Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?

ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡೋಣ.

Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಯಾವ ರಾಶಿಯವರಿಗೆ ಪ್ರೇಮಾಂಕುರ
Edited By:

Updated on: Jul 19, 2024 | 7:37 PM

ಪುರಾತನವಾದ ಮಾತು ಇದೆ ಋಣಾನುಬಂಧರೂಪೇಣ ಪಶು ಪತ್ನಿ ಸುತಾಲಯಃ ಎಂದು. ಪತ್ನಿ ಸಿಗಬೇಕಾದರೂ ಋಣವಿರಬೇಕು ಎನ್ನುವುದೂ ಈ ವಾಕ್ಯದ ಅರ್ಥ. ಯಾರಿಗೆ ಋಣವಿದೆ? ಯಾರಿಗೆ ಋಣವಿಲ್ಲ ಎಂದು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಯಾವ ಋಣ ಯಾವಾಗಾ ಲಭ್ಯವಾಗುತ್ತದೆ ಎನ್ನುವುದೂ ಮುಖ್ಯ. ಎಲ್ಲರಿಗೂ ಎಲ್ಲ ಋಣಗಳೂ ಎಲ್ಲ ಕಾಲದಲ್ಲಿಯೂ ಸಿಗದು.‌ ಅದಕ್ಕೂ ಸಮಯ, ಸಂದರ್ಭವು ಬರಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡಣ.

ವೃಷಭ ರಾಶಿ :ಪ್ರಸ್ತುತ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾದರೆ ಈ ರಾಶಿಯವರಿಗೆ ಪ್ರೇಮವು ಫಲಿಸುವುದು. ಕುಜನು ಶುಕ್ರನ ರಾಶಿಯಲ್ಲಿಯೂ ಗುರುವಿನ ಜೊತೆಗೂ ಇರುವುದರಿಂದ ಮನೆಯರ ಸಮಯದಲ್ಲಿ ಇವರ ಪ್ರೇಮವು ವಿವಾಹವಾಗಿಯೂ ಮುಂದುವರಿಯುವುದು.

ತುಲಾ ರಾಶಿ :ಈ ರಾಶಿಯವರು ಪ್ರೇಮದಲ್ಲಿ ಬೀಳುವರು. ಇವರಿಗೆ ಉದ್ಯೋಗದ ಸ್ಥಳದಲ್ಲಿ ಪ್ರೇಮವಾಗುವುದು. ಇವರು ಹಿರಿಯರ ಒಪ್ಪಿಗೆ ಪಡೆಯಲು ಸಮಯವನ್ನು ತೆಗೆದುಕೊಳ್ಳುವರು. ಆತುರ ಮಾಡಿಕೊಂಡರೆ ಮಧ್ಯದಲ್ಲಿ ನಿಂತುಹೋಗುವುದು.

ವೃಶ್ಚಿಕ ರಾಶಿ :ಈ ರಾಶಿಗೂ ಉತ್ತಮ ಕುಲದವರ ಜೊತೆ ಸ್ನೇಹವು ಆಗಿ, ಅನಂತರ ಪ್ರೇಮವಾಗಲಿದೆ. ರೂಪವುಳ್ಳ ಸಾತ್ವಿಕ ಸ್ವಭಾವದ ಸಂಗಾತಿಯು ಸಿಗುವರು.

ಈ ಮೂರು ರಾಶಿಯವರಿಗೆ ಸದ್ಯದ ಗ್ರಹಗತಿಗಳಿಂದ‌ ಪ್ರೇಮವು ಉಂಟಾಗುವ ಲಕ್ಷಣವಿದೆ.

ಯಾವುದನ್ನೂ ಆತುರದಿಂದ ನಡೆಸದೇ ಸಮಯ ಸಂದರ್ಭವನ್ನು ಅರಿತು ಸಮಾಧಾನ ಚಿತ್ತದಿಂದ ಮುಂದುರಿದರೆ ಎಲ್ಲವೂ ಸುಖಕರವಾಗಿ ನಡೆಯುವುದು. ಉದ್ವೇಗ, ಒತ್ತಡಗಳಿಗೆ ಸಿಕ್ಕಿ ಋಣವನ್ನು ಕಳೆದುಕೊಳ್ಳುವುದು ಅವರವರ ಕೈಯಲ್ಲಿರುವುದು.

ಲೋಹಿತ ಹೆಬ್ಬಾರ್ – 8762924271

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us