Nitya Bhavishya: ಇಂದು ಭಾನುವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ? ನಿಮ್ಮ ದಿನ ಭವಿಷ್ಯ ತಿಳಿದುಕೊಳ್ಳಿ
2023 ಮಾರ್ಚ್ 5ರ ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 5ರ ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಇದನ್ನೂ ಓದಿ: Weekly Horoscope: ಮಾರ್ಚ್ 5ರಿಂದ ಮಾರ್ಚ್ 11ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 48 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ 09:47ರಿಂದ 11:16ರವರೆಗೆ, ಯಮಘಂಡ ಕಾಲ 14:13ರಿಂದ 15:42ರ ವರೆಗೆ. ಗುಳಿಕ ಕಾಲ 06:49 – 08:18ರವರೆಗೆ.
ಮೇಷ: ಆರೋಗ್ಯವು ಉತ್ತಮವಾಗಿರಲಿದೆ. ನೀವು ಜೀವನದ ಇತರ ಕ್ಷೇತ್ರಗಳಲ್ಲಿ ಮಹತ್ತರವಾದ ಕಾರ್ಯನಿರ್ವಹಿಸುವಿರಿ. ಧೈರ್ಯ ಮತ್ತು ಆತ್ಮವಿಶ್ವಾಸದ ಹೆಚ್ಚಿರಲಿದೆ. ನಿಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ವೇಗವಾಗಿ ಮಾಡುವಿರಿ. ಈ ಹಿಂದೆ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೀರಿ. ನಿಮ್ಮ ಆರ್ಥಿಕ ಜೀವನವು ಇಂದು ಉತ್ತಮವಾಗಿರಲಿದೆ. ಹಣವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ನಿಮ್ಮ ಗೌರವವೂ ಹೆಚ್ಚಾಗುವುದು.
ವೃಷಭ: ಸಮಾಜದ ಅನೇಕ ಪ್ರಭಾವಿ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿರಲು ನಿಮಗೆ ಅವಕಾಶವಿರಲಿದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಅವುಗಳ ಉತ್ತಮ ಲಾಭವನ್ನು ಪಡೆಯಲು ಪ್ರಯತ್ನಿಸಿ. ನಿಮ್ಮ ಪ್ರತಿ ಹೆಜ್ಜೆಯನ್ನು ನೋಡುವವರಿದ್ದಾರೆ. ದಾಂಪತ್ಯದಲ್ಲಿ ವೈಮನಸ್ಯವು ಏಳಬಹುದು. ಹೊಸತನವನ್ನು ಬಯಸಲಿದ್ದೀರಿ. ದೂರದ ಊರಿಗೆ ಪ್ರಯಾಣ ಇಂದು ನಿಮಗೆ ಇಷ್ಟವಾದೀತು. ಕೆಸರಿಗೆ ಕಲ್ಲೆರೆಚಬೇಡಿ.
ಮಿಥುನ: ನೀವು ಅದೃಷ್ಟವಂತರು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಸ್ವಲ್ಪ ಪ್ರಯತ್ನಗಳನ್ನು ಮಾಡುವಿರಿ. ಇಂದು ನಿಮ್ಮ ಸ್ವಂತಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಆದರೆ ಇದರಿಂದಾಗುವ ತೊಂದರೆಯನ್ನು ಮುಂದಿನ ದಿನಗಳಲ್ಲಿ ಅರಿತುಕೊಳ್ಳುವಿರಿ. ಈ ಸಮಯದಲ್ಲಿ ನಿಮಗೆ ಹಣದ ಕೊರತೆ ಇರುವುದಿಲ್ಲ. ಹಾಗಾಗಿ ಖರ್ಚು ಮಾಡುವ ಬಗ್ಗೆ ನೀವು ಹೆಚ್ಚು ಯೋಚಿಸುವುದಿಲ್ಲ.
ಕಟಕ: ನೀವು ಕುಟುಂಬದ ಹಿರಿಯರ ಬೆಂಬಲವನ್ನು ಪಡೆಯಲಿದ್ದೀರಿ. ಇದು ನಿಮ್ಮ ಹೆಚ್ಚಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಕುಟುಂಬದ ಸದಸ್ಯರು ನಿಮಗೆ ಆರ್ಥಿಕವಾಗಿ ಸಹಾಯ ಮಾಡುವ ಸಾಧ್ಯತೆಯಿದೆ ಈ ದಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮವನ್ನು ಒದಗಿಸುವ ಮತ್ತು ಅವರ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಅದೃಷ್ಟವೂ ಇರಲಿದೆ.
ಸಿಂಹ: ಇಂದು ನೀವು ಯಾವುದೇ ಹೊಸ ಹೆಜ್ಜೆಗಳನ್ನು ಇಡುವುದು ಆರ್ಥಿಕವಾಗಿ ನಷ್ಟಕ್ಕೆ ಸಿಗುವಿರಿ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಇಂದು ಮನೆ ಬಳಕೆಯ ಹಾಗೂ ಅಲಂಕಾರದ ವಸ್ತುಗಳನ್ನು ಖರೀದಿಸುವಿರಿ. ಅನಗತ್ಯ ಅಥವಾ ಅನಿವಾರ್ಯವಲ್ಲದ ವಸ್ತುಗಳಿಗೆ ಖರ್ಚು ಮಾಡುವ ಸಾಧ್ಯತೆಯಿದೆ. ಕುಟುಂಬದಲ್ಲಿ ನಿಮ್ಮ ಗೌರವಕ್ಕೆ ತೊಂದರೆಯಾಗುವ ಘಟನೆಗಳು ನಡೆಯಬಹುದು.
ಕನ್ಯಾ: ಇಂದು ನೀವು ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಶ್ರಮಿಸಬೇಕಿದೆ. ಇದು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಉನ್ನತಶಿಕ್ಷಣಕ್ಕಾಗಿ ಕೆಲವು ಬೇರೆಡೆ ಹೋಗುವ ಮನಸ್ಸು ಮಾಡುವಿರಿ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಪ್ರತಿಫಲವನ್ನು ನೀಡುತ್ತದೆ. ಎಂತಹ ಸಮಸ್ಯೆಗಳಿಗೂ ನೀವು ಪರಿಹಾರಗಳನ್ನು ಹುಡುಕುವಲ್ಲಿ ಯಶಸ್ವಿಯಾಗುವಿರಿ.
ತುಲಾ: ಚಟುವಟಿಕೆಯಿಂದ ಇದ್ದರೆ ಇಂದು ನಿಮಗೆ ಅನುಕೂಲಕರ ಫಲಿತಾಂಶವಿರಲಿದೆ. ಹೂಡಿಕೆಯಿಂದ ನೀವು ನಿರೀಕ್ಷಿಸಿದಷ್ಟು ಲಾಭವನ್ನು ಪಡೆಯುವುದು ಕಷ್ಟವಾದೀತು. ಯೋಗ್ಯವಾದ ಯೋಜನೆಗಳೊಂದಿಗೆ ಕೆಲಸ ಮಾಡಿವಿರಿ ಹಾಗೂ ಕಡಿಮೆ ಸಮಯದಲ್ಲಿ ನಿಮ್ಮ ಲಾಭವನ್ನು ದ್ವಿಗುಣಗೊಳ್ಳುವಿರಿ. ಇಂದು ಮನೆಯ ಕಿರಿಯ ಸದಸ್ಯರೊಂದಿಗೆ ಚರ್ಚೆ ಹಾಗೂ ಭಿನ್ನಾಭಿಪ್ರಾಯಗಳು ನಿಮ್ಮ ಮನಸ್ಸಿನಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ವೃತ್ತಿಗೆ ಸಂಬಂಧಿಸಿದ ನೀವು ಅದೃಷ್ಟವನ್ನು ಪಡೆದುಕೊಂಡಿದ್ದೀರಿ.
ವೃಶ್ಚಿಕ: ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವಿಂದು ಆಯಾಸಗೊಳ್ಲಕುವಿರಿ. ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಂಡು ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಆರೋಗ್ಯಕ್ಕೂ ಇದೇ ಒಳ್ಳೆಯದು ಎಂದು ತಿಳಿಯುತ್ತದೆ. ವ್ಯಾಪಾರಿಗಳು ಸಾಲವನ್ನು ಕೊಡಬೇಡಿ. ಸಾಲ ಮಾಡುವುದನ್ನು ಮುಂದುವರಿಸಲು ಬಿಟ್ಟರೆ, ಯಾವುದೇ ಸಮಯದಲ್ಲಿ ಹಣದ ಕೊರತೆಯನ್ನು ಪ್ರಾರಂಭಿಸುತ್ತೀರಿ. ನೀವು ಅನೇಕ ಉತ್ತಮ ಅವಕಾಶಗಳಿಂದ, ಲಾಭದಿಂದ ವಂಚಿತರಾಗಬಹುದು.
ಧನಸ್ಸು: ನಿಮ್ಮ ಸಹೋದ್ಯೋಗಿಗಳ ಬೆಂಬಲ ಮತ್ತು ಸಹಾಯಕ್ಕಾಗಿ ನೀವು ಕೃತಜ್ಞರಾಗುವಿರಿ. ಅವರೊಂದಿಗೆ ಕೆಲಸ ಮಾಡುವಾಗ ಉತ್ಸಾಹವನ್ನೂ ಆತ್ಮವಿಶ್ವಾಸವನ್ನೂ ಪಡೆದುಕೊಳ್ಳುವಿರಿ. ಹಿಂದಿನ ಶ್ರಮದಿಂದಾಗಿ, ನಿಮ್ಮ ಪ್ರಯತ್ನಗಳ ಸಿಹಿ ಫಲವನ್ನು ನೀಡಲಿವೆ. ಇಂದು ಗೌರವವನ್ನು ಪಡೆಯುವುದರ ಜೊತೆಗೆ, ಶಿಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತೀರಿ. ಅಹಂಕಾರವು ತಲೆಗೆ ಏರದಂತೆ ನೋಡಿಕೊಳ್ಳಿ. ಅದೇ ನಿಮ್ಮ ವ್ಯಕ್ತಿತ್ವಕ್ಕೆ, ಯಶಸ್ಸಿಗೆ ತೊಂದರೆಯನ್ನು ಉಂಟುಮಾಡಬಹುದು.
ಮಕರ: ಇಂದು ನೀವು ಆರೋಗ್ಯಯುತ ಜೀವನವನ್ನು ನಡೆಸುವಿರಿ. ಬಹಳ ಹಿಂದಿನ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಮುಕ್ತಿ ಸಿಗಲಿದೆ. ಆರ್ಥಿಕವಾಗಿ ನೀವು ಸಬಲರಾಗುವಿರಿ. ನಿಮಗೆ ಉತ್ತಮ ನಿರ್ದೇಶನ ಮತ್ತು ಅವಕಾಶಗಳು ಸಿಗಲಿವೆ. ನೀವು ಹಣವನ್ನು ಉಳಿಸುವಲ್ಲಿ ಅಥವಾ ಸಂಗ್ರಹಿಸುವಲ್ಲಿ ನಿಮ್ಮ ಕುಟುಂಬವು ಬೆಂಬಲಿಸುತ್ತದೆ. ನಿಮ್ಮ ಸ್ನೇಹಿತ ಅಥವಾ ಆಪ್ತ ಸ್ನೇಹಿತರು ನಿಮ್ಮ ಸಲಹೆಗಳಿಗೆ ಹೆಚ್ಚಿನ ಪ್ರಮುಖತೆಯನ್ನು ನೀಡುವುದಿಲ್ಲ.
ಕುಂಭ: ಇಂದು ಕೆಲಸದಲ್ಲಿ ಉತ್ಸಾಹ ಮತ್ತು ಶಕ್ತಿಯ ಕೊರತೆಯಿರಲಿದೆ. ಇದು ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಳೆದುಹೋದ ಶಕ್ತಿಯನ್ನು ಪಡೆಯಲು ಹೊಸ ಸ್ಥಳಗಳಿಗೆ ಹೋಗುವಿರಿ. ವಿದೇಶಕ್ಕೆ ಹೋಗುವ ಆಲೋಚನೆಯಲ್ಲಿದ್ದ ವಿದ್ಯಾರ್ಥಿಗಳು ಪೂರ್ವಸಿದ್ಧಾತೆಯೊಂದಿಗೆ ಇರಿ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು. ದಿನಾಂತ್ಯದಲ್ಲಿ ಸುಖವನ್ನು ಕಾಣುವಿರಿ.
ಮೀನ: ನಿಮ್ಮ ವ್ಯವಹಾರವನ್ನು ವಿಸ್ತರಿಸಲು, ಈ ದಿನ ಸಾಲವನ್ನು ತೆಗೆದುಕೊಳ್ಳಲು ಯೋಜಿಸಬಹುದು. ಈ ಸಮಯದಲ್ಲಿ ನೀವು ಬ್ಯಾಂಕ್ ಅಥವಾ ಇನ್ನಾವುದೇ ಸಂಸ್ಥೆಯಿಂದ ಸಾಲವನ್ನು ಪಡೆಯಲು ತೀರ್ಮಾನಿಸುವಿರಿ. ಹಣಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಮಾಡುವಾಗ ನೀವು ಮೊದಲಿನಮಗಿಂತಲೂ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ನೀವು ಕಠಿಣ ಪರಿಶ್ರಮದ ಅನಂತರವೇ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿದೆ.
ಲೇಖನ-ಲೋಹಿತಶರ್ಮಾ, ಇಡುವಾಣಿ