AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ನಿಮ್ಮ ಪ್ರಯತ್ನಗಳು ಸಫಲವಾಗಬಹುದು

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 24 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ನಿಮ್ಮ ಪ್ರಯತ್ನಗಳು ಸಫಲವಾಗಬಹುದು
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 24, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಜ್ಯೇಷ್ಠ, ಯೋಗ: ಶಿವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:30ರ ವರೆಗೆ, ಯಮಘಂಡ ಕಾಲ 15:42ರಿಂದ 17:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ.

ಧನು ರಾಶಿ :ಇಂದು ಭೋಗದ ವಸ್ತುಗಳಿಂದ ಖುಷಿ ಪಡುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು‌ ಮಾಡಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸತನ್ನು ಕಲಿಯಬೇಕು ಎನದನುವ ತುಡಿತ ಇರಲಿದೆ. ಬಹುದಿನಗಳಿಂದ ಯೋಚಿಸುತ್ತಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡುವಿರಿ. ಹಿರಿಯರ ಸಲಹೆಯಿಂದ ಪ್ರಯೋಜನವಾಗಲಿದೆ. ಮಾನಸಿಕ ಅಸಮತೋಲನವನ್ನು ಕಾಯ್ದುಕೊಳ್ಳಲು ಸವಾಲಾಗಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ನೀವು ಸಹಿಸಲಾರಿರಿ. ವ್ಯಾಪಾರದಲ್ಲಿ ನೀವು ಹಿಂದುಳಿಯುವಿರಿ.

ಮಕರ ರಾಶಿ :ಇಂದು ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಬೇಡದ ವಿಷಯಕ್ಕೆ ಚಿಂತೆ ಹೆಚ್ಚಾಗುವುದು. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಭೂಮಿಯ ವ್ಯವಹಾರವನ್ನು ಮಾಡಲಿದ್ದೀರಿ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಲಿವೆ. ಸಂಗಾತಿಯ ಬೆಂಬಲ ಇರುತ್ತದೆ. ಆಲೋಚನೆಗಳು ನಿಧಾನಗತಿಯಲ್ಲಿ ಇರಲಿವೆ. ವಿದ್ಯಾರ್ಥಿಗಳು ಸಹವಾಸದೋಷದಿಂದ ಕೆಡುವ ಸಾಧ್ಯತೆ ಇದೆ. ಯಾರ ಮಾತನ್ನೂ ಕೇಳುವ ಸಾವಧಾನತೆ ಇರೆದು. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಬಂಧುಗಳ ಭೇಟಿಯನ್ನು ಮಾಡಲಾಗದು.

ಕುಂಭ ರಾಶಿ :ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಆಗದು. ಉದ್ಯಮದಲ್ಲಿ ಹೊಸ ಸಾಧ್ಯತೆಗಳು ಸೃಷ್ಟಿಯಾಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ಸಹೋದರನ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಆರ್ಥಿಕ ಯೋಗವಿದೆ. ತರಾತುರಿಯಲ್ಲಿ ಮಾಡಿದ ಕೆಲಸವು ಹಾನಿಯನ್ನುಂಟು ಮಾಡುತ್ತದೆ. ಮಗುವಿನ ನಡವಳಿಕೆಯು ನೋವನ್ನು ಉಂಟುಮಾಡುತ್ತದೆ. ಭೂಮಿಯ ಖರೀದಿಯಲ್ಲಿ ದುಡುಕುವುದು ಬೇಡ. ನಿಮ್ಮ ಪಿತ್ರಾರ್ಜಿತ ಆಸ್ತಿಯು ನಷ್ಟವಾಗಬಹುದು. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು‌. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಮತ್ಯಾರಿಗೋ ನೀವು ಸಮಯವನ್ನು ಕೊಡಬೇಕಾಗಬಹುದು.

ಮೀನ ರಾಶಿ :ನೀವು ಪ್ರಮುಖ ವ್ಯಕ್ತಿಯ ಸಂಬಂಧವನ್ನು ಬೆಳೆಸುವಿರಿ. ಅದೇ ನಿಮ್ಮ ಸಂಪತ್ತಿನ ಮೂಲವಾಗುತ್ತದೆ. ಸೃಜನಶೀಲತಯಿಂದ ನಿಮ್ಮ ಮನಸ್ಸು ಅರಳುವುದು. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ. ಚಂಚಲವಾದ ಮನಸ್ಸನ್ನು ನಿಗ್ರಹಿಸಲು ಪ್ರಯತ್ನಿಸಿ. ನಿಮ್ಮ ಪ್ರಯತ್ನಗಳು ಸಫಲವಾಗಬಹುದು. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸುವುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು. ಮಕ್ಕಳು ನಡತೆಯನ್ನು ಗಮನಿಸುವುದು ಉತ್ತಮ.

-ಲೋಹಿತ ಹೆಬ್ಬಾರ್-8762924271 (what’s app only)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ