ನಿಮ್ಮ ಮದುವೆ ಯಾವಾಗ? ವೈವಾಹಿಕ ಜೀವನ ಹೇಗಿರುತ್ತೆ.. ವಿವಾಹ ರೇಖೆಯ ಮೂಲಕ ತಿಳಿಯಬಹುದು ಮದುವೆ ರಹಸ್ಯ

| Updated By: Digi Tech Desk

Updated on: Jun 09, 2021 | 6:51 PM

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ನೀಡಲಾಗಿರುವ ಫೋಟೋದಲ್ಲಿ ನೀವು ನೋಡುವಂತೆ, ಮದುವೆಯ ರೇಖೆ ನಿಮ್ಮ ಕೈಯ ಅತಿ ಸಣ್ಣ ಬೆರಳಿನ ಕೆಳಗೆ ಇರುತ್ತದೆ. ಕೆಲವೊಮ್ಮೆ ಅದು ಒಂದು ರೇಖೆ ಇದ್ದರೆ ಕೆಲವರಿಗೆ ಎರಡು ರೇಖೆ ಇರುತ್ತದೆ. ಇದರರ್ಥ ನೀವು ಎರಡು ಮದುವೆಗಳನ್ನು ಆಗುತ್ತಿರಿ ಎಂದಲ್ಲ. ವಾಸ್ತವವಾಗಿ, ಈ ಎರಡನೇ ಸಾಲು ನಿಮ್ಮ ಸಂಬಂಧದ ಬಗ್ಗೆ ಹೇಳುತ್ತದೆ.

ನಿಮ್ಮ ಮದುವೆ ಯಾವಾಗ? ವೈವಾಹಿಕ ಜೀವನ ಹೇಗಿರುತ್ತೆ.. ವಿವಾಹ ರೇಖೆಯ ಮೂಲಕ ತಿಳಿಯಬಹುದು ಮದುವೆ ರಹಸ್ಯ
ನಿಮ್ಮ ಮದುವೆ ಯಾವಾಗ? ವೈವಾಹಿಕ ಜೀವನ ಹೇಗಿರುತ್ತೆ..
Follow us on

ನಮ್ಮ ದೇಹದ ಅನೇಕ ಅಂಗಗಳಿಂದ ನಮ್ಮ ಅದೃಷ್ಟ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಹಲವು ರಹಸ್ಯಗಳನ್ನು ತಿಳಿಯಬವುದು. ಜ್ಯೋತಿಷ್ಯದಲ್ಲಿ ಹಸ್ತಸಾಮುದ್ರಿಕೆಗೆ ಬಹಳ ಮುಖ್ಯವಾದ ಸ್ಥಾನವನ್ನು ನೀಡಲಾಗಿದೆ. ಯಾವುದೇ ವ್ಯಕ್ತಿಯ ಅಂಗೈನಲ್ಲಿರುವ ರೇಖೆಗಳ ಮೂಲಕ ಆ ವ್ಯಕ್ತಿಯ ಅದೃಷ್ಟ ಹೇಗಿದೆ ಮತ್ತು ಅವನ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಇಂದು ನಾವು ನಿಮಗೆ ಹಸ್ತ ನೋಡುವ ಮೂಲಕ ವಿವಾಹದ ತಡೆತಡೆ ಬಗ್ಗೆ ವಿಶೇಷ ವಿಷಯಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುವುದನ್ನು ಹೇಳಲಿದ್ದೇವೆ. ಕೆಲವು ಕಾರಣಗಳಿಂದಾಗಿ ನಿಮ್ಮ ಮದುವೆಯಲ್ಲಿ ವಿಳಂಬವಾಗುತ್ತಿರಬಹುದು. ಆದರೆ ಚಿಂತಿಸಬೇಡಿ ವಿಳಂಬವೆಂದರೆ ನೀವು ಮದುವೆಯೇ ಆಗುವುದಿಲ್ಲ ಎಂದು ಅರ್ಥವಲ್ಲ.

ಮದುವೆ ಯಾವಾಗ ಆಗುವುದು ಎಂದು ತಿಳಿದುಕೊಳ್ಳುವುದು ಹೇಗೆ?
ಮದುವೆಯಾಗಬೇಕೆ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ವ್ಯಕ್ತಿಗೆ ಬಿಟ್ಟದ್ದು, ಆದರೆ, ಮದುವೆ ವಿಳಂಬವಾಗುವುದು ಕೂಡ ಒಂದು ಬಳ್ಳೆಯ ಸಂಗತಿ ಅದು ನಿಮ್ಮ ಅದೃಷ್ಟಕ್ಕೆ ಬಿಟ್ಟಿದ್ದು. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುವುದನ್ನು ಯಾರು ತಡೆಯಲಾರರು. ಹೀಗಾಗಿ ನೀವು ಯಾವಾಗ ಮದುವೆಯಾಗುತ್ತೀರಿ ಮತ್ತು ನಿಮ್ಮ ವೈವಾಹಿಕ ಜೀವನ ಹೇಗಿರುತ್ತದೆ ಎಂದು ಇಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಮದುವೆಯ ರೇಖೆಯ ಬಗ್ಗೆ ತಿಳಿದುಕೊಳ್ಳುವ ಮೊದಲು, ಒಬ್ಬ ಅನುಭವಿ ಜ್ಯೋತಿಷಿ ಮಾತ್ರ ನಿಮ್ಮ ಅಂಗೈಯನ್ನು ನೋಡುವ ಮೂಲಕ ನಿಖರವಾದ ಮಾಹಿತಿಯನ್ನು ನೀಡಬಹುದು ಎಂಬುದನ್ನು ನೆನಪಿನಲ್ಲಿಟ್ಟಿಕೊಳ್ಳಿ.

ಹಸ್ತದಲ್ಲಿ ಎಲ್ಲಿರುತ್ತೆ ಮದುವೆ ರೇಖೆ
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ನೀಡಲಾಗಿರುವ ಫೋಟೋದಲ್ಲಿ ನೀವು ನೋಡುವಂತೆ, ಮದುವೆಯ ರೇಖೆ ನಿಮ್ಮ ಕೈಯ ಅತಿ ಸಣ್ಣ ಬೆರಳಿನ ಕೆಳಗೆ ಇರುತ್ತದೆ. ಕೆಲವೊಮ್ಮೆ ಅದು ಒಂದು ರೇಖೆ ಇದ್ದರೆ ಕೆಲವರಿಗೆ ಎರಡು ರೇಖೆ ಇರುತ್ತದೆ. ಇದರರ್ಥ ನೀವು ಎರಡು ಮದುವೆಗಳನ್ನು ಆಗುತ್ತಿರಿ ಎಂದಲ್ಲ. ವಾಸ್ತವವಾಗಿ, ಈ ಎರಡನೇ ಸಾಲು ನಿಮ್ಮ ಸಂಬಂಧದ ಬಗ್ಗೆ ಹೇಳುತ್ತದೆ. ತಜ್ಞರ ಪ್ರಕಾರ, ಮದುವೆ ರೇಖೆ ಮತ್ತು ಹೃದಯದ ರೇಖೆ ಹತ್ತಿರವಾದರೆ, ಬೇಗ ಮದುವೆ ನಡೆಯುತ್ತದೆ. ಹಾಗೂ ಅನೇಕರಿಗೆ ಮದುವೆ ರೇಖೆ ಮತ್ತು ಹೃದಯದ ರೇಖೆ ಬಹಳ ದೂರದಲ್ಲಿರುತ್ತದೆ. ಹೀಗಾಗಿ ಅಂತ ಜನರ ವಿವಾಹ ವಿಳಂಬವಾಗುತ್ತವೆ.

ವಿವಾಹ ರೇಖೆಯು ವೈವಾಹಿಕ ಜೀವನದ ರಹಸ್ಯ ಹೇಳುತ್ತದೆ
ನಿಮ್ಮ ಮದುವೆ ರೇಖೆಯು ಕೈಯಿಂದ ಹೊರಟು ಕೆಳಕ್ಕೆ ಹೋಗುತ್ತಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಇದಲ್ಲದೆ, ನಿಮ್ಮ ಮದುವೆ ರೇಖೆಯ ಆರಂಭದಲ್ಲೇ ಎರಡು ಭಾಗಗಳಾಗಿದ್ದರೆ ಭವಿಷ್ಯದಲ್ಲಿ ನಿಮ್ಮ ಮದುವೆ ಮುರಿಯಬಹುದು ಎಂದು ಹೇಳಲಾಗುತ್ತೆ. ಇದರ ಜೊತೆಗೆ ನಿಮ್ಮ ವಿವಾಹದ ರೇಖೆಯನ್ನು ಬೇರೆ ಯಾವುದೇ ರೇಖೆಯು ದಾಟುತ್ತಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಹೇಳಲಾಗುತ್ತೆ.

ಇದನ್ನೂ ಓದಿ: ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು.. ಹೇಗೆ ಎಂಬುವುದನ್ನು ಇಲ್ಲಿ ತಿಳಿಯಿರಿ

Published On - 10:36 am, Wed, 9 June 21