Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಭಾವನೆ ಹಾಗೂ ಮನಸ್ಥಿತಿ ಅರಿತು ಮುಂದುವರಿಯುವುದು ಉತ್ತಮ

22 ಮಾರ್ಚ್​​​ 2025: ಶನಿವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದು ಅನಿರೀಕ್ಷಿತ ಧನಾಗಮನವು ಆಗಲಿದ್ದು, ಅದನ್ನು ಸತ್ಕಾರ್ಯಕ್ಕೆ ನೀಡುವಿರಿ. ಕಲಾವಿದರಿಗೆ ಖುಷಿಯ ವಾತಾವರಣವು ಇರಲಿದೆ. ಹಾಗಾದರೆ ಮಾರ್ಚ್ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಭಾವನೆ ಹಾಗೂ ಮನಸ್ಥಿತಿ ಅರಿತು ಮುಂದುವರಿಯುವುದು ಉತ್ತಮ
ಭಾವನೆ ಹಾಗೂ ಮನಸ್ಥಿತಿ ಅರಿತು ಮುಂದುವರಿಯುವುದು ಉತ್ತಮ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 22, 2025 | 12:12 AM

ಬೆಂಗಳೂರು, ಮಾರ್ಚ್​ 22, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಬಾಲವ, ಸೂರ್ಯೋದಯ – 06 – 36 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:38 – 11:09, ಯಮಘಂಡ ಕಾಲ 14:10 – 15:41, ಗುಳಿಕ ಕಾಲ 06:37 – 08:07.

ತುಲಾ ರಾಶಿ: ಪ್ರೀತಿಯು ಸಫಲವಾಗಲಿದೆ ಎಂಬ ಕನಸು ಕಾಣುವುದು ಬೇಡ. ಭಾವನೆಯನ್ನು ಹಾಗೂ ಮನಃಸ್ಥಿತಿಯನ್ನು ಅರಿತು ಮುಂದುವರಿಯುವುದು ಉತ್ತಮ. ಇಂದು ಅನಿರೀಕ್ಷಿತ ಧನಾಗಮನವು ಆಗಲಿದ್ದು, ಅದನ್ನು ಸತ್ಕಾರ್ಯಕ್ಕೆ ನೀಡುವಿರಿ. ಕಲಾವಿದರಿಗೆ ಖುಷಿಯ ವಾತಾವರಣವು ಇರಲಿದೆ. ನಿಮ್ಮ ಆಲೋಚನೆಯು ವಾಸ್ತವಕ್ಕಿಂತ ಭಿನ್ನವಾಗಿ ಕಾಣಿಸುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಋಜು ಮಾರ್ಗದಲ್ಲಿ ಇರುವ ನಿಮಗೆ ದಾರಿತಪ್ಪಿಸುವ ಜನರು ಎದುರಾಗಬಹುದು. ರಾಜಕೀಯದಲ್ಲಿ ನಿಮಗೆ ಆಸಕ್ತಿಯು ಇದ್ದರೂ ಪ್ರವೇಶಕ್ಕೆ ಮಾರ್ಗವನ್ನು ಹುಡುಕುವಿರಿ. ಹಿರಿಯರಿಗೆ ಅಗೌರವದಿಂದ ಮಾತನಾಡಿ, ಅನಂತರ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು. ಸಾಹಸದಲ್ಲಿ ವಿವೇಚನೆ ಇರಲಿ.

ವೃಶ್ಚಿಕ ರಾಶಿ: ಅನಯಾಸದ ಗೆಲುವಿನಿಂದ ನಿಮಗೆ ಸಂತಸ. ಇಂದು ಪ್ರೇಮದಲ್ಲಿ ಇರುವವರಿಗೆ ಪರಸ್ಪರ ಭೇಟಿಯ ಅವಕಾಶವು ಇತಬಹುದು. ವಿವಾಹ ಸಮಾರಂಭದಲ್ಲಿ ಭಾಗಿಯಾಗುವಿರಿ. ಹೂಡಿಕೆಯಲ್ಲಿ ಇಂದು ಲಾಭ ಸಿಗದೇಹೋಗಬಹುದು. ಇಂದಿನ ನಿಮ್ಮ ಮಾತಿನಿಂದ ದ್ವೇಷವನ್ನು ಸಾಧಿಸಬಹುದು. ನಿಮಗೆ ನಕಾರಾತ್ಮಕ ಹಣೆಪಟ್ಟಿಯು ನಿಮಗೆ ಬೀಳಬಹುದು, ಎಚ್ಚರವಿರಲಿ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಸುಖಾಂತ್ಯ ಸಿಗುವುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಓಡಾಟದ ಸಮಯದಲ್ಲಿ ನಿಮ್ಮ‌ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಕೊಂಡ ವಸ್ತುವಿನ ಮೌಲ್ಯವು ನಿಮಗೆ ಗೊತ್ತಾಗದೇ ಹೋಗುವುದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಅತಿಯಾದ ನಿರೀಕ್ಷೆಯು ಇಂದು ನಿಮ್ಮ ಮನಸ್ಸನ್ನು ಕೆಡಸಬಹುದು. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ಧನು ರಾಶಿ: ಆರ್ಥಿಕ ಒತ್ತಡದಿಂದ ಆರೋಗ್ಯ ಕೆಡುವುದು, ಸಣ್ಣ ಚಿಕತ್ಸೆಯನ್ನೂ ಪಡೆಯಬೇಕಾಗಬಹುದು. ಹೊಸ ಕೆಲಸದಲ್ಲಿ ತೊಡಗಿದವರಿಗೆ ಭಯವು ಕಾಡಬಹುದು. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ದಿನವು ಉತ್ತಮ. ಗೃಹೋಪಯೋಗಿ ವಸ್ತುಗಳನ್ನು ಜಾಣ್ಮೆಯಿಂದ ಮಾರಾಟ ಮಾಡಿದರೆ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ಪ್ರೀತಿಯ ಬಗ್ಗೆ ನಿಶ್ಚಿತತೆ ಇರದು. ಮನಸ್ಸು ದ್ವಂದ್ವದಲ್ಲಿ ನಿಲ್ಲುವುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಡವಸದೀತು. ನಿಮ್ಮ ಸೋಲನ್ನು ನೀವು ಸಹಜವಾಗಿ ಒಪ್ಪಿಕೊಳ್ಳಲಾರಿರಿ.

ಮಕರ ರಾಶಿ: ದೈಹಿಕ ಅಸಮತೋಲನದಿಂದ ಸ್ತ್ರೀಯರಿಗೆ ಸಂಕಟ. ಇಂದು ಕೆಲವು ಚಿಂತೆಗಳಿಂದ ತೊಂದರೆಗಳು ನಿಮ್ಮನ್ನು ಬಿಟ್ಟುಹೋಗದು. ಹೊರಗಿನಿಂದ ಹಣವನ್ನು ಅನಿವಾರ್ಯವಾಗಿ ಪಡೆಯಬೇಕಾಗಬಹುದು. ನಿಮ್ಮ ಶಿಕ್ಷಣವನ್ನು ಸರಿಯಾಗಿ ಬಳಸಿಕೊಳ್ಳುವಿರಿ. ಕಾನೂನಾತ್ಮಕ ಹೋರಾಟದ ತಂತ್ರವನ್ನು ಬದಲಿಸುವಿರಿ. ನಿಮ್ಮ ಮಾತು ಅಹಂಕಾರದಂತೆ ತೋರಬಹುದು. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನ ಇರದು. ವಾಹನ ಖರೀದಿಯಲ್ಲಿ ಮೋಸವಾಗುವುದು. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಇಂದು ಸಮಯಕ್ಕೆ ಸರಿಯಾಗಿ ಎಲ್ಲಿಗೂ ತಲುಪಲಾಗದು. ದೂರದೃಷ್ಟಿಯು ನಿಮ್ಮ ಚಿಂತನೆಗೆ ಇರಲಿ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ‌.

ಕುಂಭ ರಾಶಿ: ವ್ಯಾವಹಾರಿಕ ವಿಚಾರದಲ್ಲಿ ಸ್ಪರ್ಧೆಗೆ ಇಳಿಯುವುದು ಇಷ್ಟವಾಗದು. ಇಂದು ನಿಮಗೆ ಸ್ನೇಹಿತರ ಬೆಂಬಲವು ಸಿಗಲಿದ್ದು, ಉಳಿಸಿಕೊಂಡ ಕಾರ್ಯಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ವೈವಾಹಿಕ ಜೀವನದಿಂದ ಶತ್ರುಗಳು ಅಧಿಕವಾಗಿ ಆಗಬಹುದು‌. ಇಂದು ಕೇವಲ ಓಡಾಟವೇ ಆಗಲಿದೆ. ಎಣಿಸಿಕೊಂಡ ಕಾರ್ಯವು ಆಗದೇ ಇರಬಹುದು. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಪ್ರಾಮಾಣಿಕತೆಗೆ ಯೋಗ್ಯವಾದ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಇಂದು ಬರುವ ಸಂದರ್ಭವನ್ನು ನೀವು ಸ್ವಾಗತಿಸಿ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ನಿಮಗೆ ಸಾಕೆನಿಸಿ ಕೈ ಬಿಡಬಹುದು.‌ ಸ್ವಂತಿಕೆಯನ್ನು ಮೆರೆಯುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾದೀತು.

ಮೀನ ರಾಶಿ: ಆರ್ಥಿಕ ಅಧಿಕಾರಿಗಳ ಸ್ಥಳಾಂತರ ಸಾಧ್ಯತೆ. ಇಂದು ನಿಮ್ಮ ಕಾರ್ಯವು ನಿರ್ವಿಘ್ನವಾಗಿ ನಡೆದು, ಸಂತಸವಾಗಲಿದೆ. ವೈವಾಹಿಕ ಜೀವನವು ಉತ್ತಮವಾಗಿರಲಿದ್ದು, ಸಂಗಾತಿಯ ಜೊತೆ ಬಾಧವ್ಯವು ರಸವತ್ತಾಗಿ ಇರಲಿದೆ. ಸಾಲವನ್ನು ಹಿಂಪಡೆಯುವುದು ನಿಮಗೆ ಬಹಳ ಕಷ್ಟದ ಸಂಗತಿ. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗಬಹುದು. ಯಾರ ಸಣ್ಣತನವನ್ನೂ ನೀವು ಸಹಿಸಿಕೊಳ್ಳಲಾರಿರಿ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ರಾಜಕಾರಣದಲ್ಲಿ ಮಾತು ಹಿಡಿತದಲ್ಲಿ ಇದ್ದರೆ ಒಳಳ್ಳೆಯದು. ಸಾರ್ವಜನಿಕವಾಗಿ ಆಡಿದ ಮಾತಿನಿಂದ ಸಂಕಟ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ಧಾರ್ಮಿಕ ಕಾರ್ಯದಿಂದ ನೆಮ್ಮದಿ ಸಿಗಲಿದೆ. ನಿಮ್ಮ ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು.