ದಿನಭವಿಷ್ಯ
ಪ್ರತಿದಿನ ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಹಾಗಾದ್ರೆ, ಡಿಸೆಂಬರ್ 27ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮತ್ತು ಮೀನ ರಾಶಿಯ ಜನರ ಫಲಾಫಲ ಹೇಗಿದೆ? ಇಂದು ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಎಂದು ತಿಳಿಯಿರಿ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ಸಹ ತಿಳಿದುಕೊಳ್ಳಿ.
ಪಂಚಾಂಗ:
ಶಾಲಿವಾಹನ ಶಕೆ 1945 ಶುಭಕೃತ್ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಧನುರ್ಮಾಸ. ಮಹಾನಕ್ಷತ್ರ : ಮೂಲಾ, ಮಾಸ : ಪುಷ್ಯ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಪಂಚಮೀ , ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 06-56am, ಸೂರ್ಯಾಸ್ತ – 06-10pm, ಶುಭಾಶುಭಕಾಲ ರಾಹು ಕಾಲ 15:22 – 16:47, ಯಮಘಂಡ ಕಾಲ 09:45 – 11:10 , ಗುಳಿಕ ಕಾಲ 12:34 – 13:58.
- ಮೇಷ: ದಯೆಯುಳ್ಳವರಾದ ನಿಮಗೆ, ಈ ಗುಣ ಬೇಡ, ಒಳ್ಳೆಯದಲ್ಲ ಎಂದು ಅನ್ನಿಸಬಹುದು. ಆದರೆ ಅದನ್ನು ಬಿಡುವುದು ಒಳ್ಳೆಯದಲ್ಲ. ಇಂದು ಗ್ರಹಗತಿಗಳ ಕಾರಣದಿಂದ ಹಾಗನ್ನಿಸಬಹುದು. ಅದು ನಿಮ್ಮನ್ನು ಸದಾ ಕಾಪಾಡುವ ದೈವೀಸಂಪತ್ತು. ಇತರರನ್ನು ಕಂಡು ಅಸೂಯೆ ಪಟ್ಟು ನಿಮ್ಮ ಅವನತಿಗೆ ಅಮಂಗಲವನ್ನು ಹಾಡಬೇಡಿ. ನಿಮ್ಮಲ್ಲೂ ಸಾಮರ್ಥ್ಯವಿದೆ, ಅದು ಸಕಲಾಕ್ಕೆ ಪ್ರಕಟವಾಗುತ್ತದೆ ಕೂಡ. ಕಾಲವನ್ನು ಮೀರಿ ಯಾವುದೂ ಇರುವುದಿಲ್ಲ ಎಂಬ ಸತ್ಯವು ನೆನಪಿನಲ್ಲಿರಲಿ.
- ವೃಷಭ: ಇಂದು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ. ನಿಮ್ಮ ಕಾರ್ಯ, ಶ್ರಮ, ಸಮಯ, ಫಲ ಇವುಗಳ ಕುರಿತು ಒಮ್ಮೆ ಯೋಚಿಸಿ. ಆನಂದದ ನಿಟ್ಟುಸಿರನ್ನು ನೀವು ಬಿಡುತ್ತೀರಿ. ಶಿಸ್ತು ನಿಮ್ಮ ರಕ್ತಗತವಾಗಿ ಬಂದಿರುವುದು. ಅಶಿಸ್ತಿನಂತೆ ಕಂಡರೂ ಕೊಡವಿ ಎದ್ದು ನಿಮ್ಮ ಅಂತಸ್ಸತ್ತ್ವನ್ನು ತೋರಿಸುತ್ತೀರಿ. ಕಾರ್ಯದಲ್ಲಿ ಮಂದಗತಿಯು ಇರಲಿದೆ. ವಾದಕ್ಕೆ ಇಳಿದು ಮುಖಭಂಗವನ್ನು ಎದುರಿಸಬೇಕಾಗುವುದು. ದುರ್ಗಾರ್ತಿಭಂಜಿನಿಯಾದ ದೇವಿಯ ಆರಾಧನೆಯನ್ನು ಮಾಡಿ.
- ಮಿಥುನ: ಶ್ರಮವಹಿಸಿ ಮಾಡಬೇಕಾದ ದಿನವಿದಾಗಿದೆ. ವಾಚಾಳಿಗಳಾದ ನೀವು ಅಸಂಬದ್ಧ ಮಾತುಗಳಿಗೆ ಅವಕಾಶಗಳನ್ನು ಕೊಡಬೇಡಿ. ಕಛೇರಿಯಲ್ಲಿ ಅದು ಸಹ್ಯವಾಗದು. ದುಃಖದ ವಿಚಾರಗಳು ನಿಮ್ಮ ಕಿವಿಗಳಿಗೆ ಬೀಳಬಹುದು. ಧೃತಿಗೆಡದೇ ಸಹಜವೆಂಬಂತೆ ಸ್ವೀಕರಿಸಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಹೋಗಬೇಡಿ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಲಿ, ಜ್ವರಾದಿಗಳು ಬರಬಹುದು. ಗಣಪತಿಗೆ ಪ್ರಿಯವಾದ ದೂರ್ವೆಯ ಅರ್ಚನೆ ಅಥವಾ ಪ್ರಿಯವಾದ ನೈವೇದ್ಯವನ್ನು ಮಾಡಿ.
- ಕಟಕ: ಸಂಪಾದಿಸುವುದು ಕಷ್ಟ, ಕಳೆಯುವುದು ಸುಲಭ. ಕಾಲಿಗೆ ಆದ ಗಾಯವು ನಡೆಯಬೇಕೆಂದು ಕಲಿಸಿದರೆ, ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ನಿರೀಕ್ಷೆಯ ತೂಕ ಕಡಿಮೆಯಾದಂತೆ, ನೆಮ್ಮದಿಯ ತೂಕ ಹೆಚ್ಚಾಗುತ್ತದೆ. ನೀವು ನಿಮ್ಮ ಗುರಿಯನ್ನು ತಲುಪಲು ವಿಫಲರಾಗಿರಬಹುದು. ನಿಮ್ಮ ತಂತ್ರವನ್ನು ಬದಲಿಸಿಕೊಳ್ಳಿ. ಗುರಿಯನ್ನಲ್ಲ. ನಿಧಾನವಾಗಿ ಗೆದ್ದರೂ ಪರವಾಗಿಲ್ಲ, ನಿಯತ್ತಾಗಿ ಗೆಲ್ಲಬೇಕು. ಮಾತು ಸಂಧಾನಕ್ಕೆ ಕಾರಣವಾಗಬೇಕೇ ವಿನಃ ಸಂಘರ್ಷಕ್ಕಲ್ಲ ಎನ್ನುವುದು ನೆನಪಿರಲಿ.
- ಸಿಂಹ: ನೇರಾನೇರ ವ್ಯಕ್ತಿ ಎಂದು ಏನನ್ನಾದರೂ ಮಾತನಾಡಬೇಡಿ. ಅದು ತಿರುಗುಬಾಣವಾಗಿ ನಿಮ್ಮನ್ನೇ ಚುಚ್ಚೀತು. ಕೆಲಸದ ಸ್ಥಳದಲ್ಲಿ ಆದಷ್ಟು ಅದಕ್ಕೇ ಗಮನಕೊಡಿ. ಒಳ್ಳೆಯ ಕೆಲಸಗಳು ಇಂದು ನಿಮ್ಮಿಂದನಡಯಲಿದೆ. ಪೂಜ್ಯರನ್ನು ಗೌರವಿಸಿ. ಅಪರೂಪಕ್ಕೆ ಬಂದ ಅತಿಥಿಯನ್ನು ದೇವನೆಂದೇ ಸತ್ಕರಿಸಿ. ಹಿರಿಯರ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ. ಅವರು ಹರಸಿದರೆ ದೈವವೇ ಹರಸಿದಂತೇ. ಇಷ್ಟಾರ್ಥಗಳು ಸಿದ್ಧಿಸುವುವು.
- ಕನ್ಯಾ: ಬದಲಾವಣೆಯನ್ನು ಬಯಸುವ ನಿಮಗೆ ಅಷ್ಟು ಸುಲಭದಲ್ಲಿ ಅದು ಸಿಗಲಾಗದು. ಅತಿಥಿಗಳ ಅಥವಾ ಬಂಧುಗಳ ಅನಿರೀಕ್ಷಿತ ಅಗಮನ ನಿಮ್ಮ ಆಸೆಯನ್ನು ಪೂರ್ಣವಾಗಿಸದು. ವಿದ್ಯಾರ್ಥಿಗಳು ಓದಿನತ್ತ ಮನಸ್ಸು ಮಾಡುವರು. ನಿಮಗೆ ವಿರೋಧಿಗಳ ತೊಂದರೆ ಇದ್ದರೂ ಅದನ್ನು ಮಾತನಾಡಿಯೋ ಚರ್ಚೆ ಮಾಡಿಯೋ ಮುಕ್ತಾಯಮಾಡಲು ಹೋಗಬೇಡಿ. ಅದು ಕೆರೆದಷ್ಟು ಹುಣ್ಣಾಗುವ ಗಾಯದಂತೆ, ದೊಡ್ಡದಾಗುತ್ತದೆ. ಮಹಾವಿಷ್ಣುವಿಗೆ ಪ್ರಿಯವಾದ ಹೂವಿನ ಅಲಂಕಾರ ಮಾಡಿಸಿ.
- ತುಲಾ: ವ್ಯಾಪರದ ಮನಃಸ್ಥಿತಿಯುಳ್ಳ ನಿಮಗೆ ಅಷ್ಟೇನು ಲಾಭವಿಲ್ಲ. ಹಿರಿಯರಿಂದ ಅಥವಾ ಮೇಲಧಿಕಾರಿಗಳಿಂದ ಅಪಮಾನವನ್ನು ಮಾಡಿಸಿಕೊಳ್ಳುವಿರಿ. ದೇವರ ಧ್ಯಾನ, ಉಪಾಸನೆಯಲ್ಲಿ ಸ್ವಲ್ಪ ಕಾಲವನ್ನು ವ್ಯಯಿಸಿ. ಬುಡಕ್ಕೆ ನೀರೆರೆದರೆ ಫಲವೂ ತಾನಾಗಿಯೇ ರುಚಿಯೂ ಸುವಾಸಿತವೂ ಸುಂದರವೂ ಆಕರ್ಷಕವೂ ಆಗುವುದಲ್ಲವೇ? ದೇವರೇ ಮನಷ್ಯನ ಎಲ್ಲದಕ್ಕೂ ಮೂಲ. ಆತನ ಅನುಗ್ರಹದಿಂದ ಸಾಫಲ್ಯವನ್ನು ಕಾಣಬೇಕಿದೆ. ಕೆಲಸದ ಮೇಲೆ ಮನಸ್ಸು ಕೇಂದ್ರೀಕೃತವಾಗಲಿ.
- ವೃಶ್ಚಿಕ: ಆನಂದದ ದಿನವೇ ಇಂದು. ಆತುರಪಟ್ಟು ಅವಘಡಕ್ಕೆ ಸಿಲುಕಬೇಡಿ. ಮಾನಸಿಕವಾಗಿ ಹೇಳಿಕೊಳ್ಳಲಾಗದ ಕಿರಿ ಕಿರಿಯನ್ನು ಅನುಭವಿಸುವಿರಿ. ಪ್ರೇಮನಿವೇದನೆಗೆ ಇಂದು ಸಕಾಲವೇ ಇಲ್ಲ. ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ. ಚಿತ್ರರಚನಾಕಾರರಿಗೆ, ಶಿಲ್ಪಿಗಳಿಗೆ, ಕರಕುಶಲವೃತ್ತಿಗೆ ಯಶಸ್ಸು ಸಿಗಲಿದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಹರಿಸಿ. ದೇಹದ ಕೀಲುಗಳಲ್ಲಿ ನೋವುಗಳು ಕಾಣಿಸಿಕೊಳ್ಳಬಹುದು. ತೈಲಾಭ್ಯಂಗ, ಯೋಗದ ಮೂಲಕ ಪರಿಹರಿಸಿಕೊಳ್ಳಿ.
- ಧನು: ಹಿರಿಯಯರ ಅನುಗ್ರಹವನ್ನು ಪಡೆಯಿರಿ. ಯಾವುದಾದರೂ ಆಯುಧಗಳಿಂದ, ವಾಹನಗಳಿಂದ ಗಾಯವಾಗುವ ಸಾಧ್ಯತೆ ಇದೆ. ಸಮಾರಂಭಗಳಿಗೆ ಭಾಗವಹಿಸುವಿರಿ. ಆಪ್ತರ ಭೇಟಿಯಾಗಲಿದೆ. ಬರಬೇಕಾದ ಸಂಪತ್ತು ನಿಧಾನವಾಗಿ ಬರಲಿದೆ. ಸುಮ್ಮೆನೇ ಕಾಲಹರಣ ಮಾಡುವ ಬದಲು ಏನನ್ನಾದರೂ ಮಾಡಿ. ನಿಮ್ಮ ಜೀವನ ಮಾರ್ಗದಲ್ಲಿ ಬುತ್ತಿಯಾದರೂ ಆದೀತು. ರಾತ್ರಿ ಬೆಳಗಾಗುವುದರೊಳಗೆ ಏನೂ ಆಗುದಿಲ್ಲ. ಇದಂ ನ ಮಮ ಎಂಬ ಭಾವದಿಂದ ಪ್ರಾಣಿಗಳಿಗೆ ಆಹಾರ, ನೀರನ್ನು ಕೊಡಿ.
- ಮಕರ: ಪ್ರಣಯಕಾರಕನು ನಿಮ್ಮ ಸಂಗಾತಿಯ ನಡುವೆ ಒಳ್ಳೆಯ ಸಂಗತಿಯನ್ನೂ ಆಲಿಸಲು ಬಿಡುವುದಿಲ್ಲ.ಅಪರಿಚಿತ ವ್ಯಕ್ತಿಗಳೊಂದಿಗೆ ಅತಿ ಸಲುಗೆ ಒಳ್ಳೆಯದಲ್ಲ. ಖರ್ಚಿನ ದಾರಿಯಲ್ಲಿ ಸಾಗಬೇಕಾದ ಸ್ಥಿತಿಯಿದೆ. ಜಾಗರೂಕರಾಗಿ ಹೆಜ್ಜೆ ಇಡಬೇಕಾಗಬಹುದು. ನಿಮ್ಮ ಅನುಭವಗಳು, ಹಿರಿಯರ ಮಾತು ಈ ಸಮಯದಲ್ಲಿ ಹಳೆಯ, ಸದಾಕಾಲ ರಿಪೆರಿಗೆ ಬರುವ ವಾಹನದಂತೆ. ಇದೇ ಸಮಯದಲ್ಲಿ ಕೈಕೊಡುತ್ತದೆ. ಹೂಡಿಕೆಗಳು ಸುಗಂಧ ಬೀರುವ ಹೂವಿನಂತೆ ಎಂದು ಭಾವಿಸುವುದು ವ್ಯರ್ಥ. ಮುಳ್ಳಾಗಿಯೂ ಚುಚ್ಚಬಹುದು.
- ಕುಂಭ: ಒತ್ತಡದಿಂದ ಹೊರಬಂದು ಸ್ವಲ್ಪ ಆರಾಮಾಗಿರುತ್ತೀರಿ. ಎಲ್ಲರೊಂದಿಗೆ ಖುಷಿಯಿಂದ ಮಾತನಾಡಿ. ನಿಮ್ಮ ಆರಾಮಕ್ಕೆ ಇನ್ನಷ್ಟು ಪುಷ್ಟಿ ಸಿಗುವುದು. ಖರೀದಿಯನ್ನು ಮುಂದೂಡಿ. ವೃಥಾ ಖರ್ಚಿಗೆ ದಾರಿಯನ್ನು ನೀವೇ ಮಾಡಿಕೊಂಡಂತಾಗುತ್ತದೆ. ಸಂಗೀತ, ಚಲನಚಿತ್ರಗಳನ್ನು ಮನೆಯಲ್ಲಿಯೇ ನೋಡಿ. ಹೆಂಡತಿಯ ಅಡುಗೆಯನ್ನು ಸವಿಯುತ್ತ ದಿನ ಕಳೆಯಿರಿ. ಸಾಡೆಸಾತ್ ನ ಪೂರ್ವಾರ್ಧದಲ್ಲಿರುವ ಶನಿಯ ಸ್ತೋತ್ರವನ್ನು ಪಠಿಸಿ. ಆತ ಮಂದನಾದರೂ ಅಮಂದವಾಗಿ ಒಳ್ಳೆಯದನ್ನೇ ಮಾಡುತ್ತಾನೆ.
- ಮೀನ: ಎಷ್ಟೇ ಹಿರಿಯರಾಗಿದ್ದರೂ ಇನ್ನಬ್ಬರಿಗೆ ಸಲಹೆ, ಸೂಚನೆಗಳನ್ನು ಕೊಡಲು ಮುಂದಾಗಬೇಡಿ. ಸುಮ್ನೇ ಅಪಮಾನಕ್ಕೆ ಒಳಗಾಗುತ್ತೀರಿ. ನಿಮ್ಮಷ್ಟಕ್ಕೆ ನಿಮ್ಮ ಕಾರ್ಯವನ್ನು ಮುಂದುವರಿಸಿ. ಮುಖ್ಯವಾದ ನಿರ್ಧಾರದಗಳನ್ನು ತೆಗೆದುಕೊಳ್ಳುವಾಗ ಅನುಭವಿಗಳ, ಹಿರಿಯರ ಸಲಹೆಯನ್ನೂ ಪಡೆಯಿರಿ. ಏಕಮುಖ ನಿರ್ಧಾರ ಒಳ್ಳೆಯದಲ್ಲ. ವೃತ್ತಿಪರರಿಗೆ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಕುಲದೇವರನ್ನು ಮರೆಯಬೇಡಿ.
ಲೇಖನ: ಲೋಹಿತ ಶರ್ಮಾ, ಇಡುವಾಣಿ