Horoscope for 2 June 2024: ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿದೆ

2024 ಜೂನ್ 02ರ ದಿನ ಭವಿಷ್ಯ: ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope for 2 June 2024: ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿದೆ
ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಹಿನ್ನಡೆ, ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 01, 2024 | 5:40 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜೂನ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಸಂಜೆ 05:21ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:44 ರಿಂದ ಬೆಳಿಗ್ಗೆ 05:21ರ ವರೆಗೆ.

ಮೇಷ ರಾಶಿ: ನಿಮಗೆ ಆರ್ಥಿಕ ಹೊರೆಯು ಹೆಚ್ಚಾಗಬಹುದು. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಆತುರದ ತೀರ್ಮಾನ ಹಾಗೂ ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದಿರಿ. ಕೊಟ್ಟ ಸಾಲ ಮರಳಿಬರಹುದು. ಬರುವ ಹಣವು ಬಾರದೇ ಕಷ್ಟವಾಗುವುದು. ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ವ್ಯವಹಾರದಲ್ಲಿ ಸಹನೆಯಿಂದ ವರ್ತಿಸಿ ಲಾಭ ಮಾಡಿಕೊಳ್ಳುವಿರಿ. ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ನಿಮ್ಮ ಅಳತೆ ಮೀರಿ ವರ್ತಿಸುವುದು ಬೇಡ. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ.

ವೃಷಭ ರಾಶಿ: ನಿಮ್ಮ ಬಗ್ಗೆ ಅಪವಾದವನ್ನು ಶತ್ರುಗಳು ಮಾಡುವರು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಕಳೆದುಕೊಳ್ಳಬೇಕಾಗಬಹುದು. ಯೋಗ್ಯರಲ್ಲದವರಿಗೆ ಹಣವನ್ನು ದಾನ ಮಾಡುವಿರಿ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲವು ಸಿಗಬಹುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಅಪಕ್ವತೆಯು ಕಾಣುತ್ತದೆ. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ನಿಮ್ಮ ತಪ್ಪಿಗೆ ಯಾರನ್ನು ದೂಷಿಸಿದರೂ ಆಗದು. ನೂತನ ಗೃಹನಿರ್ಮಾಣಕ್ಕೆ ಸಂಗಾತಿಗೆ ಒತ್ತಡವನ್ನು ತರುವಿರಿ.

ಮಿಥುನ ರಾಶಿ: ಭೂಮಿಯ ಪಾಲನೆ ನಿಮಗೆ ಕಷ್ಟವಾಗುವುದು. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ. ವಾಗ್ವಾದದಲ್ಲಿ ಸೋಲಾಗುವುದು. ನಿಮ್ಮ ಪ್ರಗತಿಗೆ ಅವಶ್ಯಕವಾದ ಮಾರ್ಗಗಳನ್ನು ತೆರೆಯಬಹುದು. ನೀವು ಉತ್ತಮ ವ್ಯವಹಾರದಿಂದ ಯಶಸ್ವಿಯಾಗುತ್ತೀರಿ. ಕಾಲಹರಣಕ್ಕಾಗಿ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಅತಿಯಾದ ಆಸೆಯು ನಿಮ್ಮ ದಿಕ್ಕನ್ನು ತಪ್ಪಿಸುವುದು. ಸಮಯೋಚಿತ ಸ್ಪಂದ‌ನೆಯಿಂದ ಗೌರವ ಸಿಗಲಿದೆ.

ಕರ್ಕ ರಾಶಿ: ಇಂದು ಯಾವುದೇ ವಾದ ವಿವಾದಗಳಿಗೆ ಕಿವಿಯನ್ನು ಕೊಡಬೇಡಿ. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಲಿದೆ. ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಕೆಲವು ಪಾಠವನ್ನು ನೀವು ಅನ್ಯರಿಂದ ಕಲಿಯುವಿರಿಮ ನಿಮ್ಮ ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯ ನಿಮ್ಮ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ಕಛೇರಿ ಹಾಗೂ ಕುಟುಂಬದ ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಡೆದಂತೆ ನುಡಿಯುವುದು ನಿಮಗೆ ಕಷ್ಟವಾಗುವುದು. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ಒಂದೇ ತಕ್ಕಡಿಯಲ್ಲಿ ಎಲ್ಲವನ್ನು ತೂಗಲಾಗದು.

ಸಿಂಹ ರಾಶಿ: ಇಂದು ಮಾತು ಕಡಿಮೆ ಮತ್ತು ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸಿದರೆ ಮನೆಯ ಕೆಲಸವಾಗುವುದು. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದ ಯಾವುದೇ ಸಮಸ್ಯೆ ಇಂದು ನಿಮ್ಮೊಂದಿಗೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ಅನಾರೋಗ್ಯ ಕಾಡಬಹುದು. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ನಿಮ್ಮ ಕಾನೂನು ಬಾಹಿರ ಕಾರ್ಯಕ್ಕೆ ಬ್ರೇಕ್ ಬೀಳುವುದು. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು ಹೆಚ್ಚಾಗುವುದು. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ಕೋಪದ ಕಾರಣಕ್ಕೆ ಕೆಲವು ಅವಕಾಶಗಳು ಇಲ್ಲವಾಗುವುದು.

ಕನ್ಯಾ ರಾಶಿ: ನೀವು ಜೀವನದಲ್ಲಿ ಆಸಕ್ತಿದಾಯಕ ವಿಷಯಗಳಿಗೆ ಮಾತ್ರ ಉತ್ತರಿಸುವಿರಿ. ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸ್ಥಿತಿ ಬರಬಹುದು. ಆದರೆ ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಯೋಚಿಸಿ. ಹೆಚ್ಚು ಪ್ರಯತ್ನ ಪಟ್ಟರೆ ನಿಮ್ಮ ಸನಸ್ಯೆಗೆ ಸ್ವಲ್ಪವಾದರೂ ಪರಿಹಾರ ದೊರಕುವುದು ಖಚಿತ. ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಯಾವ ಉದ್ಯಮವನ್ನೂ ನೀವು ಹಗುರಾಗಿ ಕಾಣುವುದು ಬೇಡ. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಬರಬಹುದು.

ತುಲಾ ರಾಶಿ; ಇಂದು ನಿಮ್ಮ ಒರಟುತನದಿಂದ ಪತಿ ಪತ್ನಿಯರ ನಡುವೆ ಕಲಹ ಬರುವುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಎಲ್ಲವನ್ನೂ ಬೇರೆಯವರೇ ಮಾಡಬೇಕು ಎನ್ನುವುದು ಬೇಡ. ನಿಮ್ಮ ಸಹಕಾರವೂ ಇರಲಿ. ಎರಡೂ ಚಕ್ರ ತಿರುಗಿದಾಗಲೇ ಬಂಡಿ ಮುಂದೆ ಸಾಗುವುದು. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚು ಚಿಂತೆ ಮಾಡಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಕೆಲವು ಯೋಜನೆಗಳನ್ನು ಸಹ ಮಾಡಬಹುದು. ಅನಿರೀಕ್ಷಿತ ವಾರ್ತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು.

ವೃಶ್ಚಿಕ ರಾಶಿ; ಪೂರ್ವಜರ ಆಸ್ತಿಯ ಅನ್ವೇಷಣೆಯಲ್ಲಿ ನೀವು ತೊಡಗುವಿರಿ. ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕೊಡಲು ಬಾಕಿ ಇರುವ ಮೊತ್ತವನ್ನು ತೀರಿಸಿ. ಸಂಗಾತಿಯ, ಪ್ರೇಯಸಿ ಜೊತೆಯಲ್ಲಿ ಸುತ್ತಾಟ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ದೊರೆಯಲಿದೆ. ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗಬಹುದು. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಕೆಲವೊಮ್ಮೆ ನೀವೇ ಸಮಸ್ಯೆಯನ್ನು ತಂದುಕೊಂಡು ಕಷ್ಟಪಡುವಿರಿ. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ.

ಧನು ರಾಶಿ: ನಿಮ್ಮ ಅನವರತ ಕಾರ್ಯದಿಂದ ವಿಶ್ರಾಂತಿ ಬೇಕೆನಿಸಬಹುದು. ಆರ್ಥಿಕ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನವೇ ನಿಮಗೆ ಧೈರ್ಯ ಕೊಡಲಿದೆ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಆರೋಗ್ಯ ಉತ್ತಮವಾಗಿರುವುದು. ವಾಹನದ ವಿಚಾರದಲ್ಲಿ ನಿಮಗೆ ಗೊಂದಲ ನಿವಾರಣೆಯಾಗದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಕೆಲಸ ಕಾರ್ಯಗಳು ಫಲಿಸಲಿವೆ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು.

ಮಕರ ರಾಶಿ; ಇಂದು ನಿಮ್ಮ ಖಾಸಗಿ ವ್ಯವಹಾರವು ಬಯಲಾಗುವುದು. ಇದಕ್ಕಾಗಿ ನೀವು ತರ್ತು ಪ್ರಯಾಣವನ್ನು ಮಾಡಬೇಕಾಗಬಹುದು. ಆ ಸಮಯದಲ್ಲಿ ಅಧಿಕ ಖರ್ಚು ಆಗಲಿದೆ. ಮಾನಸಿಕವಾದ ಉಲ್ಲಾಸವಿರಲಿದೆ. ದೈಹಿಕ ಸೌಕರ್ಯವನ್ನು ಸಾಧಿಸಲಾಗುತ್ತದೆ. ಈ ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಯಾರನ್ನೂ ದೂರ ಮಾಡಬೇಕು ಎಂದುಕೊಂಡರೂ ಅದು ಆಗದು. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಸಾಮಾಜಿಕ ಸಂಸ್ಥೆಗೆ ಸೇರಬಹುದು. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ.

ಕುಂಭ ರಾಶಿ: ಇಂದು ನಿಮ್ಮ ವ್ಯಾವಹಾರಿಕ ನಡೆಯಿಂದ ನಿಮಗೆ ಹಿನ್ನಡೆ. ಸಂಗಾತಿಯ ಜೊತೆ ಆಪ್ತವಾಗಿ ಮಾತನಾಡಲು ಇಷ್ಟವಾಗದು. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ನಿಮ್ಮ ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿರುತ್ತದೆ. ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಅವರೊಂದಿಗೆ ಸಮಯವನ್ನು ಕಳೆಯಬಹುದು. ಯಾವುದನ್ನಾದರೂ ಕಳೆಯುವುದಕ್ಕಿಂತ ಕಷ್ಟ ಕೂಡಿಸುವುದು. ಪೂರ್ವ ವೈರವು ಪುನಃ ಕಾಣಿಸಿಕೊಳ್ಳಬಹುದು. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪ‌ಭಾವ ಬರುವುದು. ಸಮಯಕ್ಕೆ ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ಕೆಲವು ವಿಚಾರಕ್ಕೆ ತೀರ್ಮಾನವನ್ನು ಸರಿಯಾಗಿ ತೆಗೆದುಕೊಳ್ಳಲಾಗದು.

ಮೀನ ರಾಶಿ: ಇಂದು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಸಾಧಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಗಮನಹರಿಸಿದರೆ ಉತ್ತಮ. ನಿಮ್ಮ ದೃಷ್ಟಿಯಿಂದ ಮಾತ್ರ ಸರಿ ಇದ್ದರೆ ಸಾಲದು. ಅನೇಕರ ದೃಷ್ಟಿಯಿಂದ ಸರಿ ಕಾಣಬೇಕು. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಹಿರಿಯರ ಸಲಹೆಯನ್ನು ಒಡೆಯಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ನಿರಾಸೆಯನ್ನು ಅನುಭವಿಸುತ್ತೀರಿ. ಭಿನ್ನಮತಗಳಿಗೆ ಸೊಪ್ಪು ಹಾಕುವುದು ಬೇಡ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ತಪ್ಪಿನಿಂದ ಲ ನಿಮಗೆ ಭಯವು ಇರುವುದು.

ಲೋಹಿತ ಹೆಬ್ಬಾರ್-8762924271 (what’s app only)

Published On - 5:39 pm, Sat, 1 June 24

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ