Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 5) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 5 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಸಿದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:14ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ.
ಸಿಂಹ: ಸಹೋದ್ಯೋಗಿಗಳಿಂದ ಕಛೇರಿಯಲ್ಲಿ ನಿಮಗೆ ಒತ್ತಡ ಪರಿಸ್ಥಿತಿ ಬರಬಹುದು. ಇದನ್ನು ನೀವು ಸವಾಲಾಗಿ ಸ್ವೀಕರಿಸಿ ಸೈ ಎನಿಸಿಕೊಳ್ಳಲಿದ್ದೀರಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಭೂಮಿಯನ್ನು ಖರೀದಿಸಲು ಸ್ಥಳ ಪರಿಶೀಲನೆಗೆ ಹೋಗುವ ಸಾಧ್ಯತೆ ಇದೆ. ಯಾರಾದರೂ ಹಣಕಾಸಿನ ವಿಚಾರಕ್ಕೆ ಬಂದರೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಉತ್ಸಾಹದಿಂದ ಮಾಡುವಿರಿ. ಯಾರನ್ನೂ ಅವಲಂಬಿಸುವ ಯೋಜನೆಯನ್ನು ನೀವು ಬಿಡುವಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.
ಕನ್ಯಾ: ಹಳೆಯೆ ರೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಮಕ್ಕಳ ವಿದ್ಯಾಭ್ಯಾಸ ಚಿಂತೆ ಕಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ವೇಗವಾಗಿ ಮುಗಿದು ಆರಾಮಾಗಿ ಇರುವಿರಿ. ವಸ್ತ್ರಗಳನ್ನು ಖರೀದಿಸಬಹುದು. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ತಾಯಿಯ ಜೊತೆ ಹರಟೆ ಹೊಡೆದು ಅವರ ಮನಸ್ಸನ್ನು ಹಗುರ ಮಾಡುವಿರಿ. ಮನಸ್ಸಿನ ದ್ವಂದ್ವಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದುವಿರಿ.
ತುಲಾ: ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ಹೊಸ ಜನರನ್ನು ಭೇಟಿಯಾಗುವುದು ನಿಮಗೆ ಇಷ್ಟದ ಕೆಲಸದಲ್ಲಿ ಒಂದಾಗಿದೆ. ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವವನ್ನು ಬೆಳಿಸಿಕೊಳ್ಳಬೇಕಾಗಬಹುದು. ಸ್ನೇಹಿತರಿಂದ ಏನನ್ನಾದರೂ ಇಂದು ನಿರೀಕ್ಷಿಸುವಿರಿ. ಸ್ತ್ರೀಯರ ಜೊತೆ ಹೆಚ್ಚು ಒಡನಾಟವಿರಬಹುದು. ಸಾಂಸಾರಿಕ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದೀರಿ. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ.
ವೃಶ್ಚಿಕ: ಹೊಸ ಆದಾಯದ ಮೂಲವನ್ನು ಹುಡುಕಲು ಆರಂಭ ಮಾಡುವಿರಿ. ಇದಕ್ಕೆ ಸಹೋದರನ ಬೆಂಬಲವೂ ಸಹಕಾರವೂ ಸಿಗಲಿದೆ. ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ನಿಮ್ಮ ವಾಹನವನ್ನು ಅಪರಿಚಿತರ ಕೈಗೆ ನೀಡಬೇಡಿ. ಇಂದು ನೀವು ಸೋಲನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಅನಾರೋಗ್ಯವಿದ್ದರೂ ಉತ್ಸಾಹದಿಂದ ನೀವು ಕೆಲಸವನ್ನು ಮಾಡುವಿರಿ. ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳುವರು. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ.
-ಲೋಹಿತಶರ್ಮಾ ಇಡುವಾಣಿ