Horoscope Today 16 September : ಇಂದು ಈ ರಾಶಿಯವರಿಗಾಗಿ ನೀವು ಕೆಲವನ್ನು ಬಿಡಬೇಕಾಗುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಮಂಗಳವಾರ ಪ್ರತಿರೋಧ, ಶಸ್ತ್ರಗಳ ಬಳಕೆ, ಹಳೆಯ ವಸ್ತುಗಳ ಮಾರಾಟ, ವಿಳಂಬ ಕಾರ್ಯ, ವಂಚನೆಯಿಂದ ಆದಾಯ ಇವೆಲ್ಲ ಈ ದಿನದ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ವ್ಯಾಘಾತ, ಕರಣ : ಕೌಲವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 18 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:17 – 16:48, ಗುಳಿಕ ಕಾಲ 12:14 – 13:45, ಯಮಗಂಡ ಕಾಲ 09:12 – 10:43
ಮೇಷ ರಾಶಿ :
ನೀವು ಸ್ಥಿರವಾಗಿ ಇದ್ದಾಗ ನಿಮಗೆ ಬರುವ ಸವಾಲುಗಳು ಯಾ ಲೆಕ್ಕದ್ದೂ ಆಗಿರದು. ಇಂದು ನ್ಯಾಯವನ್ನು ಪಡೆಯಲು ಬೇರೆ ದಾರಿಗಳಿಂದ ಪ್ರಯತ್ನಿಸುವಿರಿ. ಇಂದು ಒಂದೇ ಕಾರ್ಯವನ್ನು ಮತ್ತೆ ಮಾಡಬೇಕಾಗುವುದು. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ವಾಹನದಿಂದ ನಿಮಗೆ ತೊಂದರೆಯಾಗಲಿದೆ. ಆಸ್ತಿಯ ಖರೀದಿಯ ಬಗದಗೆ ಇಂದು ನೀವು ಹೊಸ ಪಾಲುದಾರಿಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಯಂತ್ರಗಳ ಖರೀಯಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವುದು ಉತ್ತಮ. ಪ್ರೀತಿಯ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ. ಪರರು ಅದನ್ನು ಪಡೆಯುವ ಯತ್ನ ಮಾಡಬಹುದು. ನಿಮ್ಮ ಭಾವನೆಯನ್ನು ಕುಟುಂಬವು ಗೌರವಿಸುವುದು. ಇಂದಿನ ಹೆಚ್ಚಿನ ಸಮಯವನ್ನು ಧಾರ್ಮಿಕ ಕೆಲಸಕ್ಕೆ ಮೀಸಲಿಡಿ. ಸಂಗಾತಿಯ ವಿಚಾರವನ್ನು ಇನ್ನೊಬ್ಬರ ಬಳಿ ಹೇಳಿ ಸಮಾಧಾನ ಪಡುವಿರಿ. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ.
ವೃಷಭ ರಾಶಿ :
ಸಂಗಾತಿಯ ಪ್ರಕೋಪವನ್ನು ಯಾವುದಾದರೂ ಉಪಾಯದಿಂದ ಶಾಂತಮಾಡಬಹುದು. ಆತ್ಮಾವಲೋಕನ ಮಾಡಿಕೊಳ್ಳುವುದು ನಿಮಗೆ ಯೋಗ್ಯ. ನಿಮ್ಮ ನಿಶ್ಚಿತವಾದ ಯೋಜನೆಯನ್ನು ಬದಲಾಯಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಆತಂಕ ಉಂಟಾಗಬಹುದು. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ನಿಮ್ಮ ಕಾರ್ಯದ ಬಗ್ಗೆ ಸಕಾರಾತ್ಮಕ ಭಾವನೆಯು ಕಡಿಮೆ ಆಗಬಹುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ನಿಮ್ಮ ಆಲಸ್ಯಕ್ಕೆ ಕಛೇರಿಯಲ್ಲಿ ಕೋಪಗೊಳ್ಳುವರು. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನೀವು ಇಂದು ಕೆಲಸದಲ್ಲಿ ಬದಲಾವಣೆಯನ್ನು ಇಚ್ಛಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರ ಬನ್ನಿ. ನಿಮ್ಮ ಮೇಲೆ ವಿರೋಧಿಗಳ ಆಕ್ರಮಣವು ಆಗಬಹುದು. ಬೇಡದಿದ್ದರೂ ಸಹಾಯವು ನಿಮ್ಮ ಪಾಲಿಗೆ ಬರುವುದು.
ಮಿಥುನ ರಾಶಿ :
ಇಂದು ನಿರರ್ಗಲ ಮಾತಿನಿಂದ ಕೇಳುಗರಿಗೆ ಹಿಂಸೆ. ಏಕಕಾಲಕ್ಕೆ ಹಲವಾರು ಖರ್ಚುಗಳು ಬಂದು ನಿಮಗೆ ತಲೆಬಿಸಿ ಆಗುವುದು. ನಿಮ್ಮ ಬಗ್ಗೆ ಅಪರಿಚಿತರು ಪ್ರೀತಿ ತೋರಿಸಿದರೆ ಮುಜುಗರವಾಗುವುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವಾಗಬಹುದು. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗುವಿರಿ. ನಿಮ್ಮ ಆದಾಯವನ್ನು ಅಳೆಯಬಹುದು. ಪ್ರೇಯಸಿಯನ್ನು ದೂರಮಾಡಿಕೊಂಡು ಸಂಕಟಪಡುವ ಸಾಧ್ಯತೆ ಇದೆ. ಯಾರಾದರೂ ಸತ್ಯಾನ್ವೇಷಣ ಹಾದಿಯನ್ನು ತಪದಪಿಸುವರು. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಇಂದು ಒಂದು ಅವಕಾಶ ಸಿಗಲಿದೆ. ಯಾರಾದರೂ ನಿಮಗೆ ಉತ್ತಮ ಮಾರ್ಗದರ್ಶನವನ್ನು ಮಾಡಬಹುದು. ಬಂಧುಗಳ ಜೊತೆ ಬಿಚ್ಚುಮನಸ್ಸಿನಿಂದ ಮಾತನಾಡಲಾರಿರಿ. ನಿಮ್ಮ ಅನುಭವದ ಆಧಾರದ ಮೇಲೆ ಕೆಲಸವು ಇರಲಿದೆ. ಯಂತ್ರೋಪಕರಣಗಳ ವಿಚಾರದಲ್ಲಿ ನೀವು ಜಾಗರೂಕರಾಗಿರುವುದು ಮುಖ್ಯ. ವಿದೇಶಿ ಕಂಪೆನಿ ಉದ್ಯೋಗವನ್ನು ಬಯಸುವಿರಿ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು.
ಕರ್ಕಾಟಕ ರಾಶಿ :
ತುರ್ತು ಮನೆಯ ಹುಡುಕಾಟದಲ್ಲಿದ್ದು ಸಮಾಧಾನ ಸಿಗದು. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದು ಇಷ್ಟವಾಗುವುದು. ಇಂದು ನಿಮ್ಮ ಪ್ರೇಮವು ಸ್ನೇಹಿತರ ಮೂಲಕ ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸುವರು. ಸಾಲವನ್ನು ಮುಕ್ತಾಯ ಮಾಡಿಕೊಂಡು ಸಂತೃಪ್ತಿ ಆಗುವುದು. ವ್ಯಾಪಾರದ ಉದ್ದೇಶಕ್ಕೆ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ನಿಮ್ಮ ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು. ಶೀಘ್ರ ಆದಾಯದ ಕೃಷಿಯ ಯೋಜನೆ. ನಿಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ನಿಮ್ಮ ವೃತ್ತಿ, ಹಣಕಾಸಿನ ವಿಚಾರಕ್ಕೆ ಬಂದಾಗ ನೀವು ಬಹಳ ದುರ್ಬಲರಾಗುವಿರಿ. ಅಪರಿಚಿತರ ಬಗ್ಗೆ ಎಚ್ಚರಿಕೆ ಅವಶ್ಯಕ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ಬಂಧುಗಳ ಟೀಕೆಗೆ ನೀವು ಸೊಪ್ಪುಹಾಕಲಾರಿರಿ. ಕಾರ್ಯದಲ್ಲಿ ಇನ್ನೊಬ್ಬರ ಸಹಾಯವನ್ನು ಬಯಸುವಿರಿ.
ಸಿಂಹ ರಾಶಿ :
ಪರ್ಯಾಯ ವ್ಯವಸ್ಥೆಯನ್ನು ಇಟ್ಟುಕೊಳ್ಳದೆ ಯೋಜನೆ ಹಾಳಾಗುವುದು. ನಿಮ್ಮ ಉದ್ಯೋಗದ ನಿಷ್ಠೆಯು ಮೇಲಧಿಕಾರಿಗಳಿಗೆ . ಇಂದು ನೀವು ನಿಶ್ಚಿಂತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳುವಿರಿ. ಸಾಲವನ್ನು ನೆನೆಸಿಕೊಂಡು ನೀವು ಬಹಳ ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಬಂಧುಗಳ ಅಸಹಜವಾದ ಮಾತನ್ನು ತಿರಸ್ಕರಿಸುವಿರಿ. ನಿಮ್ಮ ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಮನೆಯಿಂದ ದೂರ ಇರವ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದು. ಕುಟುಂಬದಲ್ಲಿ ನೀವು ಗಂಭೀರವಾದ ವಿವಾದಗಳನ್ನು ಮಾಡುವಿರಿ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಲಿದೆ. ಒತ್ತಡವಿಲ್ಲದೆ ಇಂದು ನಿಮ್ಮ ದಿನವನ್ನು ಆನಂದಿಸಲು ಪ್ರಯತ್ನಿಸಿ. ಶುಚಿತ್ವಕ್ಕೆ ಆದ್ಯತೆ ಹೆಚ್ಚಾಗುವುದು. ನಿಮ್ಮ ನಿಮ್ಮ ಒತ್ತಡವನ್ನು ಇತರರ ಸಹಾಯದಿಂದ ಕಡಿಮೆಮಾಡಿಕೊಳ್ಳಲು ಸಾಧ್ಯ. ಸಾಮಾಜಿಕವಾಗಿ ಏನನ್ನಾದರೂ ಮಾಡಬೇಕು ಎಂದೆನಿಸಬಹುದು.
ಕನ್ಯಾ ರಾಶಿ :
ನಿಮ್ಮ ಇಂದಿನ ಉತ್ಸಾಹಕ್ಕೆ ಅನ್ಯರ ದೃಷ್ಟಿಯಾಗುವ ಸಂಭವಿದೆ. ಯಾವ ಒಪ್ಪಂದವನ್ನೂ ಬಾಯಿ ಮಾತಿನಲ್ಲಿ ಮಾಡಿಕೊಳ್ಳಬೇಡಿ. ನೀವು ಇಂದು ಆಪ್ತರನ್ನೇ ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ಸ್ಥಿರಾಸ್ತಿಯಲ್ಲಿ ಹೆಚ್ಚು ಲಾಭವನ್ನು ಪಡೆಯಲು ನೀವು ಯೋಚಿಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದುವಾಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಅನ್ಯರ ಬೆಂಬಲ ಸಿಗಲಿದೆ. ಇಂದು ನೀವು ಲವಲವಿಕೆಯಿಂದ ಇದ್ದು ಇನ್ನೊಬ್ಬರನ್ನೂ ಹಾಗೆ ನೋಡಿಕೊಳ್ಳುವಿರಿ. ಆಕರ್ಷಣೆಯು ನಿಮ್ಮನ್ನು ಸ್ವತಂತ್ರವಾಗಿ ಇರಲು ಬಿಡದು. ಶೈಕ್ಷಣಿಕ ಪ್ರಗತಿಯಿಂದ ನಿಮಗೆ ಉತ್ತಮ ಅವಕಾಶಗಳು ಲಭ್ಯವಾಗುವುವು. ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ಖರ್ಚು ಮಾಡುವ ಮನಸ್ಸು ಬಾರದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಹೆಣ್ಣುಮಕ್ಕಳ ಬಗ್ಗೆ ನಿಮಗೆ ಅತಿಯಾದ ಕನಿಕರ ಇರುವುದು. ಉದ್ವೇಗದಿಂದ ಸಿಟ್ಟುಗೊಂಡು ಎಲ್ಲರಿಗೂ ಅಪ್ರಿಯರಾಗುವಿರಿ.
ತುಲಾ ರಾಶಿ :
ದುರಭ್ಯಾಸ ಮಿತಿಮೀರಿದ ಅನಿಭವವಾಗಲಿದೆ. ವ್ಯವಸ್ಥೆಯು ಅಸ್ತವ್ಯಸ್ತವಾಗುವ ತನಕ ಅದನ್ನು ಬಿಡುವುದು ಬೇಡ. ಇಂದು ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ನೀವು ತೆಗೆದುಕೊಳ್ಳಬೇಡ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವ ಮನಃಸ್ಥಿತಿಯನ್ನು ಹೊಂದುವಿರಿ. ನೀವು ಸಭ್ಯರಂತೆ ಕಂಡರೂ ಯಾರೂ ನಂಬಲಾರರು. ಉತ್ಪನ್ನಗಳ ಪ್ರಸಾರಕ್ಕೆ ವಿಶೇಷ ಪ್ರಯತ್ನ ಮಾಡಲಾರಿರಿ. ನಿಮ್ಮ ಇಂದಿನ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖ ಕೊಡುವುದು. ಸಂಗಾತಿಯಿಂದ ನೀವು ಬೇಸರವನ್ನು ಅನುಭವಿಸಬೇಕಸದೀತು. ನಿಮ್ಮ ಇಂದಿನ ಕೆಲಸಗಳು ಹೆಚ್ಚು ಸಮಾಧಾನವನ್ನು ತರುವುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ನಿಮ್ಮ ಗೊಂದಲಗಳಿಗೆ ಉತ್ತರವನ್ನು ನೀವೇ ಕಂಡುಕೊಳ್ಳುವಿರಿ. ಬೆಲೆಬಾಳುವ ವಸ್ತುಗಳ ಖರೀದಿಯಿಂದ ಆರ್ಥಿಕ ಹೊರೆಯಾಗುವುದು. ಉದ್ಯೋಗದ ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ.
ವೃಶ್ಚಿಕ ರಾಶಿ :
ಮಕ್ಕಳ ಸಂಸ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವಿರಿ. ಕೌಟುಂಬಿಕ ವಾತಾವರಣವನ್ನು ನೀವು ಸಂತೋಷದಿಂದ ಅನುಭವಿಸುವಿರಿ. ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತನೆ ಆರಂಭವಾಗಲಿದೆ. ನಿಮ್ಮ ಸ್ಥಿರಾಸ್ತಿಯ ಬಗ್ಗೆ ಶಂಕೆ ಇರುವುದು. ನಿಮ್ಮ ಸುತ್ತಮುತ್ತಲಿನವರು ನಿಮಗೆ ತೊಂದರೆ ಕೊಡಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆಯುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಉದ್ಯೋಗದ ಅನುಭವ ಹೊಸ ದಿಕ್ಕನ್ನು ನೀಡುವುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಕಾರ್ಯದಲ್ಲಿ ಉತ್ಸಾಹವನ್ನು ತೋರಿಸುವರು. ನೀವು ಇಂದು ಆಸ್ತಿಕತೆಯನ್ನು ರೂಢಿಸಿಕೊಳ್ಳುವಿರಿ. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.
ಧನು ರಾಶಿ :
ಇಂದು ಕಾನೂನಾತ್ಮಕ ಕಾರ್ಯಗಳ ಮರ್ಮವನ್ನು ಆಪ್ತರಿಂದ ತಿಳಿಯುವಿರಿ. ನಿಮ್ಮ ಬೆಳವಣಿಕೆಗೆಯು ಸಾತ್ತ್ವಿಕ ರೀತಿಯಲ್ಲಿ ಇರಲಿ. ಇಂದು ಸಿಟ್ಟಿನ ಭರದಲ್ಲಿ ನೀವು ವಿವೇಚನೆಯನ್ನು ಕಳೆದುಕೊಳ್ಳುವಿರಿ. ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ಪ್ರೀತಿಯಿಂದ ಕೊಟ್ಟ ಹಣವನ್ನು ನೀವು ಕೇಳುವುದರೊಳಗೆ ಹಿಂದಿರುಗಿಸಿ. ವಾಸದ ಸ್ಥಳವನ್ನು ನೀವು ಬದಲಾಯಿಸುವಿರಿ. ನೀವು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದೀತು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಕೌಟುಂಬಿಕ ಸಂಘರ್ಷಕ್ಕೆ ದಾರಿ ಮಾಡುವುದು ಬೇಡ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ಷ್ಮ ವಿವೇಕದ ಅಗತ್ಯತೆ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸಬಹುದು. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಕಳೆದುಕೊಂಡಿದ್ದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವಿರಿ.
ಮಕರ ರಾಶಿ :
ಇಂದು ಜೀವನಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ಕೆಲವು ತೊಂದರೆಗಳು ಎದುರಾಗುವುದು. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಅಧಿಕವಾಗಿ ಇರಲಿದೆ. ಮಿತ್ರರು ನಿಮ್ಮ ಸಹಾಯಕ್ಕೆ ಬರುವರು. ಅನನುಕೂಲತೆಯನ್ನು ನೀವು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ನಿಮಗೆ ಆತ್ಮಾಭಿಮಾನದಿಂದ ನಿಮಗೇ ತೊಂದರೇ ಇಂದಿನ ದಿನವನ್ನು ಆನಂದಿಸಲು, ನಿಮ್ಮ ಜವಾಬ್ದಾರಿಗಳನ್ನು ಪೂರೈಸುವತ್ತ ಗಮನವಿರಲಿ. ವ್ಯಾಪಾರದ ಲಾಭಾಂಶವನ್ನು ಸದ್ವಿನಿಯೋಗ ಮಾಡುವಿರಿ. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನೀವು ಎಲ್ಲವನ್ನೂ ಪ್ರಾಯೋಗಿಕ ಹಿನ್ನೆಲೆಯಲ್ಲಿ ನೋಡುವಿರಿ. ನೀವು ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ. ಕೆಲವು ಸವಾಲುಗಳು ಉದ್ಭವಿಸಬಹುದು. ನಿಮ್ಮ ವಿವಾಹವು ಕಾನೂನು ವಿವಾದದ ವಿಷಯವಾಗಿದ್ದರೆ, ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಪ್ರಯೋಗ ವಿಭಾಗದಲ್ಲಿ ಕೆಲಸ ಮಾಡುವರು.
ಕುಂಭ ರಾಶಿ :
ಆರೋಗ್ಯವು ಆಹಾರಾಧೀನವಾಗಿದ್ದು ರೋಗಕ್ಕೆ ಪೂರಕವಾದುದನ್ನು ಸೇವಿಸಲು ಇಷ್ಟಪಡಬೇಡಿ. ಪರಧನದಿಂದ ನಿಮಗೆ ಹಿಂಜರಿಕೆ ಇರಲಿದೆ. ಹೂಡಿಕೆಯ ಕಾರಣದಿಂದ ನಿಮ್ಮ ಖರ್ಚನ್ನು ಆದಾಯವಾಗಿ ಪರಿವರ್ತಿಸಲು ಮಾಡಿಕೊಳ್ಳುವಿರಿ. ಹಳೆಯ ರೋಗವು ಮರುಕಳಿಸಬಹುದು. ವಿದೇಶದ ವ್ಯಾಪಾರವನ್ನು ಮಾಡುವವರಿಗೆ ಶುಭ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಆರ್ಥಿಕಗೊಂದಲವನ್ನು ಪರಿಹರಿಸಲು ಹೆಚ್ಚು ಶ್ರಮ. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಸಂಗಾತಿಯಿಂದ ನಿಮಗೆ ಬೇಸರವಾಗಲಿದೆ. ಎಲ್ಲಿಗಾದರೂ ಹೂಡಿಕೆ ಮಾಡುವಾಗ ಜನರ ಅಭಿಪ್ರಾಯವನ್ನು ಪಡೆಯಿರಿ. ಇದು ನಿಮಗೆ ಸಂತೋಷವೂ ಆಗಲಿದೆ. ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ಕಾರಣವಾಗಬಹುದು. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು.
ಮೀನ ರಾಶಿ :
ಸಂಘಟನೆಯ ಮಹತ್ವವು ನಿಮ್ಮಿಂದ ಇತರರಿಗೆ ಗೊತ್ತಾಗುವುದು. ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಮಾಡಬಹುದು. ಸಣ್ಣಮಟ್ಟಿನ ಗೌರವವು ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿಯು ಇರಲಿದ್ದು, ನೀವು ತೊಡಗಿಕೊಳ್ಳುವಿರಿ. ನಿಮ್ಮ ಮಾತುಗಳು ವಿಶ್ವಾಸಾರ್ಹವಾಗಿಯೂ ಇರಲಿ. ಮಾನಸಿಕ ಅಸ್ಥಿರತೆಯನ್ನು ನೀವು ನಿಯಂತ್ರ ಮಾಡಬೇಕಾಗುವುದು. ನೀವು ಸ್ಪರ್ಧೆಯಲ್ಲಿ ಜಯಗಳಿಸಲು ಬಹಳ ಪ್ರಯತ್ನವನ್ನು ಮಾಡುವಿರಿ. ಕಾನೂನುಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಭವಿಷ್ಯದ ಕುರಿತಂತೆ ನಿಮ್ಮ ಉದ್ದೇಶವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಇಂದು ನಿಮಗೆ ಆತ್ಮತೃಪ್ತಿಯು ಇರುವುದು. ಯಾವುದನ್ನಾದರೂ ನಂಬಿಕಸ್ಥರ ಜೊತೆ ವ್ಯವಹರಿಸಿ.
– ಲೋಹಿತ ಹೆಬ್ಬಾರ್ – 8762924271 (what’s app only)




