Horoscope Today 24 January 2025: ಬೇರೆಯವರಿಂದಾಗಿ ನೀವು ಗೊಂದಲಕ್ಕೆ ಸಿಕ್ಕಿಕೊಳ್ಳಬಹುದು, ಎಲ್ಲದರ ಮೇಲೂ ಗಮನವಿರಲಿ
ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 10 ರಿಂದ 03:35ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:03ರಿಂದ 08:28 ರವರೆಗೆ, ಗುಳಿಕ ಬೆಳಿಗ್ಗೆ 09:54 ರಿಂದ 11:19 ರವರೆಗೆ.
ಮೇಷ ರಾಶಿ: ತೋರಿಕೆಗಾಗಿ ಏನನ್ನಾದರೂ ಮಾಡುವುದಕ್ಕಿಂತ ಆತ್ಮತೃಪ್ತಿಯ ಕಡೆ ಗಮನಿಸಿದರೆ ಕಾರ್ಯ ಸರಿಯಾಗಿ ಪ್ರಶಂಸೆಯೂ ಸಿಗಲಿದೆ. ನಿಮಗೆ ಆಕಸ್ಮಿಕವಾಗಿ ಸಿಕ್ಕ ವಸ್ತುಗಳನ್ನು ನೀವು ಜೋಪಾನ ಮಾಡಿಕೊಳ್ಳುವಿರಿ. ವಿವಿಧ ವೃತ್ತಿಗಳು ನಿಮ್ಮನ್ನು ಕರೆಯಬಹುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಸರ್ಕಾರದಿಂದ ಬರುವ ಗೌರವವನ್ನು ಅಲ್ಲಗಳೆಯುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಕೆಲವರಿಂದ ದೂರವಿರುವ ಪ್ರಯತ್ನವನ್ನು ಮಾಡುವಿರಿ. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳಬಹುದು. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಯೋಗವೇ ಮದ್ದಾಗಲಿದೆ. ನಿಮ್ಮನ್ನು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು.
ವೃಷಭ ರಾಶಿ: ಆಸ್ತಿ ಗಳಿಕೆಯ ಬಗ್ಗೆ ದೂರಾಲೋಚನೆ ಮಾಡುವಿರಿ. ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ಎಲ್ಲರ ಸಹಕಾರದಿಂದ ಮನೆಯ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಉನ್ನತ ಸ್ಥಾನ. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮನೆಯ ಆಗಮಿಸಿದ ಅತಿಥಿಗಳಿಗೆ ಸಂತೋಷವನ್ನು ಉಣ್ಣಲು ಹಾಕುವಿರಿ. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ.
ಮಿಥುನ ರಾಶಿ: ಅತಿಯಾದ ಕೋಪಿಷ್ಟರ ಮನವೊಲಿಸುವುದು ಕಷ್ಟ. ಅಲ್ಪಕಾಲದಲ್ಲಿ ಶಾಂತವೂ ಆಗಾದು. ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಯತ್ನಿತ ಕಾರ್ಯಕ್ಕೆ ದೈವಬಲ ಇಲ್ಲವಾಗಬಹುದು, ದೈವಕ್ಕೆ ಶರಣಾಗಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ಹೂಡಿಕೆಯಿಂದ ನಿಮಗೆ ನಿರೀಕ್ಷಿತ ಲಾಭ ಕಾಣಿಸದೇ ಹೋಗುವುದು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸುಳ್ಳು ಮಾತುಗಳನ್ನು ಯಾರೂ ಕೇಳಲು ಇಷ್ಟ ಪಡರು. ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು.
ಕರ್ಕಾಟಕ ರಾಶಿ: ಕಲಾವಿದರು ಇಂದು ಬಹಳ ಉತ್ಸಾಹದಲ್ಲಿ ಇರುವರು. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ಇಂದಿನ ಕಾರ್ಯಕ್ಕೆ ಅನಿರೀಕ್ಷಿತ ಲಾಭವಾಗುವುದು. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಆರ್ಥಿಕ ಸಹಾಯವನ್ನು ಬಯಸಬಹುದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ. ಸದಾ ಯಾರ ಮೇಲಾದರೂ ಅನುಮಾನದಿಂದಲೇ ಇರುವಿರಿ. ರತ್ನಗಳನ್ನು ಪರೀಕ್ಷಿಸಿ ಖರೀದಿಸಿ ಮತ್ತು ಧರಿಸಿ.
ಸಿಂಹ ರಾಶಿ: ದೈಹಿಕ ಶ್ರಮದಿಂದ ಸಿಗುವ ಅಲ್ಪ ಲಾಭವೂ ನಿಮಗೆ ದಕ್ಕುವುದು ಕಷ್ಟ. ಅಪರಿಚಿತರ ಜೊತೆ ಅತಿಯಾದ ಸ್ನೇಹವು ಬೆಳೆಯಬಹುದು. ನಂಬಿಕೆಯಲ್ಲಿ ದ್ರೋಹವಾಗಿದ್ದು ಯಾರನ್ನು ನಂಬಬೇಕು ಎನ್ನುವ ಗೊಂದಲ, ಹತಾಶೆಗಳು ಕಾಣಿಸುವುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮ ಬಗ್ಗೆಯೇ ಉತ್ತರ ಸಿಗದ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಹಿತಶತ್ರುಗಳಿಂದ ಅಪಕೀರ್ತಿ ಬರುವ ಸಾಧ್ಯತೆ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೂ ಇಂದು ದ್ವೇಷ ಹುಟ್ಟಿಕೊಳ್ಳಬಹುದು.
ಕನ್ಯಾ ರಾಶಿ: ಕಾರ್ಯಾರಂಭದಲ್ಲಿ ಇದ್ದ ಆಲೋಚನೆಗಿಂತ ಅಂತ್ಯವು ಭಿನ್ನವಾಗಿರುವುದು. ಉದ್ಯೋಗದ ಮಿತ್ರರು ಎಲ್ಲಿಗಾದರೂ ಹೋಗುವ ಯೋಜನೆಯನ್ನು ಮಾಡಿಕೊಂಡು ಹೊರಡುವಿರಿ. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾಗುಬಹುದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ಆರ್ಥಿಕ ವ್ಯವಹಾರದಲ್ಲಿ ನ್ಯಾಯ ಸಿಗಲು ಕಾನೂನಿಗೆ ಶರಣಾಗಬೇಕಾಗುವುದು. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ಸಾಮಾಜಿಕ ಕಾರ್ಯವನ್ನೂ ಪರಿಚಿತರ ಜೊತೆ ಭಾಗವಹಿಸಿ ಮಾಡುವಿರಿ. ಕುಟುಂಬವು ನಿಮಿತ್ತ ತಿರುಗಾಟ ಮಾಡಬೇಕಾಗುವುದು.
ತುಲಾ ರಾಶಿ: ವಾಸಕ್ಕೆ ಹೊಸ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು, ಅಪರಿಚಿತರು ನಿಮ್ಮನ್ನು ಗಮನಿಸಬಹುದು ಅಥವಾ ಏನಾದರೂ ತೊಂದರೆಯನ್ನೂ ಕೊಡಬಹುದು. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ಬಹಳ ದಿನಗಳಿಂದ ಇರಿಸಿಕೊಂಡಿದ್ದ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಅನಿಶ್ಚಿತ ಕೆಲಸದಲ್ಲಿ ಆದಾಯವನ್ನು ಹೆಚ್ಚು ಪಡೆಯುವಿರಿ. ವೈದ್ಯರಿಂದ ನಿಮಗೆ ಅಶುಭ ಸುದ್ದಿ ಕೇಳಿಬರಬಹುದು. ನೀವು ಮೌನದಿಂದ ಇದ್ದರೆ ಆಗುವ ಎಲ್ಲದಕ್ಕೂ ಸಮ್ಮತವುದೆ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ. ಸಂಶೋದನೆಯ ಅಂಶಗಳು ನಿಮಗೆ ಇಷ್ಟವಾಗಬಹುದು.
ವೃಶ್ಚಿಕ ರಾಶಿ: ನೂತನವಾಗಿ ವಿವಾಹವಾದವರು ಬಹಳ ಎಚ್ಚರವಹಿಸಬೇಕಾದ ಸ್ಥಿತಿ ಇದೆ. ನಿಮ್ಮ ಆರ್ಥಿಕತೆಯ ದೃಷ್ಟಿ ಹೋಗಬಹುದು. ನಿಮ್ಮ ಅಪನಂಬಿಕೆಗಳನ್ನು ಯಾರ ಮೇಲೂ ಹೇರುವುದು ಬೇಡ. ಇಷ್ಟದ ಕಾರ್ಯವು ಸಿದ್ಧಿಯಾಗಿ ನಿಮಗೆ ಉತ್ಸಾಹವು ಹೆಚ್ಚಾಗುವುದು. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಹಲವು ಮೂಲಗಳಿಂದ ನಿಮಗೆ ಒಂದೇ ರೀತಿಯ ಅಭಿಪ್ರಾಯ ಬರಲಿದೆ. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ನಕಾರಾತ್ಮಕ ಅಂಶಗಳನ್ನು ಸುಳ್ಳಾಗಿಸುವತ್ತ ಪ್ರಯತ್ನವಿರಲಿದೆ. ಬಂಧುಗಳ ಮೇಲೆ ಊಹಾಪೋಹಗಳನ್ನು ಇಟ್ಟುಕೊಳ್ಳುವಿರಿ. ನೀವು ಮಾಡುವ ವೃತ್ತಿಯಲ್ಲಿ ಗೊಂದಲವಿದ್ದರೆ ಅನುಭವಗಳನ್ನು ಕೇಳಿ ಮಂದುವರೆಯಿರಿ. ನಿಮ್ಮ ಕಾರ್ಯಕ್ಕೆ ಸಂಗಾತಿಯಿಂದ ಪ್ರೋತ್ಸಾಹ ಸಿಗಲಿದೆ.
ಧನು ರಾಶಿ: ಉದ್ಯೋಗದಲ್ಲಿ ಸಿಕ್ಕ ಸ್ಥಾನಕ್ಕೆ ಬೇಕಾದ ಗಾಂಭೀರ್ಯ ಬೆಳೆಯುವುದು. ವಾಹನದಲ್ಲಿ ದೂರ ಸಂಚಾರವು ನಿಮಗೆ ಖುಷಿಯನ್ನು ಕೊಡುವುದು. ಇಂದು ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಹೆಚ್ಚು ತಿರುಗಾಟ ಮಾಡಬೇಕಾಗುವುದು. ಯಾರಿಗೂ ಸುಲಭಕ್ಕೆ ಸಿಗದೇ ಏನಾದರೂ ನೆಪವನ್ನು ಹೇಳಿ ತಪ್ಪಿಸಿಕೊಳ್ಳುವಿರಿ. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ವ್ಯವಹಾರಾದಲ್ಲಿ ಆಕರ್ಷಕ ಮಾತುಗಳನ್ನಾಡಿ ಲಾಭ ಮಾಡಿಕೊಳ್ಳುವ ಸಂದರ್ಭ ಬರುವುದು. ನಿಮ್ಮ ಮನಸ್ಸಿಗೆ ಪೂರ್ಣವಾಗಿ ಒಪ್ಪಿಗೆ ಆದರೆ ಮಾತ್ರ ಯಾವ ಕೆಲಸಕ್ಕಾದರೂ ಮುಂದುವರಿಯಿರಿ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ. ಉದ್ಯೋಗವಿಲ್ಲವೆಂಬುದು ನಿಮಗೆ ಅವಮಾನದ ಸಂಗತಿಯಾಗಲಿದೆ.
ಮಕರ ರಾಶಿ: ದೂರದೃಷ್ಟ ಕೊರೆತಯಿಂದ ಕಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು. ಸ್ಪರ್ಧೆಯಲ್ಲಿ ಹಿನ್ನಡೆಯಾಗಬಹುದು. ಯಾರನ್ನೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇಂದು ಸ್ತ್ರೀಯರಿಗೆ ಸಂಗಾರಿಯಿಂದ ಅಥವಾ ಮೇಲಧಿಕಾರಿಗಳಿಂದ ಮಾನಸಿಕವಾದ ಕಿರಿಕಿರಿ ಇರಲಿದ್ದು ಕೆಲಸ ಮಾಡಲು ಕಷ್ಟವಾಗಬಹುದು. ಅನಾರೋಗ್ಯದ ಭೀತಿಯೇ ನಿಮ್ಮನ್ನು ಇನ್ನಷ್ಟು ಕುಗ್ಗಿಸುವುದು. ನಿಮ್ಮ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು. ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು, ಮಾಡಲು ಸಮಯ ಸಾಲದು. ಮಿತ್ರರ ಸಹಾಯದಿಂದ ನಿಮಗೆ ಧನ ಸಹಾಯವು ಸಿಗಬಹುದು. ಸಾರ್ವಜನಿಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ಜಲಚರ ಪ್ರಾಣಿಗಳಿಂದ ಭಯ. ನಿಮಗೆ ಪರಿಚಿತರನ್ನು ಆಪ್ತರನದನಾಗಿ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆದೀತು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದೇ ಇರುವುದರಿಂದ ನಿಮ್ಮ ಮೇಲೆ ಕೋಪಗೊಳ್ಳುವರು.
ಕುಂಭ ರಾಶಿ: ಉನ್ನತ ಸ್ಥಾನವನ್ನು ಪಡೆಯಲು ನಿಮಗೆ ಬಂದ ಅಪವಾದವನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಅಮೂಲ್ಯ ವಿಚಾರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕೆ ಹೆಚ್ಚು ಖರ್ಚಾಗಬಹುದು. ಒಂದು ವಸ್ತುವು ಖರೀಯಾಗಬೇಕಾದರೆ ಅದರ ಸಾದ್ಯಂತ ಪ್ರಯೋಜನವೂ ಗೊತ್ತಾಗಲಿ. ಹಣವು ವ್ಯರ್ಥವಾಗಿ ಉಪಯೋಗವೂ ಇಲ್ಲದಂತೆ ಆಗಬಹುದು. ಮಕ್ಕಳಿಗೆ ಇರುವ ಗೊಂದಲವನ್ನು ದೂರ ಮಾಡುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಕಾರ್ಯದ ಸ್ಥಳವು ಬದಲಾಗುವ ಸಾಧ್ಯತೆ ಇದೆ. ಯಾರನ್ನಾದರೂ ಹೇಗೆ ಬಳಸಿಕೊಳ್ಳಬೇಕು ಎನ್ನುವ ವಿಧಾನ ತಿಳಿಯುವುದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ಕೊಡುವುದು ಬೇಡ.
ಮೀನ ರಾಶಿ: ಸ್ವಾರ್ಥವನ್ನು ಕಟ್ಟಿಟ್ಟು ಬಂಧುಗಳಿಗೆ ಉತ್ತಮ ಸಲಹೆ ಮತ್ತು ಸಹಾಯ ಮಾಡುವಿರಿ. ಆರ್ಥಿಕ ಭದ್ರೆತೆಯ ಬಗ್ಗೆ ನಿಮಗೆ ತೊಂದರೆಗಳು ಆಗಬಹುದು. ಇಲ್ಲವಾದರೆ ಯಾವ ಪ್ರಯೋಜನವೂ ಇಲ್ಲದೇ ನಷ್ಟವಾಗುವುದು. ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ಇಂದು ಹಿರಿಯರನ್ನು ಭೇಟಿಯಾಗಿ ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಅಪರೂಪದ ವ್ಯಕ್ತಿಗಳ ಜೊತೆ ಸಮಾಗಮವಾಗಲಿದೆ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ನಿಮ್ಮ ಕೆಲಸವು ಬದಲಾವಣೆಯಾಗಬಹುದು. ದುರಭ್ಯಾಸದಿಂದ ಅನಿವಾರ್ಯವಾಗಿ ದೂರವಿರಬೇಕಾದೀತು. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ಒತ್ತಾಯದ ಕಾರಣ ಸಮಾರಂಭಗಳಿಗೆ ಹೋಗುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)