Nitya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

2023 ಮಾರ್ಚ್ 11 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: lokmat.com
Follow us
ಗಂಗಾಧರ​ ಬ. ಸಾಬೋಜಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 11, 2023 | 6:47 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 11 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಧನು: ವಿದ್ಯಾರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಿಸಿರಬಹುದು. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ನೀವು ಆಪ್ತರಿಗೋಸ್ಕರ ಸಮಯವನ್ನು ಇಡಲಿದ್ದೀರಿ. ಹಳೆಯ ಪ್ರೇಮಪ್ರಕರಣವು ಇಂದು ಬೆಳಕಿಗೆ ಬರಬಹುದು. ನಿಮಗೆ ಬೆಲೆ ಕೊಡದೇ ಇರುವದನ್ನು ಕಂಡು ಬೇಸರಿಸುವಿರಿ. ಅಗಾಧವಾದ ನಿರೀಕ್ಷೆಗಳನ್ನು ಎದುರಿಸುತ್ತಿದ್ದರೂ, ಪರಿಸರವು ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾದ್ಯತೆ ಇದೆ. ಶತ್ರುಗಳು ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬರಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಉನ್ನತಸ್ಥಾನವನ್ನು ನೀಡುವ ಪ್ರಸ್ತಾಪ ಬರಬಹುದು.

ಮಕರ: ಗೆಳೆತನವು ಪ್ರೀತಿಯಾಗಿ ಬದಲಾಗಿ ವಿವಾಹಕ್ಕೆ ತಯಾರಾಗಿದೆ. ಕ್ಷಣಕಾಲದಲ್ಲಿ ಆದ ಅನಾಹುತಕ್ಕೆ ಬಹಳ ಕಷ್ಟವನ್ನು ಅನುಭವಿಸುವಿರಿ. ತಂದೆ ಮತ್ತು ಮಕ್ಕಳಲ್ಲಿ ಸ್ವಲ್ಪಮಟ್ಟಿಗೆ ಕಲಹವಿರುವುದು. ಇಂದಿನ ನಿಮ್ಮ ಕೆಲಸಗಳು ಆಯಾಸವನ್ನು ತರಿಸುವುದು. ಕಲಾವಿದರು ಅವಕಾಶಗಳನ್ನು ಸೃಷ್ಟಿಕೊಳ್ಳಲಿದ್ದಾರೆ. ಗೃಹನಿರ್ಮಾಣದ ಪ್ರಸ್ತಾಪವು ಇರಲಿದೆ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡಲಿದೆ. ಹಿಂದಿನ ಹೂಡಿಕೆಗಳು ಬಹಳ ಆದಾಯವು ಸಿಗಲಿದೆ.

ಕುಂಭ: ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೀವು ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿರುವಿರಿ. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ. ಕೃಷಿಕರು ತಮ್ಮ ಮುಂದಿನ ಯೋಚನೆಗಳನ್ನು ಮಾಡುವರು. ಸಂದರ್ಭಕ್ಕೆ ಯೋಗ್ಯವಾಗಿ ವರ್ತಿಸಿ.

ಮೀನ: ಹೊಸ ಯೋಜನೆಯನ್ನು ಪ್ರಾರಂಭಿಸುವ ಸಮಯ ಬಂದಿದೆ. ತಡಮಾಡದೇ ಆರಂಭಿಸಿ. ಆಪ್ತರ ಸಹಕಾರವು ಸಿಗಲಿದೆ. ದಾಯಾದಿ ಕಲಹವು ನ್ಯಾಯಾಲಯದ ವರಗೂ ಹೋಗಬಹುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ. ಮನೆಯಿಂದ ದೂರದಲ್ಲಿ ಇರುವವರಿಗೆ ಮನೆಯ ಹಂಬಲವಾಗುವುದು. ಒಂಟಿಯಾಗಿ ಇರಲು ಇಷ್ಟಪಡುವಿರಿ. ಅಧ್ಯಯನದಿಂದ ನಿಮ್ಮನ್ನು ಚಂಚಲವಾಗಿಸುವ ಅನಗತ್ಯ ವಾದಗಳನ್ನು ಬಿಡಿ.

-ಲೋಹಿತಶರ್ಮಾ, ಇಡುವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ