Daily Horoscope: ಈ ರಾಶಿಯವರ ಸಾಮಾಜಿಕ ಸೇವೆಗೆ ಗೌರವ ಸಿಗಲಿದೆ

ಇಂದಿನ (2023 ಏಪ್ರಿಲ್​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಈ ರಾಶಿಯವರ ಸಾಮಾಜಿಕ ಸೇವೆಗೆ ಗೌರವ ಸಿಗಲಿದೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 22, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ದ್ಚಿತೀಯಾ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಆತುಷ್ಮಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:23 ರಿಂದ 10:57ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:16 ರಿಂದ 07:50ರ ವರೆಗೆ.

ಮೇಷ: ಇಂದು ಹಿರಿಯ ಹಾಗೂ ಭವಿಷ್ಯಕ್ಕೆ ಬೇಕಾದ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿ ಮಾಡುವಿರಿ. ಸ್ವಂತ ಉದ್ಯೋಗವಾಗಿದ್ದರೆ ಹೆಚ್ಚಿನ ಲಾಭವು ಸಿಗುವುದು ಕೈತಪ್ಪಬಹುದು. ಅಧ್ಯಾತ್ಮದಲ್ಲಿ ಮನಸ್ಸನ್ನು ಇಡುವಿದು ಒಳ್ಳೆಯದು ಎಂದು ಅನ್ನಿಸಬಹುದು. ಬಾಲ್ಯದ ಸ್ನೇಹಿತರ ಭೇಟಿಯಾಗಲಿದೆ. ಅಲಂಕಾರದ ವಸ್ತುಗಳಿಗೆ ನಿಮ್ಮ ಹಣವು ಖರ್ಚಾಗಬಹುದು. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ಪತ್ನಿಗೆ ಅನೂಹ್ಯವಾದ ಉಡುಗೊರೆಯೊಂದನ್ನು ನೀಡುವಿರಿ. ನಿಮ್ಮ ಕೆಲಸದ ಮೇಲೆ ಸ್ವಲ್ಪ ಗಮನವಿರಲಿ‌. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು.

ವೃಷಭ: ಅಪರಿಚಿತರು ನಿಮ್ಮನ್ನು ವಶಪಡಿಸಿಕೊಳ್ಳಲು ಅನೇಕ ವಿಧವಾದ ಪ್ರಯತ್ನವನ್ನು ಮಾಡುವರು. ಉದ್ಯೋಗದ ಸ್ಥಳವನ್ನು ಬದಲಿಸುವ ಯೋಚನೆ ಸದ್ಯ ಬೇಡ. ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಾಗಿರುವುದಿಲ್ಲ ಎಲ್ಲ ಸಂದರ್ಭದಲ್ಲಿ. ನಿಮ್ಮವರ ನಡೆಯು ನಿಮಗೆ ಅರ್ಥವಾಗದೇ ಹೋದೀತು. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ನಿಷ್ಠೆಯಿಂದ ಇದ್ದರೂ ನಿಮಗೆ ಅಪವಾದಬರಬಹುದು. ಇಂದು ನೀವು ಸಿಡಿದೇಳುವ ಸಂದರ್ಭವು ಬರಬಹುದು. ನಿಮ್ಮ‌ ಮನಸ್ಸು ನಿಮ್ಮ ಹಿಡಿತದಲ್ಲಿ ಇರಲಿ.

ಮಿಥುನ: ನಿಮಗೆ ಎಲ್ಲವೂ ತಿಳಿದಿದ್ದರೂ ಬೇಕಾದ ಸಂದರ್ಭದಲ್ಲಿ ಅದು ನೆನಪಾಗದು. ಸ್ವಾಭಿಮಾನದಿಂದ ಬದುಕಲು ಪ್ರಯತ್ನಿಸಿದರೂ ಅದನ್ನು ತಪ್ಪಿಸುವರು. ನೀವು ನಂಬಿದ ವ್ಯಕ್ತಿಗಳಿಂದ ವಿಶ್ವಾಸಘಾತವಾಗಬಹುದು. ಉದ್ಯೋಗವು ಸಿಗದೇ ಮಾನಸಿಕವೇದನೆಯನ್ನು ಅನುಭವಿಸುತ್ತಿದ್ದರೆ ಇಂದು ಕೆಲಸ ಸಿಗುವ ಸೂಚನೆ ಬರಲಿದೆ. ಮಕ್ಕಳನ್ನು ತಾರತಮ್ಯ ಭಾವದಿಂದ ನೋಡುವುದು ಬೇಡ. ಮಕ್ಕಳಿಗಾಗಿ ಹಣವನ್ನು ಕೂಡಿಡುವ ಯೋಚನೆ ಬರಬಹುದು. ವಿವಾಹಾಕಾಂಕ್ಷಿಗಳಿಗೆ ಗುರುಬಲವಿದ್ದು, ಮಾತುಕತೆಯನ್ನು ಮುಂದುವರಿಸುವುದು ಉತ್ತಮ. ವಿವಾದವಾಗುವ ಮಾತುಗಳನ್ನು ಆಡಬೇಡಿ.

ಕಟಕ: ಇಂದು ನೀವು ಹೊಸ‌ ಕೆಲಸವನ್ನು ಆರಂಭಿಸಿದರೆ ಕಾರಣಾಂತರಗಳಿಂದ ಸ್ಥಗಿತಗೊಳ್ಳುವುದು ಅಥವಾ ನಿಧಾನವಾಗಿ ಅಭಿವೃದ್ಧಿಯನ್ನು ಹೊಂದುವುದು. ನೆರಮನೆಯವರ ಜೊತೆ ವೈಮನಸ್ಯ ಯಾಕೆ? ಅವರನ್ನು ಕಡೆಗಣಿಸಿ. ಅವರ ಅಹಂಕಾರವು ಮಣ್ಣಾಗುವುದು. ತಲೆಗೆ ಏರಿಸಿದಷ್ಟೂ ತೊಂದರೆಯೇ. ಇಂದು ಮನೆಯಲ್ಲಿ ಮತ್ತು ಕಛೇರಿಯಲ್ಲಿ ನಿಮ್ಮ ಮಾತಿಗೆ ಸಹಮತವಿರಲಿದೆ. ನಿರೀಕ್ಷಿತ ಸಂಪತ್ತು ಕೈ ಸೇರಬಹುದು. ಅಪರೂಪಕ್ಕೆ ಅತಿಥಿಗಳು ಬಂದಕಾರಣ ಮನೆಯಲ್ಲಿ ಸ್ವಲ್ಪ ಒತ್ತಡದ ಸನ್ನಿವೇಶವು ಇರಲಿದೆ. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು.

ಸಿಂಹ: ದಾಂಪತ್ಯದಲ್ಲಿ ಕಲಹವಾಗಿ ಸಂಧಿಯಲ್ಲಿ ಮುಕ್ತಾಯವಾಗುವುದು. ಇಬ್ಬರ ನಡುವೆ ಪ್ರರಿಷ್ಠೆಯು ಬಂದು ಕಲಹಕ್ಕೆ ಕಾರಣವಾಗಲಿದೆ. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಅಸಮಾಧನಾವಾಗಬಹುದು. ಮನೆಯ ನಿರ್ಮಾಣದಲ್ಲಿ ಬಹಳ ಗೊಂದಲವಿರಲಿದೆ. ಮೊದಲೇ ಪ್ಲ್ಯಾನ್ ಮಾಡಿ ಮುಂದುವರಿಯಿರಿ. ನಿರೀಕ್ಷಿತಲಾಭದಿಂದ ನಿಮಗೆ ಸಂತೋಷವಾಗುವುದು. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಕುಂಟುತ್ತ ಸಾಗುವುದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ಇತರೊಂದಿಗೆ ಹಂಚಿಕೊಳ್ಳಬೇಡಿ.

ಕನ್ಯಾ: ನಿಮ್ಮ ಸಾಮಾಜಿಕ ಸೇವೆಗೆ ಗೌರವವು ಸಿಗಲಿದೆ. ರಾಜಕೀಯ ವ್ಯಕ್ತಿಗಳ ಬಲದ ಪ್ರದರ್ಶನವು ಇಂದಾಗಲಿದೆ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಮೌಲವಾಗಿರುವುದನ್ನು ಅಭ್ಯಾಸ ಮಾಡಿ. ಅದೇ ನಿಮಗೆ ಶಕ್ತಿಯನ್ನು ತಂದುಕೊಡುವುದು. ಇಂದು ನೀವು ನಕಾರಾತ್ಮಕ ಚಿಂತನೆಯನ್ನು ಬಿಟ್ಟ ಕಾರ್ಯದಲ್ಲಿ ತೊಡಗಿ. ಆರ್ಥಿಕ ಸಮಸ್ಯೆಯನ್ನು ಎದುರಿಸಲು ದೇವರ ಅನುಗ್ರಹದ ಅವಶ್ಯಕತೆ ಇದೆ. ವಿಶ್ವಾಸಭಂಗವನ್ನು ಮಾಡಿಕೊಳ್ಳಬೇಡಿ. ಇನ್ನೊಬ್ಬರ ಒತ್ತಡದಿಂದ ಏನನ್ನೂ ಮಾಡಲು ಹೋಗಿ ನೀವು ಸಿಕ್ಕಿಹಾಕಿಕೊಳ್ಳಬೇಡಿ. ಶ್ರಮವನ್ನು ವ್ಯರ್ಥಮಾಡಬೇಡಿ. ವ್ಯಾಪರಸ್ಥರಿಗೆ ಉತ್ತಮಲಾಭದ ದಿನವಾಗಲಿದೆ.

ತುಲಾ: ಇಂದು ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಅದೇ ಒಂದು ದೊಡ್ಡ ಮೊತ್ತವಾಗಲಿದೆ. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ನಿಮಗೇ ಹಾಗಿನ್ನಿಸಿದರೆ ಮುಂದಿನದು ಕಷ್ಟವಾದೀತು. ಪ್ರಕೃತಿಗೆ ವಿರುದ್ಧವಾಗಿರುವ ನಿಮ್ಮ ಯೋಜನೆಯನ್ನು ಬಿಟ್ಟುಬಿಡಿ. ದೂರದ ಪ್ರಯಾಣವು ದುಃಖಾಂತವಾಗುವುದು. ವಿದ್ಯುತ್ ಉಪಕರಣದಿಂದ ತೊಂದರೆಯನ್ನು ಅನುಭವಿಸುವಿರಿ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ.

ವೃಶ್ಚಿಕ: ನಿಮ್ಮಲ್ಲಿ ವಿದ್ಯೆ, ಸಂಪತ್ತು ಎಲ್ಲವೂ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನಿಮ್ಮಿಂದ ಮನೆಯು ಕೆಲವನ್ನು ನಿರೀಕ್ಷಿಸುತ್ತದೆ. ಕೇಳಿಕೊಂಡು ಮಾಡಿ ನೀವೂ ಹೇಳಬೇಕಾದುದನ್ನು ಹೇಳುವಲ್ಲಿ ಹೇಳಿ. ಸುಮ್ಮನೇ ಹರಟಿ ಪ್ರಯೋಜನವಗಾದು. ನೂತನ ವಸ್ತುವನ್ನು ಖರೀದಿಸುವಿರಿ. ನಿಮ್ಮ ಯೋಚನೆಗಳಿಗೆ ಕಛೇರಿಯಲ್ಲಿ ಬೆಂಬಲ ಸಿಗಲಿದೆ. ಸಿಕ್ಕವಸ್ತುವನ್ನು ಸಂತೃಪ್ತಿಯಿಂದ ಅನುಭವಿಸುವ ಸ್ವಭಾವವನ್ನು ರೂಢಿಸಿಕೊಳ್ಳಲೇಬೇಕು. ಇಲ್ಲವಾದರೆ ಅಸಮಾಧನಾವನ್ನು ಸದಾ ಅನುಭವಿಸುವಿರಿ. ಅಧಿಕಾರದ ನೀವೂ ದುರುಪಯೋಗ ಮಾಡಿಕೊಳ್ಳಬೇಡಿ, ಬೇರೆಯವರು ಮಾಡದಂತೆ ಎಚ್ಚರವಹಿಸಿ.

ಧನು: ಯಾರ ಸ್ಥಾನ, ಬುದ್ಧಿ, ಸ್ಥಳ, ಸಂದರ್ಭ, ವ್ಯಕ್ತಿಗಳನ್ನು ಅಪ್ರಯೋಜಕ ಎಂದು ತಿಳಿಯಬೇಡಿ. ನಿಮಗೆ ಉಪತೋಗವಿಲ್ಲದಿದ್ದರೆ ಮತ್ತಾರಿಗಾದರೂ ಆದಾರು, ಏನನ್ನಾದರೂ ಸಾಧಿಸಿಯಾರು. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿರಲಿದೆ ನಿಮಗೆ. ನೀವು ಸುಖವಾಗಿದ್ದೀರಿ ಎಂದು ಹೇಳಬೇಡಿ. ಜವಾಬ್ದಾರಿಗಳು ಅಂಟಿಕೊಳ್ಳಬಹುದು ಇಂದು. ಹಣೆಬರಹವನ್ನು ಯಾರೂ ತಿದ್ದಲಾಗದು ಎಂಸು ನಂಬಿದವರು. ನಿಮ್ಮ ಪ್ರಯತ್ನವನ್ನು ಮಾಡಿ. ಸಾಲವನ್ನು ತೀರಿಸಲು ಓಡಾಬೇಕಾದೀತು. ಅಸ್ಪಷ್ಟವಾದ ವಿಚಾರಕ್ಕೆ ಕೈ ಹಾಕಬೇಡಿ. ಸಂಗಾತಿಯು ನಿಮ್ಮ ಬಗ್ಗೆ ತವರಿನಲ್ಲಿ ದೂರು ನೀಡಬಹುದು. ಉಗುರಿನಲ್ಲಿ ಆಗುವ ಕೆಲಸಕ್ಕೆ‌ ಕೊಡಲಿ ತಂದಂತಾಗುವುದು. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಹನಿ ನೀರ ಸುರಿಸುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌.

ಮಕರ: ಇಂದು ನೀವು ಯಾರಿಗೋ ಕಾದು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಕಛೇರಿಯ ಕೆಲಸವೂ ಈ ಕಾರಣದಿಂದ ವಿಳಂಬವಾಗುವುದು. ಉದ್ಯೋಗದಲ್ಲಿ‌ ಭಡ್ತಿ ಪಡೆಯುವ ಅವಕಾಶವಿದ್ದರೂ ನೀವೇ ಮಾಡಿಕೊಂಡ ಸಣ್ಣ ಪುಟ್ಟ ಸಮಸ್ಯೆಗಳಿಂದ ಅದು ಅಸಾಧ್ಯವಾದೀತು. ಅನಿರೀಕ್ಷಿತ ವಾರ್ತೆಯೊಂದು ನಿಮ್ಮನ್ನು ವಿಚಲಿತಗೊಳಿಸೀತು. ನಿಮ್ಮ ಸ್ಫೂರ್ತಿಯ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾದೀತು. ಶತ್ರುಗಳಿಂದ ತೊಂದರೆ ಇಲ್ಲದಿದ್ದರೂ ನಿಮ್ಮೊಳಗೆ ಇದ್ದಾರೆಂಬ ಭಾವನೆ ಇರಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ.

ಕುಂಭ: ಸದ್ಯ ಆಲಸ್ಯವೇ ಮೈತುಂಬಿಕೊಂಡಿರುವ ಕಾರಣ ಯಾವ ಅಂಶವೂ ನಿಮ್ಮೊಳಗೆ ಹೋಗದು. ಅತಿಯಾದ ಪ್ರಯಾಣದಿಂದ ಆಯಾಸವಾಗಲಿದೆ. ವಿಶ್ರಾಂತಿಯನ್ನು ಪಡೆದು ಮುಂದಿನ ಕೆಲಸಕ್ಕೆ ತಯಾರಾಗಿ. ಕಳೆದುಕೊಂಡ ನಂಬುಗೆಯನ್ನು ಉಳಿಸಿಕೊಳ್ಳುವ ಬಹಳ ಪ್ರಯತ್ನಪಡುವಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಅಥವಾ ಸ್ನೇಹಿತರ ಜೊತೆ ಸಮಯವನ್ನು ಕಳೆಯಿರಿ. ಅಮೂಲ್ಯ ಸಂಪತ್ತನ್ನು ಸಂಪಾದಿಸುವುದು ಎಷ್ಟು ಮುಖ್ಯವೋ ಅದರ ರಕ್ಷಣೆಯೂ ಅಷ್ಟೇ ಮುಖ್ಯ. ಯಾರದಾರೂ ಬಂದು ವಿವಾಹವಾಗಲು ಕೇಳಿಕೊಂಡರೆ ಇಲ್ಲವೆನಬೇಡಿ. ಕಾಲವನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ಬೇಡ.

ಮೀನ: ನಿಮ್ನ ಸ್ವಂತ ಉದ್ಯೋಗಕ್ಕೆ ವರ್ತಮಾನಕ್ಕೆ ತಕ್ಕಂತೆ ರೂಪವನ್ನು ಬದಲಿಸಿ, ಸತ್ತ್ವನ್ನು ಉಳಿಸಿಕೊಳ್ಳುವುದು ಉತ್ತಮ. ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಪ್ರತಿಕೂಲದಿಂದ ಅನುಕೂಲ ವಾತಾವರಣಕ್ಕೆ ಒಯ್ಯಬಹುದು. ಆದರೆ ನಿಮ್ಮ ಪೂರ್ವಾರ್ಜಿತವು ಸರಿಯಾಗಿರಬೇಕು. ಕಳೆದುಹೋದುದರ ಬಗ್ಗೆ ನೆನೆಯುವುದಜ ಬೇಡ. ಆಗಮನಕಾಲವನ್ನು ಎದುರಿಸುವ ಬಗೆಯನ್ನು ಚಿಂತಿಸಿ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ಅದನ್ನು ಮನೆಯವರೆಗೂ ತಂದು ವಾತಾವರಣವನ್ನು ಹಾಳುಮಾಡಬೇಡಿ.

ಲೋಹಿತಶರ್ಮಾ 8762924271 (what’s app only)