Horoscope: ರಾಶಿಭವಿಷ್ಯ, ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವು ಬರಬಹುದು

ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವು ಬರಬಹುದು
ದಿನಭವಿಷ್ಯImage Credit source: iStock Photo
Follow us
| Edited By: Rakesh Nayak Manchi

Updated on: Nov 22, 2023 | 12:15 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಧ್ರುವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:44ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:03 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:19ರ ವರೆಗೆ.

ಮೇಷ ರಾಶಿ: ಭವಿಷ್ಯದ ಬಗ್ಗೆ ನಿಮಗೆ ಅತಿಯಾದ ಗಂಭೀರತೆ ಇರದು.‌ ಎಲ್ಲವನ್ನೂ ಖುಷಿಯಿಂದ ಕಳೆಯುವ ಆಲೋಚನೆ ಇರಲಿದೆ. ನಿಮಗೆ ಕೊಟ್ಟಿದ್ದನ್ನು ಮರಳಿ ಕೊಡುವಿರಿ.‌ ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಚಾತುರ್ಯದಿಂದ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯಕ ಬೇಕು. ಹೊಸ ಉದ್ಯಮಕ್ಕೆ ಅವಕಾಶವು ಸಿಗಬಹುದು. ವಿವಾಹದ ವಿಚಾರದಲ್ಲಿ ಒಳ್ಳೆಯದಾಗುವುದು. ನಿಮ್ಮ‌ ಮೇಲೆ‌ ನಿಮಗೆ ಪೂರ್ಣ ವಿಶ್ವಾಸವಿರದು.

ವೃಷಭ ರಾಶಿ: ನಿಶ್ಚಯವಾದ ವಿವಾಹವು ಹಿತಶತ್ರುಗಳಿಂದ ತಪ್ಪಬಹುದು. ವಸ್ತುವನ್ನು ಕಳೆದುಕೊಳ್ಳುವಿರಿ. ಯಾವುದನ್ನೂ ನೀವು ನಿಶ್ಚಿತವಾಗಿ ಮಾಡಲಾರಿರಿ. ನಿಮ್ಮದಾದ ಸ್ವಂತ ಉದ್ಯೋಗವನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮರ ಬಗ್ಗೆ ನಿಮಗೆ ಸಕಾರಾತ್ಮ‌ಕ‌ ಭಾವವು ಇರದು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವು ಬರಬಹುದು. ನಿಮ್ಮ ಸ್ವಭಾವವನ್ನು ಬೇಕೆಂದೇ ಬದಲಿಸಿಕೊಳ್ಳುವಿರಿ. ಚಿಂತೆಯಿಂದ ನಿದ್ರೆಯು ಬಾರದು.

ಮಿಥುನ ರಾಶಿ: ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪೂರ್ಣ ಪ್ರಮಾಣದ ತೊಡಗುವಿಕೆ ಇದ್ದರೂ ಫಲಿತಾಂಶವು ಅಷ್ಟಾಗಿ ಸಿಗದು. ಸಾಮಾಜಿಕ ತಾಣದಿಂದ ಯಾರದ್ದಾದರೂ ಪರಿಚಯವಾದೀತು. ನಿಮ್ಮ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಅಗಬೇಕಾದ ಕಾರ್ಯಕ್ಕೆ ಒತ್ತಡವನ್ನು ಹೇರಿ ಮಾಡಿಸಿಕೊಳ್ಳುವಿರಿ. ಸಂಗಾತಿಯ ಆದಾಯವನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗುವುದು.

ಕಟಕ ರಾಶಿ: ಪ್ರೀತಿಯಲ್ಲಿ ಇದ್ದುಕೊಂಡು ನಿಮ್ಮ ಆರ್ಥಿಕ‌ಸ್ಥಿತಿಯನ್ನು ಹಾಳುಮಾಡಿಕೊಳ್ಳುವಿರಿ. ಅಕಾಸ್ಮಾತ್ ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಂಕುಚಿತವಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಹಾಗೂ ಅಪವಾದವನ್ನು ಮಾಡುವ ಸನ್ನಿವೇಶವು ಬರಬಹುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಅಲ್ಪ ಸಿಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​