Horoscope 15 August: ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುವುದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 15 August: ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುವುದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2023 | 12:02 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಸಿದ್ಧ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ರಿಂದ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:45 ರಿಂದ 05:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:11ರ ವರೆಗೆ.

ಮೇಷ ರಾಶಿ: ಇರುವ ಸಂಪತ್ತನ್ನು ಉಳಿಸಿಕೊಳ್ಳಲು ಯೋಜನೆಯನ್ನು ರೂಪಿಸಿ. ಅನಿರೀಕ್ಷಿತ ಹಣದ ಕಲ್ಪನೆಯನ್ನು ನೀವು ಬಿಡುವುದು ಉತ್ತಮ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಕಲಹವಾಗಬಹುದು. ನಿಮ್ಮ ಬಂಧುಗಳು ಭೇಟಿ ಮಾಡಿ ನಿಮ್ಮ ಸಮಯವನ್ನು ಹಾಳುಮಾಡಬಹುದು. ಹಿರಿಯರ ಮೇಲಿದ್ದ ನಿಮ್ಮ ಪೂರ್ವಾಗ್ರಹವು ಬದಲಾಗಬಹುದು. ಹೊಸ ಉದ್ಯೋಗಕ್ಕೆ ಅವಕಾಶಗಳು ಹುಡುಕಿಕೊಂಡುಬರಬಹುದು. ನಿಮ್ಮ ವಿವೇಚನಾ ಶಕ್ತಿಯಿಂದ ಅದನ್ನು ಸರಿಯಾಗಿ ತೀರ್ಮಾನಿಸಿ. ಗೊಂದಲವನ್ನು ಇಟ್ಟುಕೊಂಡು ಮುಂದುವರಿಯುವುದು ಬೇಡ.

ವೃಷಭ ರಾಶಿ: ದೀರ್ಘಕಾಲದ ಸ್ನೇಹವು ಇಂದು ಮಾತಿನಿಂದ ಒಡೆದುಹೋಗುವುದು. ಅದಕ್ಕಾಗಿ ನೀವು ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೋಗುವುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಿಲಾಣಿಕೆ ಮಾಡುವುದು ಕಷ್ಟವಸದೀತು. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ನಾಟಬಹುದು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವಿರಿ. ಸಹೋರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡಬಹುದು. ಆರೋಗ್ಯದ ಸ್ಥಿತಿಯು ಯಥಾಪ್ರಕಾರವಾಗಿ ಬಲಿಷ್ಠವಾಗಿಯೇ ಇರುವುದು. ಪ್ರಾಣಿಗಳ ಜೊತೆ ಸಖ್ಯಮಾಡುವ ಮನಸ್ಸಾಗುವುದು.

ಮಿಥುನ ರಾಶಿ: ಕಛೇರಿಯಲ್ಲಿ ಇಂದು ಮೇಲಿನವರು ಹೇಳಿದ್ದಷ್ಟನ್ನೇ ಮಾಡುವುದು ಒಳ್ಳೆಯದು. ನಿಮ್ಮ ಯೋಚನೆಯನ್ನೂ ಸೇರಿಸುವುದರಿಂದ ವ್ಯತ್ಯಾಸವಾಗಿ ನಿಮ್ಮ ಮೇಲೆ ಅಪವಾದವು ಬರಬಹುದು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಸಂಗಾತಿಗೆ ನಿಮ್ಮ ಮೇಲೂ ವಿಷಯದ ಮೇಲೂ ಜಿಗುಪ್ಸೆ ಬರುವಂತೆ ಮಾಡುವಿರಿ. ಆರ್ಥಿಕ ವಿಚಾರವನ್ನು ನೀವು ಆಳವಾಗಿ ಆಲೋಚಿಸುವಿರಿ. ಪ್ರೇಮದಲ್ಲಿ ಸಿಕ್ಕಿಕೊಂಡು ನುಂಗಲೂ ಉಗುಳಲೂ ಆಗದ ತುಪ್ಪದಂತೆ ಒದ್ದಾಡಬೇಕಾದೀತು. ಒತ್ತಡದಿಂದ ಇಂದಿನ ಕೆಲಸವನ್ನು ಮಾಡುವಿರಿ. ಆಸ್ತಿಯ ವಿಚಾರವನ್ನು ಕುಳಿತು ಬಗೆಹರಿಸಿಕೊಳ್ಳಿ.

ಕರ್ಕ ರಾಶಿ: ಸಾಮಾಜಿಕ ಗೌರವವನ್ನು ಪಡೆಯುವ ಅವಕಾಶಗಳು ಇದ್ದರೂ ಕಾರಾಣಾಂತರಗಳಿಂದ ಅದು ಸಾಧ್ಯವಾಗದು. ಇಂದಿನ‌ ಕೆಲಸವು ನಿರೀಕ್ಷಿತ ಮಟ್ಟವನ್ನು ತಲುಪುವುದು ಕಷ್ಟವಾದೀತು. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಭಾಸವಾದೀತು. ಸಣ್ಣ ವಿಚಾರಗಳಿಗೂ ನೀವು ಪ್ರತಿಯೊಬ್ಬರ ಮೇಲೂ ಸಿಟ್ಟಾಗುವಿರಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಉದ್ವೇಗಕ್ಕೆ ಒಳಗಾಗಬೇಕಾದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಇಂದು ಕಡಿಮೆ ಇರುವುದು. ಸಂಗಾತಿಯ ಸಂತೋಷಕ್ಕೆ ಏನಾದರೂ ಉಡುಗೊರೆಯನ್ನು ನೀಡುವಿರಿ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಯು ತಕೆಕೆಳಗಾಗುವುದು.

ಸಿಂಹ ರಾಶಿ: ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಅವರ ಸ್ವಭಾವವು ಮುಂದುವರಿಯಬಹುದು. ನಿಮ್ಮ ಬಗ್ಗೆ ನಿಮಗೇ ಹಿಂಜರಿಕೆಯ ಭಾವನೆ ಉಂಟಾಗಬಹುದು. ಮೇಲಿನ ವರ್ಗದವರು ನಿಮ್ಮನ್ನು ಓಡಾಡಿಸಬಹುದು. ನೇರ ಮಾತು ಎಲ್ಲ ಸಂದರ್ಭಗಳಲ್ಲಿಯೂ ಪ್ರಯೋಜನಕ್ಕೆ ಬರದು, ಪ್ರಶಂಸೆಯೂ ಸಿಗದು. ತೊಂದರೆ ಬರುವಂತಹ ಕೆಲಸಗಳು ನಿಮ್ಮ ಪಾಲಿಗೆ ಬಂದರೆ ಅದರಿಂದ ದೂರ ಸರಿಯುವುದು ಉತ್ತಮ. ಇನ್ನೊಬ್ಬರ ಬುದ್ಧಿಮಾತನ್ನು ಒಂದನ್ನೇ ನಂಬಿ ನೀವು ಕಾರ್ಯಪ್ರವೃತ್ತರಾದರೆ ಅಪಮಾನವನ್ನು ಎದುರಿಸಬೇಕಾದೀತು. ಇಂದು ನೀವು ಅಂದುಕೊಂಡಷ್ಟು ಸುಲಭದಲ್ಲಿ ಯಾವುದೂ ಧಕ್ಕದು.

ಕನ್ಯಾ ರಾಶಿ: ಕಾರ್ಯದಲ್ಲಿ ಉಂಟಾದ ಅಡೆತಡೆಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ಕೊಡುವಿರಿ. ಇಂದು ಹೆಚ್ಚಿನ ಜನರ ಜೊತೆ ಒಡನಾಟ ಮಾಡಬೇಕಾಗಿಬರಬಹುದು. ಆಸ್ತಿಯ ಕಲಹವನ್ನು ಸರಿ ಮಾಡಿಕೊಳ್ಳಲು ಹಣವನ್ನು ಖರ್ಚು ಮಾಡಬೇಕಾಗಿಬರಬಹುದು. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಸಿಟ್ಟನ್ನು ತರಿಸಬಹುದು. ಮನಸ್ಸಿನಲ್ಲಿಯೇ ಕುದಿಯುವಿರಿ. ಇಂದು ನಿಮಗೆ ಇಷ್ಟವಿಲ್ಲದವರ ಜೊತೆ ಒಡನಾಡಬೇಕಾಗಿಬರಬಹುದು. ಬಹಳ ಕಷ್ಟಪಟ್ಟು ನಿಮ್ಮ ಈ ಜವಾಬ್ದಾರಿಯನ್ನು ಮುಗಿಸಿಕೊಳ್ಳುವಿರಿ. ಗುರುಚರಿತ್ರೆಯನ್ನು ನೀವು ಪಠಿಸಿ.

ತುಲಾ ರಾಶಿ: ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಹೇಳಿ. ಸುಮ್ನೇ ಸುತ್ತಿ ಬಳಸಿ ಮಾತನಾಡಿ ಎದುರಿನವರ ಮತ್ತು ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವುದು ಬೇಡ. ವ್ಯಾಪರದಿಂದ ಆದ ಲಾಭವು ನಿಮಗೆ ಇನ್ನಷ್ಟು ಉತ್ತೇಜನವನ್ನು ಕೊಡುವುದು. ವಿವಾಹದ ಮಾತುಕತೆಯಲ್ಲಿ ಭಾಗವಹಿಸುವಿರಿ. ಅಪರಿಚಿತ ಕರೆಗಳಿಂದ ನಿಮಗೆ ಅತಿಯಾದ ಮಾನಸಿಕ ಹಿಂಸೆಯಾಗುವುದು. ಹಣದ ವಿಚಾರಕ್ಕೆ ದಾಂಪತ್ಯದಲ್ಲಿ ಜಗಳವಾಗುವುದು. ಇಂದು ಕೆಲವು ಸಂದರ್ಭಗಳನ್ನು ನಡುವೆ ಭಾಯಿಸಲು ನೀವು ಕಲಿಯಬೇಕಾಗಬಹುದು. ನಿಮ್ಮ ಮೇಲೆ ಯಾವುದೋ ಶಕ್ತಿಯ ಪ್ರಭಾವವಿದೆ ಎಂದು ಅನ್ನಿಸಬಹುದು. ದೈವಜ್ಞರನ್ನು ಭೇಟಿಯಾಗಿ ಸಲಹೆಯನ್ನು ಪಡೆಯಿರಿ.

ವೃಶ್ಚಿಕ ರಾಶಿ: ಸಹೋದ್ಯೋಗಿಗಳ ಕಿರಿಕಿರಿಯಿಂದ ನಿಮ್ಮ‌ ಸ್ಥಾನವನ್ನು ಬಿಟ್ಟಕೊಡಬೇಕಾಗಿ ಬರಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆಗಬಹುದು. ಹಳೆಯ ಘಟನೆಗಳೆಲ್ಲವೂ ನಿಮ್ಮ ಸ್ಮರಣೆಗೆ ಬಂದು ಹೋಗಬಹುದು. ಆಕಸ್ಮಿಕವಾಗಿ ಏನ್ನಾದರೂ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಹುಸಿಯಾಗುವುದು. ತಂದೆಯಿಂದ ಅಥವಾ ತಂದೆಯ ಸಮಾನರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಭಾವವು ನಡೆಯುವುದು. ಶ್ರಮಕ್ಕೆ ತಕ್ಕ ಫಲವು ಸಿಗದೇ ಇರುವುದು ನಿಮ್ಮನ್ನು ಕಾಡಬಹುದು. ಗುರುವಿನ ದರ್ಶನವು ನಿಮ್ಮ ನಕಾರಾತ್ಮಕ ಆಲೋಚನೆಯನ್ನು ದೂರ ಮಾಡುವುದು.

ಧನು ರಾಶಿ: ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿಯು ಇಂದು ಸಿಗಲಿದೆ. ನಿಮ್ಮ ಧಾರ್ಮಿಕ ಶ್ರದ್ಧೆಗೆ ಫಲ ದೊರೆತಂತಾಗುವುದು. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹಿಂದೇಟು ಹಾಕುವಿರಿ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಳ್ಳುವಿರಿ. ದೈಹಿಕ ಕಸರತ್ತನ್ನು ಅತಿಯಾಗಿ ಮಾಡಲು ಹೋಗುವುದು ಬೇಡ. ಅತಿಯಾದ ಆಪ್ತತೆಯು ನಿಮಗೆ ಮುಳುವಾಗಬಹುದು. ಆರ್ಥಿಕ ವ್ಯವಹಾರವನ್ನು ಯಾರ ಜೊತೆ ಕೂಡ ಹಂಚಿಕೊಳ್ಳುವುದು ಬೇಡ. ಸುಖವಾಗಿರಲು ಮಾರ್ಗವನ್ನು ಹುಡುಕುವಿರಿ. ಅತಿಯಾದ ಲೋಭವು ನಿಮಗೆ ಮಾರಕವಾದೀತು. ಒಂದು ಕ್ಷಣವೂ ಒಂದು ಕಡೆ ಕುಳಿತಿರಲಾರಿರಿ.

ಮಕರ ರಾಶಿ: ಅಪ್ರಸಿದ್ಧ ಸಂಸ್ಥೆಗೆ ಹಣ ಹೂಡಿಕೆ ಮಾಡಿ ನಿಮ್ಮ ಹಣವನ್ನು ಕಳೆದುಕೊಳ್ಳುವಿರಿ. ಕರಕುಶವ್ಯಾಪಾರಿಗಳು ಅಧಿಕ ಲಾಭವನ್ನು ಪಡೆಯುವರು. ಸರ್ಕಾರಿ‌ ಕೆಲಸಕ್ಕೆ ಪ್ರಯತ್ನಿಸಿದರೂ ಸುಲಭವಾಗಿ ಸಿಗದು. ನಿಮ್ಮ ಆಸ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡಲು ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುವುದು. ಎಲ್ಲರನ್ನೂ ಮೆಚ್ಚಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಸಾಧ್ಯವಾಗದು. ಗೌರವದ ಅಪೇಕ್ಷೆಯು ಇಲ್ಲದಿದ್ದರೂ ನಿಮಗೆ ಸುಕೃತದಿಂದ ಸಿಗುವುದು. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಗಬೇಕಾದ ಕಾರ್ಯಗಳ ಬಗ್ಗೆ ನಿಮಗೆ ಗಮನವು ಕಡಿಮೆ‌ ಇರುವುದು.

ಕುಂಭ ರಾಶಿ: ನಿಮ್ಮ ಪಾಲುದಾರಿಕೆಯ ಒಪ್ಪಂದವನ್ನು ಪುನಃ ಮಾಡಿಕೊಳ್ಳುವ ಸನ್ನಿವೇಶಗಳು ಬರಲಿದ್ದು ಆಲೋಚಿಸಿ ಒಪ್ಪಿಗೆ ನೀಡಿ. ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಕಡಿಮೆ ಆಗುವುದು. ನಿಮ್ಮೊಳಗೆ ಯಾರೂ ಸಾಧಿಸದ್ದನ್ನು ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಇರಲಿದೆ‌. ಬರಬೇಕಾದ ಹಣದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಇಂದಿನ ನಿಮ್ಮ ವೈಯಕ್ತಿಕ ಕೆಲಸ ನಡುವೆ ಕಛೇರಿಯ ಕೆಲಸಗಳು ಹಿಂದೆ ಉಳಿಯುವುದು. ನಿಮ್ಮ ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗಬಹುದು. ನಿಮಗೆ ಯಶಸ್ಸು ಸುಲಭದಲ್ಲಿ ಲಭ್ಯವಿಲ್ಲ.

ಮೀನ ರಾಶಿ: ನಿಮ್ಮ ಆತ್ಮೀಯವಾದ ಮಾತುಕತೆಗಳಿಂದ ಅಪರಿಚಿತರು ಆಪ್ತರಾಗುವರು. ಆಕಸ್ಮಿಕ ದ್ರವ್ಯಪ್ರಾಪ್ತಿಯು ಆಗಲಿದೆ. ದಾಂಪತ್ಯದಲ್ಲಿ ಪರಸ್ಪರ ನಂಬಿಕೆಗಳು ದೃಢವಾಗುವುದು. ಆದಾಯದ ಮೂಲವು ಬದಲಾವಣೆ ಆಗಬಹುದು.ಕಲ್ಪನೆಗೆ ಸಿಗದ ಬದಲಾವಣೆಯನ್ನು ನೀವು ನೋಡಬಹುದು. ಸೌಂದರ್ಯದ ಅತಿಶಯದಿಂದ ನೀವು ಆಕರ್ಷಕವಾಗಿ ಕಾಣುವಿರಿ‌. ಒತ್ತಡದಿಂದ ಹೊರ ಬರಲು ವೃತ್ತಿಯಲ್ಲಿ ವಿರಾಮ ಸಮಯವನ್ನು ನಿರೀಕ್ಷಿಸುವಿರಿ. ಉಪಕಾರದ ವಿಸ್ಮತಣೆಯಾಗಿ ಪಶ್ಚಾತ್ತಾಪ ಪಡುವಿರಿ. ದಶರಥನಿಂದ ವಿರಚಿತವಾದ ಶನಿಯ ಸ್ತೋತ್ರವನ್ನು ಪಠಿಸಿ.

ಲೋಹಿತಶರ್ಮಾ – 8762924271 (what’s app only)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ