Horoscope: ಈ ರಾಶಿಯವರಿಗೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ-ಎಚ್ಚರ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರಿಗೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ-ಎಚ್ಚರ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 15, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ ನಿಮ್ಮ ರಾಶಿ ಭವಿಷ್ಯ (Horoscope) ಹೇಗಿದೆ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದೆಯೇ. ಹಾಗಾದರೆ ಇಂದಿನ (2023 ನವೆಂಬರ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ ಎಂಬುದು ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 12:17 ರಿಂದ 01:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:00 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ 12:17ರ ವರೆಗೆ.

ಧನು ರಾಶಿ : ನಿಮ್ಮ ಕಷ್ಟಗಳನ್ನು ಪೂರ್ಣ ಮಾಡಿಕೊಳ್ಳುವುದು ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮ ಕೆಲಸದ ಸಮಯವು ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ರಾಜಕೀಯ ಜೀವನವು ನಿಮ್ಮನ್ನು ಅತಂತ್ರವಾಗಿಸಬಹುದು. ನಿಮ್ಮನ್ನು ತಿಳಿದವರೇ ನಿಮ್ಮ ಬಗ್ಗೆ ಸಲ್ಲದ್ದನ್ನು ಮಾತನಾಡಬಹುದು.

ಮಕರ ರಾಶಿ : ಮಕ್ಕಳು ನಿಮ್ಮ ಮಾತಿಗೆ ವಿರುದ್ಧವಾಗಿ ಮಾತನಾಡುವರು. ವಿಲಾಸಿ ಜೀವನಕ್ಕೆ ಹೆಚ್ಚು ಒತ್ತು ಕೊಡುವಿರಿ. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ಯಂತ್ರೋಪಕರಣದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನೀವು ಇಂದು ನೋಡಲು ಪ್ರಶಾಂತವಾಗಿ ಕಂಡರೂ ನಿಮ್ಮಳಗೆ ಅಶಾಂತಿಯ ತರಂಗಗಳು ಒಂದೊಂದೊಗಿಯೇ ಮೇಲೆ ಬರುವುದು. ಹಣದ ವಿನಿಮಯದ ಸಂದರ್ಭದಲ್ಲಿ ಜಾಗರೂಕತೆ ಅವಶ್ಯಕ.

ಕುಂಭ ರಾಶಿ : ಸ್ಥಿರಾಸ್ತಿಯ ಬಗ್ಗೆ ಸದಾ ಯೋಚಿಸಿ, ಅದರ ಮೇಲೆ ಮೋಹ ಕಡಿಮೆ ಆದೀತು. ಪ್ರಯಾಣದಲ್ಲಿ ನಿನಗೆ ಯಾರಾದರೂ ಶತ್ರುಗಳಾಗಬಹುದು. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಉದರ ಸಂಬಂಧದ ರೋಗವು ಆಹಾರದ ವ್ಯತ್ಯಾಸದಿಂದ ಬರುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ಅಹಂಕಾರದಿಂದ ಸಾಧಿಸಲು ಶಕ್ಯವಾಗದ್ದನ್ನು ಪ್ರೀತಿಯಿಂದ ಸಾಧಿಸುವಿರಿ. ಸಂಗಾತಿಯಿಂದ ಪ್ರೀತಿಯು ಸಿಗಲಿದೆ. ಯಾರ ಮೇಲೂ ಪ್ರಮಾಣ‌ಮಾಡಿ ನೀವೇ ಸಿಕ್ಕುಕೊಳ್ಳುವಿರಿ.

ಮೀನ ರಾಶಿ : ನಿಮ್ಮ ಸಂಪಾದನೆಯ ಮಾರ್ಗವು ಶುದ್ಧವಾಗಿರದು. ಕಛೇರಿಯಲ್ಲಿ ಹಿತಕರವಲ್ಲದ ವಾತಾವರಣವು ಇರಲಿದೆ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು.. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವನ್ನು ಜಗಜ್ಜಾಹಿರ ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಆಯ್ಕೆ ಸಮಸ್ಯೆಯು ಬರಬಹುದು. ಶತ್ರುಗಳ ಸಂಚಿಗೆ ಬಲಿಯಾಗುವಿರಿ. ಅಲ್ಪಕಾಲಕ್ಕಾಗಿ ಹೆಚ್ಚು ಹೂಡಿಕೆ ಮಾಡುವಿರಿ.

-ಲೋಹಿತಶರ್ಮಾ – 8762924271 (what’s app only)