AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಯ ಜೊತೆ ಚರ್ಚಿಸಿ ಭವಿಷ್ಯದ ನಿರ್ಧಾರಕ್ಕೆ ಬನ್ನಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ ಶನಿವಾರ ಅನಿರೀಕ್ಷಿತ ಬೇಸರ, ಕಾರ್ಯದ ಬದಲಾವಣೆ, ಸಣ್ಣ ಉತ್ಪಾದನೆಗೆ ಬೆಂಬಲ, ಸಂಗಾತಿಯ ಮನಸ್ತಾಪ ಇದು ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಸಂಗಾತಿಯ ಜೊತೆ ಚರ್ಚಿಸಿ ಭವಿಷ್ಯದ ನಿರ್ಧಾರಕ್ಕೆ ಬನ್ನಿ
ದಿನ ಭವಿಷ್ಯ
TV9 Web
| Updated By: ವಿವೇಕ ಬಿರಾದಾರ|

Updated on: Jun 28, 2025 | 1:16 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:22 – 10:59, ಯಮಘಂಡ ಕಾಲ 14:13 – 15:50, ಗುಳಿಕ ಕಾಲ 06:08 – 07:45

ತುಲಾ ರಾಶಿ: ಪುರಸ್ಕಾರದಿಂದ ಉತ್ಸಾಹಕ್ಕೆ ಅವಕಾಶ ಸಿಗಲಿದೆ. ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಅನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಹಳೆಯ ಮಿತ್ರನ ಸ್ಮರಣೆ ಮಾಡುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಸಾಲವನ್ನು ಹಿಂದಿರುಗಿಸಲು ಕಷ್ಟವಾಗಬಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ಖಂಡಿಸಿ ನಿಷ್ಠುರವಾಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿಯನ್ನು ನೀವು ಸರಿಯಾಗಿ ನಿಭಾಯಿಸುತ್ತೀರಿ ಎನ್ನುವುದಕ್ಕೆ ನಿಮಗೆ ಇಂದು ಬರುವ ಜವಾಬ್ದಾರಿಯೇ ಕಾರಣವಾಗಿರುತ್ತದೆ. ಸಂಗಾತಿಯ ಮಾತಿನಿಂದ ಮನಸ್ತಾಪ‌ ಉಂಟಾಗಬಹುದು. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಎಲ್ಲವನ್ನೂ ಸಮರಸದಿಂದ ಮಾಡುವಿರಿ.

ವೃಶ್ಚಿಕ ರಾಶಿ: ಭೂ ಖರೀದಿ ಸ್ವಲ್ಪ ಭಾರವೆನಿಸುವುದು. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂಬಂಧಪಟ್ಟರ ಜೊತೆ ಮಾತನಾಡುವಿರಿ. ವಿಶ್ವಾಸಕ್ಕೆ ಘಾಸಿಯಾಗುವ ಘಟನೆಗಳು ನಿಮಗೆ ಹೊಸದಲ್ಲದಿದ್ದರೂ ಮತ್ತೆ ಮತ್ತೆ ನೆನಪಾಗಿ ದುಃಖವು ಬರಬಹುದು. ಪರರ ಕಲಹದಲ್ಲಿ ಮಧ್ಯಸ್ತಿಕೆ ವಹಿಸುವುದು ಇಷ್ಟವಾಗುವುದು. ನಿಮ್ಮ ಹಿಂದಿನ‌ ಜೀವನವನ್ನು ನೆನೆದು, ಈಗಿನ ಸಮೃದ್ಧಿಯನ್ನು ಕಂಡು ಬಹಳ ಆನಂದವಾಗುವುದು. ಯಾರದೋ ಕಾರಣಕ್ಕೆ ನೀವು ತಲೆತಗ್ಗಿಸಬೇಕಾಗಬಹುದು. ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಸ್ವಲ್ಪ ಆಲೋಚಿಸಿ. ಪರರನ್ನು ನಿಂದಿಸುವ ದುರಭ್ಯಾಸದಿಂದ ದೂರವಿರುವುದು ಒಳ್ಳೆಯದು. ಒಳ್ಳೆಯ ಕಡೆಯಿಂದ ಒಳ್ಳೆಯದನ್ನೇ ನಿರೀಕ್ಷಿಸಿ. ಎಲ್ಲವನ್ನೂ ನೀವು ನಿಶ್ಚಯ ಮಾಡಿಕೊಳ್ಳಲು ಆಗದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು.

ಧನು ರಾಶಿ: ನಿಧಾನವಾಗಿ ಆರಂಭವಾದರೂ ಪರವಾಗಿಲ್ಲ, ಸರಿಯಾದ ಯೋಜನೆಯನ್ನು ಮಾಡಿಕೊಳ್ಳದೇ ಇರುವುದು ಬೇಡ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಅಧಿಕ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಇಂದಿನ ಕೆಲಸವನ್ನು ಮಾಡಬೇಕಾಗುತ್ತದೆ. ಮಕ್ಕಳಿಗೆ ಆಸಕ್ತಿಯಿರುವ ಕಲಿಕೆಗೆ ಉತ್ತೇಜನ ನೀಡುವಿರಿ, ಸಾಧಕ ಬಾಧಕಗಳ ಪರಿಚಯ ಮಾಡಿಕೊಟ್ಟರೆ ಒಳ್ಳೆಯದು. ಉದ್ಯೋಗದಲ್ಲಿ ಭಡ್ತಿಗಾಗಿ ಬಹಳ ಶ್ರಮವಹಿಸುವಿರಿ. ನಿಮ್ಮನ್ನು ಹಿಂದೆಳೆಯಲು ಅನೇಕರು ಪ್ರಯತ್ನಿಸಿದರೂ ನಿಮ್ಮ ಕೆಲಸವು ನಿಮ್ಮನ್ನು ಮುಂದಕ್ಕೆ ತಂದಿರುತ್ತದೆ. ನಿಮಗೆ ನಿಮ್ಮ ಬಗ್ಗೆ ಕಾಳಜಿ ಮಾಡುವವರು ಬೇಕು ಎನಿಸಬಹುದು. ವಿದ್ಯಾವಂತರೊಬ್ಬರ ಪರಿಚಯವು ನಿಮಗೆ ಇಂದಿನ‌ ಮಹಾಲಾಭದಲ್ಲಿ ಒಂದಾಗಿದೆ. ನಿಮ್ಮಲ್ಲಿ ಹಣವನ್ನು ಕೇಳಿ ಯಾರಾದರೂ ಬರಬಹುದು, ಇಲ್ಲವೆನ್ನದೇ ಎಷ್ಟೋ ಒಂದಿಷ್ಟನ್ನು ಇದಂ‌ ನ ಮಮ ಎಂಬ ಭಾವದಿಂದ ಕೊಡಿ. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಂಭವವು ಬರಬಹುದು.

ಮಕರ ರಾಶಿ: ಸಂಗಾತಿಯ ಜೊತೆ ಚರ್ಚಿಸಿ ಭವಿಷ್ಯದ ನಿರ್ಧಾರಕ್ಕೆ ಬನ್ನಿ. ಇಂದು ನಿಮ್ಮವರು ಎಂದು ಯಾರನ್ನು ನೀವು ಭಾವಿಸಿದ್ದೀರೋ ಅವರಿಂದಲೋ ಬಹಳ ನೋವಾಗಬಹುದು. ಹಸಿದವರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಮಕ್ಕಳ ವಿಷಯಕ್ಕೆ ಖರ್ಚು ಮಾಡುವ ಸ್ಥಿತಿ ಬರಲಿದೆ. ಯಾತ್ರಾ ಸ್ಥಳಗಳಲ್ಲಿ ನಿಮ್ಮ ಹಾಗೂ ನಿಮ್ಮ ವಸ್ತುಗಳ ಸುರಕ್ಷತೆಗೆ ಗಮನ ಬೇಕು. ದೈನಂದಿನ ಕೆಲಸಗಳು ನಿಶ್ಚಿಂತೆಯಿಂದ ನಡೆಯುವುವು.‌ ಕುಟಂಬದ ಜೊತೆ ನೀವು ಇನ್ನಷ್ಟು ಆಪ್ತರಾಗುವಿರಿ. ದಾಂಪತ್ಯದಲ್ಲಿ ನಗುವಿದ್ದರೂ ಸುಖದ ಕೊರತೆ ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸವನ್ನು ಸಕಾಲಕ್ಕೆ ಮುಗಿಸಿ ಎಲ್ಲರಿಂದ‌ ಮೆಚ್ಚುಗೆ ಗಳಿಸುವಿರಿ. ಅದಕ್ಕಾಗಿ ಹಣವು ವ್ಯಯವಾಗಲಿದೆ. ಹಳೆಯ‌ ಕೆಲಸವನ್ನು ಮರೆಯುವ ಸ್ವಭಾವವು ಇರಲಿದೆ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು.‌ ಕಲಾವಿದರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವರು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು.

ಕುಂಭ ರಾಶಿ: ಮನೆಯಲ್ಲಿ ನಿಮ್ಮನ್ನು ಯಾವುದಕ್ಕೂ ಒಂಟಿಯಾಗಿ ಬಿಡುವುದಿಲ್ಲ ಎಂಬ ಕೊರಗು ಕಾಣಿಸುವುದು.‌ ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ವಾಹನಸಂಚಾರವು ನಿಮಗೆ ಬೇಡವೆನಿಸವುದು. ನಿಮ್ಮನ್ನು ತರತರದ ಮಾತುಗಳಿಂದ ನಿಮ್ಮ ಉತ್ತೇಜಿಸಬಹುದು. ಇನ್ನೊಬ್ಬರಿಗಾಗಿ ಸುಳ್ಳು ಹೇಳಬೇಕಾದ ಸ್ಥಿತಿ ಬರುವುದು. ಅದು ಸರಿ ಎನಿಸಿ ನೀವು ಮಾಡಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಲೋಹದ ವ್ಯಾಪಾರಕ್ಕೆ ಬಂಡವಾಳ ಹಾಕುವಿರಿ. ಆಪ್ತಮಿತ್ರರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮದಾದ ಗುರಿಯನ್ನು ಹಾಕಿಕೊಳ್ಳಲು ಗೊಂದಲವಾಗಬಹುದು. ಭೂಮಿಯ ಖರೀದಿಗೆ ಯೋಚಿಸಿದ್ದರೆ ನೀವು ಸ್ವಲ್ಪ ಸಮಯವನ್ನು ಬಿಡುವುದು ಒಳ್ಳೆಯದು. ಸಮಯ ಬಂದಾಗ ಅವು ಮತ್ತೆ ಮನೋಭೂಮಿಯಲ್ಲಿ ಮೊಳಕೆ ಒಡೆದೀತು. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಂಬಿಕೆಯು ಹುಸಿಯಾಗುವುದು. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ.

ಮೀನ ರಾಶಿ: ಹಲವು ದಿನಗಳ ಸಂಗಾತಿಯೊಂದಿಗಿನ ಮನಸ್ತಾಪಕ್ಕೆ ಅಂತ್ಯ ಬರಲಿದೆ. ಇಂದು ನಿಮ್ಮ ಮಾತಿನ ಮೋಡಿಗೆ ಯಾರಾದರೂ ಮರುಳಾಗಬಹುದು. ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಮನೆಗೆ ಅಗತ್ಯವಿರುವ ಯಂತ್ರೋಪಕರಣವನ್ನು ಖರೀದಿಸುವಿರಿ. ಆರ್ಥಿಕ ಲಿಖಿತ ರೂಪದಲ್ಲಿ ಸ್ಪಷ್ಟವಾಗಿರಲಿ. ಸರ್ಕಾರಿ ಕೆಲಸವು ಪ್ರಗತಿಯಲ್ಲಿ ಇರಲಿದೆ. ಸಂಗಾತಿಯು ಇಂದು ನಿಮ್ಮ ಮಾತನ್ನು ಅನುಸರಿಸುವಳು. ಹೆಚ್ಚಿನ ಸಂಪಾದನೆಗೆ ಅನ್ಯ ಮಾರ್ಗವನ್ನು ಹಿಡಿದುಕೊಳ್ಳಬೇಕಾಗುವುದು. ಮಾತಮಾಡುವಾಗ ಗಮನವಿರಲಿ. ನಿಮ್ಮೆದುರಿನವರಿಗೆ ಬೈಯ್ಯುತ್ತಿದ್ದುದೆಂದು ಅನಂತರ ಗೊತ್ತಾಗಿ ಇಸರುಮುರುಸಾದೀತು. ಮನೆಯವರ ಮನ ನೋಯಿಸಿ ಕಾರ್ಯ ಮಾಡಲಾಗದು. ಮನಸ್ಸಿನ ಆಲಸ್ಯವನ್ನು ಹೋಗಲಾಡಿಸಿಕೊಂಡು ಕಾರ್ಯಪ್ರವೃತ್ತರಾಗಿ. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಸಜ್ಜನರ ಸಹವಾಸ ನಿಮಗೆ ಸಿಕ್ಕಿ ಮಾರ್ಗದರ್ಶನವೂ ಆಗಕಿದೆ. ಹಿಂದಿನ ತಪ್ಪುಗಳು ಪಾಠವಾಗುವುದು.

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ