ತಾ.10-04-2021 ರ ಶನಿವಾರದ ರಾಶಿಭವಿಷ್ಯ
ಮೇಷ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 4
ವೃಷಭ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 9
ಮಿಥುನ: ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸಂಕಷ್ಟಗಳ ಪರಿಹಾರಕ್ಕಾಗಿ ಅಲೆದಾಡಬೇಕಾದ ಸಂಭವವಿದೆ. ಶುಭ ಸಂಖ್ಯೆ: 1
ಕಟಕ: ಬರುವ ಕಷ್ಟಗಳನ್ನು ಎದುರಿಸಿ ಸಫಲತೆಯನ್ನು ಹೊಂದುವಿರಿ. ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಶುಭ ಸಂಖ್ಯೆ: 6
ಸಿಂಹ: ಸಾಲಗಾರರ ತೊಂದರೆ ಇರುವುದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವುದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. ಶುಭ ಸಂಖ್ಯೆ: 3
ಕನ್ಯಾ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 7
ತುಲಾ: ಆಗುವುದೆಲ್ಲ ಒಳಿತೆಂಬ ಭಾವನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ. ಮಹಿಳೆಯರಿಗೆ ಮನೆಯಲ್ಲಿನ ಆಂತರಿಕ ವಿರಸ ನೀಗಿ ಸೌಹಾರ್ದತೆ. ನೂತನ ವಿವಾದ ಹುಟ್ಟುಹಾಕದ ಹಾಗೆ ತಾಳ್ಮೆಯಡಿ ವರ್ತನೆ. ಶುಭ ಸಂಖ್ಯೆ: 8
ವೃಶ್ಚಿಕ: ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಶುಭ ಸಂಖ್ಯೆ: 2
ಧನು: ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 4
ಮಕರ: ವ್ಯವಹಾರಿಕ ಏಳ್ಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ. ಶುಭ ಸಂಖ್ಯೆ: 9
ಕುಂಭ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರ ಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 3
ಮೀನ: ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು. ಶುಭ ಸಂಖ್ಯೆ: 5
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937