AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನ ಸಿಗುವುದು

13 ಜನವರಿ​​ 2025: ಸೋಮವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದು ಕಾರ್ಯದ ಒತ್ತಡದ ಕಾರಣ ಮಧ್ಯದಲ್ಲಿ ನೀವು ಸಣ್ಣ ವಿಶ್ರಾಂತಿಯನ್ನು ಪಡೆಯುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಹಾಗಾದರೆ ಜನವರಿ 13ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನ ಸಿಗುವುದು
ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನ ಸಿಗುವುದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 13, 2025 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವೈಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:27 ರಿಂದ 09:52ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:17 ರಿಂದ ಮಧ್ಯಾಹ್ನ 12:42 ರವರೆಗೆ, ಗುಳಿಕ ಮಧ್ಯಹ್ನಾ 02:06 ರಿಂದ 03: 31 ರವರೆಗೆ.

ತುಲಾ ರಾಶಿ: ನಿಮ್ಮ ಸಲ್ಪ ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಬುದ್ಧಿಯ ಸ್ತಿಮಿತದಿಂದ ನೀವು ಎಲ್ಲವನ್ನೂ ಎಲ್ಲವನ್ನೂ ನಾಜೂಕಾಗಿ ಮುಗಿಸುವಿರಿ. ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಹೇಳಿಕೊಟ್ಟ ಮಾತು ಎಲ್ಲಿಯವರೆಗೆ ಇದ್ದೀತು. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಬೇಡ. ಸಣ್ಣ ವಿರಸವೂ ದೂರಾಗಲು ಕಾರಣವಾಗಬಹುದು. ದುಃಸ್ವಪ್ನವು ನಿಮ್ಮನ್ನು ಕಾಡಬಹುದು. ಸಮಾರಂಭಗಳಿಗೆ ಭೇಟಿ ಕೊಡುವಿರಿ.

ವೃಶ್ಚಿಕ ರಾಶಿ; ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡಿದ್ದು ಸರಿ ಎನಿಸದು. ಜಾಣ್ಮೆಯಿಂದ ನಿಮ್ಮವರನ್ನು ನಿಮ್ಮ ವಶ ಮಾಡಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮುಖ್ಯ ಕೆಲಸವನ್ನು ಮರೆಯಬಹುದು. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಯಾವ ಮಾರ್ಗದಿಂದ ಹಣ ಬಂದರೂ ಸ್ವೀಕರಿಸುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು. ಕಾರ್ಯವನ್ನೇ ಸರಿಯಾಗಿ ಮಾಡಿ ಆದಾಯವು ಹೆಚ್ಚಾಗುವಂತೆ ಮಾಡಿಕೊಳ್ಳಿ. ಇಂದು ಕೋಪವು ಬಂದರೂ ವ್ಯಕ್ತಪಡಿಸದೇ ಸುಮ್ಮನಿದ್ದು ನುಂಗಿಕೊಳ್ಳುವಿರಿ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವಿರದೇ ಸಂಪಾದನೆಯ ಕಡೆ ಗಮನ ಹೋಗುವುದು.

ಧನು ರಾಶಿ: ಭೂಮಿಯ ವಿಚಾರದಲ್ಲಿ ಶಾಂತವಾದ ಕಲಹವು ಮತ್ತಾವುದೋ ಕಾರಣಕ್ಕೆ ಆರಂಭವಾಗುವುದು. ನಕಾರಾತ್ಮಕ ವಿಚಾರಗಳು ನಿಮ್ಮ ಮನಸ್ಸನ್ನು ಕದಡಬಹುದು. ಎಲ್ಲರ ಮಾತಿಗೂ ಪ್ರತಿಕ್ರಿಯೆಯನ್ನು ಕೊಡಬೇಕೆಂದಿಲ್ಲ. ಮೌನವೂ ಉತ್ತರವಾದೀತು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಇಂದು ನಿಮ್ಮ ಮಾತಿನ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ವೇಗದ ನಡಿಗೆಯಿಂದ ಬೀಳುವಿರಿ. ನಿಮಗೆ ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸುವಿರಿ. ಸ್ತ್ರೀಯರಿಂದ ನಿಮಗೆ ಬೈಗುಳವು ಬರಲಿದೆ. ಅವಿವಾಹಿತರು ವಿವಾಹದ ಬಗ್ಗೆ ಮಾಡಿ ಪ್ರಯೋಜನವಾಗದು, ಕಾರ್ಯದಲ್ಲು ಪ್ರವೃತ್ತರಾಗಿ.‌ ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯಕ್ಕೆ ಜನಬೆಂಬಲವು ಸಿಗಬಹುದು. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಲಿದೆ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ. ನಿಮ್ಮ ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳುವುದು ಉತ್ತಮ.

ಮಕರ ರಾಶಿ: ಶಿಕ್ಷಕವೃತ್ತಿಯವರಿಗೆ ಉನ್ನತ ಸ್ಥಾನ ಪಡೆದುಕೊಳ್ಳುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಅನ್ಯರ ಮೂಲಕ ಪಡೆಯಲಿದ್ದೀರಿ. ಚಿಂತೆಯು ನಿಮ್ಮ ದಿನವನ್ನು ಹಾಳು ಮಾಡೀತು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ವಿದ್ಯಾಭ್ಯಾಸದ ಗೊಂದಲವನ್ನು ನೀವು ಸರಿಮಾಡಿಕೊಳ್ಳುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಮತ್ತೆ ಮತ್ತೆ ನಿಮಗೆ ಆಗದ ವಿಚಾರಗಳೇ ಕಿವಿಗೆ ಬೀಳಬಹುದು. ಒತ್ತಡಗಳು ನಿಮ್ಮ ಕೆಲಸದ ವಿಧಾನವನ್ನು ಬದಲಿಸುವುದು. ಇಂದು ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ಸಹೋದ್ಯೋಗಿಗಳ ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಕುಂಭ ರಾಶಿ: ಅಧಿಕ ಆದಾಯ ಬರುವ ಕೆಲಸವನ್ನು ಇಂದು ಹುಡುಕುವಿರಿ. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಇಂದು ಎಲ್ಲರಿಂದ ದೂರವಿರುವುದು ನಿಮಗೆ ಇಷ್ಟವಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ದೇವರಲ್ಲಿ ನಂಬಿಕೆ ಕಡಿಮೆಯಾಗುವುದು. ನೀವು ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ಅತಿಯಾದ ದುಃಖದ ಸನ್ನಿವೇಶವು ಬರಲಿದೆ.

ಮೀನ ರಾಶಿ: ಇಂದು ಕಾರ್ಯದ ಒತ್ತಡದ ಕಾರಣ ಮಧ್ಯದಲ್ಲಿ ನೀವು ಸಣ್ಣ ವಿಶ್ರಾಂತಿಯನ್ನು ಪಡೆಯುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವಾಗಲಿದೆ. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು. ನಿಮ್ಮ ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ಮಾತಿನಲ್ಲಿ ಮಿತಿ ಇರಲಿದ್ದು ಎಲ್ಲರಿಗೂ ಅಚ್ಚರಿಯಾದೀತು. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ಆಲಸ್ಯವನ್ನು ಬಿಡುವುದು ಅನಿವಾರ್ಯವಾದೀತು. ನಿಮ್ಮ ನೀರೀಕ್ಷೆಯ ಮಟ್ಟಕ್ಕೆ ವ್ಯಾಪಾರವು ತಲುಪದಿರುವುದು ನಿಮಗೆ ಬೇಸರವಾಗುವುದು.