AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆಸ್ತಿ ಸಂಬಂಧಿತ ವ್ಯವಹಾರಕ್ಕೆ ಇದು ಶುಭದಿನ

Horoscope ಅಕ್ಟೋಬರ್ 20, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆಸ್ತಿ ಸಂಬಂಧಿತ ವ್ಯವಹಾರಕ್ಕೆ ಇದು ಶುಭದಿನ
ದಿನ ಭವಿಷ್ಯ
TV9 Web
| Edited By: |

Updated on:Oct 20, 2021 | 7:07 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಶುಕ್ಲಪಕ್ಷ, ಹುಣ್ಣಿಮೆ ತಿಥಿ, ಬುಧವಾರ, ಅಕ್ಟೋಬರ್ 20, 2021. ರೇವತಿ ನಕ್ಷತ್ರ, ರಾಹುಕಾಲ: ಇಂದು ಬೆಳಗ್ಗೆ 12 ರಿಂದ ಇಂದು ಮಧ್ಯಾಹ್ನ 1.27 ಗಂಟೆವರೆಗೆ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6:10. ಸೂರ್ಯಾಸ್ತ: ಸಂಜೆ 5.51

ತಾ.20-10-2021 ರ ಬುಧವಾರದ ರಾಶಿಭವಿಷ್ಯ

ಮೇಷ ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವದು. ಶುಭಸಂಖ್ಯೆ: 6

ವೃಷಭ ಮಾತಿನಂತೆಯೇ ಎಲ್ಲವೂ ನಡೆಯುವದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವದು.ಲಾಭದಾಯಕ ಹುದ್ದೆ ದೊರೆಯುವದು. ಶುಭಸಂಖ್ಯೆ: 3

ಮಿಥುನ ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವದು. ಉದ್ಯೋಗವನ್ನು ವಿಸ್ತರಿಸುವ ಕಾಲ ಇರುವದು. ಶುಭಸಂಖ್ಯೆ: 7

ಕರ್ಕ ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ.ವ್ಯಾಪಾರವೃದ್ಧಿಯಾಗುವದು. ಆರ್ಥಿಕ ಸಂಕಷ್ಟ ದೂರಾಗುವದು. ಶುಭಸಂಖ್ಯೆ: 9

ಸಿಂಹ ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂದಿತ ಕ್ರಯವಿಕ್ರಯ ವ್ಯವಹಾರಗಳು ಕುದುರುವವು. ಅನವಶ್ಯಕ ಮಾತಿನಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ತಜ್ಞರ ಸಹಾಯ ಪಡೆಯಿರಿ. ಶುಭಸಂಖ್ಯೆ: 1

ಕನ್ಯಾ ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿಯನ್ನು ಇರುವದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವದು. ಶುಭಸಂಖ್ಯೆ: 8

ತುಲಾ ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವದು. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭಸಂಖ್ಯೆ: 6

ವೃಶ್ಚಿಕ ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವದು. ವ್ಯಾಪಾರದಲ್ಲಿ ಅಭಿವೃದ್ಧಿಯಾಗುವದು. ವಿವಾಹ ಅಪೇಕ್ಷಿತರಿಗೆ ಕಂಕಣಬಲ ಕೂಡಿಬರುವದು. ಶುಭಸಂಖ್ಯೆ: 5

ಧನು ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಶುಭಸಂಖ್ಯೆ: 9

ಮಕರ ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭಸಂಖ್ಯೆ: 4

ಕುಂಭ ಅಪರಿಮಿತ ಖರ್ಚು ತೋರಿದರೂ ಅಡಚಣೆಯಾಗುವ ಸಂಭವವಿಲ್ಲದೆ. ಸ್ಥಾನಮಾನಗಳೂ ಭದ್ರವಾಗಿ ಸಾಂಸಾರಿಕ ದೃಷ್ಟಿಯಲ್ಲೂ ಸುಖದಾಯಕ, ವಿಶೆಷ ಪ್ರಯತ್ನದಿಂದ ವ್ಯವಹಾರ ಸಿದ್ಧಿ ಇರುವದು. ಶುಭಸಂಖ್ಯೆ: 7

ಮೀನ ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭಸಂಖ್ಯೆ: 2

Basavaraj Guruji

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

Published On - 7:06 am, Wed, 20 October 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ