ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ

Daily Numerology March 12: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 12ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 12ರ ದಿನಭವಿಷ್ಯ
ದಿನ ಭವಿಷ್ಯ
Image Credit source: Pinterest
ಸ್ವಾತಿ ಎನ್​ಕೆ Edited By:

Updated on: Mar 12, 2026 | 12:30 AM

ಪಾರಿಜಾತ ಅಥವಾ ಮಲ್ಲಿಗೆ ಹೂವುಗಳನ್ನು ಬಳಸಿ ದೇವರ ಪೂಜೆಯನ್ನು ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡಗಳಿಂದ ಹೊರಬಂದು ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ ಮೂಲಕ ಸಮಸ್ಯೆಯೊಂದನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಗ್ಯಾಜೆಟ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮೊದಲಾದವುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ಇದಕ್ಕಾಗಿ ಹಣಕಾಸಿನ ಕೊರತೆ ಕಂಡುಬಂದಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳು ನೆರವಿಗೆ ನಿಲ್ಲಲಿದ್ದಾರೆ. ನೀವೇನಾದರೂ ಈಗ ಇರುವಂಥ ಮನೆಯನ್ನು ಖಾಲಿ ಮಾಡಿ, ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದಲ್ಲಿ ಅಂದುಕೊಂಡಂಥ ಮನೆ ದೊರೆಯುವ ಅವಕಾಶ ಹೆಚ್ಚಿಗೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಡ ಮಾಡಿದ್ದರಿಂದಾಗಿ ಕೆಲವು ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವಂಥ ಸಾಧ್ಯತೆಗಳಿದ್ದು, ಅತಿ ಮುಖ್ಯವಾದ ವಿಚಾರಗಳು ಇದ್ದಲ್ಲಿ ತಡ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಿ. ಇನ್ನು ಮದುವೆ ನಿಶ್ಚಯ ಆಗಿರುವಂಥವರು ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡುವುದು, ಮಾತು ಬಿಡುವುದು ಇಂಥದ್ದನ್ನು ಮಾಡಬೇಡಿ.

ಲೇಖನ- ಸ್ವಾತಿ ಎನ್.ಕೆ.

Swathi NK

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us