Horoscope: ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 25, 2023 | 12:35 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 25 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:17 ರಿಂದ 01:44 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:22 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:49 ರಿಂದ 12:17ರ ವರೆಗೆ.

ಧನು ರಾಶಿ : ಸೌಂದರ್ಯವರ್ಧನೆಯ ವೃತ್ತಿಯವರಿಗೆ ಹೆಚ್ಚು ಲಾಭವಾಗಲಿದೆ. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಮಕ್ಕಳ‌ ಒತ್ತಾಯಕ್ಕೆ ಇಂದು ಪ್ರಯಾಣವನ್ನು ಮಾಡುವಿರಿ. ಸಭ್ಯರ ಮಧ್ಯ ಅಪಮಾನವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ.‌ ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ. ಕೇಳುವ ರೀತಿ ಸರಿಯಾಗಿರಲಿ.

ಮಕರ ರಾಶಿ : ಸಹೋದರಿಗೆ ನಿಮ್ಮಂದ ಅಪೇಕ್ಷಿತ ಸಹಾಯವು ಸಿಗಲಿದೆ. ಹಳೆಯ ವಾಹನದ ಮಾರಾಟ ಮಾಡಿ ಹೊಸ ವಾಹನವನ್ನು ಖರೀದಿಸುವಿರಿ. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ಯಂತ್ರಜ್ಞರು ಇಂದು ಒತ್ತಡದಲ್ಲಿ ಇರುವರು. ಭೂಮಿಯ ವ್ಯವಹಾರದಲ್ಲಿ ಲಾಭವಾಗಲು ತಿರುಗಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು. ಬಹಳ ದಿನಗಳ ಅನಂತರ ಕುಟುಂಬದ ಜೊತೆ ಸೇರಿಕೊಳ್ಳಲಿದ್ದು ಸ್ಮರಣೀಯ ಕ್ಷಣಗಳನ್ನು ಕಳೆಯುವಿರಿ. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳುವ ಸನ್ನಿವೇಶ ಇರಲಿದೆ.

ಕುಂಭ ರಾಶಿ : ನೀವು ಇಂದು ಬದಲಾವಣೆಯನ್ನು ಇಚ್ಛಿಸುವಿರಿ. ಆಪ್ತರ ಬಗ್ಗೆ ನಿಮಗೆ ಸದ್ಭಾವವು ಇರದು. ನಿಮ್ಮ ಒಳ ಜಗಳವು ಬೀದಿಗೆ ಬರಬಹುದು. ಕೆಲವರನ್ನು ನೀವು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ಬಂಧುಗಳನ್ನು ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಸಲಹೆಯಿಂದ ನೀವು ಅಂದುಕೊಂಡ ದಾರಿಯು ಸುಗಮವಾಗುವುದು. ಹಣದ ಆಮಿಷದಲ್ಲಿ‌ ಸಿಕ್ಕಿಕೊಳ್ಳುವಿರಿ. ಯಾರಾದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಯೋಚಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ಪರಿಹಾರವನ್ನು ಕಂಡುಕೊಳ್ಳಿ.

ಮೀನ ರಾಶಿ : ಆಸ್ತಿ ನಷ್ಟಕ್ಕೆ ನೀವೇ ಹೊಣೆಯಾಗಬಹುದು.‌ ಪಾಲುದಾರಿಕೆಗೆ ನಿಮಗೆ ಆಸಕ್ತಿಯಿರಬಹುದು. ವೃತ್ತಿಯ ಸ್ಥಳದಲ್ಲಿ ನಿಮಗೆ ಕೆಲವು ಬದಲಾವಣೆಯು ಇರಲಿದೆ‌. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಬೇಸರವಾಗಬಹುದು. ಬಂಧುಗಳು ಪ್ರೀತಿಯನ್ನು ತೋರಿಸುವರು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಮಾಡುವಿರಿ. ಸುಳ್ಳು ಹೇಳುವ ಸಂದರ್ಭವೂ ಬರಬಹುದು.

-ಲೋಹಿತಶರ್ಮಾ – 8762924271 (what’s app only)

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್