. ಮಾನಸಿಕವಾಗಿ ಉಂಟಾಗವ ಕಿರಿಕಿರಿಗೆ ನಿಮಗೆ ಕೋಪ ಬರಬಹುದು.
ತುಲಾ ರಾಶಿ: ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ನಿರೋದ್ಯೋಗ ಹಿಂಸೆಯನ್ನು ಅನುಭವಿಸುವವರಿಗೆ ಉದ್ಯೋಗವು ಸಿಗಬಹುದು. ಈಗ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಬಹುದು. ಆಧ್ಯಾತ್ಮಿಕತೆಯ ಸೆಳೆತವು ಇರುವುದು. ನೆರೆಯವರ ವರ್ತನೆಯು ನಿಮ್ಮ ಸಿಟ್ಟಿಗೆ ಕಾರಣವಾಗಲಿದೆ. ಹೊಸ ಉದ್ಯೋಗವನ್ನು ಆರಂಭಿಸಬಹುದು. ಪ್ರೇಮ ಸಂಬಂಧಗಳಲ್ಲಿ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಸಹೋದರನ ಪ್ರಗತಿಯಲ್ಲಿ ನೀವು ಸಂತೋಷ ಆಗಲಿದೆ. ಸಹೋದರಿಯೆ ತೊಂದರೆಗೆ ನೀವು ಸ್ಪಂದಿಸುವಿರಿ.
ವೃಶ್ಚಿಕ ರಾಶಿ: ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ಪ್ರಾಣಿಗಳಿಂದ ಭಯವಾಗಬಹುದು. ನಿಮ್ಮ ಇಷ್ಟದವರ ಭೇಟಿಯಾಗಲಿದೆ. ಶಕ್ತಿ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಯಾರ ಬಗ್ಗೆಯೂ ಅನಗತ್ಯ ಟೀಕೆಗಳನ್ನು ಮಾಡುವುದು ಬೇಡ. ಆಧ್ಯಾತ್ಮದಲ್ಲಿ ಮನಸ್ಸು ಇರಲಿದೆ. ಕಳೆದ ದಿನಗಳ ಉದ್ಯಮಮತಗತು ಈಗಿನದ್ದನ್ನು ತೂಕ ಮಾಡುವಿರಿ. ಇಂದು ನಿಮ್ಮ ಸಂತೋಷವು ಕಡಿಮೆ ಇರಬಹುದು. ನಿಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಉತ್ತಮ ಅವಕಾಶವು ಸಿಗಲಿವೆ. ಸದುಪಯೋಗ ಮಾಡಿಕೊಂಡರೆ ಉತ್ತಮ ಭವಿಷ್ಯವು ಇರಲಿದೆ. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು. ಬಂಧುಗಳು ನಿಮ್ಮ ಬಗ್ಗೆ ಆಡಿಕೊಡಾರು.
ಧನು ರಾಶಿ: ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿದ್ದು ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರಬಹುದು. ಸಹೋದರನ ಕಡೆಯಿಂದ ನಿಮಗೆ ಸಹಾಯವಾಗುವುದು. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಗೌರವ ಸಿಗಬಹುದು. ವ್ಯವಹಾರದ ಅಭಿವೃದ್ಧಿಯಾಗಿ ವಿದೇಶಿ ಸಂಪರ್ಕವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ನೀವೇ ಕಲ್ಪನೆಯನ್ನು ಮಾಡಿಕೊಂಡು ನಿಮ್ಮವರನ್ನು ದೂರವಿಡುವಿರಿ. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ.ಸಂಗಾತಿಯ ಮಾತುಗಳು ನಿಮಗೆ ಪಥ್ಯವಾಗಬಹುದು. ತಂದೆಗೆ ಇಂದು ನೀವು ಸಹಾಯ ಮಾಡುವಿರಿ.
ಮಕರ ರಾಶಿ: ಹಿತಶತ್ರುಗಳು ನಿಮಗೆ ಬರುವ ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷದಲ್ಲಿ ಇರುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳಬಹುದು. ದುಂದುವೆಚ್ಚವನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾದೀತು. ನೌಕರರಿಂದ ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಹೆಚ್ಚು ಕೇಳಿಬರಬಹುದು. ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸು ಕೂಡದು. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಏಕಾಂತವು ಬೇಸರ ತರಿಸಿದ್ದು ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ.
ಕುಂಭ ರಾಶಿ: ಪತ್ನಿಯ ಆರೋಗ್ಯದ ಚಿಂತೆ ನಿಮ್ಮನ್ನು ಕಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ಬೇಸರದ ತುಂಬಿ ಇರುವುದು. ವೃತ್ತಿಯ ಒತ್ತಡವನ್ನು ಮನೆಗೆ ತರುವುದು ಬೇಡ. ನಿಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಿ. ನೀವು ಪರಿಚಿತರಿಂದ ಪ್ರಯೋಜನ ಪಡೆಯಲು ಬಯಸುವಿರಿ. ವೃತ್ತಿಜೀವನದಲ್ಲಿ ಅಧಿಕಾರಿಗಳು ನಿಮ್ಮ ಮಾತನ್ನು ಕೇಳಿ, ಬೇಕಾದುದನ್ನು ಮಾಡಿಕೊಡುವರು. ಯಂತ್ರಗಳ ವ್ಯವಹಾರದಲ್ಲಿ ಹೆಚ್ಚು ಲಾಭ ಇರಲಿದೆ. ಈ ಸಮಯವು ಪ್ರೇಮಕ್ಕೆ ಒಳ್ಳೆಯದು. ನಿಮ್ಮಿಂದ ಯಾರಿಗೂ ಅಗೌರವ ಕೊಡುವುದು ಬೇಡ. ಸಹೋದ್ಯೋಗಿಗಳ ಕೆಲಸದಿಂದ ನಿಮಗೆ ಸಿಟ್ಟು ಬರಬಹುದು. ಅದನದನು ಅಲ್ಲಿಯೇ ನುಂಗಿಕೊಳ್ಳಿ. ತಪ್ಪು ನಿರ್ಧಾರವನ್ನು ನಡುವೆ ಇವು ತೆಗೆದುಕೊಂಡು ಪಶ್ಚಾತ್ತಾಪ ಪಡಬೇಕಾದೀತು.
ಮೀನ ರಾಶಿ: ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವರು. ಆದರೆ ಅಲ್ಲಿಯವರೆಗೆ ತಾಳ್ಮೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿ ಇರಲಿ. ಧಾರ್ಮಿಕ ಆಚರಣೆಯಲ್ಲಿ ತೊಡಕಿಕೊಳ್ಳುವಿರಿ. ವೃತ್ತಿಜೀವನದಲ್ಲಿ ನಿಮ್ಮ ವೇತನವು ಅಧಿಕವಾಗಬಹುದು. ನಿಮ್ಮ ವ್ಯವಹಾರವು ಅಧಿಕ ಲಾಭವನ್ನು ಗಳಿಸಬಹುದು. ಅಧಿಕಾರಿ ವರ್ಗ ನಿಮ್ಮ ಮೇಲೆ ಕಣ್ಣಿಡಬಹುದು. ವಾಗ್ವಾದಗಳಿಗೆ ನೀವು ಅವಕಾಶಶನ್ನು ಕೊಡುವುದು ಬೇಡ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ದೀರ್ಘಾವಧಿಯ ಹೂಡಿಕೆಯು ನಿಮಗೆ ಲಾಭವಾಗಲಿದೆ. ನಿಮಗೆ ಸಂಗಾತಿಯ ಸಹಾಯವು ಸಿಗಬಹುದು. ಸಹೋದರನಿಂದ ಮನೆಯಲ್ಲಿ ಕಿರಿಕಿರಿ ಆಗಬಹುದು. ಶಿವಕವಚನ್ನು ಪಠಿಸಿ ಇಂದಿನ ಕಾರ್ಯದಲ್ಲಿ ಪ್ರವೃತ್ತರಾಗಿ.
ಲೋಹಿತಶರ್ಮಾ – 8762924271 (what’s app only)