Horoscope: ರಾಶಿಭವಿಷ್ಯ, ನೀವು ಈ ರಾಶಿಯವರಾಗಿದ್ದರೆ ನಿಮ್ಮ ಮಾತುಗಳು ನಿಮಗೇ ತಿರುಗು ಬಾಣಬಗಬಹುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 14 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶಿವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:37 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:46ರ ವರೆಗೆ.
ಧನು ರಾಶಿ: ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಪ್ರಯಾಣದಲ್ಲಿ ನಿಮ್ಮ ವಸ್ತುಗಳು ಕಾಣೆಯಾಗಬಹುದು. ಹಿತಶತ್ರುಗಳಿಂದ ನಿಮ್ಮ ಮನಸ್ಸು ನೆಮ್ಮದಿಯಿಂದ ಇರದು. ಹೊಸ ವಿಚಾರಗಳು ನಿಮಗೆ ಆಸಕ್ರಿಯನ್ನು ಮೂಡಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯು ಆಗುವುದು. ಅವರ ಪ್ರಭಾವದಿಂದ ನಿಮಗೆ ಉನ್ನತ ಸ್ಥಾನವೂ ಪ್ರಾಪ್ತವಾಗುವುದು. ತಪ್ಪು ಮಾರ್ಗವನ್ನು ನೀವು ಅರಿವಿಲ್ಲದೇ ಪ್ರವೇಶಿಸುವುರಿ. ಆನ್ ಲೈನ್ ಖರೀಯನ್ನು ಕಡಿಮೆಮಾಡಿ. ವಿದ್ಯುತ್ ಉಪಕರಣಗಳ ಮಾರಾಟವು ನಿಮಗೆ ಲಾಭವನ್ನು ಹೆಚ್ಚಿಸಬಹುದು.
ಮಕರ ರಾಶಿ: ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ಅಧ್ಯಾತ್ಮದ ವಿಚಾರವು ನಿಮಗೆ ಬೇಡವೆನಿಸಬಹುದು. ಲೌಕಿಕ ವಿಚಾರದಲ್ಲಿ ಎಂದಿಗಿಂತ ಹೆಚ್ಚು ತೊಡಗಿಕೊಳ್ಳುವಿರಿ. ಗೆಳೆತನವು ಕಲಹದಲ್ಲಿ ಮುಕ್ತಾಯವಾಗುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಣಿಸುವುದು. ಇನ್ನೊಬ್ಬರನ್ನು ದೂರುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ನಿಮ್ಮ ಮಾತುಗಳೇ ತಿರುಗಿಬರಬಹುದು.
ಕುಂಭ ರಾಶಿ: ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ. ನಿಮ್ಮದೇ ಆದೇ ಯೋಜನೆಗಳು ಕಾರ್ಯದ ವೇಗವನ್ನು ಹೆಚ್ಚಿಸಲು ಸಾಧ್ಯವಾಗುವುದು. ಆಸ್ತಿಯ ವಿಚಾರವಾಗಿ ವಾಗ್ವಾದಗಳು ಸಲ್ಲದು. ಕಾನೂನನ್ನು ಪಾಲಿಸಿ. ಒಂದೇ ವಿಚಾರದ ಬಗ್ಗೆ ಅಧಿಕ ಚಿಂತನೆಯನ್ನು ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯಿಂದ ವಂಚಿತರಾಗುವಿರಿ. ಸಂಗಾತಿಯ ಮೇಲೆ ಪ್ರೀತಿಯು ಹೆಚ್ಚಾಗಬಹುದು.
ಮೀನ ರಾಶಿ: ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಉದ್ಯೋಗದಲ್ಲಿ ಸಂತಸವಿರುವುದು. ಪ್ರೀತಿಯ ಮಾತಿನಿಂದ ನಿಮ್ಮ ಕೆಲಸವು ಆಗುವುದು. ಚಿತ್ತಚಾಂಚಲ್ಯವು ನಿಮ್ಮ ಕಾರ್ಯದ ವೇಗವನ್ನು ಕಡಿಮೆಮಾಡಿಲುವುದು. ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು. ಅನುರೂಪವಾದ ಸಂಗಾತಿಯು ನಿಮಗೆ ಸಿಗುವರು. ವಿದ್ಯಾವಂತರಾಗಿರುತ್ತಾರೆ ಎನ್ನುವುದು ವಿಶೇಷ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ