Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯ ಮಹಿಳೆಯರಿಗೆ ಇಂದು ಶುಭ ದಿನ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ, ಶನಿವಾರ ಸಾಧನೆಗೆ ಚುರುಕುತನ, ರಾಜಕೀಯದಲ್ಲಿ ಇಬ್ಬಂದಿತನ, ಸಹೋದ್ಯೋಗಿಗಳ ಜೊತೆ ಮೊಂಡುತನ ಇವೆಲ್ಲ ಇರಲಿವೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯ ಮಹಿಳೆಯರಿಗೆ ಇಂದು ಶುಭ ದಿನ
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 05, 2025 | 1:12 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ – 06 – 26 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:31 – 11:03, ಯಮಘಂಡ ಕಾಲ 14:08 – 15:40, ಗುಳಿಕ ಕಾಲ 06:27 – 07:59

ತುಲಾ ರಾಶಿ: ಹೂಡಿಕೆಯ ನಷ್ಟದಿಂದ ಆತಂಕ. ತೆರಿಗೆ ವಿಚಾರದಲ್ಲಿ ತಜ್ಞರ ಭೇಟಿ ಹಾಗೂ ಸೂಕ್ತ ಪಡೆಯುವಿರಿ. ಇಂದು ಮಂದಗತಿಯಲ್ಲಿ ಸಾಗುತ್ತಿದ್ದ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳು ವೇಗವನ್ನು ಪಡೆಯುವುವು. ವ್ಯರ್ಥ ಓಡಾಟಗಳು ಆಗುತ್ತವೆ. ಆ ಕಾರ್ಯಕ್ಕೊಸ್ಕರ ಖರ್ಚನ್ನೂ ಮಾಡುವಿರಿ. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯ ಸರಿಯುವುದು. ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ ನಿಮ್ಮ ಬೆಲೆಗೆ ಸರಿಹೊಂದುವಂತೆ ಖರೀದಿಯಾಗುವುದು. ಮನೆಯ ಹಿರಿಯರ ಜೊತೆ ಸಮಯ ಕಳೆಯುವಿರಿ, ಅವರ ಸೇವೆಗೆ ಅವಕಾಶ ಸಿಗುವುದು. ಅತಿಯಾದ ಮಾಧುರ್ಯವು ದೇಹವನ್ನು ಹಾಳುಮಾಡುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಮಾತುಗಳಿಗೆ ಪ್ರಾಶಸ್ತ್ಯ ಸಿಗಬಹುದು. ಜಟಿಲ ಸಮಸ್ಯೆಗಳನ್ನು ಸರಳಗೊಳಿಸುವಿರಿ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ‌. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು.

ವೃಶ್ಚಿಕ ರಾಶಿ: ನೌಕರರು ಉದ್ಯೋಗದಾತಾರರಲ್ಲಿ ಸೌಲಭ್ಯಕ್ಕಾಗಿ ಬೇಡಿಕೆ ಇಡುವರು. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ‌ ಕೂಡಿರುವವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಸಂಪಾದನೆ ಹೆಚ್ಚಾಗುವುದು. ಕಾನೂನಾತ್ಮಕ ಚಟುವಟಿಕೆಯಲ್ಲಿ ಚುರುಕು‌ ಹೆಚ್ಚು. ಮನೋರಂಜನೆಯ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು. ಇಂದಿನ ನಿಮ್ಮ‌ ಕಾರ್ಯಗಳ ಬಗ್ಗೆ ಸ್ಪಷ್ಟತೆ ಇರಲಿ. ಆರ್ಥಿಕ ವ್ಯವಹಾರಕ್ಕೆ ಮಾರ್ಗ ಸುಲಲಿತ. ಯಾವುದನ್ನೂ ಸಡಿಲ ಮಾಡಿಕೊಳ್ಳದೇ ಮುಗಿಸಿ. ಚರಾಸ್ತಿಯನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯಬಹುದು. ವೃತ್ತಿಯ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಅಧ್ಯಾತ್ಮಪ್ರಿಯರಿಗೆ ಉತ್ತಮ‌ ಸಂಗಾತಿ ಲಭ್ಯ.‌ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಸಜ್ಜನರ ಕೂಟದಲ್ಲಿ ಭಾಗವಹಿಸುವಿರಿ.

ಧನು ರಾಶಿ: ಮಾಡಿದ ತಪ್ಪನ್ನು ಪ್ರಯತ್ನಪೂರ್ವಕವಾಗಿ ಹೊರಹಾಕಬೇಕಾಗುವುದು. ಬಹಳ ದಿನಗಳ ಅನಂತರ ನಿಮ್ಮ ವ್ಯಾಪಾರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುವುದು. ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ಸಹೋದರರ ನಡುವೆ ಸಮನ್ವಯದ ಕೊರತೆ ಕಾಣಿಸುವುದು. ಕುಟುಂಬಕ್ಕೆ ಸ್ವಲ್ಪ ಸಮಯವನ್ನು ಕೊಡಿ. ಅವರಿಗೆ ಏನು ಬೇಕು? ಏನು ಮಾಡಬೇಕು ಎಂಬುದನ್ನು ಅರಿತು ಕಾರ್ಯಪ್ರವೃತ್ತರಾಗಿ. ಕಾನೂನಿಗೆ ವಿರುದ್ಧವಾಗಿ ಏನನ್ನಾದರು ಮಾಡಿ ಸಿಕ್ಕಿಬೀಳುವಿರಿ.‌ ನಂಬಿಕೆಯನ್ನು ಉಳಿಸಿಕೊಳ್ಳುವತ್ತ ನಿಮ್ಮ ಯೋಚನೆ ಇರಲಿದೆ. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಪುಣ್ಯಸ್ಥಳ ದರ್ಶನದಿಂದ ಮಾನಸಿಕ ನೆಮ್ಮದಿ. ಆತ್ಮಸ್ಥೈರ್ಯದ ವೃದ್ಧಿ. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಬಹುದು. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಬಂಧುಗಳ ಎದುರು ಸ್ವಾಭಿಮಾನದ ಪ್ರದರ್ಶನ.

ಮಕರ ರಾಶಿ: ಸಮಸ್ಯೆಯನ್ನು ಎದುರಿಸಲು ಕಟಿಬದ್ಧರಾಗಬೇಕು. ಸುಮ್ಮನೆ ಹತಾಶರಾಗಿ ಕುಳಿತರೆ ಫಲ‌ಸಿಗದು. ಅದನ್ನು ದೂರ ಮಾಡಿಕೊಳ್ಳಲು ಏನಾದರೂ ಇಷ್ಟವಾಗುವ ಚಟುವಟಿಕೆಯಲ್ಲಿ ಭಾಗವಹಿಸಿ. ಋಣಾತ್ಮಕ ಭಾವನೆಗಳೂ ದೂರವಾಗುವವು. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳ ಎನಿಸಬಹುದು. ಕುಟುಂಬದವರ ಜೊತೆ ನಗುತ್ತಾ ಇರಿ. ಕಲಾವಿದರಿಗೆ ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ಬರಬಹುದು. ವೈದ್ಯವೃತ್ತಿಯವರಿಗೆ ಕೃತಜ್ಞತೆಯ ಸಂತೃಪ್ತಿ. ಎಲ್ಲರಿಂದ ಪ್ರಶಂಸೆ. ಆತ್ಮತೃಪ್ತಿಯೇ ಅಧಿಕಲಾಭ. ಇಂದು ನಿಮ್ಮ ದೇಹಕ್ಕೆ ಪೀಡೆಯು ಅಧಿಕವಾದಂತೆ ತೋರುವುದು. ಏನನ್ನೂ ಮಾಡಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ಪ್ರಯಾಣದಲ್ಲಿ ಆಕಸ್ಮಿಕ ತೊಂದರೆಯನ್ನು ಎದುರಿಸಬೇಕಾಗುವುದು. ಒಳ್ಳೆಯ ಕಾರ್ಯಕ್ಕೆ ಸುತ್ತಮುತ್ತಲಿಂದ ಪ್ರಶಂಸೆ. ಬಾಕಿ ಇರುವ ಕೆಲಸದ ಕಡೆ ನಿಮ್ಮ ಗಮನ ಅವಶ್ಯಕ.

ಕುಂಭ ರಾಶಿ: ವಾಹನ ಚಾಲನೆ ಮಾಡುವಾಗ ವೇಗದ ಮೇಲೆ ನಿಯಂತ್ರಣವಿರಲಿ. ಇಂದು ನೀವು ಯಾರಮೇಲೋ ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಹಾಳಾಗುವುದು ಬಿಟ್ಟರೆ ಮತ್ತೇನೂ ಆಗದು. ಸಾಧ್ಯಾವಾದರೆ ಪ್ರೀತಿಸಿ, ಇಲ್ಲವೇ ತಟಸ್ಥವಾಗಿರಿ. ಬರುವ ಹಣವನ್ನು ನಿರೀಕ್ಷಿಸಬಹುದು. ಆಲಂಕಾರಿಕ ಸ್ಪರ್ಧೆಯಲ್ಲಿ ವಿಜಯಿಯಾಗುವಿರಿ. ಸಂಗಾತಿಯೊಂದಿಗೆ ಮನಸ್ತಾಪಗಳು ಏಳಬಹುದು. ಪ್ರೇಮನಿವೇದನೆಯನ್ನು ಮಾಡಲು ಹೋಗಬೇಡಿ. ತಿರಸ್ಕಾರಿಸಬಹುದು. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಉದ್ಯೋಗದಲ್ಲಿ ಕೆಲವು ಸವಾಲುಗಳು ಬರಬಹುದು. ಇಂದಿನ ಹಣದ ಅಗತ್ಯತೆಯನ್ನು ಸ್ನೇಹಿತರ ಮೂಲಕ ಪಡೆದುಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಇದ್ದವರಿಗೆ ಲಾಭ. ಬರಬೇಕಾದ ಹಣ ನಿಮ್ಮ ಜೇಬಿಗೆ ಬೀಳುವುದು. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ.

ಮೀನ ರಾಶಿ: ನೀವು ಮಾಡುವ ಕೆಲಸದಲ್ಲಿ ಅತೀವ ಆಸಕ್ತಿ ಉಂಟಾಗಲಿದ್ದು, ಅದನ್ನು ಬಿಟ್ಟು ಮತ್ತೊಂದು ಕಡೆ ತಲೆಹಾಕಲಾರಿರಿ. ಇಂದು ನೀವು ಸುಮ್ಮನೇ ಕೆಲಸವಿಲ್ಲದೇ ಕುಳಿತಿರುವ ಬದಲು ಏನನ್ನಾದರೂ ಮಾಡಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಆಹಾರವನ್ನು ಸರಿಯಾದ ಕಾಲಕ್ಕೆ ಸೇವಿಸಿ. ಆರೋಗ್ಯ ಹಾಳಾಗುವ ಸಂಭವವಿದೆ. ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಸಂಪತ್ತನ್ನು ಉಳಿಸಲು ಯತ್ನಿಸಿದಷ್ಟೂ ಯಾವುದಾದರೂ ಒಂದು ರೀತಿಯಲ್ಲಿ ಖರ್ಚಾಗುವುದು. ನಿದ್ರೆಯಲ್ಲಿ ಕಂಡ ಕನಸುಗಳೆಲ್ಲ ಸತ್ಯವಾಗದು. ನಿಮ್ಮ ಮಾತಿಗೆ ಅಪರಿಚಿತರೂ ಮೂಕವಿಸ್ಮತರಾದಾರು. ಮಕ್ಕಳ ವ್ಯವಹಾರಕ್ಕೆ ಬೇಕಾದ ಹಣಕಾಸು ನೆರವನ್ನು ನಿಜವು ನೀಡುವಿರಿ. ಮುಖಂಡರು ತಮ್ಮ ಆಸ್ತಿಯನ್ನು ಘೋಷಿಸಬೇಕಾಗುವುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.