Daily Horoscope: ನಿಮ್ಮನ್ನು ದ್ವೇಷಿಸುತ್ತಿದ್ದವರು ಒಮ್ಮೆಲೆ ಇಷ್ಟಪಡಬಹುದು, ಆಪತ್ತಿಗೆ ಎಡೆಮಾಡಿಕೊಡಬಹುದು ಎಚ್ಚರ!

|

Updated on: May 09, 2023 | 5:00 AM

ಇಂದಿನ (2023 ಮೇ​ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ನಿಮ್ಮನ್ನು ದ್ವೇಷಿಸುತ್ತಿದ್ದವರು ಒಮ್ಮೆಲೆ ಇಷ್ಟಪಡಬಹುದು, ಆಪತ್ತಿಗೆ ಎಡೆಮಾಡಿಕೊಡಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 03:49 ರಿಂದ 05:15ರ ವರೆಗೆ, ಯಮಘಂಡ ಕಾಲ 09:18 ರಿಂದ 10:54ರ ವರೆಗೆ, ಗುಳಿಕ ಕಾಲ 12:29 ರಿಂದ 02:04ರ ವರೆಗೆ.

ಮೇಷ: ನೀವು ಸಾಗುವ ಮಾರ್ಗವನ್ನು ನೋಡಿಕೊಳ್ಳಿ. ನಿಮಗೆ ತೃಪ್ತಿ ಎನಿಸದರೆ ಅಲ್ಲಿಯೇ ಮುಂದುವರಿಯಿರಿ. ಇಲ್ಲವಾದರೆ ಈಗಲೇ ಬದಲಿಸುವುದು ಒಳ್ಳೆಯದು. ಅನಂತರ ಪಶ್ಚಾತ್ತಾಪ ಪಡಬೇಕಾದೀತು. ಕೆಲವು ಸಂದರ್ಭಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು.‌ ಅದನ್ನು ಸುಂದರವಾಗಿ ನಿಭಾಯಿಸಲು ಕಲಿಯಿರಿ. ನಿಮ್ಮ ಹಿತವಾದ ಮಾನಸಿಕ‌ಸ್ಥಿತಿಯನ್ನು ಹಲವರು ಇಷ್ಟಪಡಬಹುದು. ಮನೆ ಕೆಲಸದಲ್ಲಿ ನೀವಿಂದು ಬಹುಪಾಲು‌ ಮಗ್ನರಾಗುವಿರಿ. ಕಫಕ್ಕೆ ಸಂಬಂಧಿಸಿದ ಖಾಯಿಲೆಯು ಅಧಿಕವಾದೀತು. ಮನೆಯಲ್ಲಿ ಔಷಧೋಪಚಾರವನ್ನು ಮಾಡಿಕೊಳ್ಳಿ.

ವೃಷಭ: ಉತ್ತಮವಾದ ಆಯ್ಕೆ ಮಾಡಿಕೊಳ್ಳಬೇಕೆಂದು ಹೋಗಿ ಕೆಟ್ಟದ್ದನ್ನು ಆಯ್ಕೆ ಮಾಡಿಕೊಂಡು ಬರುವಿರಿ. ಅದು ನಿಮ್ಮ ಮನಸ್ಸಿನ ಸಹಜತೆಯಲ್ಲ, ಗ್ರಹಗತಿಗಳು ಆ ಸಮಯದಲ್ಲಿ ಅಂತಹ ಯೋಚನೆಯನ್ನು ಮಾಡಲು ಪ್ರೇರಿಸಬಹುದು. ಸರಳತೆಯು ನಿಮ್ಮ ಸುತ್ತಲಿನ‌ ಜನಕ್ಕೆ
ಇಷ್ಟವಾದೀತು. ಹಣವಿಲ್ಲದಿದ್ದರೂ ಗುಣದಿಂದ ಖ್ಯಾತಿಯನ್ನು ಪಡೆಯಬಲ್ಲಿರಿ. ಮಕ್ಕಳನ್ನು ಅತಿಯಾಗಿ ಇಷ್ಟಪಡುವಿರಿ. ಆರೋಗದಲ್ಲಿ ವ್ಯತ್ಯಾಸವಾದೀತು. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸಬೇಕಾಗಬಹುದು. ಸೂರ್ಯನ ಸ್ತೋತ್ರವನ್ನು ಮಾಡಿ.

ಮಿಥುನ: ಖುಷಿಯಲ್ಲಿನಿದ್ದೇನೆಂದು ಏನನ್ನಾದರು ಮಾಡಲು ಹೋಗಿ ದುಃಖವನ್ನು ತಂದುಕೊಳ್ಳಬಹುದು. ನಿಷ್ಠುರ ನಿಮ್ಮ ಮಾತನ್ನು ಕೇಳಿ ನಿಮ್ಮ ಬಗ್ಗೆ ಇರುವ ಮೃದುತ್ವವು ಹೋಗಬಹುದು. ಧನನಷ್ಟವು ನಿಮಗೆ ಅತಿಯಾದ ದುಃಖದ ಸಂಗರಿಯಾಗಲಿದೆ. ವಿದ್ಯಾಭ್ಯಾಸದಿಂದ ಏನು ಪ್ರಯೋಜನ ಎನಿಸಿ ಓದನ್ನು ನಿಲ್ಲಿಸಬಹುದು. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಕುಂದು ಕೊರತೆಯನ್ನು ನೋಡುತ್ತ ಹೆಚ್ಚಿನ‌ ಕಾಲ ಕಳೆಯುವಿರಿ. ಉದ್ವೇಗವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವಿರಿ. ವ್ಯಾಧಿಯ ಕಾರಣದಿಂದ ಸಂಪತ್ತು ನಷ್ಟವಾದೀತು. ಮೃತ್ಯುಂಜಯನನ್ನು ಮನಾಸಾ ಧ್ಯಾನಿಸಿ.

ಕಟಕ: ಇಷ್ಟು ದಿನ ದ್ವೇಷಿಸುತ್ತಿದ್ದ ವ್ಯಕ್ತಿಯು ಇಂದು ನಿಮ್ಮ ಮಿತ್ರನಾಗಲು ಬಂದಾನು. ನಿಮಗೆ ಅದು ಆಪತ್ತಿಗೆ ಸೂಚನೆಯಂತೆ ಕಂಡೀತು. ಕಾರ್ಯದ ಸ್ಥಳದಲ್ಲಿ ನಿಮ್ಮ ಸಹಾಯವನ್ನು ಅನೇಕರು ಬಯಸಿಯಾರು. ಪ್ರೀತಿಯಿಂದ ಮಾಡಿಕೊಡಿ. ವಿವಾದಗಳು ಆಗುವ ಸಂದರ್ಭವಿದ್ದರೆ ಅಲ್ಲಿಂದ ಪಲಾಯನ‌ ಮಾಡಿ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಿ. ಸಹೋದರನ ಅಪರೂಪದ ಭೇಟಿ ನಿಮಗೆ ಖುಷಿ ಕೊಡಲಿದೆ. ದೇಹದ ನೋವನ್ನು ನುಂಗಲು ಮಾತ್ರೆಯನ್ನು ಆಶ್ರಯಿಸುವಿರಿ. ಲಕ್ಷ್ಮೀನಾರಾಯಣರ ಪ್ರಾರ್ಥನೆಯನ್ನು ಮಾಡಿ.

ಸಿಂಹ: ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಶುರುವಾದರೆ ಸಾಕು ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಇಷ್ಟವಾದ ವಸ್ತುವು ನಷ್ಟವಾಗಿ ಸಂಕಟಪಡಬೇಕಾದೀತು. ಸ್ನೇಹಿತರ ನಡುವೆ ವಾಗ್ವಾದ ನಡೆದು ವಿಯೋಗದಿಂದ ಮುಕ್ತಾಯವಾಗಬಹುದು. ಸ್ತ್ರೀಮೂಲದಿಂದ ಸಂಪತ್ತು ಅಥವಾ ಸಹಕಾರ ಸಿಗಬಹುದು. ತಾನಾಗಿಯೇ ಬಂದಿದ್ದನ್ನು ನೀವು ದೂರ ಮಾಡಬೇಡಿ.‌ ನಿಮಗೆ ಅದು ಅನುಕೂಲವನ್ನು ಮಾಡಿಕೊಡಲಿದೆ. ಜೀವನ ಒಂದು ಕ್ಷಣ ಸಪ್ಪೆಯಂತೆ ಅನ್ನಿಸಬಹುದು. ಗುರುವನ್ನು ಅಥವಾ ಗುರುಸಮಾನರನ್ನು ಭೇಟಿಯಾಗಿ ಹಿತವಚನವನ್ನು ಕೇಳಿ ಬನ್ನಿ. ಹೊಸ ಉತ್ಸಾಹವು ಬಂದೀತು.

ಕನ್ಯಾ: ದ್ವಂದ್ವಗಳು ಬಹಳ ನಿಮ್ಮನ್ನು ಕಾಡಲಿದ್ದು ಆಯ್ಕೆಗೆ ಬಹಳ ಕಷ್ಟ ಪಡುವಿರಿ. ಒಮ್ಮೆ ಆಯ್ಕೆ ಮಾಡಿದರೂ ಅದು ನಿಮ್ಮ ಪಾಲಿಗೆ ಕುಸುಮಮಾರ್ಗವಾಗಿರದು. ತಾಳ್ಮೆಯಿಂದ ಆಗುವ ಲಾಭವನ್ನು ಸ್ವತಃ ಅನುಭವಿಸುವಿರಿ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ವರ್ತಿಸುವರು.‌ ಕಂಡೂ ಕಾಣದಂತೆ ಇರಬೇಕಾದ ಸ್ಥಿತಿ ಬರಬಹುದು. ಕಛೇರಿಯಲ್ಲಿ ನೀವು ಇಂದು ಸ್ವತಂತ್ರರು. ನಿಮ್ಮ ನಿರ್ಧಾರವನ್ನು ಉಳಿದವರು ಗೌರವಿಸುವರು.‌ ಅದನ್ನು ಮುಂದೂ ಇಟ್ಟುಕೊಳ್ಳುವಂತೆ ಇರಬೇಕಾಗಿರುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವಾರ್ಚನೆಯನ್ನು ಮಾಡಿಸಿ.

ತುಲಾ: ಅತಿಯಾದ ಆದಾಯವನ್ನು ಆದಿಯಲ್ಲಿಯೇ ಆಸೆ ಪಡುವುದು ಅಷ್ಟು ಅನುಕೂಲವಲ್ಲ. ಕಾಲಾಂತರದಲ್ಲಿ ಅದು ಸಾಧ್ಯವಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನವು ಉದ್ಯೋಗದಲ್ಲಿ ಇರಲಿ. ಪಾಲುದಾರಿಕೆಯನ್ನು ಮಾಡಿಕೊಂಡು ನೀವು ನಡೆಸುತ್ತಿರುವ ಉದ್ಯಮವನ್ನು ಮುಂದುವರಿಸಬಹುದು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುವಿರಿ. ಗೃಹೋಪಕರಣದ ಖರೀದಿಯಿಂದ ಹಣಕಾಸು ಸ್ವಲ್ಪ ಕುಸಿಯಬಹುದು. ಲಲಿತ ಕಲೆಗಳನ್ನು ಕಲಿಯುವ ಆಸಕ್ತಿಯನ್ನು ತೋರುವಿರಿ. ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಪತ್ತು ಬರುವ ಸೂಚನೆ ಇದ್ದರೆ ಕಾತ್ಯಾಯನಿಯನ್ನು ಸ್ಮರಣೆ ಮಾಡಿ.

ವೃಶ್ಚಿಕ: ಸ್ವಾವಲಂಬಿಯಾಗಿ ಬದುಕುವ ನಿಮ್ಮ ಸಂಕಲ್ಪ ಸಂಪೂರ್ಣ ಸಾಕಾರವಾಗದು. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಲಿದ್ದು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡೀತು. ಶಿಸ್ತುಬದ್ಧ ಜೀವನದಿಂದ ನೀವು ಸ್ವಲ್ಪ ಆಚೆ ಬರಲಿದ್ದೀರಿ. ಸಹವಾಸವು ದೋಷದಿಂದ‌ ಕೂಡಿರಲಿದೆ. ಯಾರ ಮಾತನ್ನೂ ಕೇಳದ ಸ್ಥಿತಿಯನ್ನು ನೀವು ತಂದುಕೊಳ್ಳಲಿದ್ದೀರಿ. ಆತ್ಮೀಯರು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ನಿಮ್ಮ ತಪ್ಪಿಗೆ ಕಾರಣವನ್ನು ಹುಡುಕುವ ಬದಲು ವ್ಯಕ್ತಿಗಳನ್ನು ಹುಡುಕುತ್ತ ಇರುವಿರಿ. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಸುಬ್ರಹ್ಮಣ್ಯನ ಸ್ತೋತ್ರ, ಭಜನೆಗಳನ್ನು ಮಾಡಿ. ಸರಿಯಾದ ಮಾರ್ಗಗಳು ಸಿಕ್ಕಾವು.

ಧನು: ಕೊಟ್ಟಿದ್ದನ್ನು ಪುನಃ ಕೇಳಲು ಹೋಗಬೇಡಿ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿಬಿಡಿ. ಸಂಗಾತಿಯು ಕಾಲು ಕೆರದು ಕಲಹಕ್ಕೆ ಬರಬಹುದು. ನಿಮ್ಮ ಕಡೆ ತಾಳ್ಮೆಯ ಗುರಾಣಿ ಇರಲಿ. ನೀವೂ ಕತ್ತಿವರಸೆ ಮಾಡಿಬಿಟ್ಟೀರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತೋಷವಾಗಲಿದೆ. ವಿದೇಶಕ್ಕೆ ಸುತ್ತಾಟ ಮಾಡಲು ಹೋಗಬಹುದು. ಕೆಲಸವು ನಿಧಾ‌ವಾಗಿ ಸಾಗುವುದು. ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಬಹುದು.‌ ಆಪ್ತರ ಕೂಟದಲ್ಲಿ ಭಾಗಿಯಾಗಿ ನಕ್ಕು ನಲಿಯುವಿರಿ. ಅವರ ಬಳಿ ಆರ್ಥಿಕತೆಯ ಬಗ್ಗೆ ವಿಚಾರಿಸುವಿರಿ. ಪರಮೇಶ್ವರಿಯನ್ನು ಸ್ತೋತ್ರ ಮಾಡಿ. ಕೆಲಸಗಳು ಸಲೀಸಾದೀತು.

ಮಕರ: ಸಿಕ್ಕಿದ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವ ಮನಸ್ಸು ಉಂಟಾಗಬಹುದು. ಮುಂದೆ ಉಪಯೋಗಕ್ಕೆಂದು ಇಟ್ಟಿದ್ದ ಹಣವು ಖಾಲಿಯಾಗಲಿದೆ. ವಿರುದ್ಧ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ತಂದುಕೊಳ್ಳಬಹುದು. ಆಯ್ಕೆಯ ಗೊಂದಲದಿಂದ ಚಿಂತೆಗೊಳ್ಳಬಹುದು. ಖರೀದಿಯನ್ನು ಆದಷ್ಟು ಕಡಮೆ ಮಾಡುವುದು ಉತ್ತಮ. ಸಹಾಯಕ್ಕಾಗಿ ಬರುವವರ ಮೇಲೆ ಒಂದು ಕಣ್ಣಿರಲಿ. ಅಧ್ಯಾತ್ಮವನ್ನು ನಿಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಹಿನ್ನಡೆ ಇರಲಿದೆ.

ಕುಂಭ: ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಟ್ಟುಬಿಡಬಹುದು. ನಿಮ್ಮ‌ ಮೇಲೆ‌ ನಿಮಗೆ ನಿಗಾ ಇರಲಿ. ಕಛೇರಿಯ ವ್ಯವಹಾರಗಳು ಸಂಪೂರ್ಣವಾಗಿ ಅರ್ಥವಾಗದೇ ಏನನ್ನೂ ಮಾಡಲು ಹೋಗಬೇಡಿ. ಅಂತಿಮವಾಗಿ ನಿಮ್ಮ ತಲೆಗೇ ಬಂದೀತು. ಅತಿಯಾದ ಕೆಲಸದಿಂದ ಸುಸ್ತಾಗಿ ಜ್ವರ ಬರುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ, ಬಾರದಂತೆ ಜಾಗರೂಕರಾಗಿರಿ, ಬೇಕಿದ್ದಲ್ಲಿ ವಿಶ್ರಾಂತಿ ಪಡೆಯಿರಿ. ಹೂಡಿಕೆಯ ಬಗ್ಗೆ ಮನಸ್ಸಿದ್ದರೂ ಅದು ಅರ್ಥವಾಗದೇ ಸುಮ್ಮನೇ ಇರುವಿರಿ. ಅಕಾರಣವಾಗಿ ಸುತ್ತಾಟ ಮಾಡಬಹುದು. ನಾರಾಯಣನ ಸ್ತೋತ್ರವನ್ನು ಮಾಡಿ.

ಮೀನ: ಸಂತೋಷದ ಅನಂತರ ದುಃಖ ಎಂಬ ಮೂಢನಂಬಿಕೆಯನ್ನು ಬಿಡಿ.‌ ಸಂತೋಷವಾಗಿ ದಿನವನ್ನು ಕಳೆಯಿರಿ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನೀವು ನಿಲ್ಲಿಸುವಿರಿ. ಕೆಲಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಕೆಲಸಕ್ಕಾಗಿ ನೀವು ಕಾಯಬೇಕಾದೀತು. ಬಂಧುಗಳ‌ ಮನೆಯಲ್ಲಿ ಇಂದು ವಾಸ ಮಾಡಲಿದ್ದೀರಿ. ಪತ್ನಿಯ ಜೊತೆ ಕಲಹವಾಗಬಹುದು. ದ್ವೇಷವನ್ನು ಸಾಧಿಸಲು ಹೋಗುವುದಿಲ್ಲ. ಮರೆತು ಸಹಜಸ್ಥಿತಿಗೆ ಬರುವುದು ಒಳ್ಳೆಯದು. ಹನುಮಾನ್ ಚಾಲೀಸ್ ಪಠನವು ನಿನಗೆ ಶ್ರೇಯಃಪ್ರದವಾಗಲಿದೆ.

ಲೋಹಿತಶರ್ಮಾ 8762924271 (what’s app only)