ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಭರಣೀ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ ಮಧ್ಯಾಹ್ನ 12:17ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರವರೆಗೆ, ಗುಳಿಕ ಕಾಲ ಬೆಳಿಗ್ಗೆ 08:00ರಿಂದ 09:26 ರವರೆಗೆ.
ತುಲಾ ರಾಶಿ: ಕಾರ್ಯದಕ್ಷತೆಯಿಂದ ಬೀಗಬೇಕಾಗಿಲ್ಲ. ಆತ್ಮವಿಶ್ವಾಸ ಹೆಚ್ಚಾಗಬಹುದು. ಭೂಮಿಯ ಖರೀದಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೂ ಅದನದನು ನಿಮ್ಮದಾಗಿಸಿಕೊಳ್ಳುವುದು ಇಂದು ಕಷ್ಟ. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ವಿದೇಶದ ಪ್ರವಾಸದಲ್ಲಿ ಇರುವವರಿಗೆ ಅಪಾಯ ಕಾಣಿಸಿಕೊಳ್ಳುವುದು. ಬಂಧುಗಳು ನಿಮ್ಮನ್ನು ಬಹಳವಾಗಿ ದೂರುವರು. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಆಡಿಕೊಳ್ಳುವವರ ಮುಂದೆ ಮುಗ್ಗರಿಸಿ ಬೀಳಬಹುದು. ನಿಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವುದು ಉತ್ತಮ. ವಿವಾಹ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ. ನಿಮ್ಮನ್ನು ಇನ್ನೊಬ್ಬರು ಋಜುವಾತು ಮಾಡಬಹುದು.
ವೃಶ್ಚಿಕ ರಾಶಿ: ಮೇಲಧಿಕಾರಿಗಳ ಜೊತೆ ಸಿಟ್ಟಾಗುವ ಸಂದರ್ಭವಿದ್ದರೂ ತಾಳ್ಮೆಯನ್ನು ಕಂಡುಕೊಳ್ಳಿ. ಯಾರನ್ನೂ ನೀವು ಹೀಗೆ ಎಂದು ಫಲಕವನ್ನು ಅಂಟಿಸಲು ಸಾಧ್ಯವಾಗದು. ಇಂದು ನಿಮಗೆ ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಭೂಮಿಯ ಮಾರಾಟ ಮಾಡಿದ ಕಾರಣ ನಿಮ್ಮ ಜೀವನಕ್ಕೆ ಬೇಕಾದ ಸಂಪತ್ತು ಸಿಗಲಿದೆ. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಬಹುದು. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಸಹೋದ್ಯೋಗಿಗಳು ಅಹಂಕಾರವನ್ನು ತೋರಿಸುವರು. ನಿಮ್ಮ ಪಥದಲ್ಲಿ ನೀವಿರುವಿರಿ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.
ಧನು ರಾಶಿ: ಏನೇ ಬಂದರೂ ಎದುರಿಸುವ ಮನೋಭಾವ ಕಾಣಿಸುವುದು. ನಿಮ್ಮ ಕಾರ್ಯವನ್ನು ಮಾಡಲು ಒಂದೊಂದೆ ಕಾರಣವನ್ನು ಹೇಳುವಿರಿ. ನಿಮ್ಮ ಇಂದಿನ ಎಲ್ಲ ಕಾರ್ಯಗಳಿಗೂ ಟೀಕೆಗಳು ಇರಲಿದ್ದು, ಅದನ್ನು ಮನಸ್ಸಿಗೆ ತಂದುಕೊಳ್ಳುವಿರಿ. ವಿವಾಹ ಜೀವನವು ಕಷ್ಟ ಎನಿಸಬಹುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಆದಂತೆ ಎಂಬ ಭಾವನೆಯು ಬರುವ ಸಾಧ್ಯತೆ ಇದೆ. ಗುಣಾತ್ಮಕ ಚಿಂತನೆಯನ್ನು ಮಾಡಿ. ಏನೇ ಬಂದರೂ ಎಲ್ಲವೂ ವಿಧಿ ನಿಯಮ ಎಂಬ ನಿರ್ಧಾರಕ್ಕೆ ಬರುವಿರಿ. ನಿಮ್ಮ ದಿಟ್ಟತನವನ್ನು ಅಹಂಕಾರ ಎಂದುಕೊಳ್ಳಬಹುದು. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಸಾಧಿಸಬೇಕು ಎಂಬ ಮಹದಾಸೆ ಇದ್ದರೂ ಅದು ಕ್ಷಣಿಕವಾಗುವುದು. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಆಕಸ್ಮಿಕವಾಗಿ ಕೆಲವರನ್ನು ಕಳೆದುಕೊಳ್ಳುವಿರಿ. ಅಪರಿಚಿತರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು. ಅತಿ ಅವಸರದಿಂದ ಕೆಲಸವನ್ನು ಮಾಡುವಿರಿ.
ಮಕರ ರಾಶಿ: ಸಾಮಾಜಿಕ ವ್ಯವ್ಥೆಯಲ್ಲಿ ಪ್ರವೇಶ ಪಡೆಯುವಿರಿ. ಸಮಯವು ಸದುಪಯೋಗವಾಗಬೇಕಾದರೆ ಅದರ ಬಗ್ಗೆ ಪೂರ್ಣ ಗಮನಕೊಟ್ಟು ಸರಿಮಾಡಿಕೊಳ್ಳಿ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ಸಾಲ ಮಾಡಿ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಯೋಚನೆ ಇರುವುದು. ಉದ್ಯೋಗ ವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಆರೋಗ್ಯವನ್ನು ಸರಿಮಾಡಿಕೊಳ್ಳುವುದು ಪ್ರಾಮುಖ್ಯವಾಗಿರಲಿ. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಮನೆಯವರಿಗೆ ಹೆಚ್ಚು ಸಮಯವನ್ನು ಕೊಡುವಿರಿ. ನಂಬಿಕೆಯನ್ನು ಕಳೆದುಕೊಂಡವರ ಜೊತೆ ಪುನಃ ವ್ಯವಹಾರವು ಕಷ್ಟವಾದೀತು. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ಅಸೂಯೆಪಟ್ಟರೆ ನಿಮ್ಮನ್ನೇ ನೀವು ಸುಟ್ಟಕೊಂಡಂತೆ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.
ಕುಂಭ ರಾಶಿ: ಆಪ್ತರ ಬಗ್ಗೆ ಹೇಳಲಾರದ ದುಮ್ಮಾನಗಳು ನಿಮ್ಮೊಳಗೆ ತುಂಬಿಕೊಳ್ಳಬಹುದು. ನಿಮ್ಮ ನೋವನ್ನು ಸರಿಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಕಾಳಜಿ ಅಧಿಕವಾಗುವುದು. ನಿಮ್ಮ ಜನಪ್ರಿಯತೆಯು ನಿಮಗೆ ಖುಷಿ ಕೊಟ್ಟೀತು. ನಿಮ್ಮ ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುತ್ತಿರುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು. ಅಸಂಬದ್ಧ ಚರ್ಚೆಗಳಿಂದ ದೂರ ಇರುವಿರಿ. ಅಧಿಕಾರಿಗಳ ನಿಕಟ ಸಂಪರ್ಕವೇ ನಿಮಗೆ ಮುಳುವಾಗಬಹುದು. ಆಸ್ತಿಯ ವಿಚಾರಕ್ಕೆ ನೀವು ಯಾವ ತೀರ್ಮಾನಕ್ಕೂ ಬರಲಾಗದು. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಭಾವನಾತ್ಮಕವಾಗಿ ನಿಮಗೆ ಸೋಲಾಗುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ.
ಮೀನ ರಾಶಿ: ವಾಕ್ಚಾತುರ್ಯದಿಂದ ನೀವು ಎಲ್ಲರನ್ನು ಗೆಲ್ಲಬಹುದು. ನಿಮ್ಮ ಮನವನ್ನು ಒಲಿಸುವುದು ಕಷ್ಟ. ಯಾವುದೂ ನಿಮಗೆ ಸಮಾಧಾನ ಕೊಡದು. ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಹೆಚ್ಚಿನ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ರಿಸ್ಕ್ ಗಳು ಹೆಚ್ಚಿರಬಹುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನೀವು ಇರುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ಶರೀರ ಪೀಡೆಯು ಕಾಣಿಸಿಕೊಂಡೀತು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಹಣವನ್ನು ಪಡೆಯಲು ಓಡಾಟ ಮಾಡಬೇಕಾಗುವುದು.