November 2024 Horoscope: ನವೆಂಬರ್ ಮಾಸ ಭವಿಷ್ಯದಲ್ಲಿ 12 ರಾಶಿಗಳ ರಾಶಿಫಲ ಹೇಗಿದೆ?

ನವೆಂಬರ್ ಮಾಸ ಭವಿಷ್ಯ : ನವೆಂಬರ್‌ ತಿಂಗಳು ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಶುರುವಾಗಲಿದೆ. ಈ ಬೆಳಕಿನ ಹಬ್ಬ ಎಲ್ಲರಿ ಜೀವನದಲ್ಲೂ ಬೆಳಕು ತರಲಿ. ಹೊಸ ಅವಕಾಶ ತರಲಿ, ಸಮೃದ್ಧಿ ಹೆಚ್ಚಾಗಲಿ, ಕುಟುಂಬದಲ್ಲಿ ಸಂತೋಷ ನೆಲೆಸಲಿ ಎಂದು ಹಾರೈಸುತ್ತೇವೆ. ಇನ್ನು ನವೆಂಬರ್ ಮಾಸದಲ್ಲಿ ಗ್ರಹಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಏನು ಫಲ ಎನ್ನುವುದನ್ನು ತಿಳಿದುಕೊಳ್ಳಿ.

November 2024 Horoscope:  ನವೆಂಬರ್ ಮಾಸ ಭವಿಷ್ಯದಲ್ಲಿ 12 ರಾಶಿಗಳ ರಾಶಿಫಲ ಹೇಗಿದೆ?
ನವೆಂಬರ್ ಮಾಸ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Oct 25, 2024 | 9:25 PM

ನವೆಂಬರ್ 2024 ರ ಹನ್ನೊಂದನೇ ತಿಂಗಳಾಗಿದೆ. ಈ ತಿಂಗಳಲ್ಲಿ ವೃಷಭದಲ್ಲಿ ಗುರು, ಕರ್ಕದಲ್ಲಿ ಕುಜ, ಕನ್ಯಾದಲ್ಲಿ ಕೇತು, ತುಲಾದಲ್ಲಿ‌ ಬುಧ, ವೃಶ್ಚಿಕದಲ್ಲಿ ಸೂರ್ಯ, ಧನುವಿನಲ್ಲಿ ಶುಕ್ರ, ಕುಂಭದಲ್ಲಿ ಶನಿ ಹಾಗೂ ಮೀನದಲ್ಲಿ ರಾಹು. ಹೀಗೆ ಗ್ರಹಗಳ ಸ್ಥಿತಿ ಇರಲಿದೆ. ಅವರಲ್ಲಿ ಕೆಲವರು ನೀಚ, ಮಧ್ಯಮ, ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಗ್ರಹಗಳ ಫಲವೂ ವ್ಯತ್ಯಾಸವಾಗಲಿದೆ. ದೇವರ ಅನುಗ್ರಹದಿಂದ ಎಲ್ಲ ಗ್ರಹರೂ ಏಕಾದಶ ಸ್ಥಾನದಲ್ಲಿ ಕೊಡುವ ಶುಭಫಲವನ್ನೇ ಕೊಡಲಿ ಎಂಬುದು ಪ್ರಾರ್ಥನೆ.

ಮೇಷ ರಾಶಿ :ರಾಶಿ ಚಕ್ರದ ಮೊದಲನೇ ರಾಶಿಯಾಗಿದೆ. ಈ ರಾಶಿಯವರಿಗೆ ಈ ನವೆಂಬರ್ ತಿಂಗಳು ಮಿಶ್ರಫಲದಾಯಕವಾದುದು. ರಾಶಿಯ ಅಧಿಪತಿ ಕುಜನು ನೀಚನಾದ ಕಾರಣ ನಿಮ್ಮ‌ ಬಲವೂ ಕುಗ್ಗುವುದು. ಉತ್ಸಾಹದಿಂದ ಯಾವುದನ್ನೂ ಮಾಡಲಾರಿರಿ. ಗುರುವು ದ್ವಿತೀಯದಲ್ಲಿ ಇರುವುದು ಶುಭವಾದರೂ ಉಳಿದ ಗ್ರಹಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡುವರು. ಶುಕ್ರನು ನವಮಸ್ಥಾನಕ್ಕೆ ಹೋಗುವನು. ಸಂಪತ್ತು ನಿಮ್ಮ ಕೈ ಸೇರುವುದು. ಬರಬೇಕಾದ ಹಣಕ್ಕೆ ಸ್ವಲ್ಪ ಪ್ರಯತ್ನ‌ ಮಾಡಿ. ಏಕಾದಶದಲ್ಲಿ ಶನಿಯು ನಿಮ್ಮ ಆದಾಯಕ್ಕೆ ಅನುಕೂಲಕರನಾಗಿ ಇರುವನು. ಸೂರ್ಯನು ಅಷ್ಟಮದಲ್ಲಿ ಇರುವುದು ಸ್ತ್ರೀಯರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ದುರ್ಗಾಮಾತೆಯನ್ನು ಸಂಜೆಯ ಹೊತ್ತಿನಲ್ಲಿ‌ ಆರಾಧಿಸಿ.

ವೃಷಭ ರಾಶಿ :ನವೆಂಬರ್ ತಿಂಗಳಲ್ಲಿ ನಿಮಗೆ ಶುಭಾಶುಭ ಸೂಚನೆಗಳು ಇರಲಿವೆ. ರಾಶಿಯಲ್ಲಿ ಗುರುವಿರುವುದು ನಿಮ್ಮ ಯೋಚನೆಗಳು ಕಷ್ಟದಲ್ಲಿಯೂ ಸಕಾರಾತ್ಮವಾಗಿ ಇರುವುದು. ತೃತೀಯದಲ್ಲಿ ಕುಜನು ನಿಮ್ಮ ಶ್ರಮವನ್ನು ಹೆಚ್ಚಿಸಿ, ಅಲ್ಪ ಫಲವನ್ನು ಮಾತ್ರ ನೀಡುವನು. ಷಷ್ಠದಲ್ಲಿ ಬುಧನು ಬಂಧುಗಳ ಬಗ್ಗೆ ಸದ್ಭಾವವನ್ನು ಕೊಡಲಾರ. ಸಪ್ತಮದಲ್ಲಿ ಸೂರ್ಯನು ನಿಮಗೆ ಸಂಗಾತಿಯಿಂದ ಪೀಡೆಯನ್ನು ಕೊಡಿಸುವನು. ಅಷ್ಟಮದಲ್ಲಿ ಶುಕ್ರನು ದೈಹಿಕ ತೊಂದರೆ, ವಾಹನದಿಂದ‌ ಅಪಘಾತ, ಭೋಗವಸ್ತುಗಳ ಅಪೇಕ್ಷೆಯನ್ನು ಮಾಡಿಸುವನು. ದಶಮದಲ್ಲಿ ಶನಿಯು ಉದ್ಯೋಗದಲ್ಲಿ ಅನಿಶ್ಚಿತತೆಯನ್ನು ಕೊಡುವನು. ಏಕಾಂಗಿ ರಾಹುವು ಅಧಿಕ ಶ್ರಮ ಅಲ್ಪ ಆದಾಯವನ್ನು ಮಾಡಿಸುವನು. ಉದ್ವೇಗವು ಕಡಿಮೆ ಇರುವುದು ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುವುದು. ಆದಿತ್ಯ ಹೃದಯವನ್ನು ಪ್ರಾತಃಕಾಲದಲ್ಲಿ ಪಠಿಸಿ.

ಮಿಥುನ ರಾಶಿ :ಇದು ರಾಶಿ ಚಕ್ರದ ಮೂರನೇ ರಾಶಿಯಾಗಿದ್ದು, ಈ ತಿಂಗಳಲ್ಲಿ ಅಶುಭ ಪ್ರಾಪ್ತಿಯಾಗುವುದು. ಈ ತಿಂಗಳಲ್ಲಿ ಬಂಧುಗಳ‌ ಮನೆಯ ಓಡಾಟ ಹೆಚ್ಚಾಗುವುದು. ವಿವಾಹ ಸಂಬಂಧವನ್ನು ಬಿಟ್ಟುಬಿಡುವುದು ಬೇಡ. ಸಾಧ್ಯತೆಯನ್ನು, ತೊಂದರೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ತಂದೆಯಿಂದ ನಿಮಗೆ ಎಷ್ಟೇ ಪ್ರಿಯವಾಗಿದ್ದರೂ ಅವರಿಂದ ಸಮಾಧಾನ ಸಿಗದು. ಉದ್ಯೋಗದಲ್ಲಿ ಉತ್ಸಾಹವಿರದು.‌ ಹೊಟ್ಟೆ ಪಾಡಿಗಾಗಿ ಕೆಲಸವನ್ನು ನಿರ್ವಹಿಸುವಿರಿ. ವಿಶ್ವಾಸವಿಡುವಲ್ಲಿ ಅದು ಕಡಿಮೆಯಾಗುವುದು. ಗುರುಸಾನ್ನಿಧ್ಯದಲ್ಲಿ ಹೆಚ್ಚು ಕಾಲ ಇರಲು, ಗುರುಸೇವೆಗೆ ಆದ್ಯತೆ ನೀಡಿ.

ಕರ್ಕಾಟಕ ರಾಶಿ :ನವೆಂಬರ್ ತಿಂಗಳಲ್ಲಿ ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭಾಶುಭ ಫಲ. ರಾಶಿಯಲ್ಲಿ ನೀಚನಾದ ಕುಜನು ಕೋಪವನ್ನು ಹೆಚ್ಚಿಸುವನು. ಅಗ್ನಿ ಅಥವಾ ವಿದ್ಯುತ್ ವಿಚಾರದಲ್ಲಿ ಜಾಗರೂಕತೆ ಮುಖ್ಯ. ಬಂಧುಗಳು ನಿಮಗೆ ಆಗಿಬರದು. ಅವರ ಮೇಲೆ ಸದಾ ಸಿಡುಕತ್ತಲೇ ಇರುವಿರಿ. ಶ್ರಮಕ್ಕೆ ಫಲವನ್ನು ನಿರೀಕ್ಷಿಸಿದಷ್ಟೂ ನಿಮಗೆ ಸೋಲೇ ಆಗುವುದು. ಅವಮರ್ಯಾದೆಯನ್ನು ನೀವು ಸಹಿಸಲಾರಿರಿ. ಕಾಲು ನೋವು ನಿಮ್ಮನ್ನು ಹಿಂಸಿಸುವುದು. ಹಿತಶತ್ರುಗಳ ತೊಂದರೆಯನ್ನು ನೀವು ಎದುರಿಸಬೇಕಾಗುವುದು. ಸಿಗಬೇಕಾದ ಗೌರವ ಪ್ರಶಂಸೆಯನ್ನು ಇತರರು ಪಡೆಯುವರು. ಸುಬ್ರಹ್ಮಣ್ಯನ ಕವಚವನ್ನು ಪಠಿಸಿ.

ಸಿಂಹ ರಾಶಿ :ರಾಶಿ ಚಕ್ರದ ಐದನೇ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿ ಸೂರ್ಯ ಚತುರ್ಥದಲ್ಲಿ ಇರುವನು. ಕುಟುಂಬದಲ್ಲಿ ವಾಗ್ವಾದ ನಡೆಯುವುದು. ಹಾಗಿದ್ದರೂ ತಂದೆಯಿಂದ ನಿಮಗೆ ಬೆಂಬಲವಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಶುಭವಾರ್ತೆ ಸಿಗುವುದು. ಕುಜನು ನೀಚನಾದ ಕಾರಣ ಯಂತ್ರಗಳಿಂದ ನಷ್ಟ. ದುರಸ್ತಿಗೆ ಹೆಚ್ಚು ಖರ್ಚು. ವಿದ್ಯುತ್ ಉಪಕರಣಕ್ಕೆ ಧನ್ಯವ್ಯಯ. ದಾಂಪತ್ಯದಲ್ಲಿ ಯಾವುದೇ ಏರಿಳಿತಕ್ಕೆ ಅವಕಾಶ ಮಾಡಿಕೊಡುವುದು ಬೇಡ. ವಿನ್ಯಾಸಕಾರರಿಗೆ ಆದಾಯ ಹೆಚ್ಚಾಗುವುದು. ಯಾವುದೇ ಗೌರವಾದರಗಳ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವಿರಿ. ದುರ್ಗಾಪರಮೇಶ್ವರಿಯನ್ನು ಅರ್ಚಿಸಿ.

ಕನ್ಯಾ ರಾಶಿ :ನವೆಂಬರ್ ತಿಂಗಳಲ್ಲಿ ನಿಮಗೆ ಶುಭ. ಸೂರ್ಯ ಹಾಗೂ ಶುಕ್ರರ ಗತಿಯ ಬದಲಾವಣೆಯಿಂದ ಶ್ರೇಯಸ್ಸು. ಶುಕ್ರನು ಚತುರ್ಥೀ ಇರುವುದು ವಾಹನ ಸೌಖ್ಯವನ್ನು‌ ನೀಡುವನು. ಕಲಾವಿದರಿಗೆ ವಿದೇಶ ಪ್ರವಾಸದ ಯೋಗ. ತಾಯಿಯಿಂದ ನಿಮಗೆ ಸಂಪತ್ತು ಸಿಗುವುದು. ಗೃಹನಿರ್ಮಾಣದ ಕಾರ್ಯವು ವೇಗವನ್ನು ಪಡೆಯುವುದು. ಮಾತಿಗೆ ಸಂಬಂಧಿಸಿದ ಉದ್ಯೋಗದಲ್ಲಿ ಇದ್ದರೆ ಶ್ರೇಯ ಮತ್ತು ಸಂಪತ್ತು. ಸಹೋದರನಿಂದ ಸಹಕಾರ ಸಿಗುವುದು. ವೈವಾಹಿಕ ಜೀವನಕ್ಕೆ ಕಾಲಿಡುವ ಸಂದರ್ಭವು ಎದುರಾಗುವುದು. ಅನುಭವಿಗಳ ಬೆಂಬಲವಿಲ್ಲದೇ ಗೊತ್ತಿರುವ ಮತ್ತು ಗೊತ್ತಿಲ್ಲ ಕಾರ್ಯವನ್ನು ಮಾಡುವುದು ಬೇಡ. ಗಣಪತಿಗೆ ಪ್ರಿಯವಾದ ವಸ್ತುವನ್ನು ಸಮರ್ಪಣೆ ಮಾಡಿ.

ತುಲಾ ರಾಶಿ :ರಾಶಿ ಚಕ್ರದ ಏಳನೇ ರಾಶಿಯವರಿಗೆ ನವೆಂಬರ್ ತಿಂಗಳು ಮಿಶ್ರಫಲ. ರವಿಯು ದ್ವಿತೀಯದಲ್ಲಿ ಹಾಗೂ ಶುಕ್ರನು ತೃತೀಯದಲ್ಲಿ ಇರುವುದು ಎರಡೂ ಶುಭವಲ್ಲ. ಬುಧನು ನಿಮ್ಮ ರಾಶಿಯಲ್ಲಿ ಇದ್ದು ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯವನ್ನು ಕೊಡುವನು. ಕೌಟುಂಬಿಕ ಕಲಹವು ಈ ತಿಂಗಳಲ್ಲಿ ಹೆಚ್ವಾಗುವುದು. ಯಾರಿಗೂ ಪರಸ್ಪರ ಹೊಂದಾಣಿಕೆ ಬರುವುದೇ ಕಷ್ಟ. ಉದ್ಯೋಗದಲ್ಲಿ ಕೂಡ ಬರುವ ಯೋಜನೆಗಳು ನಿಮಗೇ ಅರಿವಿಲ್ಲದಂತೆ ಇನ್ನೊಬ್ಬರ ಪಾಲಾಗುತ್ತದೆ. ಒಂದಿಲ್ಲೊಂದು ಖರ್ಚಿಗೆ ದಾರಿಯು ತೆರೆದುಕೊಳ್ಳುವುದು. ವಿದೇಶ ವ್ಯಾಪಾರದಲ್ಲಿ‌ ಇರುವವರು ಎಷ್ಟೇ ಎಚ್ಚರ ವಹಿಸಿದರೂ‌ ಕಷ್ಟವೇ. ವೈವಾಹಿಕ ಕಾರ್ಯಗಳಿಗೆ ಅಡ್ಡಿ ಬರುವುದು.

ವೃಶ್ಚಿಕ ರಾಶಿ :ಇದು ನವೆಂಬರ್ ತಿಂಗಳಾಗಿದ್ದು ಈ ತಿಂಗಳಲ್ಲಿ ನಿಮಗೆ ಶುಭವೇ ಅಧಿಕವಾಗಿರುವುದು. ಸೂರ್ಯನು ನಿಮ್ಮ ರಾಶಿಗೆ ಬರುವನು. ಮಿತ್ರನ ಮನೆಯಾದ ಕಾರಣ ಹೆದರಿ ಮೂಲೆಗುಂಪಾಗಿದ್ದ ನಿಮಗೆ ಯಾರಿಂದಲಾದರೂ ಪ್ರೇರಣೆ ನಿಮಗೆ ಸಿಗುವುದು. ಬಹಳ ಉತ್ಸಾಹದಿಂದ ಮೇಲೆರುವ ಸಾಧ್ಯತೆ ನಿಮ್ಮ ಪಾಲಿಗೆ ಇದೆ. ಇನ್ನು ಶುಕ್ರನು ಸಪ್ತಮ‌ ಹಾಗೂ ವ್ಯಯಾಧಿಪತಿಯಾಗಿ ದ್ವಿತೀಯದಲ್ಲಿ ಇರುವನು.‌ ಸಂಗಾತಿಯ ಕಡೆಯಿಂದ ಬಂದರೂ ಐಷಾರಾಮಿಯಾಗಿ ಇರುವ ನಿಮಗೆ ಮತ್ತೊಂದು ಕಡೆಯಿಂದ ಹೋಗುವುದು. ಗುರುಬಲವು ನಿಮಗೆ ಶ್ರೀರಕ್ಷೆಯಂತೆ ಮತ್ತೆ ಮತ್ತೆ ಕಾಡುವುದು. ಕುಟುಂಬದ ಆಗುಹೋಗುಗಳನ್ನು ಅತಿಯಾಗ ಮನಸ್ಸಿಗೆ ತೆಗೆದುಕೊಳ್ಳಲೇ ನಿಭಾಯಿಸುವುದು ಒಳ್ಳೆಯದು. ಲಕ್ಷ್ಮೀಯಂತ್ರಕ್ಕೆ ಪೂಜೆಸಲ್ಲಿಸಿ ನಿಮ್ಮ ಕಾರ್ಯಕ್ಕೆ ತೆರಳಿ.

ಧನು ರಾಶಿ :ನವೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಸೂರ್ಯ ಹಾಗೂ ಶುಕ್ರನ ರಾಶಿ ಪರಿವರ್ತನೆಯು ಅನುಭವವನ್ನು ನೀಡುವುದು. ಶುಕ್ರ ಮತ್ತು ಗುರು ಇವರು ಪರಸ್ಪರ ಶತ್ರುಗಳಾದ ಕಾರಣ ಮಾನಸಿಕ ತೊಳಲಾಟ ಹೆಚ್ಚಗುವುದು. ಯಾವ ಶುಭವನ್ನೂ ಸ್ವೀಕರಿಸುವ ಮನೋಭಾವ ಇರದು. ನಿಮಗೆ ಯಾರಿಂದಲಾದರೂ ಸಹಕಾರ ಸಿಕ್ಕರೂ ಅದನ್ನು ನಕಾರಾತ್ಮಕವಾಗಿ ಯೋಚಿಸುವಿರಿ. ಇನ್ನು ರವಿಯು ದ್ವಾದಶ ಭಾವದಲ್ಲಿ ಇರುವುದು ಆರೋಗ್ಯ ನಷ್ಟ, ಸಂಪತ್ತಿನ ನಷ್ಟ, ಚಿಕಿತ್ಸೆ ಪಡೆಯಬೇಕಾಗಬಹುದು. ಬಂಧುಗಳ ಸಹಕಾರ ನಿಮಗೆ ಇದ್ದರೂ ಸ್ವಾಭಿಮಾನ‌ ನಿಮ್ಮನ್ನು ಸಡಿಲವಾಗಿ ಬಿಡದು. ಗುರುವೂ ಷಷ್ಠದಲ್ಲಿ ಇರುವುದು ನಿಮಗೆ ಇಬ್ಬಂದಿಯಂತೆ ತೋರುವುದು. ಮಾನಸಿಕ ಸ್ಥೈರ್ಯವೇ ಇದಕ್ಕೆ ಉಪಶಮನದ‌ ಮಾರ್ಗ. ಯಾವುದೇ ಫಲದ ಅಪೇಕ್ಷೆ ಇಲ್ಲದೇ, ಎಲ್ಲದರಲ್ಲಿಯೂ ಒಳ್ಳೆಯದೇ ಪ್ರಾಪ್ತವಾಗಲಿ ಎಂಬ ಸಂಕಲ್ಪದಿಂದ ಧಾರ್ಮಿಕ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ.

ಮಕರ ರಾಶಿ :ನವೆಂಬರ್ ತಿಂಗಳಲ್ಲಿ ನಿಮಗೆ ರವಿ ಹಾಗ ಶುಕ್ರ ಬದಲಾಬಣೆಯಿಂದ ಶುಭಾಶುಭ ಫಲಗಳಿವೆ. ರವಿಯು ಏಕಾದಶದಲ್ಲಿ ಬರುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪರಿವರ್ತನೆ, ಹೆಚ್ಚಿನ ಆದಾಯ, ಸ್ಥಾನಮಾನ, ಗೌರವಾದಿಗಳನ್ನು ಪಡೆಯಬಹುದಾಗಿದೆ. ಆದಾಯದ ಮೂಲವೂ ಹೆಚ್ಚಾಗುವುದು. ‌ವೈವಾಹಿಕ ಕಾರ್ಯದಲ್ಲಿ ಹಿನ್ನಡೆ ಅಥವಾ ಸಂಬಂಧವು ತಪ್ಪಿಹೋಗುವುದು. ಶುಕ್ರನು ದ್ವಾದಶದಲ್ಲಿ ಇರುವುದು ಖರ್ಚನು ಹೆಚ್ಚಿಸುವನು. ಒಂದು ಒಳ್ಳೆಯದೆಂದರೆ ಸತ್ಕಾರ್ಯಕ್ಕೆ ನಿಮ್ಮ ಸಂಪತ್ತು ವಿನಿಯೋಗವಾಗುವುದು. ಪುಣ್ಯಸಂಪಾದೆನಯಾಗಲಿದೆ. ಗುರುಬಲವು ನಿಮ್ಮನ್ನು ಯಶಸ್ಸಿನ ಕಡೆಗೆ ಕರೆದೊಯ್ಯುವುದು. ಧಾರ್ಮಿಕ ಕಾರ್ಯದಿಂದ ಮನಸ್ಸನ್ನು ಬದಲಿಸುವುದು ಬೇಡ. ಬಲವನ್ನು ಸುಬ್ರಹ್ಮಣ್ಯನಿಂದ ಪಡೆಯಿರಿ.

ಕುಂಭ ರಾಶಿ :ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಸೂರ್ಯ ಹಾಗೂ ಶುಕ್ರರ ಪರಿವರ್ತನೆಯಿಂದ ಮಿಶ್ರಫಲವಿದೆ. ಸೂರ್ಯನು ನೀಚಸ್ಥಾನದಿಂದ ಮಿತ್ರನ ರಾಶಿಗೆ ಪ್ರವೇಶಿಸುವನು. ಸರ್ಕಾರಿ ಕಾರ್ಯದಲ್ಲಿ ವೇಗವು ಹೆಚ್ಚಾಗುವುದು. ಹೆಚ್ಚು ಪ್ರಯತ್ನಿಸಿದರೆ ಅದನ್ನೂ ಪೂರ್ಣಮಾಡಿಕೊಳ್ಳುವ ಸಂದರ್ಭವೂ ಬರುವುದು. ಶುಕ್ರನು ಗುರುವಿನ ಮನೆಯಲ್ಲೂ ಗುರುವಿನ ಮನೆಯಲ್ಲಿ ಶುಕ್ರನೂ ಇರುವುದು ಕುಟುಂಬದ ಜೊತೆ ಸಂತೋಷದ ದಿನವನ್ನು ಕಳೆಯಿವಿರಿ. ಉತ್ತಮ ಕಾರ್ಯಗಳಿಂದ ಧನಾಗಮವಾಗಲಿದೆ. ಬೋಧಕ ವರ್ಗ ಹಾಗೂ ವಿನ್ಯಾಸಕಾರರು, ಕಲಾವಿದರಿಗೆ ಆದಾಯ ಬೆಳೆಯುವುದು. ಶಿವನಿಗೆ ರುದ್ರಾಭಿಷೇಕವನ್ನು ಸೋಮವಾರದಂದು ಮಾಡಿ.

ಮೀನ ರಾಶಿ :ನವೆಂಬರ್‌ ತಿಂಗಳಲ್ಲಿ ಈ ರಾಶಿಯವರಿಗೆ ಸೂರ್ಯ, ಶುಕ್ರರಲ್ಲಿ ಹೆಚ್ಚು ಹಾಗು ಬುಧ ಗುರುವಿನಲ್ಲಿ ಅಲ್ಪ ಬದಲಾವಣೆ ಆಗಲಿದೆ. ಈ ಬದಲಾವಣೆಯಿಂದ ನಿಮಗೆ ಆತ್ಮಸ್ಥೈರ್ಯದ ಕೊರತೆ, ಎಲ್ಲವೂ ಇದ್ದರೂ ಯಾರಾದೂ ಮಾಡಲಿ, ತೆಗೆದುಕೊಳ್ಳಲಿ ಎಂಬ ಆಲಸ್ಯ ಅಥವಾ ತಾತ್ಸಾರ ಭಾವ. ವಸ್ತುವಿನ ಅಥವಾ ವ್ಯಕ್ತಿಗಳ ಬೆಲೆಯನ್ನು ಸರಿಯಾಗಿ ತಿಳಿದಿಕೊಳ್ಳಲಾಗದು. ಸರ್ಕಾರ ಉದ್ಯೋಗದಲ್ಲಿ ಇರುವವರಿಗೆ ಸಮ್ಮಾನ ಗೌರವಗಳು ಸಿಗುವುದು. ಖಾಸಗಿ ವಲಯದ ಉದ್ಯೋಗಿಗಳಿಗೂ ಭಡ್ತಿಯನ್ನು ಪಡೆಯುವ ಅವಾಕಶವಿದೆ. ಇದಾವುದೂ ನಿಮ್ಮ ಈಗಿನ ಕಾರ್ಯಕ್ಕೆ ಅಲ್ಲ, ಹಳೆಯ ಕಾರ್ಯಕ್ಕೆ ಆಗಿರುತ್ತದೆ. ಸ್ವಲ್ಪ ಮಾನಸಿಕ ಭಯದ ನಿವಾರಣೆಗೆ ಸುಬ್ರಹ್ಮಣ್ಯನನ್ನು ಸ್ಮರಿಸಿ ಕಾರ್ಯೋನ್ಮುಖರಾಗಿ.

-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್