AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 19ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಹಣಕಾಸು, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಸಂಬಂಧಗಳ ಕುರಿತು ಪ್ರತಿದಿನದ ಭವಿಷ್ಯವಾಣಿಗಳನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Dec 19, 2025 | 12:22 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕವಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಕೈ ಸೇರಬೇಕಾದ ದೊಡ್ಡ ಮೊತ್ತ ಬರುವಂಥ ಯೋಗ ಇದೆ. ದೂರದ ಪ್ರದೇಶ ಅಥವಾ ದೂರದ ದೇಶದಲ್ಲಿ ವಾಸ ಮಾಡುತ್ತಾ ಇರುವ ಸಂಬಂಧಿಕರಿಂದ ಸಂತೋಷದ ಸುದ್ದಿ ಬರುವಂಥ ಸಾಧ್ಯತೆ ಇದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಸಂಪೂರ್ಣವಾಗಿ ವಿವರ ನೀಡುವ ತನಕ ಅಭಿಪ್ರಾಯವನ್ನು ಹೇಳುವುದಕ್ಕೆ ಹೋಗಬೇಡಿ. ನೀರು ಸೇವನೆ ಸರಿಯಾದ ಪ್ರಮಾಣದಲ್ಲಿ ಮಾಡುವುದಕ್ಕೆ ಆದ್ಯತೆ ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನವ ವಿವಾಹಿತರಿಗೆ ಸಂತೋಷವಾಗಿ ಕಳೆಯುವಂಥ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ವಿವಾಹಿತರು ಇದ್ದಲ್ಲಿ ಸಂಗಾತಿ ಮೂಲಕ ಹಣಕಾಸಿನ ನೆರವು ದೊರೆಯಲಿದೆ. ಕಲೆ, ಫ್ಯಾಷನ್, ಸೌಂದರ್ಯ, ವಿನ್ಯಾಸ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಫಲ ಸಿಗುತ್ತದೆ. ಇಷ್ಟು ಸಮಯ ಸಾಧಿಸಲು ಸಾಧ್ಯವಾಗಿಲ್ಲ ಎಂದಾಗಿದ್ದಲ್ಲಿ ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಮನೆಗೆ ಸಂಬಂಧಿಸಿದಂತೆ ತಿಂಗಳಾ ತಿಂಗಳು ಆಗುವ ದಿನಸಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ನೀವು ಬಹಳ ಇಷ್ಟ ಪಡುವ ವ್ಯಕ್ತಿಗಳ ಜೊತೆಗೆ ಜಾಸ್ತಿ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಚರ್ಮ ಅಥವಾ ಕಣ್ಣು ಸಂಬಂಧಿತ ತೊಂದರೆ ಕಾಣಿಸಬಹುದು. ಈ ರೀತಿ ಆದಲ್ಲಿ ಅಲಕ್ಷ್ಯ ಬೇಡ. ಧಾರ್ಮಿಕ ಕಾರ್ಯಗಳು ಅಥವಾ ದಾನ ಮನಸ್ಸಿಗೆ ತೃಪ್ತಿ ನೀಡುತ್ತದೆ. ಒಟ್ಟಾರೆ ಈ ದಿನವು ಉದ್ಯೋಗ- ಜೀವನ ಸಮತೋಲನದಿಂದ ಸಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸರಿ- ತಪ್ಪುಗಳ ಬಗ್ಗೆ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ದಿನ ಇದಾಗಿರುತ್ತದೆ. ಗಂಭೀರವಾದ ಸಂಗತಿಗಳ ಬಗ್ಗೆ ಪ್ಲಾನಿಂಗ್- ಬಜೆಟ್ ಸಿದ್ಧ ಮಾಡಿಕೊಳ್ಳುವುದಕ್ಕಾಗಿ ನೀವು ಒಬ್ಬರೇ ದೂರದ ಪ್ರದೇಶಗಳಿಗೆ ಏಕಾಂಗಿಯಾಗಿ ತೆರಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಹೀಗಳೆದು ಮಾತನಾಡುವುದರಿಂದ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ತುಂಬ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ ಅಂತಾದಲ್ಲಿ ದಿನ ಮಟ್ಟಿಗೆ ಅದನ್ನು ಮುಂದೂಡುವುದು ಕ್ಷೇಮ. ನೀವು ದೊಡ್ಡ ಪ್ರಮಾಣದಲ್ಲಿ ಲಾಭ ಬರಬಹುದು ಎಂದುಕೊಂಡಿದ್ದು ಅಂದುಕೊಂಡ ದೊಡ್ಡ ಮಟ್ಟಕ್ಕೆ ಬಾರದಂತೆ ಆಗಲಿದೆ. ಅಥವಾ ಇಷ್ಟರಲ್ಲಾಗಲೇ ನಿಮ್ಮ ಕೈ ಸೇರಬೇಕಾಗಿದ್ದ ಲಾಭದ ಮೊತ್ತ ಮತ್ತೂ ನಿಧಾನ ಆಗುತ್ತದೆ ಎಂಬ ಮಾಹಿತಿ ದೊರೆಯಲಿದೆ. ಗಂಟಲಿನ ನೋವು ಕಾಡಲಿದೆ. ಜನರ ಮಧ್ಯೆ ಇರುವುದು ಕಿರಿಕಿರಿ ಉಂಟು ಮಾಡಲಿದ್ದು, ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಲು ಮನಸ್ಸು ಇರುವುದಿಲ್ಲ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಎಲ್ಲ ಸನ್ನಿವೇಶದಲ್ಲಿ ಹಾಕಿದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಬೇಸರ ಸಹ ಪಡುವಂತೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವಂತೆ ಆಗಲಿದೆ. ಚಿನ್ನ- ಬೆಳ್ಳಿ ಅಥವಾ ವಜ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರದಿಂದ ಆಗಬೇಕಾದ ಪೋಡಿ, ಸರ್ವೇ, ಖಾತಾ- ಕಂದಾಯದ ಕೆಲಸಗಳಿಗೆ ಪದೇ ಪದೇ ಅಲೆದಾಡುವಂತೆ ಆಗಲಿದೆ. ಮುಖ್ಯವಾದ ಎಲ್ಲ ದಾಖಲೆಗಳನ್ನು ಒಮ್ಮೆಗೇ ತೆಗೆದುಕೊಂಡು ಹೋಗುವುದು ಒಳ್ಳೆಯದು. ನೀವು ಯಾರಿಗಾದರೂ ಹಣ ನೀಡುವುದಾಗಿ ಮಾತು ನೀಡಿದ್ದಲ್ಲಿ ಅದರ ಕಡೆಗೆ ಗಮನ ನೀಡಬೇಕು. ದೇಹದ ತೂಕ ಹೆಚ್ಚಾಗಿದ್ದೀರಿ ಅಂತಾದಲ್ಲಿ ನಿಯಮಿತವಾದ ವ್ಯಾಯಾಮ ಮಾಡುವುದಕ್ಕೆ ಆರಂಭಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೇನೋ ಅತಿ ಉತ್ಸಾಹ ಇರುತ್ತದೆ. ಆದರೆ ಸುತ್ತಮುತ್ತಲಿನವರ ಪರಿಸ್ಥಿತಿ, ಮನಸ್ಥಿತಿಯನ್ನು ಸಹ ಅರ್ಥ ಮಾಡಿಕೊಂಡು ಮಾತುಕತೆ ಆಡುವುದು ಒಳ್ಳೆಯದು. ಹಣಕಾಸಿನ ವಿಚಾರ ಮಾತನಾಡುತ್ತೀರಿ ಅಂತಾದಲ್ಲಿ ಸಾಧ್ಯಾಸಾಧ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕು. ಮನೆ ನಿರ್ಮಾಣ, ಆಸ್ತಿ ಖರೀದಿಯ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಮುಂದುವರಿಯಿರಿ. ಹಳೇ ಸ್ನೇಹಿತರೊಬ್ಬರು ಮತ್ತೆ ಈ ದಿನ ಭೇಟಿ ಆಗುವ ಮೂಲಕ ಒಂದು ಬಗೆಯ ಸಂತೋಷದ ಮನಸ್ಥಿತಿ ನಿಮ್ಮದಾಗಿರುತ್ತದೆ. ಜಿಮ್, ಯೋಗ ತರಬೇತಿ ತರಗತಿಗಳನ್ನು ನಡೆಸುತ್ತಾ ಇರುವವರು ಆದಾಯಕ್ಕೆ ಹೆಚ್ಚುವರಿ ಮೂಲಗಳನ್ನು ಮಾಡಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಕೃಷಿಕರು ಕುಟುಂಬ ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಆದ್ಯತೆಯನ್ನು ನೀಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಶ್ರಮ ಹಾಗೂ ಶಿಸ್ತಿನ ಜೀವನಕ್ಕೆ ಪ್ರಾಮುಖ್ಯ ನೀಡುವ ದಿನ ಇದಾಗಿರುತ್ತದೆ. ನೀವು ಕೈಗೆತ್ತಿಕೊಂಡಿರುವ ಕೆಲಸ- ಕಾರ್ಯಗಳು ನಿಧಾನವಾಗಿ ಮುಂದಕ್ಕೆ ಸಾಗಿದರೂ ದೃಢವಾಗಿ ಗುರಿಯತ್ತ ತಲುಪುವ ಸೂಚನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಹಾಗೂ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗಬಹುದು. ಆದರೆ ತಾಳ್ಮೆ- ಸಂಯಮದಿಂದ ಮುಂದುವರಿದಲ್ಲಿ ಯಶಸ್ವಿಯಾಗಿ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಹನೆ ಕಾಯ್ದುಕೊಳ್ಳುವುದು ಮುಖ್ಯ. ಅನಿರೀಕ್ಷಿತ ಖರ್ಚುಗಳಿಂದ ಕಂಗಾಲು ಆಗುವಂತೆ ಆಗಲಿದೆ. ಕುಟುಂಬಕ್ಕೆ ಆಗುವ ಖರ್ಚಿನ ಪ್ರಮಾಣದಲ್ಲಿ ದೊಡ್ಡ ಏರಿಕೆ ಆಗುವುದರಿಂದ ಸ್ವಲ್ಪ ಮಟ್ಟಿಗೆ ಸಾಲ ಮಾಡಬೇಕಾಗುತ್ತದೆ, ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಅನಿವಾರ್ಯ ಸೃಷ್ಟಿ ಆಗಲಿದೆ. ದ್ವಿಚಕ್ರ ವಾಹನ ಹೆಚ್ಚು ಬಳಸುತ್ತೀರಿ ಅಂತಾದಲ್ಲಿ ದೇಹಾಯಾಸ, ಬೆನ್ನು ನೋವು ಕಾಡಬಹುದು. ನಿಮ್ಮ ಶ್ರಮಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಬುದ್ಧಿಶಕ್ತಿ ಪ್ರಖರವಾಗಿ ಇರುತ್ತದೆ. ಇನ್ನು ನಿಮ್ಮ ಸಂವಹನ ಕೌಶಲವು ಬಹಳ ಚುರುಕಾಗಿ ಇರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಶಿಕ್ಷಣ, ತರಬೇತಿ, ಬರವಣಿಗೆ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಫಲ ಸಿಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ, ವೇತನ ಹೆಚ್ಚಳದ ಬಗ್ಗೆ ಇತರರ ಮೂಲಕ ಸುಳಿವು ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಲಾಭದ ಅವಕಾಶ ಇದ್ದರೂ ಅದಕ್ಕಾಗಿ ಮಾಡುವ ಪ್ರಯತ್ನದಲ್ಲಿ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಸ್ನೇಹಿತರೊಂದಿಗೆ ಮಾತುಕತೆ ನಿಮಗೆ ಹೊಸ ಆಲೋಚನೆಗಳನ್ನು ನೀಡುತ್ತದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆ ಕಾಡಬಹುದು. ಆಹಾರದಲ್ಲಿ ನಿಯಮ ಪಾಲಿಸುವುದು ಅವಶ್ಯ. ದಿನದ ಅಂತ್ಯಕ್ಕೆ ಆತ್ಮತೃಪ್ತಿ ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಭಾವನಾತ್ಮಕ ದೃಷ್ಟಿಯಿಂದ ಏರುಪೇರಿನಿಂದ ಕೂಡಿರುವ ದಿನ ಇದಾಗಿರುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೂ ಮನಸ್ಸು ತೀವ್ರವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಆದ್ದರಿಂದ ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿನ ಕೆಲವು ಗೊಂದಲಗಳು ಮಾತುಕತೆ ಮೂಲಕ ಬಗೆಹರಿಸಬಹುದು. ನೀವು ಉದ್ಯೋಗಸ್ಥರಾಗಿದ್ದಲ್ಲಿ ಸವಾಲಿನಿಂದ ಕೂಡಿದ ಪ್ರಾಜೆಕ್ಟ್ ಮುನ್ನಡೆಸುತ್ತಾ ಇದ್ದೀರಿ ಅಂತಾದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ನಿಮಗೇ ಅನುಭವ ಆಗುವ ರೀತಿಯಲ್ಲಿ ಹಣಕಾಸಿನಲ್ಲಿ ನಿಧಾನವಾದ ಪ್ರಗತಿ ಕಂಡುಬರುತ್ತದೆ. ಈಗಾಗಲೇ ಕೆಲಸ ಮಾಡಿಯಾಗಿದೆ, ಬಹಳ ಸಮಯದಿಂದ ಬರಬೇಕಾದ ಹಣ ಬಂದಿಲ್ಲ ಎಂದಾದಲ್ಲಿ ಹಳೆಯ ಬಾಕಿ ಹಣ ವಸೂಲಿ ಆಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು ಅಗತ್ಯ. ನಿದ್ದೆಯ ಕೊರತೆ ಕಾಡಬಹುದು. ಸಂಗೀತ, ಪ್ರಾರ್ಥನೆ ಅಥವಾ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ನಿಮ್ಮಲ್ಲಿನ ನಾಯಕತ್ವ ಗುಣವು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ಉದ್ಯೋಗ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರಿಗೆ ಮಾರ್ಗದರ್ಶನ ಆಗಲಿದೆ. ಮೇಲಧಿಕಾರಿಗಳ ಗಮನ ನಿಮ್ಮತ್ತ ಸೆಳೆಯುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮಗೆ ವಹಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದರೂ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಆ ಕಾರಣದಿಂದಾಗಿ ಅನಗತ್ಯವಾಗಿ ಖರ್ಚಿನ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳಬೇಡಿ. ಕುಟುಂಬದ ಹಿರಿಯರ ಸಲಹೆ ಕೌಟುಂಬದಲ್ಲಿನ ಹಣಕಾಸಿನ ನಿರ್ಧಾರ ಮಾಡಲು ಉಪಯುಕ್ತ ಆಗುತ್ತದೆ. ಆರೋಗ್ಯದ ವಿಷಯದಲ್ಲಿ ಮಿಶ್ರ ಫಲವನ್ನು ಪಡೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ತಲೆನೋವು ಅಥವಾ ಒತ್ತಡ ಕಾಡಬಹುದು. ಸ್ವಲ್ಪ ವಿಶ್ರಾಂತಿ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ. ಆತುರದ ಮಾತುಗಳಿಂದ ಅವಕಾಶ ಕಳೆದುಕೊಳ್ಳುವಂತೆ ಆಗಲಿದೆ, ಎಚ್ಚರಿಕೆ.

ಲೇಖನ- ಎನ್‌.ಕೆ.ಸ್ವಾತಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್