Nitya Bhavishya: ಈ ರಾಶಿಯವರು ಉದ್ವೇಗಕ್ಕೆ ಒಳಗಾಗಿ ಸ್ನೇಹಿತರ ಅಪಹಾಸ್ಯಕ್ಕೆ ಸಿಲುಕುವ ಸಾಧ್ಯತೆ
2023 ಮಾರ್ಚ್ 6ರ ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 6 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:17 – 09:46ರ ವರೆಗೆ, ಯಮಘಂಡ ಕಾಲ 11:15 – 12:44ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 – 03:42ರ ವರೆಗೆ.
ಮೇಷ: ಅಪರಿಚಿತರಿಂದ ಜೀವನಕ್ಕೆ ಬೇಕಾದ ಕೆಲವು ಸಲಹೆಗಳು ಸಿಗಲಿವೆ. ಸ್ವಾದಿಷ್ಟವಾದ ಭೋಜನವನ್ನು ಉಣ್ಣಲಿದ್ದೀರಿ. ಖುಷಿಯಾಗಿರಲು ಕೆಲವು ಸಂಗತಿಗಳು ನಿಮ್ಮ ಪಾಲಿಗೆ ಇರಲಿವೆ. ವಿನಾಕಾರಣ ಸಂಗಾತಿಯ ನಡುವೆ ಸಣ್ಣ ಕಲಹಗಳು ಹುಟ್ಟಿಕೊಳ್ಳಬಹುದು. ಅನಿವಾರ್ಯವಾಗಿ ಹೊರಗಿನ ತಿಂಡಿಯನ್ನು ತಿನ್ನಬೇಕಾದೀತು. ಉದರಕ್ಕೆ ಸಂಬಂಧಿಸಿದ ರೋಗವು ಬಂದು ಆರೋಗ್ಯವು ಕೆಡುವುದು. ನಿಮಗೆ ಕೆಲವು ಶುಭ ಶಕುನಗಳು ಕಾಣಿಸಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.
ವೃಷಭ: ಎಂದೂ ಮಾಡದ ಕೆಲಸದ ಮೇಲೆ ಅಪವಾದಗಳು ಬರಲಿವೆ. ಅದನ್ನು ನ್ಯಾಯಸಮ್ಮತವಾಗಿ ದೃಷ್ಟಾಂತ ಸಹಿತ ಅಲ್ಲಗಳೆಯುವಿರಿ. ದೂರದ ಊರಿಗೆ ವೈಯಕ್ತಿಕ ಕಾರ್ಯದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ವಿದೇಶಗಳಲ್ಲಿ ಅವಕಾಶವು ದೊರೆಯಲಿದೆ. ಸಾಲವನ್ನು ಮಾಡುವುದಿದ್ದರೆ ಅವಶ್ಯಕತೆಗೆ ತಕ್ಕಂತೆ ಮಾಡಬಹುದು. ಬಂಧುಗಳ ಮನೆಯಲ್ಲಿ ಯಥೋಚಿತ ಸತ್ಕಾರಗಳು ನಿಮಗೆ ಸಿಗಲಿವೆ. ಜಗನ್ಮಾತೆಯನ್ನು ಆರಾಧಿಸುವಿರಿ.
ಮಿಥುನ: ಅನ್ಯ ಮಾರ್ಗವಿಲ್ಲದೇ ಉದ್ಯೋಗವನ್ನೇ ನಂಬಿಕೊಂಡಿರುವವರಿಗೆ ಸ್ವಲ್ಪ ಆರ್ಥಿಕವಾಗಿ ಹಿನ್ನಡೆಯಾಗಲಿದೆ. ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಲು ಕಾಯುತ್ತಿರುವರು. ಅವರಿಗೆ ನೀವು ಆಹಾರವಾಗಲಿದ್ದೀರಿ. ಇಂದು ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.
ಕಟಕ: ಯಥೇಚ್ಛವಾದ ಆರ್ಥಿಕವಾಗಿ ಸಬಲರು ಎಂದುಕೊಂಡು ಖರ್ಚನ್ನು ಹೆಚ್ಚು ಮಾಡಬೇಡಿ. ಖರ್ಚುನ ಪಟ್ಟಿಯನ್ನು ದೊಡ್ಡದಾಗಿಸಿಕೊಳ್ಳಬೇಡಿ. ತುರ್ತು ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ. ನಿಮಗೆ ಭವಿಷ್ಯದ ಚಿಂತೆ ಇರಲಿದೆ. ನೀರಿನ ಪ್ರದೇಶಗಳಿಗೆ ಹೋಗುವ ಮನಸ್ಸು ನಿಮ್ಮದಾಗಲಿದೆ. ದೂರದ ಊರಿಗೆ ಪ್ರಯಾಣ ಹೋಗುವಿರಿ. ಕುಳಿತಲ್ಲೇ ಕುಳಿತು ದೇಹ ಮತ್ತು ಮನಸ್ಸು ಜಡವಾಗಿದೆ ಎಂದು ಅನ್ನಿಸಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ನೋವುಂಟಾಗಲಿದೆ. ಕುಲದೇವರನ್ನು ಆರಾಧಿಸಿ.
ಸಿಂಹ: ವ್ಯಾಪಾರಾದಲ್ಲಿ ಅಧಿಕ ಲಾಭವಾಗಲಿದೆ. ಹಿಡಿದ ಕೆಲಸವನ್ನು ಬಿಡದೇ ಮುಗಿಸುವ ಸ್ವಭಾವವಿರಲಿದೆ. ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳು ಮುಂದೆ ಹೋಗುತ್ತಿದ್ದು ಇಂದು ಅದನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವುದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮನ್ನು ಯಾರಾದರೂ ಕೆಣಕಬಹುದು. ಉದ್ವೇಗಕ್ಕೆ ಒಳಗಾಗಿ ಸ್ನೇಹಿತರ ಅಪಹಾಸ್ಯಕ್ಕೆ ಸಿಲುಕಬೇಡಿ. ಆಯಾಸದ ಪ್ರಯಾಣವನ್ನು ಮಾಡುವಿರಿ. ಅತಿಯಾದ ಭಾರವನ್ನು ಎತ್ತುವ ಕೆಲಸಕ್ಕೆ ಹೋಗಬೇಡಿ. ಶಾರೀರಿಕ ತೊಂದರೆಗಳು ಆಗಬಹುದು. ನಿಮಗಿದ್ದ ಗೊಂದಲಗಳು ಇಂದು ನಿವಾರಣೆಯಾಗಲಿದೆ. ಪ್ರಾತಃಕಾಲದ ಸೂರ್ಯನಿಗೆ ನಮಸ್ಕರಿಸಿ.
ಕನ್ಯಾ: ಕುಟುಂಬದಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುವುದು. ಗೌರವ ಹಾಗೂ ಸಮ್ಮಾನಗಳು ನಿಮಗೆ ಸಿಗಲಿವೆ. ಕಛೇರಿಯಲ್ಲಿ ನೀವು ಸಿದ್ಧಪಡಿಸಿರುವ ಯೋಜನೆಗಳಿಗೆ ಪ್ರಶಂಸೆ ಸಿಗುವುದು. ಒತ್ತಡಗಳನ್ನು ನಿವಾರಿಸುವ ವಿದ್ಯೆಯು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿಮುಗಿಸುವಿರಿ. ದೈವದ ಸಾನ್ನಿಧ್ಯದಲ್ಲಿ ನೀವಿಂದು ಇರಲಿದ್ದೀರಿ. ಹಿರಿಯರು ನಿಮಗೆ ಉಪದೇಶವನ್ನು ಮಾಡುವರು. ಅತಿಯಾದ ಆತುರದಿಂದ ನಿಮ್ಮ ಕೆಲಸಗಳು ಹಾಳಗಲಿವೆ. ಹೊಸ ಕೆಲಸವನ್ನು ಆರಂಭಿಸುವವರು ಆರಂಭಿಸಲು ಯೋಗ್ಯವಾದ ಸಮಯವಾಗಿದೆ. ವಿಷ್ಣುಸಹಸ್ರನಾಮಸ್ತೋತ್ರವನ್ನು ಪಠಿಸಿ.
ತುಲಾ: ಇಂತಹ ಅಪಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ. ಬಂಧುಗಳು ನಿಮ್ಮನ್ನು ನೋಡಿ ಆಡಿಕೊಳ್ಳುವರು. ನಿಮ್ಮೆದುರು ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇರುವ ನೀವು ಕೃಷಿಯನ್ನು ಮಾಡಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸುವಿರಿ. ತಂದೆಯು ನಿಮ್ಮ ಕೆಲಸಕ್ಕೆ ಧನಸಹಾಯವನ್ನು ಮಾಡಲಿದ್ದಾರೆ. ಸಹೋದರನು ನಿಮಗೆದುರಾದ ತೊಂದರೆಯನ್ನು ಪರಿಹರಿಸಿಕೊಳ್ಳಲು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ನಿಮ್ಮ ಸರ್ಕಾರಿ ಕೆಲಸಗಳು ವೇಗವನ್ನು ಪಡೆದು ಮುಕ್ತಾಯಗೊಳ್ಳುವುದು. ಪ್ರಭಾವಿ ನಾಯಕರ ಭೇಟಿಯಾಗಲಿದೆ. ಕೆಲಸಗಳು ನಿಧಾನವಾಗಲಿದೆ. ತಾಳ್ಮೆಯನ್ನು ಇರಿಸಿಕೊಳ್ಳಬೇಕು ಉತ್ತಮ. ಲಲಿತಾಸಹಸ್ರನಾಮವನ್ನು ಪಠಿಸಿ.
ವೃಶ್ಚಿಕ: ನಿಮ್ಮವರ ಕೆಲವು ವರ್ತನೆಗಳು ಬೇಸರವನ್ನೂ ತರಿಸಬಹುದು. ಇದರಿಂದ ಸಿಟ್ಟುಕೊಂಡ ದೂರ ಸರಿಯುವ ನಿರ್ಧಾರಗಳನ್ನೂ ತೆಗಕೊಳ್ಳುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ವರ್ತಿಸುವುದು ಉಚಿತ. ದಾಂಪತ್ಯದಲ್ಲಿ ಮಾತಿನ ಸಣ್ಣ ಬಿಸಿ ಉಂಟಾಗಬಹುದು. ಮನಸ್ಸಿನಲ್ಲಿ ಒಡಕುಗಳು ಮೂಡಬಹುದು. ಆದಷ್ಟು ಮುಂದುವರಿಯದೇ ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಗೃಹಬಳಕೆಯ ವಸ್ತುಗಳಿಂದ ಖರ್ಚು ಹೆಚ್ಚಾಗಬಹುದು ಭೂಮಿಯ ವ್ಯವಹಾರಸ್ಥಾರಿಗೆ ಲಾಭವಿದೆ. ಚಾಮುಂಡಿಯನ್ನು ಭಜಿಸಿ.
ಧನು: ಅಧ್ಯಾತ್ಮದ ಕಡೆ ನಿಮ್ಮ ಒಲವು ಇರಲಿದೆ. ಶತ್ರುಗಳು ಮಿತ್ರರಾಗಲಿದ್ದಾರೆ. ನಿಮ್ಮ ಪ್ರಾಭಾವೀ ವ್ಯಕ್ತಿತ್ವವು ಜನಕ್ಕೆ ತಿಳಿಯಲಿದೆ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ಉದ್ಯೋಗದ ಕಾರಣಕ್ಕೆ ವಿದೇಅಸಕ್ಕೆ ಹೋಗಬೇಕಾಗಿ ಬರಬಹುದು. ಬಂಧುಗಳ ಭೇಟಿ ಸುಖದಾಯಕವಾದುದಾಗಿರುತ್ತದೆ. ಒಂದಕ್ಕೊಸ್ಕರ ಎರಡನ್ನು ಬಿಡಬೇಕಾದೀತು. ಯಾವುದೋ ಒಪ್ಪಂದಗಳಿಗೆ ಸಹಿ ಹಾಕಿಬಿಡಬೇಡಿ. ಅನುಭವಿಗಳ ಜೊತೆ ಚರ್ಚೆಗಳನ್ನು ಮಾಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಹಿಂದೊಮ್ಮೆ ಆಲೋಚಿಸಿದ್ದ ಕೆಲಸಗಳನ್ನು ಪುನಃ ಆರಂಭಿಸುವಿರಿ. ಹಳೆಯ ನೋವು ಮರುಕಳಿಸೀತು. ಗುರುಸ್ತೋತ್ರವನ್ನು ಪಠಿಸಿ.
ಮಕರ: ಶತ್ರುಗಳು ನಿಮ್ಮ ಹಿಂದೆಯೇ ಇರುತ್ತಾರೆ. ಜೋಪಾನವಾಗಿ ಮುಂದಡಿಯಿಡಿ. ನೀವು ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬಿಡಿಗಾಸಿನಷ್ಟೂ ಬೆಲೆ ಇಲ್ಲದೇ ಕಡಿಮೆಯಾಗಬಹುದು. ನೀರಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಹೆಚ್ಚು ಸಿಗಬಹುದು. ಕಫಸಂಬಂಧವಾದ ಕಾಯಿಲೆಯು ನಿಮ್ಮನ್ನು ಹೈರಾಣಮಾಡುವುದು. ಕೃಷಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರ ಅಧಿಕವಾಗಲಿದೆ. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಕಲಾವಿದರು ಹೆಚ್ಚಿನ ಪ್ರಶಂಸೆಯನ್ನು ಗಳಿಸುವರು. ಶನೈಶ್ಚರನಿಗೆ ತೈಲದ ದೀಪ ಬೆಳಗಿ.
ಕುಂಭ: ವಿದೇಶದ ಪ್ರಯಾಣವನ್ನು ಮಾಡುವುದು ಎಂದು ಇದ್ದರೂ ಕೆಲವು ದಾಖಲೆಗಳ ಕೊರತೆ, ಅಸ್ಪಷ್ಟತೆಯ ಕಾರಣದಿಂದ ಮುಂದೂಡಲ್ಪಡಬಹುದು. ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಬಹುದು. ಬೇಸರಿಸದೇ ಸಹಜವಾಗಿ ಸ್ವೀಕರಿಸಿ. ಶ್ವಾಸಕೋಶದ ತೊಂದರೆಯು ಕಾಣಸಿಗಬಹುದು. ಅತಿಯಾದ ಆಹಾರವು ಅಜೀರ್ಣವಾಗಿ ತೊಂದರೆ ಕೊಡುವುದು. ಸಂಗಾತಿಯ ಹಳೆಯ ಸ್ನೇಹಿತನ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು. ರುದ್ರನನ್ನು ಅಭಿಷೇಕದ ಮೂಲಕ ಆರಾಧಿಸಿ.
ಮೀನ: ವಾಹನದ ಸಾಲಕ್ಕೆ ಇಂದು ಆಲೋಚಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ನಡೆದ ಕಲಹಗಳು ಇಂದಿಗೆ ಮುಕ್ತಾಯಗೊಳ್ಳಬಹುದು. ತಾಯಿಯು ನಿಮಗೆ ಬೇಕಾದ ಸಹಾಯವನ್ನು ಮಾಡುವಳು. ತುರಿ, ನವೆ ಮುಂತಾದ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಖರ್ಚುಮಾಡಬೇಕಾಗಿ ಬರಬಹುದು. ವಿದ್ಯುತ್ ಉಪಕರಣದ ರಿಪೇರಿಗೆ ಅನಿರೀಕ್ಷಿತ ಹಣವನ್ನು ಖರ್ಚುಮಾಡುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ. ಮಕ್ಕಳು ನಿಮ್ಮ ಪ್ರೀತಿಯನ್ನು ಅನುಭವಿಸುವರು.
-ಲೋಹಿತಶರ್ಮಾ, ಇಡುವಾಣಿ