Horoscope Today – ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು?

| Updated By: Vinay Bhat

Updated on: Nov 14, 2021 | 6:37 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಶುಕ್ಲಪಕ್ಷ, ದಶಮಿ ತಿಥಿ,  ಭಾನುವಾರ, ನವೆಂಬರ್ 13, 2021ರ ಭವಿಷ್ಯ.

Horoscope Today - ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು?
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಶುಕ್ಲಪಕ್ಷ, ದಶಮಿ ತಿಥಿ,  ಭಾನುವಾರ, ನವೆಂಬರ್ 13, 2021. ಶತಭಿಷೆ ನಕ್ಷತ್ರ, ರಾಹುಕಾಲ: ಇಂದು ಸಂಜೆ 4:15 ರಿಂದ ಇಂದು ಸಂಜೆ 5:40 ತನಕತನಕ.  ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.20. ಸೂರ್ಯಾಸ್ತ: ಸಂಜೆ 5.40.

ತಾ.14-10-2021 ರ ಭಾನುವಾರದ ರಾಶಿಭವಿಷ್ಯ.

ಮೇಷ: ವಿನಾಕಾರಣ ನಿಂದೆಯ ಸಂಭವವಿದೆ. ಖರ್ಚುಹೆಚ್ಚಾಗುವದು ಯೋಗ ಇರುವದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವದು.
ಶುಭ ಸಂಖ್ಯೆ: 3

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು.
ಶುಭ ಸಂಖ್ಯೆ:1

ಮಿಥುನ: ಒಳ್ಳೆಯ ಮಾತುಗಳಂದ ಸಂಬಂಧ ಸುಧಾರಿಸುವದು. ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವದು. ಶಕ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವದು. ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೂ ಗಮನಹರಿಸಿ.
ಶುಭ ಸಂಖ್ಯೆ:9

ಕರ್ಕ: ಕೃಷಿಮೂಲದ ಲಾಭ ದೊರೆಯುವದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ.ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ.
ಶುಭ ಸಂಖ್ಯೆ:5

ಸಿಂಹ: ವಿವಿಧ ಮೂಲಗಳಿಂದ ಸಹಾಯ ದೊರೆಯುವದು. ಉದ್ಯೋಗದಲ್ಲಿ ಅಭಿವೃದ್ಧಿ ಇರುವದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಲೆಕ್ಕಾಚಾರ ತಪ್ಪದಂತೆ ಎಚ್ಚರವಹಿಸಿರಿ.ಮನೆಯಲ್ಲಿ ಮಂಗಲಕಾರ್ಯ ಜರುಗುವದು.
ಶುಭ ಸಂಖ್ಯೆ:7

ಕನ್ಯಾ: ಸಾಲಗಾರರ ತೊಂದರೆ ಇರುವದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ.
ಶುಭ ಸಂಖ್ಯೆ:2

ತುಲಾ: ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ನೆಮ್ಮದಿಯ ವಾತಾವರಣ ಇರುವದು.
ಶುಭ ಸಂಖ್ಯೆ: 7

ವೃಶ್ಚಿಕ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ಮನೋಚಿಂತಿತ ಕಾರ್ಯ ಕೈಗೂಡುವದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.
ಶುಭ ಸಂಖ್ಯೆ: 4

ಧನು: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ.
ಶುಭ ಸಂಖ್ಯೆ:8

ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವದು. ಸಹನೆಯಿಂದ ವ್ಯವಹರಿಸಿರಿ.ಗುರುಬಲ ವೃದ್ಧಿಸುವದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವದು. ಹಿರಿಯರ ಮಾತಿನಂತೆ ನಡಯುವದು ಉತ್ತಮ.
ಶುಭ ಸಂಖ್ಯೆ:5

ಕುಂಭ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ,ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು.ಸಭಾಸಮಾಜ ಕೀರ್ತಿ ಲಭಿಸುವುದು.
ಶುಭ ಸಂಖ್ಯೆ: 6

ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ,ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು.
ಶುಭ ಸಂಖ್ಯೆ: 9

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937