ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 7ರ ದಿನಭವಿಷ್ಯ

Daily Numerology March 07: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 7ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Mar 07, 2026 | 12:45 AM

ಆಸ್ತಿ ವಿಚಾರ ಮತ್ತು ಸಂಗಾತಿಯ ಬೇಡಿಕೆಗಳನ್ನು ನಿಭಾಯಿಸಲು ಈ ದಿನ ಹಸಿರು ಬಣ್ಣದ ವಸ್ತ್ರ ಧರಿಸಿ. ಪಕ್ಷಿಗಳಿಗೆ ಧಾನ್ಯಗಳನ್ನು ಹಾಕುವುದು ನಿಮಗೆ ಅದೃಷ್ಟ ತರಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಸ್ನೇಹಿತರು- ಸಂಬಂಧಿಗಳ ಆಹ್ವಾನದ ಮೇಲೆ ಅವರ ಮನೆಗಳಿಗೆ ಊಟ ಅಥವಾ ತಿಂಡಿಗೋ ಅಥವಾ ಗೆಟ್- ಟು- ಗೆದರ್ ಗೆ ತೆರಳುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಈ ದಿನ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಅದೇ ರೀತಿ ಕೆಲವರು ರೆಸಾರ್ಟ್ ಅಥವಾ ಹೋಮ್ ಸ್ಟೇಗಳಿಗೆ ತೆರಳುವಂಥ ಯೋಗ ಇದೆ. ಅನಿರೀಕ್ಷಿತವಾಗಿ ಹಣದ ಹರಿವು ಉತ್ತಮಗೊಳ್ಳಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಬಹಳ ಸಮಯದಿಂದ ಮಾರಾಟ ಆಗದೆ ಉಳಿದಿದ್ದ ವಸ್ತುಗಳು ವ್ಯಾಪಾರಿಗಳಿಗೆ ಮಾರಾಟ ಆಗುವ ಸಾಧ್ಯತೆಗಳಿವೆ. ಹೊಸದಾಗಿ ಗ್ರಾಹಕರು ದೊರೆಯಲಿದ್ದಾರೆ. ಸ್ವಭಾವತಃ ಸಿಟ್ಟಿನವರಾಗಿದ್ದರೆ ಈ ದಿನ ಸಾಧ್ಯವಾದಷ್ಟೂ ಸಮಾಧಾನದಿಂದ ಇರುವುದು ಉತ್ತಮ. ಹೀಗೆ ಇರುವುದರಿಂದ ಹಲವು ಬಗೆಯಲ್ಲಿ ಅನುಕೂಲಗಳು ಆಗಬಹುದು. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆಪ್ತರಿಂದ ಎರಡು ವಿಭಿನ್ನ ಅಭಿಪ್ರಾಯ, ದೃಷ್ಟಿಕೋನಗಳು ವ್ಯಕ್ತ ಆಗಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮದೇ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ವಿತಂಡ ವಾದವನ್ನು ಹೂಡಲಿದ್ದೀರಿ. ಹೇಗಿದ್ದರೂ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೋ ಅಥವಾ ಬಡ್ಡಿ ಇಲ್ಲದ ಆಫರ್ ಏನೋ ಇದೆ ಎಂಬ ಕಾರಣಕ್ಕೋ ಅಗತ್ಯ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಆಪ್ತ ಸ್ನೇಹಿತರೊಬ್ಬರ ಜತೆಗೆ ಮಾತನಾಡುವಾಗ ಬಳಸುವಂಥ ಪದಗಳಿಂದ ಅವರಿಗೆ ಬಹಳ ಬೇಸರ ಆಗಬಹುದು.

ಲೇಖನ- ಸ್ವಾತಿ ಎನ್.ಕೆ.

Follow Us