ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಶಂಸೆಯ ಜೊತೆಗೆ ಹಣದ ಲಾಭ!
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ದಶಮೀ ತಿಥಿಯ ಗುರುವಾರದಂದು ಅನಿರೀಕ್ಷಿತ ಸಂಪತ್ ಪ್ರಾಪ್ತಿ, ನಿಸ್ಸ್ವಾರ್ಥ, ಹೊಸ ಕಾರ್ಯಕ್ಕೆ ಶುಭ ನಿಮಿತ್ತ, ಸಂಗಾತಿಯಿಂದ ವಿಚಾರಣೆ, ಹೊಣೆಗಾರಿಕೆ, ಸಹಾಯ, ಅಪಮಾನದಿಂದ ಕೋಪ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಬ್ರಹ್ಮ, ಕರಣ : ಬವ, ಸೂರ್ಯೋದಯ – 06 – 15 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:30 – 14:57, ಯಮಗಂಡ ಕಾಲ 06:16 – 07:42, ಗುಳಿಕ ಕಾಲ 09:09 – 10:36.
ಮೇಷ ರಾಶಿ: ನೀವು ವಿವಾದಗಳಿಗೆ ಆತಂಕಪಡುವಿರಿ. ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನಿಮ್ಮನ್ನು ನೌಕರರು ಹೋಗಳುವರು. ನಿಮ್ಮ ವೇಗಕ್ಕೆ ಸಹೋದ್ಯೋಗಿಗಳು ಬಾರದೇ ಇರಬಹುದು. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಷ್ಟ. ಯಾರನ್ನೋ ಬೀಳಿಸಲು ಹೋಗಿ ನೀವೇ ಬೀಳುವಿರಿ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ವ್ಯಯಿಸುವಿರಿ. ಅದೃಷ್ಟವನ್ನು ಮಾತ್ರ ನಂಬಿ ಕೆಲಸವನ್ನು ಮಾಡಬೇಡಿ.
ವೃಷಭ ರಾಶಿ: ಕುಟುಂಬದಲ್ಲಿ ಒಂದು ಮಟ್ಟಿನ ಸೌಖ್ಯವು ಇರಲಿದೆ. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ವಾಹನದ ಖರೀದಿಗೆ ಬೆಂಬಲವು ಸಿಗಬಹುದು. ಒಂದೇ ದಿನ ಹಲವು ಕಾರ್ಯಗಳಿಗೆ ಭಾಗಿಯಾಗುವಿರಿ. ಬರಬೇಕಾದ ಹಣವು ಬಾರದೇ ಇರುವುದು ಚಿಂತೆಗೊಳಿಸುವುದು. ಅತಿಯಾದ ಆಸೆಯಿಂದ ನಿಮಗೆ ಬುದ್ಧಿಗೆ ಮಂಕು ಕವಿಯಬಹುದು.
ಮಿಥುನ ರಾಶಿ: ಭೂಮಿಯ ವ್ಯವಹಾರವನ್ನು ಯಾವುದೋ ತೊಂದರೆಯಿಲ್ಲದೇ ಮಾಡಲಾಗದು ಎಂಬ ಮನೋಭಾವ ಬದಲಾಗುವುದು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ವ್ಯಾಪಾರದ ನಷ್ಟದಿಂದ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: ಒಳ್ಳೆಯ ಸಂಬಂಧಗಳು ನಿಮಗೆ ಪಥ್ಯವಾಗದೇ ಇರಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸುವಿರಿ. ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಇಂದಿನ ಖರ್ಚು ವೆಚ್ಚಗಳನ್ನು ಸರಿಯಾಗಿ ಲೆಕ್ಕಿಸುವಿರಿ. ಅಪಾತ್ರರಿಗೆ ದಾನ ಮಾಡಿ ಬೇಸರಗೊಳ್ಳುವಿರಿ. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸಬೇಕಾದೀತು. ಉದ್ಯೋಗದಲ್ಲಿ ಸ್ತ್ರೀಯರಿಗೆ ಸಹಕಾರ ಮಾಡುವಿರಿ.
ಸಿಂಹ ರಾಶಿ: ಸದ್ವಿಚಾರಗಳನ್ನು ಪ್ರಚಾರ ಮಾಡುವ ಬಗ್ಗೆ ಚಿಂತಿಸಿ. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಹಲವು ಯೋಜನೆಯನ್ನು ಆರ್ಥಿಕ ಲಾಭಕ್ಕಾಗಿ ಪಡೆದುಕೊಳ್ಳುವಿರಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಇಂದಿನ ಕೆಲಸದ ಓಡಾಟದಿಂದ ಶರೀರವು ದಣಿಯಬಹುದು.
ಕನ್ಯಾ ರಾಶಿ: ನೀವು ಅಧಿಕಾರವನ್ನು ಪಡೆಯಲು ಮಾರ್ಗವನ್ನು ಬದಲಿಸುವಿರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಇಷ್ಟಪಟ್ಟವರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳುವಿರಿ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಅಪೇಕ್ಷಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುವಿರಿ. ಮರಳಿ ಯತ್ನವ ಮಾಡಿದರೆ ಯಾವುದಾದರೂ ಒಂದು ಸಿದ್ಧವಾಗುವುದು. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಸ್ನೇಹಿತರಿಂದ ಉದ್ಯೋಗವನ್ನು ನೀವು ನಿರೀಕ್ಷಿಸುವಿರಿ.
ತುಲಾ ರಾಶಿ: ನಿಮ್ಮ ತಪ್ಪಿಗೆ ಯಾವುದೋ ಒಂದು ರೀತಿಯಲ್ಲಿ ಪ್ರಾಯಶ್ಚಿತ್ತವಾಗಲಿದೆ. ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ಮಾತಿನಲ್ಲಿ ಹಿಡಿತವಿಲ್ಲದೇ ಮನ ಬಂದಂತೆ ಮಾತನಾಡುವಿರಿ. ದಾಖಲೆಗಳ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ. ಏನಾದರೂ ಸಾಧಿಸಲು ಸ್ವಲ್ಪ ರಾಜಕಾರಣ ಮಾಡಬೇಕಾಗಬಹುದು.
ವೃಶ್ಚಿಕ ರಾಶಿ: ನಿಮಗೆ ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು. ನಿಮ್ಮ ಸ್ನೇಹ ಬಳಗವು ದೊಡ್ಡದಾಗುವುದು. ಭೂಮಿಯ ಖರೀದಿಗೆ ಇಂದು ಸ್ಥಳವನ್ನು ಪರಿಶೀಲಿಸುವಿರಿ. ಪ್ರಮುಖ ದಾಖಲೆಗಳು ಕಣ್ಮರೆಯಾದೀತು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ.
ಧನು ರಾಶಿ: ನಿಮ್ಮ ಸಹೋದರರಿಂದ ನಿಮಗೆ ಆಕಸ್ಮಿಕವಾಗಿ ಸಹಾಯ ಸಿಗಬಹುದು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಪೂರ್ವಪ್ರಜ್ಞೆಯಿಂದಲೇ ತಪ್ಪುಗಳನ್ನು ಮಾಡಿಬಿಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ನಿಮಗೆ ವ್ಯಥೆಯು ಇರಲಿದೆ. ಆಡಂಬರವು ನಿಮಗೆ ಖುಷಿಕೊಡುಬುದು.
ಮಕರ ರಾಶಿ: ಯಾರದ್ದಾರೂ ಮಾತು ನಿಮಗೆ ಖುಷಿಕೊಡುವುದಾದರೆ ಅಂತಹುದನ್ನು ಕೇಳಿ. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ನೀವು ಮಾಡಿಕೊಂಡ ತಪ್ಪು ಕಾರ್ಯಗಳೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ದ್ರವ ಪದಾರ್ಥಗಳ ಮಾರಾಟವನ್ನು ನೀವು ಮಾಡುವಿರಿ. ಇಂದು ಸಂಯಮವು ಮುಖ್ಯ. ಹಿರಿಯರ ಮಾತಿಗೆ ಬೆಲೆ ಇರಲಿ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಆದಾಯಕ್ಕೆ ಹೊಸ ಯೋಜನೆಯನ್ನು ರೂಪಿಸುವಿರಿ.
ಕುಂಭ ರಾಶಿ: ಸಾಲಕೂಪವೂ ದಿನದಿಂದ ದಿನಕ್ಕೆ ಹೆಚ್ಚಾದಂತೆ ತೋರುತ್ತದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇರುವುದು. ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ.
ಮೀನ ರಾಶಿ: ನಿಮ್ಮ ಹಣವು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದರೆ ಖುಷಿಪಡಿ. ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸರ್ಕಾರದ ಕಾರ್ಯಕ್ಕೆ ತಡೆಗಳು ಹೆಚ್ಚು. ನಿಮ್ಮ ಮನೆ ಚಟುವಟಿಕೆಯಿಂದ ತುಂಬಿರಲಿದೆ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ನೀವು ಇಂದು ಪ್ರೀತಿಯನ್ನು ಹೇಳಿಕೊಳ್ಳುವಿರಿ.
ಲೋಹಿತ್ ಹೆಬ್ಬಾರ್ – 8762924271 (what’s app only)




