ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಗುರುವಾರ ಪರರ ಶಂಕೆ ದೂರ, ನೋವಿನಿಂದ ಪಾಠ, ಕೋಪದ ಉಪಶಮನ, ಅದೃಷ್ಟದ ನಿರೀಕ್ಷೆ, ಸಾಹಸದಿಂದ ನೋವು ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ : ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ವರೀಯಾನ್, ಕರಣ: ಬಾಲವ ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:10 – 15:47, ಯಮಘಂಡ ಕಾಲ 06:05 – 07:42, ಗುಳಿಕ ಕಾಲ 09:19 – 10:56
ಮೇಷ ರಾಶಿ: ನಿಮಗೇ ಸಿಗುವ ಸಂದರ್ಭವಿರುವಾಗ, ನೀವಾಗಿಯೇ ಹೋಗಿ, ಎಡವಿ ಬಿದ್ದು ಗಾಯ ಮಾಡಿಕೊಳ್ಳುವಿರಿ. ಎಲ್ಲವನ್ನೂ ಕಳೆದುಕೊಳ್ಳುವುದಕ್ಕಿಂತ ಅಲ್ಪವನ್ನು ಉಳಿಸಿಕೊಳ್ಳುವುದು ಜಾಣತನ. ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ಪರರಿಂದ ಆದ ಪ್ರಚೋದನೆಯು ತಾತ್ಕಾಲಿಕವಾಗಿ ಉಪಶಮನವಾಗಲಿದೆ. ಯೋಜನೆಯನ್ನು ಸಾಕಾರಗೊಳಿಸಲು ಒಳ್ಳೆಯ ಕಾಲ ದುಡಿಮೆಗೆ ತಕ್ಕ ಫಲ ಸಿಗಲಿದೆ. ಹಣದ ವ್ಯವಹಾರದಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಕೆಲಸವು ಬಹಳ ನಿಧಾನವಾಗುವುದು. ಬೇಸರವೂ ಬರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳಬೇಡಿ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗುವುದು.
ವೃಷಭ ರಾಶಿ: ಸ್ವಂತಕ್ಕಾಗಿ ಏನನ್ನಾದರೂ ಮಾಡಲು ಹೋದರೆ ಸಿಗದು. ಆದರೆ ಪರರಿಗಾಗಿ ಬಯಸಿದ್ದು ನಿಮ್ಮ ಪಾಲಾಗಬಹುದು. ಆದಾಯವನ್ನು ಭೂಮಿಯ ಖರೀದಿಗೆ ಹಾಕುವ ಯೋಜನೆ ಬರುವುದು. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಸಿಗುವ ಮನ್ನಣೆಯು ಮತ್ತೇನನ್ನೋ ಬಯಸುವ ಸಂದೇಹ ಬರಲಿದೆ. ಬದಲಾಗಲಿರುವ ಆಪ್ತರ ವರ್ತನೆಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಹಣದ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಕುಟುಂಬದ ಆತ್ಮೀಯರ ಬೆಂಬಲ ದೊರೆಯಲಿದೆ. ಹೊಸ ಉತ್ಸಾಹದಿಂದ ದಿನ ಪ್ರಾರಂಭವಾಗುತ್ತದೆ. ದುಃಸ್ವಪ್ನವು ನಿಮ್ಮನ್ನು ಚಿಂತಿತರನ್ನಾಗಿ ಮಾಡುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ. ಯಾವ ನಕಾರಾತ್ಮಕ ಆಲೋಚನೆಗಳಿಗೂ ಸ್ಪಂದಿಸಲಾರಿರಿ.
ಮಿಥುನ ರಾಶಿ: ಆರ್ಥಿಕವಾಗಿ ಹಿನ್ನಡೆಯಿದ್ದರೂ ಅದನ್ನು ನಿರ್ವಹಿಸುವ ಜಾಣತನ ಗೊತ್ತಾಗಲಿದೆ. ಇಂದು ಶ್ರಮಕ್ಕೆ ಯೋಗ್ಯವಾದ ಫಲವು ಸಿಗದೇ ಬೇಸರಬರಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಯಾರಿಂದಲಾದರೂ ನಿಮಗೆ ಮುಖ್ಯ ಸ್ಥಾನ ದೊರೆಯಬಹುದು. ಒಳ್ಳೆಯ ಮನಸ್ಸಿನ ಪ್ರಯತ್ನಕ್ಕೆ ದೈವಾನುಕೂಲ ಲಭಿಸುವುದು. ಹಣಕಾಸಿನಲ್ಲಿ ಬಂಡವಾಳ ಹೂಡಿಕೆಗೆ ಸಮಯ ಸೂಕ್ತ. ಕುಟುಂಬದಲ್ಲಿ ಸಂತೋಷದ ಕ್ಷಣಗಳ ಅನುಭವ. ದೀರ್ಘಕಾಲದ ಅನಂತರ ಸ್ನೇಹಿತರ ಜೊತೆ ಭೇಟಿಯಾಗಬಹುದು. ನಿಮಗೆ ಅದನ್ನು ಹಿತಶತ್ರುಗಳೇ ಮಾಡುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ಬರಬಹುದು. ಅನ್ಯರು ಮಾಡುವ ಕುಚೋದ್ಯವು ನಿಮಗೆ ಸಹಿಸಲಾಗದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು.
ಕರ್ಕಾಟಕ ರಾಶಿ: ಅದೃಷ್ಟದ ಮೂಲಕ ನಿಮ್ಮ ಕಲ್ಪನೆ ಸಾಕಾರವಾಗಲಿದೆ. ಇಂದು ನೀವು ಯಾರ ಮಾತಿನ ಮೇಲೂ ಪೂರ್ವಾಗ್ರಹದಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಮಕ್ಕಳಿಂದ ಸಂತೋಷ ಸಿಗುತ್ತದೆ. ಪ್ರಯಾಣದ ಸಾಧ್ಯತೆಯೂ ಇದೆ. ಆದರೆ ಸಂಜೆ ಸಮಸ್ಯೆಗಳು ಹೆಚ್ಚಾಗಬಹುದು. ಬಂಧುಗಳ ಮನೆಗೆ ಅತಿಥಿಯಾಗಿ ಆಹ್ವಾನ ಬರಬಹುದು. ಅನಗತ್ಯ ಖರ್ಚುಗಳು ಮತ್ತು ಅಡೆತಡೆಗಳು ಎದುರಾಗುತ್ತವೆ. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಬೇಕೆನಿಸಿದ ವಸ್ತುವನ್ನು ಶ್ರಮದಿಂದ ಪಡೆಯುವಿರಿ. ನಿಮಗೆ ಹಿತವಚನವು ಮನಸ್ಸಿಗೆ ಬೇಸರವನ್ನೇ ತರಿಸುವುದು. ವಾಹನ ಖರೀದಿಯು ನಿಮಗೆ ಅನಿವಾರ್ಯ ಎನಿಸುವುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.
ಸಿಂಹ ರಾಶಿ: ಸೃಜನ ಶೀಲರಾಗಿ ಬಹುಕಾಲ ಉಳಿಯಲಾಗದು. ಇಷ್ಟು ದಿನ ಮನಸ್ಸಿನಲ್ಲಿಯೇ ಇಟ್ಟುಕೊಂಡ ಬಯಕೆಯನ್ನು ಹೊರ ಹಾಕುವಿರಿ. ಕೆಲಸದ ಸ್ಥಳದಲ್ಲಿ ಸವಾಲುಗಳಿದ್ದು ಸಹಕಾರದ ಅಗತ್ಯವಲಿದೆ ಹಣಕಾಸಿನಲ್ಲಿ ಚಿಕ್ಕ ಶ್ರಮದಿಂದ ಲಾಭ ಸಾಧ್ಯ. ನಿಮ್ಮಿಂದ ಬಯಸಿದ್ದನ್ನು ನೀಡುವುದು ಕಷ್ಟ. ಸ್ನೇಹಿತರಿಂದ ಖುಷಿಯ ಸುದ್ದಿ ಕೇಳಬಹುದು. ಮನಸ್ಸು ಶಾಂತವಾಗಿರಿಸಲು ಪ್ರಯತ್ನಿಸಿ. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಭೋಗ ವಸ್ತುಗಳಿಗೆ ದಾಸರಾಗುವಿರಿ. ಆಭರಣವನ್ನು ಖರೀದಿಸಲು ಇಚ್ಛೆ ಇರುವುದು. ನಿಮ್ಮ ಮನಸ್ಸಿಗೆ ಹಿಡಿಸಿದವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮಿಂದ ಆಗದ್ದನ್ನು ಮತ್ಯಾರೋ ಮಾಡಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು.
ಕನ್ಯಾ ರಾಶಿ: ಉದ್ಯೋಗದ ಸಂವಹನವು ಸಫಲವಾಗಲಿದೆ. ನಿಮ್ಮ ಬೆಂಬಲಕ್ಕೆ ಯಾರೂ ಬಾರದೇ ಇಂದು ವಾದವು ವ್ಯರ್ಥವಾಗುವುದು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದೇಶದಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಬಾಂಧವ್ಯ ಸ್ಥಿರತೆಗೆ ಬದ್ಧಮನಸ್ಸಿರುವುದು. ಸಂಪತ್ತು ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳಿಂದ ಸಂತೋಷ ಸಿಗುತ್ತದೆ ಮತ್ತು ಸಂತೋಷ ಉಳಿಯುತ್ತದೆ. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಸೌಂದರ್ಯಕ್ಕೆ ಮರುಳಾಗುವಿರಿ. ಅನಾಮಧೇಯ ಕರೆಗಳಿಂದ ತೊಂದರೆಯಾಗಬಹುದು. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.




