Horoscope 14 August: ನಿಮ್ಮ ಕೆಲಸಗಳಿಗೆ ವಿಘ್ನ ಬರಬಹುದು, ಇತರರು ನಿಮಗೆ ಸ್ಪಂದಿಸದೇ ಇರಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶಿವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:37 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:46ರ ವರೆಗೆ.
ಮೇಷ ರಾಶಿ: ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಅನಿರೀಕ್ಷಿತ ಧನಲಾಭವು ಸಂತೋಷವನ್ನು ಕೊಡುವುದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವಿರಿ. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸಬಹುದು. ನಿಮಗೆ ಸಿಗದಿರುವ ವಸ್ತುವು ಯಾರಿಗೂ ಸಿಗಬಾರದು ಎಂಬ ಹಠದ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ತಂತ್ರಜ್ಞರಿಗೆ ಸಿಹಿ ಸುದ್ದಿಯು ಕಾದಿರುವುದು.
ವೃಷಭ ರಾಶಿ: ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು. ನಿಮ್ಮ ಬಯಕೆಗಳನ್ನು ಪೂರೈಸಲಿಕೊಳ್ಳಲು ಇತರರ ಸಹಾಯವನ್ನು ಕೇಳುವಿರಿ. ಕಛೇರಿಯ ಕೆಲಸಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದು. ನಿಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡಿ, ಹೊಸತನ್ನು ಪಡೆಯುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ನೀಡುವುದು. ಭವಿಷ್ಯದ ಬಗ್ಗೆ ಅನಗತ್ಯವಾದ ಆಲೋಚನೆಗಳು ಬರಬಹುದು. ಸ್ತ್ರೀಯರ ಸಹಾಯದಿಂದ ನಿಮ್ಮ ಕಛೇರಿಯ ಕಾರ್ಯವು ಸರಿಯಾಗುವುದು.
ಮಿಥುನ ರಾಶಿ: ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಸಫಲರಾಗುವಿರಿ. ಸ್ನೇಹಿತರ ಜೊತೆ ಅನೌಪಚಾರಿಕ ಮಾತುಗಳನ್ನು ಆಡುವಿರಿ. ಸಹಾವಾಸದೋಷದಿಂದ ನಿಮಗೆ ಕಷ್ಡವಾದೀತು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗಿ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸಮ್ಮಾನವನ್ನು ಪಡೆಯುವರು. ಸ್ನೇಹಸಂಬಂಧವು ಇನ್ನಷ್ಟು ಬಲವಾಗುವುದು. ದುಃಖದ ಸನ್ನಿವೇಶಗಳನ್ನು ನೀವು ಸಂತೋಷದ ಸಂದರ್ಭವಾಗಿ ಪರಿವರ್ತಿಸುವಿರಿ. ಇಷ್ಟದ ಜನರನ್ನು ಭೇಟಿಯಾಗಲು ಹೋಗಬಹುದು.
ಕರ್ಕ ರಾಶಿ: ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮ್ಮ ಕಾರ್ಯವೂ ಮಂದಗತಿಯಲ್ಲಿ ಇಂದು ಸಾಗಬಹುದು. ಅಶಿಸ್ತಿನ ವ್ಯವಹಾರದಿಂದ ಸಹೋದ್ಯೋಗಿಗಳ ನಡುವೆ ವಾಗ್ವಾದವು ಆಗಬಹುದು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡಿ. ಉದ್ಯಮಕ್ಕೆ ಸಂಬಂಧಿಸಿದ ನಿಮ್ಮ ಆಲೋಚನೆಯನ್ನು ಇತರರು ತಳ್ಳಿಹಾಕಬಹುದು.
ಸಿಂಹ ರಾಶಿ: ನಿಮಗೆ ಸಿಕ್ಕ ಜವಾಬ್ದಾರಿಗಳು ಅಸಮಾಧಾನವನ್ನು ಉಂಟುಮಾಡುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಮಯ ಬೇಕಾಗುವುದು. ಎಲ್ಲ ವಿಚಾರಗಳಿಗೂ ನಿಮ್ಮನ್ನು ಬೆರಳು ಮಾಡಿ ತೋರಿಸುವರು. ಮಾಧ್ಯಮದ ಉದ್ಯೋಗಿಗಳು ಹೆಚ್ಚಿನ ಆದಾಯವನ್ನು ಪಡೆಯುವರು. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವಿರಿ. ನೀವು ಇಂದು ಬಹಳ ಬೇಡಿಕೆ ಉಳ್ಳವರಾಗಿರುವಿರಿ. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ಕುಶಲ ಕಾರ್ಯಗಳು ಎಲ್ಲರಿಗೂ ಇಷ್ಟವಾದೀತು.
ಕನ್ಯಾ ರಾಶಿ: ರಾಜಕೀಯವನ್ನೇ ತಮ್ಮ ಕಾರ್ಯಕ್ಷೇತ್ರವನ್ನು ಮಾಡಿಕೊಂಡವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಎಲ್ಲವನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸದರೂ ಅಲ್ಪ ಲಾಭವಾಗುವುದು. ವಿದ್ಯಾರ್ಥಿಗಳು ವ್ಯರ್ಥ ತಿರುಗಾಟವನ್ನು ಮಾಡಬೇಕಾಗುವುದು. ಖರೀದಿಸಲು ಇಚ್ಛಿಸುವವರು ಉತ್ತಮ ಭೂಮಿಯನ್ನು ಪಡೆಯುವ ಸಾಧ್ಯತೆ ಇದೆ. ಇದಕ್ಕೆ ಬಂಧುವರ್ಗದಿಂದ ಬೇಕಾದ ಸಹಾಯವೂ ಸಿಗುವುದು. ನಿಮ್ಮ ಪರಿಶ್ರಮದ ಕೆಲಸಗಳು ನಿರರ್ಥಕವಾಗುವುದು. ಪ್ರಶಂಸೆಯೂ ಸಿಗದೇ ಇರುವುದು ನಿಮಗೆ ಬೇಸರವನ್ನು ತಂದೀತು. ಅಡ್ಡಿಗಳನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡು ಮುನ್ನಡೆದರೆ ನಿಮಗೆ ಉತ್ತಮ ಮಾರ್ಗವು ತೆರೆಯುವುದು.
ತುಲಾ ರಾಶಿ: ಮಕ್ಕಳ ವಿವಾಹಕ್ಕೆ ನೀವು ತಿರುಗಾಟ ಮಾಡಬೇಕಾಗಬಹುದು. ನಿಮ್ಮ ಶಿಸ್ತಿನ ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ನಿಮ್ಮ ವರ್ತನೆಯಿಂದ ಬಂಧುಗಳು ಅಸಮಾಧಾನಗೊಳ್ಳುವರು. ಸರ್ಕಾರದಿಂದ ಆಗಬೇಕಾದ ಕೆಲಸಗಳು ಬೇಗ ಆಗುವುವು. ನಿಮ್ಮ ಹಣವನ್ನು ಯೋಗ್ಯವಾದ ಸ್ಥಳದಲ್ಲಿ ಹೂಡಿಕೆ ಮಾಡುವಿರಿ. ಸಾಹಸವನ್ನು ಮಾಡಲು ಹೋಗುವುದು ಬೇಡ. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೀವು ನೆನಪಿಸಿಕೊಂಡು ಅವರ ಜೊತೆ ಮಾತನಾಡುವಿರಿ. ಗೃಹೋದ್ಯಮದಿಂದ ಅಧಿಕ ಲಾಭವನ್ನು ನೀವು ಗಳಿಸುವಿರಿ. ಅಪರಿಚಿತರ ಜೊತೆ ಮಾತುಕತೆಗಳು ಮಿತಿಯಲ್ಲಿ ಇರಲಿ.
ವೃಶ್ಚಿಕ ರಾಶಿ: ನಿಮ್ಮ ಯೋಜನೆಯ ಕೆಲಸಗಳಿಗೆ ವಿಘ್ನಗಳು ಬರುವುದು. ಸರಿಯಾದ ಮಾಹಿತಿಯ ಕೊರತೆ ಕಾಣುವುದು. ಯಾರೂ ನಿಮಗೆ ಸರಿಯಾಗಿ ಸ್ಪಂದಿಸದೇ ಇರುವವರು. ಎಲ್ಲ ಕಡೆಗಳಲ್ಲಿ ವಿಳಂಬವಾದಂತೆ ತೋರುವುದು. ಇದೆಲ್ಲವೂ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಪ್ರಭಾವೀ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳುವ ಸಂದರ್ಭವು ನಿಮಗೆ ಬರಬಹುದು. ವಾಹನವನ್ನು ಬದಲಾಯಿಸಿ ಹೊಸ ವಾಹನವನ್ನು ಖರೀದಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಪಡೆದುಕೊಂಡು ಕಷ್ಟಪಡುವಿರಿ. ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು.
ಧನು ರಾಶಿ: ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಪ್ರಯಾಣದಲ್ಲಿ ನಿಮ್ಮ ವಸ್ತುಗಳು ಕಾಣೆಯಾಗಬಹುದು. ಹಿತಶತ್ರುಗಳಿಂದ ನಿಮ್ಮ ಮನಸ್ಸು ನೆಮ್ಮದಿಯಿಂದ ಇರದು. ಹೊಸ ವಿಚಾರಗಳು ನಿಮಗೆ ಆಸಕ್ರಿಯನ್ನು ಮೂಡಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯು ಆಗುವುದು. ಅವರ ಪ್ರಭಾವದಿಂದ ನಿಮಗೆ ಉನ್ನತ ಸ್ಥಾನವೂ ಪ್ರಾಪ್ತವಾಗುವುದು. ತಪ್ಪು ಮಾರ್ಗವನ್ನು ನೀವು ಅರಿವಿಲ್ಲದೇ ಪ್ರವೇಶಿಸುವುರಿ. ಆನ್ ಲೈನ್ ಖರೀಯನ್ನು ಕಡಿಮೆಮಾಡಿ. ವಿದ್ಯುತ್ ಉಪಕರಣಗಳ ಮಾರಾಟವು ನಿಮಗೆ ಲಾಭವನ್ನು ಹೆಚ್ಚಿಸಬಹುದು.
ಮಕರ ರಾಶಿ: ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ಅಧ್ಯಾತ್ಮದ ವಿಚಾರವು ನಿಮಗೆ ಬೇಡವೆನಿಸಬಹುದು. ಲೌಕಿಕ ವಿಚಾರದಲ್ಲಿ ಎಂದಿಗಿಂತ ಹೆಚ್ಚು ತೊಡಗಿಕೊಳ್ಳುವಿರಿ. ಗೆಳೆತನವು ಕಲಹದಲ್ಲಿ ಮುಕ್ತಾಯವಾಗುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಣಿಸುವುದು. ಇನ್ನೊಬ್ಬರನ್ನು ದೂರುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ನಿಮ್ಮ ಮಾತುಗಳೇ ತಿರುಗಿಬರಬಹುದು.
ಕುಂಭ ರಾಶಿ: ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ. ನಿಮ್ಮದೇ ಆದೇ ಯೋಜನೆಗಳು ಕಾರ್ಯದ ವೇಗವನ್ನು ಹೆಚ್ಚಿಸಲು ಸಾಧ್ಯವಾಗುವುದು. ಆಸ್ತಿಯ ವಿಚಾರವಾಗಿ ವಾಗ್ವಾದಗಳು ಸಲ್ಲದು. ಕಾನೂನನ್ನು ಪಾಲಿಸಿ. ಒಂದೇ ವಿಚಾರದ ಬಗ್ಗೆ ಅಧಿಕ ಚಿಂತನೆಯನ್ನು ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯಿಂದ ವಂಚಿತರಾಗುವಿರಿ. ಸಂಗಾತಿಯ ಮೇಲೆ ಪ್ರೀತಿಯು ಹೆಚ್ಚಾಗಬಹುದು.
ಮೀನ ರಾಶಿ: ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಉದ್ಯೋಗದಲ್ಲಿ ಸಂತಸವಿರುವುದು. ಪ್ರೀತಿಯ ಮಾತಿನಿಂದ ನಿಮ್ಮ ಕೆಲಸವು ಆಗುವುದು. ಚಿತ್ತಚಾಂಚಲ್ಯವು ನಿಮ್ಮ ಕಾರ್ಯದ ವೇಗವನ್ನು ಕಡಿಮೆಮಾಡಿಲುವುದು. ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು. ಅನುರೂಪವಾದ ಸಂಗಾತಿಯು ನಿಮಗೆ ಸಿಗುವರು. ವಿದ್ಯಾವಂತರಾಗಿರುತ್ತಾರೆ ಎನ್ನುವುದು ವಿಶೇಷ.
ಲೋಹಿತಶರ್ಮಾ – 8762924271 (what’s app only)