Nithya Bhavishya: ಇಂದಿನ ರಾಶಿ ಭವಿಷ್ಯ, ವಿವಾದದ ಹೇಳಿಕೆಗಳಿಂದ ಈ ರಾಶಿಯವರಿಗೆ ತೊಂದರೆಯಾದೀತು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 51 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.
ಸಿಂಹ: ಏನೂ ಗೊತ್ತಿಲ್ಲದೇ ದ್ವೇಷಮಾಡಬೇಡಿ ಯಾರನ್ನೂ. ನಿಮ್ಮದೇ ತಪ್ಪುಗಳು ನಿಮಗೆ ಮುಳ್ಳಾಗಬಹುದು. ಧನಾತ್ಮಕ ಚಿಂತನೆಯು ನಿಮ್ಮನ್ನು ನೆಮ್ಮದಿಯ ಕಡೆಗೆ ಒಯ್ಯಬಹುದು. ನೂತನ ವಧುವಿಗೆ ಮನೆಯಲ್ಲಿ ಅಧೈರ್ಯವು ಕಾಡಬಹುದು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುನ್ನಡೆಯಿರಿ. ಉತ್ತಮ ಆಲೋಚನೆಗಳು ನಿಮ್ಮನ್ನು ಕೈ ಹಿಡಿದು ನಡೆಸುವವು. ಪ್ರಯಾಣವನ್ನು ಅನಿವಾರ್ಯವಾದರೆ ಮಾಡಿ. ಆಲಸ್ಯಕ್ಕೆ ನೀವೆರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸಗಳನ್ನು ಅದು ಕೆಡಿಸೀತು.
ಕನ್ಯಾ: ಮರ್ಯಾದಿಗೆ ಅಂಜಿ ಮಾಡಬೇಕಾದ ಕೆಲಸಗಳನ್ನು ಮುಂದೂಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಆದೀತು. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವು ಸಿಗಲಿದೆ. ನೂತನ ಸ್ಥಳವನ್ನು ಖರೀದಿಸಲಿದ್ದೀರಿ. ಅದು ನೀರಾವರೀ ಪ್ರದೇಶವಾಗಿ ಇರಲಿದೆ. ಇಂದು ಅತಿಯಾದ ಕೋಪದಿಂದ ಹೊರಗಿರುವುದು ಉತ್ತಮ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲ ಸಿಗುತ್ತದೆ ಎಂದು ನಂಬಬೇಡಿ. ಸ್ವಲ್ಪ ಕಾಲ ಸುಮ್ಮನೇ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಿ. ಹಿತಶತ್ರುಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ಅವರ ಜೊತೆ ಹೆಚ್ಚಿನ ಚರ್ಚೆಯನ್ನು ಮಾಡಬೇಡಿ.
ತುಲಾ: ಹಳೆಯ ಖಾಯಿಲೆಗಳು ಪುನಃ ಬರುವ ಸಾಧ್ಯತೆ ಇದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು. ಕುಟುಂಬಕ್ಕೆ ಸಹಕಾರ ಕೊಡಲಿದ್ದೀರಿ. ವಿವಾದದ ಹೇಳಿಕೆಗಳಿಂದ ನಿಮಗೆ ತೊಂದರೆಯಾದೀತು. ಪ್ರಯಾಣವು ಇಂದು ಸುಖಕರವಾಗುವುದು. ದಿನನಿತ್ಯದ ಬಳಸುವ ವಸ್ತುವಿನ ವ್ಯಾಪಾರವು ಲಾಭವನ್ನು ತಂದೀತು. ಮನಸ್ಸಿನಲ್ಲಿ ಅಶಾಂತಿಯು ಇರಲಿದೆ. ಎಂದೋ ಮಾಡಿದ ಹೂಡಿಕೆಯಿಂದ ಸಹಾಯವಾಗಲಿದೆ. ವಿವಾಹದ ಶುಭ ಸುದ್ದಿಯು ನಿಮಗೆ ಗೊತ್ತಾಗಲಿದೆ. ಸಣ್ಣ ಬಯಕೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗುವಿರಿ.
ವೃಶ್ಚಿಕ: ಇಂದು ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ನಡೆಯುವಾಗ ಎಚ್ಚರಿಕೆ ಇರಲಿ. ಭವಿಷ್ಯದ ತೀವ್ರವಾಗಿ ಕಾಡುವುದು. ಸಾಲದಿಂದ ನಿಮಗೆ ಬಹಳ ತೊಂದರೆಯಾದೀತು. ಆರೋಗ್ಯವನ್ನು ಕಾಪಾಡಿಕೊಳ್ಳಿ. ಅಪರಿಚಿತರಿಂದ ನಿಮಗೆ ದುಃಖವಾದೀತು. ಆಕಾಶವನ್ನು ಅಂಗೈಯಲ್ಲಿ ತರುವುದು ಸಾಧ್ಯವಿಲ್ಲ. ಬಂದಿರುವುದನ್ನು ಸ್ವೀಕರಿಸಿ. ನಗು ಮುಖವೇ ನಿಮ್ಮ ಹಲವಾರು ಕೆಲಸಗಳನ್ನು ಮಾಡಿಕೊಡುವುದು. ಮಾತನ್ನು ಸ್ಪಷ್ಟವಾಗಿ ಆಡಿ. ಒತ್ತಡವು ಹೆಚ್ಚಿದ್ದೀತು. ಕುಳಿತಲ್ಲೇ ಕುಳಿತರೇ ಆಗದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
-ಲೋಹಿತಶರ್ಮಾ ಇಡುವಾಣಿ