ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 7ರ ದಿನಭವಿಷ್ಯ

Daily Numerology March 07: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 7ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Mar 07, 2026 | 12:20 AM

ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ದೇವಸ್ಥಾನಕ್ಕೆ ತೆರಳಿ ದರ್ಶನವನ್ನು ಮಾಡಿ. ಈ ದಿನ ಸಾಧ್ಯವಾದರೆ ಕೆಂಪು ಬಣ್ಣದ ಬಟ್ಟೆ ಧರಿಸಬೇಡಿ ಮತ್ತು ಮೌನವಾಗಿರಲು ಪ್ರಯತ್ನಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸಂಗಾತಿಯ ಅನಾರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಬಹುದು. ಒಂದು ವೇಳೆ ಈಗಾಗಲೇ ವೈದ್ಯರ ಬಳಿ ತೋರಿಸಿಕೊಂಡಿದ್ದರೂ ಸಮಸ್ಯೆ ಉಲ್ಬಣ ಆಗಿ, ಆತಂಕ ಸೃಷ್ಟಿ ಆಗಬಹುದು. ನಿರಾಂತಕವಾಗಿ ಆಗಬಹುದು ಎಂದುಕೊಂಡಿದ್ದ ಕೆಲವು ಕೆಲಸಗಳಿಗೆ ಅಡೆತಡೆಗಳು ಕಾಣಿಸಿಕೊಳ್ಳಬಹುದು. ಇಷ್ಟು ಸಮಯ ನಿಮ್ಮ ಜತೆಗೂಡಿ ವ್ಯವಹಾರ ಮಾಡುವುದಾಗಿ ಭರವಸೆ ನೀಡಿದ್ದ ವ್ಯಕ್ತಿಯು ತನ್ನ ತೀರ್ಮಾನವನ್ನು ಬದಲಿಸಿಕೊಂಡಿರುವುದಾಗಿ ಹೇಳಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮ ಆಪ್ತರ ಜೊತೆಗೆ ಕೆಲ ದಿನಗಳ ಮಟ್ಟಿಗೆ ಮಾತನ್ನೇ ಬಿಡುವ ಹಂತಕ್ಕೆ ಹೋಗಬಹುದು. ಸಲೂನ್ ಹೊಸದಾಗಿ ಶುರು ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಮನೆಯ ಮಟ್ಟಿಗೆ ಮಾಡಬೇಕು ಎಂದುಕೊಂಡಿದ್ದ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಸನ್ನಿವೇಶ ಸೃಷ್ಟಿ ಆಗಲಿದೆ. ಉದ್ಯೋಗ ಬದಲಾವಣೆಗೆ ಕೆಲವು ಅವಕಾಶಗಳು ಇವೆ ಎಂಬ ಬಗ್ಗೆ ಸ್ನೇಹಿತರು ಗಮನಕ್ಕೆ ತರಲಿದ್ದಾರೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳು ವಿಪರೀತ ಭಾರವಾಗಿ ಕಾಡುವುದಕ್ಕೆ ಆರಂಭಿಸುತ್ತದೆ. ಇಷ್ಟು ಸಮಯದಲ್ಲಿ ಹಣ ನೀಡುತ್ತೇನೆ ಎಂದು ನೀವು ಯಾರಿಗಾದರೂ ಮಾತು ನೀಡಿದ್ದಲ್ಲಿ ಅದು ನೀಡುವುದಕ್ಕೆ ಸಾಧ್ಯವಾಗದೆ ಅವರಿಂದ ನಿಂದೆ- ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಕೆಟ್ಟ ಕನಸುಗಳು ಬೀಳಬಹುದು ಅಥವಾ ಪದೇಪದೇ ಎಚ್ಚರವಾಗಿ, ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡುವುದಕ್ಕೆ ಸಾಧ್ಯವಾಗದಿರಬಹುದು.

ಲೇಖನ- ಸ್ವಾತಿ ಎನ್.ಕೆ.

Follow Us