Rashi Bhavishya: ಈ ರಾಶಿಯವರು ಹಣಕಾಸಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಚಿಂತಿತರಾಗಿರುವಿರಿ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 30) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Rashi Bhavishya: ಈ ರಾಶಿಯವರು ಹಣಕಾಸಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಚಿಂತಿತರಾಗಿರುವಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 30, 2024 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 30) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:38 ರಿಂದ 05:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 ರಿಂದ ಮಧ್ಯಾಹ್ನ 11:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:46 ರಿಂದ 02:12ರ ವರೆಗೆ.

ಸಿಂಹ ರಾಶಿ : ಕುಟುಂಬದ ಸದಸ್ಯರ ವಿವಾಹದ ಸಂಭ್ರಮದಲ್ಲಿ ಇರುವಿರಿ. ನಿಮ್ಮ ಸೌಕರ್ಯಗಳಿಗೆ ನೀವು ಸಂಪೂರ್ಣ ಒತ್ತು ನೀಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ನೀವು ಕೆಲಸಕ್ಕೆ ಯೋಗ್ಯವಾದ ಗೌರವವನ್ನೂ ಪಡೆಯಬಹುದು. ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುವುದು. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ. ಗೃಹೋದ್ಯಮದಲ್ಲಿ ನೀವು ಲಾಭವನ್ನು ಗಳಿಸುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಯಾರ ಮೇಲಾದರೂ ಮುನಿಸು ತಾತ್ಕಾಲಿಕವಾಗಿ ಇರುವುದು. ಸ್ತ್ರೀಯರಿಂದ ನಿಮಗೆ ಸಂತೋಷವು ಸಿಗುವುದು.

ಕನ್ಯಾ ರಾಶಿ : ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಚಿಂತಿತರಾಗಿರುವಿರಿ. ಅಧ್ಯಾತ್ಮದ ಕಡೆಗೆ ನಿಮ್ಮ‌ ಸೆಳೆತವು ಇರುವಂತೆ ತೋರುತ್ತದೆ. ನೀವು ಚಿಂತನಶೀಲವಾಗಿ ಕೆಲಸ ಮಾಡಿದರೆ, ಅದು ನಿಮಗೆ ಉತ್ತಮ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸಿದ್ದರೆ, ನಿಮ್ಮ ಆಸೆಯೂ ಈಡೇರಬಹುದು. ನಿಮ್ಮ ಮಗುವಿಗೆ ನೀವು ಹೊಸ ವಾಹನವನ್ನು ಮನೆಗೆ ತರಬಹುದು. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಆದಷ್ಟು ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು. ನಿಮ್ಮ ಆಲೋಚನೆಯನ್ನು ಕೆಲವಷ್ಟಕ್ಕೆ ಸೀಮಿತಗೊಳಿಸಿಕೊಳ್ಳುವಿರಿ. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.

ತುಲಾ ರಾಶಿ : ಇಂದು ನೀವು ಹೊಸ ಉದ್ಯಮಕ್ಕೆ ಬೇಕಾದ ಸ್ಥಳದ ಅನ್ವೇಷಣೆಯಲ್ಲಿ ತೊಡಗುವಿರಿ. ದಾನ ಧರ್ಮದ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಎಲ್ಲ ಸನ್ನಿವೇಶಗಳನ್ನು ನಿಯಂತ್ರಣದಲ್ಲಿ ನಿಭಾಯಿಸಲು ಪ್ರಯತ್ನಿಸಬೇಕಾಗುತ್ತದೆ. ಮನೆಯ ಅಲಂಕಾರದ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸುತ್ತೀರಿ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ಹೆತ್ತವರ ಆಶೀರ್ವಾದವು ನಿಮಗೆ ಉತ್ಸಾಹವನ್ನು ಕೊಡಬಹುದು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ.

ವೃಶ್ಚಿಕ ರಾಶಿ : ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ನೀವು ಕುಟುಂಬದ ಸದಸ್ಯರೊಂದಿಗೆ ಎಲ್ಲೋ ಹೊರಗೆ ಹೋಗಲು ಯೋಜಿಸಬಹುದು, ಆದರೆ ನಿಮ್ಮ ಕುಟುಂಬದ ಸಮಸ್ಯೆಗಳನ್ನು ಒಟ್ಟಿಗೆ ಪರಿಹರಿಸಲು ನೀವು ಪ್ರಯತ್ನಿಸಬೇಕು, ಇಲ್ಲದಿದ್ದರೆ ಅದು ನಿಮ್ಮ ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ಸದ್ಯ ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು.

ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ