
ಮಕ್ಕಳೊಂದಿಗೆ ವಾಗ್ವಾದ ತಪ್ಪಿಸಲು ಮತ್ತು ಶಾಂತಿ ಕಾಪಾಡಲು ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಿ. ಬಿಳಿ ಬಣ್ಣದ ಸಿಹಿತಿಂಡಿಯನ್ನು ನೈವೇದ್ಯ ಮಾಡಿ ಹಂಚಿ.
ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಮಾರ್ಗದರ್ಶನ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅದೇ ರೀತಿ ಸರ್ಕಾರದಿಂದ ಸಿಗಬೇಕಾದ ಕಾಗದ- ಪತ್ರಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿದುಬರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗೀ ಆಗುವುದರಿಂದ ನಿಮ್ಮ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ.
ಪರಿಚಿತರು ದಿಢೀರನೇ ನಿಮಗೆ ಕೆಲವು ವಸ್ತುಗಳನ್ನು ಉಚಿತವಾಗಿ ನೀಡಬಹುದು ಅಥವಾ ತಾವು ಕೆಲವು ಕಾಲ ದೂರದ ಊರಿಗೆ ಹೋಗುತ್ತಿದ್ದೇವೆ, ನಮ್ಮ ಕಾರು ಅಥವಾ ಬೈಕ್/ ಸ್ಕೂಟರ್ ಅನ್ನು ನೀವು ಬಳಸಿಕೊಳ್ಳಿ ಅಂತ ಹೇಳಬಹುದು. ಸಂಗಾತಿಯು ನಿಮ್ಮ ಬಳಿ ಕೆಲವು ಬೇಡಿಕೆಗಳನ್ನು ಇಡುವ ಸಾಧ್ಯತೆಗಳಿವೆ. ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಬರಬೇಕಾದ ಆಸ್ತಿಯ ಪಾಲು ಏನಾದರೂ ಇದ್ದಲ್ಲಿ ಅದರ ಬಗ್ಗೆ ಒಂದು ತೀರ್ಮಾನ ಆಗುವಂಥ ಸುಳಿವು ದೊರೆಯಲಿದೆ.
ಮೂವತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸು ಮಕ್ಕಳು ಯಾರಿಗೆ ಇದ್ದಾರೋ ಅಂಥವರು ಮಕ್ಕಳ ಜತೆಗೆ ಮಾತನಾಡುವಾಗ ಕೋಪ ಮಾಡಿಕೊಳ್ಳದೇ ಇರುವುದು ತುಂಬ ಮುಖ್ಯ. ಮನೆ- ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವೇ ಇರಬಹುದು ಅಥವಾ ಮದುವೆ ಮತ್ಯಾವುದೇ ವಿಷಯ ಇರಬಹುದು, ಅದರ ಬಗ್ಗೆ ನಿಮಗೆ ಸಮ್ಮತಿ ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ, ಬದಲಿಗೆ ವಾದ- ವಾಗ್ವಾದಗಳನ್ನು ಮಾಡಿಕೊಳ್ಳಬೇಡಿ.
ಲೇಖನ- ಸ್ವಾತಿ ಎನ್.ಕೆ.