Daily Horoscope: ಎಲ್ಲವೂ ನನ್ನಿಂದಲೇ ಎನ್ನುವ ಮನೋಭಾವ ಬೇಡ, ಇದು ನಿಮಗೆ ಒಳ್ಳೆಯದಲ್ಲ!

ಇಂದಿನ (2023 ಮೇ​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಎಲ್ಲವೂ ನನ್ನಿಂದಲೇ ಎನ್ನುವ ಮನೋಭಾವ ಬೇಡ, ಇದು ನಿಮಗೆ ಒಳ್ಳೆಯದಲ್ಲ!
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 17, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ 07:41 ರಿಂದ 09:17ರ ವರೆಗೆ, ಗುಳಿಕ ಕಾಲ 10:53 ರಿಂದ 12:29ರ ವರೆಗೆ.

ಮೇಷ: ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಸ್ನೇಹಿತರಿಂದ ಸಹಾಯಗಳು ಸಿಗಬಹುದು. ಎಲ್ಲವನ್ನೂ ನೀವೇ ನಿರ್ವಹಣೆ ಮಾಡಬೇಕು ಎನ್ನುವ ಅತಿಯಾದ ಆಸೆಯಾಗಲೀ ದುರ್ಬುದ್ಧಿಯಾಗಲಿ ಬೇಡ. ಎಲ್ಲರ ಜೊತೆ ಸಂತೋಷದಿಂದ ಮಾಡುವುದು ಒಳ್ಳೆಯದು. ಸಲುಗಿಯನ್ನು ಹೆಚ್ಚು ಮಕ್ಕಳ ವಿಚಾರದಲ್ಲಿ ಕೊಡುವುದು ಬೇಡ. ವಿದ್ಯಾರ್ಥಿಗಳು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು ಸೂಕ್ತ. ಗೃಹದ ನಿರ್ವಹಣೆಯಲ್ಲಿ ಅಧಿಕ ಖರ್ಚು ಬರಬಹುದು. ಇದು ಅನಿವಾರ್ಯವಾದುದು ಆಗಿದೆ.

ವೃಷಭ: ಸಜ್ಜನರ ಸಹವಾಸ ನಿಮಗೆ ಸಿಗಲಿದೆ. ನಿಮ್ಮ ಉತ್ತಮ‌ ಆಲೋಚನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವಿರಿ. ಸ್ನೇಹಿತರ ಜೊತೆಗಿನ ಅನುಬಂಧವು ಸ್ವಲ್ಪ ಹದಗೆಡಬಹುದು. ಸುತ್ತಾಟಗಳು ನಿಮಗೆ ಆಯಾಸವನ್ನು ಉಂಟುಮಾಡುವುವು.‌ ಅಂದುಕೊಂಡಷ್ಟು ಕೆಲಸವಾಗಿದ್ದರೂ ಆಗಿರುವಷ್ಟರಲ್ಲಿ ಖುಷಿಯಿರಲಿದೆ. ಜಬಾಬ್ದಾರಿಯಲ್ಲಿ ಸ್ವಲ್ಪ ಹಿನ್ನಡೆಯಾದೀತು. ಎಲ್ಲ ಸಂದರ್ಭವನ್ನೂ ಒಂದೇ ರೀತಿಯಲ್ಲಿ ನೋಡಲಾಗದು. ಹೆಚ್ಚು ಪಾರದರ್ಶಕವಾಗಿ ಇರುವಿರಿ.

ಮಿಥುನ: ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ನಿಮಗೆ ಅದು ಇಷ್ಟವಾಗದೇ ಕಿರಿಕಿರಿ ಆದೀತು. ನಿಮ್ಮವರ ಮೇಲೆ ನಂಬಿಕೆ ಇರಲಿ. ಬಂದಿದ್ದನ್ನು ಸ್ವೀಕರಿಸುವ ಸ್ವಭಾವದಿಂದ ಹೆಚ್ಚು ಸುಖವಾಗಿ ಇರಬಹುದು. ಭೂಮಿಯ ವ್ಯವಹಾರವು ತಕ್ಕ ಮಟ್ಟಿಗೆ ಲಾಭವನ್ನು ನೀಡುತ್ತದೆ, ನಿರೀಕ್ಷಿಸಿದಷ್ಟು ಅಲ್ಲ. ಕಛೇರಿಯು ನಿಮ್ಮ ಕಾರ್ಯವನ್ನು ಸದಾ ಅಪೇಕ್ಷಿಸುತ್ತದೆ. ಆತುರ ನಿರ್ಧಾರಗಳು ನಿಮಗೆ ಸೂಕ್ತವಾಗದು. ಮಾತುಗಳನ್ನು ಕಡಿಮೆ ಮಾಡಿ, ಕೆಲಸದ ಕಡೆ ಗಮನವಿರಲಿ. ನೂತನ ವಸ್ತುಗಳನ್ನು ಖರೀದಿಸುವಿರಿ.

ಕರ್ಕಾಟಕ: ಹತ್ತಾರು ಅವಕಾಶಗಳು ತೆರೆದಿದ್ದರೂ ಯಾವುದೂ ನಿಮಗೆ ಸೂಕ್ತವಾಗಿ ಇರಲಾರದು. ಯೋಗ್ಯವಾದುದು ಸಿಕ್ಕರೂ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇದೆ. ಕನ್ನಡಿಯ ಗಂಟಿನಂತೆ ಎಲ್ಲವೂ ಆಗುವುದು. ತಂತ್ರಜ್ಞಾನದಲ್ಲಿ ತೊಡಗಿರುವವರು ಹೆಚ್ಚಿನ ಅನನುಕೂಲತೆಯನ್ನು ಅನುಭವಿಸಬೇಕಾದೀತು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲುವಿರಿ. ಉದ್ವೇಗವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಕೆಲಸಗಳು ಅಪೂರ್ಣವಾಗಲಿವೆ. ಕಳೆದುದರ ಬಗ್ಗೆ ಚಿಂತೆ ಬೇಡ. ಉತ್ತಮವಾದುದನ್ನು ಪಡೆಯುವಿರಿ.

ಸಿಂಹ: ಏನೂ ಗೊತ್ತಿಲ್ಲದೇ ದ್ವೇಷಮಾಡಬೇಡಿ ಯಾರನ್ನೂ. ನಿಮ್ಮದೇ ತಪ್ಪುಗಳು ನಿಮಗೆ ಮುಳ್ಳಾಗಬಹುದು. ಧನಾತ್ಮಕ ಚಿಂತನೆಯು ನಿಮ್ಮನ್ನು ನೆಮ್ಮದಿಯ ಕಡೆಗೆ ಒಯ್ಯಬಹುದು. ನೂತನ ವಧುವಿಗೆ ಮನೆಯಲ್ಲಿ ಅಧೈರ್ಯವು ಕಾಡಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುನ್ನಡೆಯಿರಿ. ಉತ್ತಮ ಆಲೋಚನೆಗಳು ನಿಮ್ಮನ್ನು ಕೈ ಹಿಡಿದು ನಡೆಸುವುವು. ಪ್ರಯಾಣವನ್ನು ಅನಿವಾರ್ಯವಾದರೆ ಮಾಡಿ. ಆಲಸ್ಯಕ್ಕೆ ನೀವೆರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸಗಳನ್ನು ಅದು ಕೆಡಿಸೀತು.

ಕನ್ಯಾ: ಮರ್ಯಾದಿಗೆ ಅಂಜಿ ಮಾಡಬೇಕಾದ ಕೆಲಸಗಳನ್ನು ಮುಂದೂಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಆದೀತು. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವು ಸಿಗಲಿದೆ. ನೂತನ ಸ್ಥಳವನ್ನು ಖರೀದಿಸಲಿದ್ದೀರಿ. ಅದು ನೀರಾವರೀ ಪ್ರದೇಶವಾಗಿ ಇರಲಿದೆ. ಇಂದು ಅತಿಯಾದ ಕೋಪದಿಂದ ಹೊರಗಿರುವುದು ಉತ್ತಮ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲ ಸಿಗುತ್ತದೆ ಎಂದು ನಂಬಬೇಡಿ. ಸ್ವಲ್ಪ ಕಾಲ ಸುಮ್ಮನೇ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ. ಹಿತಶತ್ರುಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ಅವರ ಜೊತೆ ಹೆಚ್ಚಿನ ಚರ್ಚೆಯನ್ನು ಮಾಡಬೇಡಿ.

ತುಲಾ: ಹಳೆಯ ಖಾಯಿಲೆಗಳು ಪುನಃ ಬರುವ ಸಾಧ್ಯತೆ ಇದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು. ಕುಟುಂಬಕ್ಕೆ ಸಹಕಾರ ಕೊಡಲಿದ್ದೀರಿ. ವಿವಾದದ ಹೇಳಿಕೆಗಳಿಂದ ನಿಮಗೆ ತೊಂದರೆಯಾದೀತು. ಪ್ರಯಾಣವು ಇಂದು ಸುಖಕರವಾಗುವುದು. ದಿನನಿತ್ಯದ ಬಳಸುವ ವಸ್ತುವಿನ ವ್ಯಾಪಾರವು ಲಾಭವನ್ನು ತಂದೀತು. ಮನಸ್ಸಿನಲ್ಲಿ ಅಶಾಂತಿಯು ಇರಲಿದೆ. ಎಂದೋ ಮಾಡಿದ ಹೂಡಿಕೆಯಿಂದ ಸಹಾಯವಾಗಲಿದೆ. ವಿವಾಹದ ಶುಭ ಸುದ್ದಿಯು ನಿಮಗೆ ಗೊತ್ತಾಗಲಿದೆ. ಸಣ್ಣ ಬಯಕೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗುವಿರಿ.

ವೃಶ್ಚಿಕ: ಇಂದು ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ನಡೆಯುವಾಗ ಎಚ್ಚರಿಕೆ ಇರಲಿ. ಭವಿಷ್ಯದ ತೀವ್ರವಾಗಿ ಕಾಡುವುದು. ಸಾಲದಿಂದ ನಿಮಗೆ ಬಹಳ ತೊಂದರೆಯಾದೀತು. ಆರೋಗ್ಯವನ್ನು ಕಾಪಾಡಿಕೊಳ್ಳಿ. ಅಪರಿಚಿತರಿಂದ ನಿಮಗೆ ದುಃಖವಾದೀತು. ಆಕಾಶವನ್ನು ಅಂಗೈಯಲ್ಲಿ ತರುವುದು ಸಾಧ್ಯವಿಲ್ಲ. ಬಂದಿರುವುದನ್ನು ಸ್ವೀಕರಿಸಿ. ನಗು ಮುಖವೇ ನಿಮ್ಮ ಹಲವಾರು ಕೆಲಸಗಳನ್ನು ಮಾಡಿಕೊಡುವುದು. ಮಾತನ್ನು ಸ್ಪಷ್ಟವಾಗಿ ಆಡಿ. ಒತ್ತಡವು ಹೆಚ್ಚಿದ್ದೀತು. ಕುಳಿತಲ್ಲೇ ಕುಳಿತರೇ ಆಗದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.

ಧನು: ಹೆಚ್ಚು ಉತ್ಸಾಹದಾಯಕವಾದ ದಿನ‌ ನಿಮ್ಮದಾಗಲಿದೆ. ಎಂತಹ ಸಮಸ್ಯೆಗಳನ್ನೂ ಧೈರ್ಯದಿಂದ ಅಳುಕಿಲ್ಲದೇ ಎದುರಿಸುವಿರಿ. ಹೊಸದಾಗಿ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದವರಿಗೆ ಕೆಲಸವು ಸಿಗುವುದು ಕಷ್ಟವಾದೀತು. ಸ್ವಂತ ವ್ಯವಹಾರದಲ್ಲಿ ಲಾಭವಿರಲಿದೆ. ಕೆಲವರ ಮಾತು ನಿಮಗೆ ಕಿರಿಕಿರಿಯಾದೀತು. ಹಣವನ್ನು ಖರ್ಚು ಮಾಡಲು ಯೋಚಿಸಿ. ಕಛೇರಿಗೆ ಹೋಗುವಾಗ ಏನಾದರೂ ಆದೀತು. ಕುಲದೇವರ ಸ್ಮರಣೆ ಮಾಡಿ ಹೋಗಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಕಲಿಯಬೇಕಾದೀತು. ನಿಮಗೆ ಗೊತ್ತಿರುವ ವಿಚಾರವನ್ನು ಇನ್ನೊಬ್ಬರಿಗೆ ಹಂಚುವಿರಿ.

ಮಕರ: ಯಾರ ಮೇಲೂ ಗೊತ್ತಿಲ್ಲದೇ ಏನನ್ನಾದರೂ ಹೇಳಿಬಿಡಬೇಡಿ. ಅದರಿಂದ ನೋವಾದೀತು ಅವರಿಗೆ.‌ ನೇರ ನುಡಿಯನ್ನು ಕಡಿಮೆ ಮಾಡಿ. ಹೇಳಬೇಕಾದ ಹಾಗೆ ಹೇಳಿ. ನಿಮ್ಮ ಯೋಗ್ಯತೆಯ ಪರೀಕ್ಷೆಗೆ ಆಗಬಹುದು. ಎಚ್ಚರವಾಗಿರಿ. ಮಕ್ಕಳ ಯಶಸ್ಸನ್ನು ಎಲ್ಲರೂ ಖುಷಿಯಿಂದ ಹಂಚಿಕೊಳ್ಳುವಿರಿ. ಸುಮ್ಮನೇ ಇದ್ದರೂ ನಿಮ್ಮ ಮೇಲೆ ಆರೋಪ ಮಾಡಿಯಾರು. ಸಹೋದರ ಜೊತೆಗಿನ ಸಂಬಂಧವು ಅತ್ಯಂತ ಆಪ್ತವಾಗಲಿದೆ. ಅತಿಯಾದ ಚಿಂತೆಯಿಂದ ಯಾವ ಪ್ರಯೋಜನವಾಗದು. ಸಹಜವಾಗಿ ಇರಿ. ಹನುಮಾನ್ ಚಾಲೀಸ್ ಪಠಿಸಿರಿ.

ಕುಂಭ: ಇಂದು ನಿಮಗೆ ಅಪರೂಪದ ವ್ಯಕ್ತಿಗಳ ಭೇಟಿಯಾಗಬಹುದು. ಘಟನೆಗಳು ನಿಮ್ಮ ಅಲೋಚನಾ ಕ್ರಮಗಳು ಬದಲಿಸಬಹುದು.‌ ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಒಳ್ಳೆಯದು. ನಿಮ್ಮ ಪರೀಕ್ಷೆಗಳೂ ಆಗಬಹುದು. ಆಪ್ತರೇ ನಿಮ್ಮನ್ನು ಎಲ್ಲರೆದುರು ಟೀಕಿಸಿಯಾರು. ಇದರಿಂದ ಬೇಸರವಾದೀತು. ಯಾರನ್ನೂ ಹೆಚ್ಚು ಅವಲಂಬಿಸಿ ಯೋಜನೆಗಳನ್ನು ಘೋಷಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ, ಸರಳತೆ ಇರಲಿ. ಸಭೆ, ಸಮಾರಂಭಗಳಿಗೆ ಆಹ್ವಾನ ಬರಬಹುದು.‌ ಅದಕ್ಕೆ ಹೋಗಬೇಕಾದೀತು. ಶಿವನಿಗೆ ರುದ್ರಾಭಿಷೇಕ ಮಾಡಿಸಿ.

ಮೀನ: ಇಂದು ನಿಮ್ಮ ಅನೇಕ ದಿನಗಳ ಕಾಲ ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಸಮಾಪ್ತಿಯಾಗಲಿದೆ‌. ಬಂಧುಗಳ ಜೊತೆ ವಿವಾದವು ಆಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ‌ ಫಲಿತಾಂಶವು ಬರಬಹುದು. ಪರಿಸ್ಥಿತಿಯ ಅನನುಕೂಲವಾಗಿದ್ದು ನಿಮಗೆ ಕೋಪವನ್ನು ತರಿಸಬಹುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆಯು ಕೆಲವು ವಿಚಾರದಲ್ಲಿ ಕಾಣಿಸುವುದು. ಮಕ್ಕಳಿಗೆ ಸಮಯ ಕೊಡಲಾಗದಷ್ಟು ಕಾರ್ಯದಲ್ಲಿ ನಿರತರಾಗುವಿರಿ. ಶ್ರಮ ಹೆಚ್ಚು ಆದಾಯ ಕಡಿಮೆಯಾಗಬಹುದು. ಹನುಮಾನ್ ಚಾಲೀಸ್ ಪಠಣ ಮಾಡಿ.

-ಲೋಹಿತಶರ್ಮಾ – 8762924271 (what’s app only)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್