Horoscope: ಈ ರಾಶಿಯವರು ಕೆಲವು ವ್ಯಕ್ತಿಗಳಿಂದ ದೂರವಿರಲು ಇಚ್ಛಿಸುವರು
14 ಮಾರ್ಚ್ 2025: ಶುಕ್ರವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ. ಹಾಗಾದರೆ ಮಾರ್ಚ್ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಬೆಂಗಳೂರು, ಮಾರ್ಚ್ 14: ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶೂಲಿ ಕರಣ : ಭದ್ರ, ಸೂರ್ಯೋದಯ – 06 – 42 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:12 – 12:42, ಯಮಘಂಡ ಕಾಲ 15:42 – 17:12, ಗುಳಿಕ ಕಾಲ 08:12 – 09:42.
ತುಲಾ ರಾಶಿ: ನಿಮ್ಮ ಕೌಶಲವನ್ನು ಇತರರು ಪಡೆಯಲು ಇಚ್ಛಿಸುವರು. ಇಂದು ನಿಮ್ಮ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮಂತೆ ಮಾಡಿಕೊಳ್ಳುವ ಬಗ್ಗೆ ಅನುಭವಿಗಳ ಜೊತೆ ಚರ್ಚಿಸುವಿರಿ. ನ್ಯಾಯಾಲಯಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುವಿರಿ. ನಿಮ್ಮ ವಿದ್ಯೆಗೆ ಯೋಗ್ಯವಾದ ಅವಕಾಶಗಳು ಅನಿರ್ಬಂಧಿತವಾಗಿ ಸಿಗಬಹುದು. ದಾಯದಿ ಕಲಹವು ನಿಮ್ಮನ್ನು ಹಿಮ್ಮೆಟ್ಟಿಸೀತು. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಮನೆಯವರ ಕೆಲವರ ಮಾತು ನಿಮ್ಮನ್ನು ಕಾಡಬಹುದು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ಗತ್ತಿನಿಂದ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ.
ವೃಶ್ಚಿಕ ರಾಶಿ: ಸ್ನೇಹಕ್ಕೆ ಶರಣಾಗುವುದು ಅನಿವಾರ್ಯ. ಆಕಸ್ಮಿಕವಾಗಿ ದೂರ ಪ್ರಯಾಣವನ್ನು ಮಾಡಬೇಕಾಗಿದ್ದು, ಅಂದುಕೊಂಡಿದ್ದು ಸಾಧಿಸುವಿರಿ. ಉದ್ಯೋಗ ಭಡ್ತಿಯನ್ನು ನಿರೀಕ್ಷಿಸಬಹುದು. ಕೇಳಿ ಬಂದವರಿಗೆ ಆರ್ಥಿಕ ಸಹಕಾರವನ್ನು ನೀಡುವಿರಿ. ಗೃಹನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ನಿಮ್ಮ ಉದ್ಯಮಕ್ಕೆ ಹೂಡಕೆ ಬರಬಹುದು. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ನೆರೆಹೊರೆಯರ ಕಷ್ಟವನ್ನು ಆಲಿಸುವಿರಿ. ಮನಸ್ಸಿಗೆ ಬೇರಸವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಕೆಲವರಿಂದ ಸಹಾಯವನ್ನು ನಿರೀಕ್ಷಿಸದೇ ಇದ್ದರೂ ಸಹಕಾರ ದೊರೆತೀತು.
ಧನು ರಾಶಿ: ಪೂರ್ಣಕಾಲಿಕ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ವ್ಯವಹಾರದಲ್ಲಿ ಯಾವುದೇ ಅಳುಕನ್ನು ಇಟ್ಟುಕೊಳ್ಳದೇ ಎಲ್ಲವನ್ನೂ ಸರಿಯಾಗಿ ಅರಿತುಕೊಳ್ಳಿ. ನಿಮ್ಮ ಸಿಕ್ಕ ಅಧಿಕಾರಕ್ಕೆ ನಿಮಗೆ ಗೌರವ ಪ್ರಾಪ್ತಿಯಾಗುವುದು. ಭೂವ್ಯವಹಾರದಲ್ಲಿ ಸಣ್ಣ ಪ್ರಗತಿಯು ಇರಲಿದೆ. ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ನೀವು ಗಮನಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಮಾಡುವಿರಿ. ಉದ್ಧಟತನದ ಮಾತುಗಳಿಂದ ನಿಮ್ಮ ಸ್ವಭಾವವು ಸ್ಪಷ್ಟವಾಗುವುದು. ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ಹೋಗಿ ದರ್ಶನ ಮಾಡುವಿರಿ. ಸಹಾಯವನ್ನು ದುರುಪಯೋಗ ಮಾಡಿಕೊಳ್ಳಬಹುದಿ. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವಿರಿ. ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನುಕಲಿಯವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಸುಲಭ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಮಕರ ರಾಶಿ: ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ. ಸಣ್ಣ ವ್ಯಾಪಾರಿಗಳು ಆರ್ಥಿಕತೆಯಲ್ಲಿ ಚೇತರಿಕೆಯನ್ನು ಕಾಣಬಹುದು. ಉದ್ಯೋಗದಲ್ಲಿ ಬೆಳವಣಿಗೆಯ ನಿರೀಕ್ಷೆಯಲ್ಲಿ ಇರುವಿರಿ. ಇಂದು ನಿಮ್ಮ ಯೋಜನೆಗೆ ಕುಟುಂಬದ ಸಹಮತವು ಇರುವುದು. ಶತ್ರುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಾದೀತು. ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಒತ್ತಡ. ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಕೋಪ ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ನಿಮ್ಮ ಮೇಲಿನ ಪ್ರೀತಿಯು ಅಧಿಕವಾಗುವುದು. ಹೊಸ ಉದ್ಯೋಗದ ಅಭಿವೃದ್ಧಿಗೆ ದೇವರಲ್ಲಿ ಶರಣಾಗುವಿದರಿ. ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ.
ಕುಂಭ ರಾಶಿ: ಮನೆಯ ನಿರ್ವಹಣೆಯಲ್ಲಿ ಗೊಂದಲ. ಶುಭ ಕಾರ್ಯದಿಂದ ಬಯಸಿದ್ದನ್ನು ಪಡೆಯಲು ಇಚ್ಛಿಸುವಿರಿ. ಸಹೋದರರ ಜೊತೆ ಪಾಲುದಾರಿಕೆಯಿಂದ ಉತ್ತಮಲಾಭವಿದೆ. ದಾಯಾದಿಗಳ ಜೊತೆ ಕಿರಿಕಿರಿ ಇದ್ದರೂ ಅದನ್ನು ಬೆಳೆಸಿಕೊಳ್ಳುವುದು ಬೇಡ. ಹೊಸ ಉದ್ಯಮಕ್ಕೆ ಒಬ್ಬೊಬ್ಬರದರು ಒಂದೊಂದು ಅಭಿಪ್ರಾಯ. ಆಸ್ತಿಗೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ಜೋಪಾನ ಮಾಡಿಕೊಳ್ಳಿ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನೀವು ಎಣಿಸಿದಂತೆ ಆಗಿದ್ದು, ನಿಮಗೂ ಅಚ್ಚರಿಯಾದೀತು. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ವಾಹನದಿಂದ ಬಿದ್ದು ಗಾಯವಾಗುವ ಸಾಧ್ಯತೆ ಇದೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ನಿಮ್ಮ ಕನಸನ್ನು ಸಕಾರ ಮಾಡಿಕೊಳ್ಳಲು ಪ್ರಗತಿಯಲ್ಲಿ ಇರುವಿರಿ.
ಮೀನ ರಾಶಿ: ತಂತ್ರಜ್ಞಾನದಲ್ಲಿ ಮಹಿಳೆಯರ ಸ್ಥಾನ ಹೆಚ್ಚಾಗುವುದು. ಇಂದು ನಿಮಗೆ ಸ್ಥಿರಾಸ್ತಿ ಹಾಗೂ ವಾಹನದಿಂದ ಲಾಭವಾಗುವ ಸಂಭವವು ಹೆಚ್ಚು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದನ್ನು ಕಡಿಮೆ ಮಾಡಬೇಕು. ವ್ಯಾಪಾರದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಿ. ಕೃಷಿಕರಿಗೆ ಆದಾಯದ ಆತಂಕ ಇರುವುದು. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ದೈವಭಕ್ತಿಯಲ್ಲಿ ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಉದ್ಯೋಗದಲ್ಲಿ ಖುಷಿಪಡುವುದನ್ಬು ಕಲಿಯಬೇಕು. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ.