Horoscope: ಆರ್ಥಿಕ ವಿಚಾರದಲ್ಲಿ ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ
27 ಜನವರಿ 2025: ಸೋಮವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಬಹಳ ಚಂಚಲದಿಂದ ಇರುವ ಮನಸ್ಸಿಗೆ ಯಾವುದಾದರೂ ಇಷ್ಟವಾದ ವಿಷಯವನ್ನು ಕೊಟ್ಟು ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ಹಾಗಾದರೆ ಜನವರಿ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08: 28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:20ರಿಂದ 12:46 ರವರೆಗೆ, ಗುಳಿಕ ಮಧ್ಯಾಹ್ನ 02:11 ರಿಂದ 03:37 ರವರೆಗೆ.
ತುಲಾ ರಾಶಿ: ಹೊಸ ಮನೆಯ ಪ್ರವೇಶಕ್ಕೆ ನಿಮ್ಮ ಎಲ್ಲ ಶಕ್ತಿ ಸಮಯಗಳು ಕೇಂದ್ರೀಕೃತವಾಗಿದೆ. ಸದ್ದಿಲ್ಲದೇ ನಿಮಗೆ ಅಗತ್ಯವಿರುವ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಇಂದು ಸಂಘಟನೆ ಮತ್ತು ಪ್ರಾಯೋಗಿಕತೆಯ ಮೇಲೆ ಕೇಂದ್ರೀಕರಿಸಿ. ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳ ಜೊತೆ ಬಾಕಿ ಉಳಿದಿರುವ ಕಾರ್ಯಗಳನ್ನು ನಿಭಾಯಿಸಿ ಮತ್ತು ಒತ್ತಡವನ್ನು ನಿವಾರಿಸಲು ಸಾವಧಾನತೆ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು. ನಿಮ್ಮ ಹಳೆಯ ಖಾಯಿಲೆಗೆ ಔಷಧವು ಹುಡುಕಿಕೊಳ್ಳುವಿರಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ಸಂಕಷ್ಟಕ್ಕೆ ಈಡಾಗುವಿರಿ. ಆರ್ಥಿಕ ವೆಚ್ಚಕ್ಕೆ ನೀವು ಕಡಿವಾಣ ಹಾಕಿಕೊಳ್ಳಬೇಕಾದೀತು.
ವೃಶ್ಚಿಕ ರಾಶಿ; ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡುವಷ್ಟು ಸಮಯವು ಇಂದು ನಿಮ್ಮ ಬಳಿ ಇಲ್ಲದೇ ಹೋಗಬಹುದು. ಏನೂ ಆಗಲಿಲ್ಲ ಎನ್ನುವ ಬದಲು ಆದ ಕಾರ್ಯ ದ ಬಗ್ಗೆ ಸಮಾಧಾನ ಬೇಕು. ನಿಮ್ಮ ವರ್ಚಸ್ಸು ಇಂದು ಉತ್ತುಂಗಕ್ಕೇರಿದೆ, ಇದು ಸಾಮಾಜಿಕ ಸಂವಹನಗಳಿಗೆ ಉತ್ತಮ ಸಹಕಾರಿಯಾಗುವುದು. ನಿಮ್ಮ ಶಕ್ತಿಯನ್ನು ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿ ಮತ್ತು ಪ್ರೀತಿಪಾತ್ರರ ಜೊತೆ ವಿಶೇಷ ಚಟುವಟಿಕೆಯಿಂದ ದಿನವನ್ನು ಕಳೆಯುವಿರಿ. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾದೀತು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ಅಪರೂಪದ ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಇಂದು ನೀವು ಗಟ್ಟಿ ಮನಸ್ಸಿನಿಂದ ಹೋದರೂ ಕಛೇರಿಯಿಂದ ನಿಮಗೆ ಕೆಲವು ಕಹಿ ಅನುಭವವನ್ನು ಕೊಟ್ಟೀತು. ವ್ಯಾವಹಾರಿಕ ಮನಃಸ್ಥಿತಿಯಿಂದ ಎಲ್ಲವನ್ನೂ ಅಳೆಯುವುದು ಬೇಡ. ನಿಮ್ಮ ಅಸಹಜ ನಡೆಯನ್ನು ನಿಮ್ಮವರು ಒಪ್ಪಿಕೊಳ್ಳಲಾರರು. ಗುಂಪುಗಾರಿಕೆಯಿಂದ ವೈಯಕ್ತಿಕ ಕಾರ್ಯ ಅಸಾಧ್ಯ.
ಧನು ರಾಶಿ: ಧನದ ಸಂಪಾದನೆಯು ಅನಿವಾರ್ಯವಾದ ಕಾರಣ ಬರುವ ಎಲ್ಲ ಕಾರ್ಯವನ್ನೂ ಬಿಡದೇ ಮಾಡುವಿರಿ. ಇಂದು ತೀವ್ರವಾದ ಭಾವನೆಗಳು ನಿಮಲ್ಲಿ ಕಾಣಿಸಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಜೀವನದಲ್ಲಿ ಸಮತೋಲನವನ್ನು ಸಾಧಿಸುವ ಬಗ್ಗೆ ಹುಡುಕಾಟ ಇರುವುದು. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಭಾವನೆಗಳಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬಂದರೂ ಸಮಯೋಚಿತವಾಗಿರಲಿ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದ್ದು ಲಾಭವನ್ನು ಹೆಚ್ಚುಪಡೆಯುವಿರಿ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವಿರಿ.
ಮಕರ ರಾಶಿ: ನಿಮ್ಮ ದುರರ್ಭ್ಯಾಸದ ಬಗ್ಗೆ ನಿಮಗೆ ಕುಟುಂಬಕ್ಕೆ ಅಸಮಾಧಾನ ಉಂಟಾಗಬಹುದು. ಸಂಬಂಧಿಕರಿಂದ ಅನಿರೀಕ್ಷಿತ ಆನಂದವು ಸಿಗುವುದು. ಇಂದು ನಿಮ್ಮ ಆರೋಗ್ಯಕ್ಕೆ ಗಮನ ಕೊಡಿ; ವಿಶ್ರಾಂತಿ ಮತ್ತು ನವ ಉತ್ಸಾಹ ಪಡೆಯುವುದು ಅವಶ್ಯಕ. ತಮ್ಮನ್ನು ತಾವು ಪ್ರಸ್ತುತಪಡಿಸಬಹುದಾದ ಹೊಸ ಹಣಕಾಸಿನ ಅವಕಾಶಗಳಿಗಾಗಿ ಎಚ್ಚರವಾಗಿರಿ. ಅತಿಯಾಗಿ ದಂಡನೆಗೆ ಒಳಪಡದ ಲಘು ವ್ಯಾಯಾಮ ಅಥವಾ ಧ್ಯಾನದಲ್ಲಿ ತೊಡಗುವುದರಿಂದ ನಿಮ್ಮ ಯೋಗಕ್ಷೇಮವನ್ನು ಹೆಚ್ಚಿಸಬಹುದು. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡಬೇಕಾದೀತು. ಒಂಟಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿನೆಯ ಕಾರಣ ನಿಮಗೆ ಎಲ್ಲರಿಂದ ಅಪಮಾನವಾಗಬಹುದು. ಕೆಲವು ಕೆಲಸಗಳನ್ನು ಕೈಬಿಡುವಿರಿ.
ಕುಂಭ ರಾಶಿ: ಬಹಳ ಚಂಚಲದಿಂದ ಇರುವ ಮನಸ್ಸಿಗೆ ಯಾವುದಾದರೂ ಇಷ್ಟವಾದ ವಿಷಯವನ್ನು ಕೊಟ್ಟು ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ಸಂಬಂಧಗಳು ನಿಮ್ಮ ಸಹಾಯಕ್ಕೆ ಬರಲಿವೆ. ಯಾವುದೇ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಮುಕ್ತ ಸಂವಹನವನ್ನು ಅಳವಡಿಸಿಕೊಳ್ಳುವಿರಿ. ಆರೋಗ್ಯಕರ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಆರ್ಥಿಕವಾಗಿ, ವಿವೇಕಯುತ ಯೋಜನೆ ಭವಿಷ್ಯದ ಭದ್ರತೆಗೆ ಕಾರಣವಾಗುತ್ತದೆ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಸದೀತು. ಕಛೇರಿಯಲ್ಲಿ ನಿಮಗೆ ವಹಿಸಿದ ಕೆಲಸವನ್ನು ಮಾಡದೇ ಮೇಲಧಿಕಾರಿಗಳು ಸಿಟ್ಟುಗೊಂಡಾರು.
ಮೀನ ರಾಶಿ: ಇಂದು ನೀವು ಸಂತೋಷವಾಗಿ ಇರಲು ಹಠದ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕ ವಿಷಯದಲ್ಲಿ ಸಂಗಾತಿಯ ಜೊತೆ ವಾಗ್ವಾದವು ಹೊಸ ರೂಪವನ್ನು ಪಡೆಯಬಹುದು. ಇಂದು ನಿಮ್ಮ ಸಂಬಂಧಗಳಲ್ಲಿ ಪ್ರಾಮಾಣಿಕತೆ ಅತ್ಯಗತ್ಯ. ಮುಕ್ತ ಸಂವಹನವು ಪ್ರೀತಿಪಾತ್ರರೊಂದಿಗಿನ ಬಂಧಗಳನ್ನು ಬಲಪಡಿಸುತ್ತದೆ. ಆರ್ಥಿಕವಾಗಿ, ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಮತ್ತು ಉಳಿತಾಯದತ್ತ ಗಮನ ಹರಿಸುವುದು ಜಾಣತನ. ವಿಶ್ರಾಂತಿ ಮತ್ತು ಮಾನಸಿಕ ಉಲ್ಲಾಸವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ. ಆಪ್ತರ ಜೊತೆ ಮಾತನಾಡಿ ನಿಮ್ಮ ಮನಸ್ಸಿನ ಭಾರವನ್ನೆಲ್ಲ ದೂರ ಮಾಡಿಕೊಳ್ಳುವಿರಿ. ನಿಮ್ಮ ನಿಯಮಗಳು ನಿಮಗೆ ತೊಂದರೆಯಾಗಬಹುದು.