Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 4ರ ವಸೋಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 4ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ವಿವೇಕ ಬಿರಾದಾರ

Updated on: Nov 04, 2024 | 6:36 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 4ರ ವಸೋಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಾದ ಮಾಡುವುದರಿಂದಲೋ ಅಥವಾ ನಿಮ್ಮ ಪರವಾಗಿಯೇ ಇರುವಂಥ ಅಂಶಗಳನ್ನು ಮಂಡಿಸುವುದರಿಂದಲೋ ಕೆಲಸಗಳು ಆಗುವುದಿಲ್ಲ ಎಂಬುದು ಈ ದಿನ ನಿಮ್ಮ ಗಮನಕ್ಕೆ ಬರಲಿದೆ. ಇಷ್ಟು ಸಮಯ ನೀವು ಯಾವುದಾದರೂ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದ ರೀತಿಗೂ ಇವತ್ತಿಗೂ ಬಹಳ ವ್ಯತ್ಯಾಸ ಇರಲಿದೆ. ಸಾಮ-ದಾನ-ಭೇದ-ದಂಡ ಹೀಗೆ ಯಾವ ಉಪಾಯವನ್ನು ಅನುಸರಿಸಿದರೆ ಉತ್ತಮ ಎಂಬುದನ್ನು ತುಂಬ ವೇಗವಾಗಿ ನಿರ್ಧಾರ ಮಾಡಲಿದ್ದೀರಿ. ನೀವು ಕೂಡಿಟ್ಟುಕೊಂಡಿದ್ದ ಹಣವೊಂದು ಆ ಉದ್ದೇಶಕ್ಕೆ ಅಲ್ಲದೆ ಬೇರೆಯದಕ್ಕೆ ಬಳಸಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಹೊಸದಾದ ವಿದ್ಯೆಯೊಂದನ್ನು ಕಲಿಯುವುದಕ್ಕೆ ನಿಮ್ಮಲ್ಲಿ ಕೆಲವರು ಮುಂದಾಗಲಿದ್ದೀರಿ. ಬಹುತೇಕ ಮರೆತೇ ಹೋಗಿದ್ದ ಸ್ನೇಹಿತ ಅಥವಾ ಸ್ನೇಹಿತೆಯು ದಿಢೀರ್ ಈ ದಿನ ಕಾಣಿಸಿಕೊಂಡು ಅಥವಾ ಸಂಪರ್ಕಕ್ಕೆ ಸಿಕ್ಕಿ, ಭವಿಷ್ಯಕ್ಕೆ ಬಹಳ ಮುಖ್ಯವೆನಿಸುವ ಸಲಹೆ- ಸೂಚನೆಗಳನ್ನು ನಿಮಗೆ ನೀಡಲಿದ್ದಾರೆ. ಇದರಿಂದ ತುಂಬ ದೊಡ್ಡ ಮಟ್ಟದಲ್ಲಿ ನಿಮಗೆ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಅದೊಂದು ವಿಷಯವನ್ನು ಬಿಟ್ಟು ಏನನ್ನಾದರೂ ಕೇಳಿ ಎಂದು ಬಹಳ ಸಲ ನೀವು ಹೇಳುವಂಥ ಸನ್ನಿವೇಶ ಈ ದಿನ ಎದುರಾಗಲಿದೆ. ನಿಮಗೆ ಆಪ್ತರಾದವರ ಹೆಸರು ಪ್ರಸ್ತಾವ ಆಗಬಾರದು ಎಂಬ ಕಾರಣಕ್ಕೆ ಕೆಲವು ಆಕ್ಷೇಪ- ನಿಂದೆಗಳನ್ನು ನೀವೇ ತೆಗೆದುಕೊಳ್ಳುತ್ತೀರಿ ಅಥವಾ ನಿಮ್ಮ ಪ್ರಭಾವವನ್ನು ಬಳಸಿ, ಎದುರಿಗೆ ಇರುವವರ ಮನವನ್ನು ಒಲಿಸಿ, ಆ ವಿಷಯವೇ ಪ್ರಸ್ತಾವ ಆಗಬಾರದು ಎಂದು ತುಂಬ ಪ್ರಯತ್ನವನ್ನು ಮಾಡುತ್ತೀರಿ. ನಿಮ್ಮಲ್ಲಿ ಯಾರು ಹೋಟೆಲ್ ವ್ಯವಹಾರ ಮಾಡುತ್ತಿದ್ದೀರಿ ಅಂಥವರಿಗೆ ಅನಿರೀಕ್ಷಿತವಾದ ನಷ್ಟ ಎದುರಾಗಬಹುದು. ಈ ತನಕ ಅನುಸರಿಸದ ಮಾರ್ಗೋಪಾಯವನ್ನು ಅನುಸರಿಸಿದ್ದರ ಫಲಿತಾಂಶವನ್ನು ಕಾಣುವಂತೆ ಆಗುತ್ತದೆ. ಇನ್ನು ಯಾರು ಐಟಿ- ಬಿಪಿಒ ಇಂಥ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದೀರಿ ಅಂಥವರಿಗೆ ನಿಮ್ಮ ಗಮನಕ್ಕೆ ತರದೆ ಅನುಷ್ಠಾನಕ್ಕೆ ಬಂದಿರುವುದು ತಿಳಿದು, ಬೇಸರ ಹಾಗೂ ಆತಂಕ ಉಂಟಾಗುತ್ತದೆ. ಕಿವಿಯ ನೋವಿನ ಸಮಸ್ಯೆ ಕಾಡುವ ಅಥವಾ ಈಗಾಗಲೇ ಇದ್ದಲ್ಲಿ ಉಲ್ಬಣಿಸುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಎಲ್ಲವೂ ಗೊತ್ತಿದೆ, ನಾನು ನಿಮಗೆ ಸಹಾಯ ಮಾಡ್ತೀನಿ ಎಂಬ ಮಾತನ್ನು ಹೇಳುವುದಕ್ಕೆ ಮುಂಚೆ ಸಾವಿರ ಬಾರಿ ಈ ದಿನ ಆಲೋಚಿಸಿ. ಏಕೆಂದರೆ ಒಂದು ನಯಾಪೈಸೆ ಪ್ರಯೋಜನವಾಗದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಿಮ್ಮ ಕೈಯಿಂದ ಹಣ ಹಾಕಿಕೊಂಡು ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರುತ್ತದೆ. ಕೊನೆ ಕ್ಷಣದಲ್ಲಿ ನಿಮ್ಮ ಜೊತೆಗೆ ವ್ಯಕ್ತಿಯೊಬ್ಬರು ಸೇರಿಕೊಂಡು, ಒಂದು ಬಗೆಯ ನಕಾರಾತ್ಮಕ ಆಲೋಚನೆಯನ್ನು ಬಿತ್ತಲಿದ್ದಾರೆ. ಅತಿ ಉತ್ಸಾಹದಲ್ಲಿ ನೀವೇ ಗುರಿಯನ್ನು ನಿಗದಿಪಡಿಸಿಕೊಂಡರೆ ಸಿಕ್ಕಾಪಟ್ಟೆ ಸಮಜಾಯಿಷಿಗಳನ್ನು ನೀಡುವ ಸನ್ನಿವೇಶ ಎದುರಾಗಲಿದೆ. ಆದ್ದರಿಂದ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಕಣ್ಣ ಅಂದಾಜಿಗೆ ಕಾಣುವಂತೆ ಹಲವು ಸನ್ನಿವೇಶಗಳು ಇರುವುದಿಲ್ಲ. ಈ ಹಿಂದೆ ನಿಮಗೆ ಆದ ಅನುಭವಗಳು ಈ ದಿನ ಸಹಾಯಕ್ಕೆ ಬರುವುದಿಲ್ಲ. ಇತರರಿಂದ ಯಾವುದೇ ವಸ್ತು- ವಾಹನಗಳನ್ನು ಪಡೆದುಕೊಳ್ಳದಿರುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಓದು, ತಿಳಿವಳಿಕೆ, ಲೆಕ್ಕಾಚಾರ ಹಾಗೂ ಅನುಭವ ಉದ್ಯೋಗದಾತರ ಅಥವಾ ಮೇಲಧಿಕಾರಿಗಳ ಗಮನಕ್ಕೆ ಬರಲಿದೆ. ತಾತ್ಕಾಲಿಕವಾಗಿ ನಿಮಗೆ ಸವಾಲಿನ ಜವಾಬ್ದಾರಿಯೊಂದನ್ನು ವಹಿಸುವುದಕ್ಕೆ ಅವರು ಆಲೋಚಿಸಬಹುದು. ಇದನ್ನು ಶ್ರದ್ಧೆ- ಉತ್ಸಾಹದಿಂದ ಪೂರ್ಣಗೊಳಿಸಿದಲ್ಲಿ ಭವಿಷ್ಯದಲ್ಲಿ ದೊಡ್ಡ ಅನುಕೂಲ ಆಗಲಿದೆ. ಮನೆಯಲ್ಲಿ ಕುಟುಂಬ ಸದಸ್ಯರ ಬೆಂಬಲ ತುಂಬ ಚೆನ್ನಾಗಿ ಇರಲಿದೆ. ಇನ್ನು ನಿಮ್ಮಲ್ಲಿ ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ, ಅಂಥವರಿಗೆ ಪರಿಚಿತರಿಂದ ಅಥವಾ ಕುಟುಂಬ ಸ್ನೇಹಿತರಿಂದಲೇ ಪ್ರಸ್ತಾವ ಬರುವ ಸಾಧ್ಯತೆಗಳಿವೆ. ಒಂದು ವೇಳೆ ತತ್ ಕ್ಷಣವೇ ವರ/ವಧು ನೋಡುವ ಪ್ರಕ್ರಿಯೆ ಮುಗಿಸೋಣ ಎಂದು ಹೇಳಿದಲ್ಲಿ ನೀವಾಗಿಯೇ ಏನಾದರೂ ಸಬೂಬು ಹೇಳಿ ಮುಂದೂಡಿದರೋ ಆ ನಂತರ ಪರಿತಪಿಸುವಂತೆ ಆಗಲಿದೆ. ಈ ದಿನ ನಿಮಗೆ ಸಾಧ್ಯವಾದಲ್ಲಿ ಈಶ್ವರನಿಗೆ ಜಲಾಭಿಷೇಕವನ್ನು ಮಾಡಿ ಅಥವಾ ದೇವಸ್ಥಾನಗಳಲ್ಲಿ ಮಾಡಿಸಿ. ಇದರಿಂದ ಹಲವು ಬಗೆಯಲ್ಲಿ ಅನುಕೂಲಗಳಾಗಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ವಿಪರೀತ ಆತ್ಮವಿಶ್ವಾಸ ನಿಮ್ಮಲ್ಲಿ ಈ ದಿನ ಇರಲಿದೆ. ಕೃಷಿ ಜಮೀನು ಅಥವಾ ಈಗಾಗಲೇ ಅಭಿವೃದ್ಧಿ ಆಗಿರುವ ತೋಟ ಇತ್ಯಾದಿಗಳನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ನಿಮ್ಮಲ್ಲಿ ಯಾರು ಪದೇಪದೇ ಉದ್ಯೋಗ ಬದಲಾವಣೆ ಮಾಡಿದ್ದೀರೋ, ಅಂದರೆ ಇತ್ತಿಚಿನ ವರ್ಷಗಳಲ್ಲಿ ಎರಡ್ಮೂರು ಕೆಲಸಗಳನ್ನು ಬದಲಾಯಿಸಿದ್ದೀರೋ ಅಂಥವರಿಗೆ ಮನಸ್ಸಿಗೆ ಒಪ್ಪುವಂತಹ ಹಾಗೂ ಪ್ರತಿಷ್ಠಿತವಾದ ಕಡೆಯಿಂದ ಉದ್ಯೋಗದ ಆಫರ್ ಬರಲಿದೆ. ಆಹಾರ ಪಥ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಅದರಲ್ಲೂ ಕೆಲವು ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಸಮಸ್ಯೆಗಳು ಆಗುತ್ತಿದೆ ಎಂದಿದ್ದಲ್ಲಿ ಸಾಮಾನ್ಯ ದಿನಗಳಿಗಿಂತ ಈ ದಿನ ಇನ್ನೂ ಜಾಗ್ರತೆಯಿಂದ ಇರಿ. ನಿಮ್ಮಲ್ಲಿ ಮೂವತ್ತರಿಂದ ನಲವತ್ತು ವರ್ಷದೊಳಗೆ ಯಾರಿದ್ದೀರಿ, ಅಂಥವರು ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸುವ ಅಥವಾ ಅಡ್ವಾನ್ಸ್ ನೀಡುವ ಯೋಗ ಈ ದಿನ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಮುಖ್ಯವಾದ ಜವಾಬ್ದಾರಿ ಇರುವಂಥ ಹುದ್ದೆಯಲ್ಲಿ ಇರುವವರಿಗೆ ಬೇರೆಯವರು ಮಾಡಿದ ತಪ್ಪು ತಲೆಗೆ ಸುತ್ತಿಕೊಳ್ಳಲಿದೆ. ನೀವು ಏನೇ ಹೇಳಿದರೂ ಸಂಬಂಧಪಟ್ಟವರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನು ಇದೇ ವೇಳೆ ಕೌಟುಂಬಿಕವಾಗಿಯೂ ಕೆಲವು ಬೆಳವಣಿಗೆಗಳು ಅಂದುಕೊಂಡಂತೆ ನಡೆಯದೆ, ಜಗಳ- ಕಲಹಗಳು ನಡೆಯಬಹುದು. ನಿಮಗೆ ಎಷ್ಟೇ ಆಪ್ತರಾಗಿದ್ದರೂ ಅವರ ಪ್ರೀತಿ- ಪ್ರೇಮ- ಮದುವೆ ವಿಚಾರಗಳಿಗೆ ತಲೆ ಹಾಕುವುದಕ್ಕೆ ಹೋಗಬೇಡಿ. ನಿಮ್ಮದು ಅಂತ ಇರುವ ಹೂಡಿಕೆಯೋ ಅಥವಾ ಉಳಿತಾಯವನ್ನೋ ಇತರರ ಸಲುವಾಗಿ ಮುರಿಸಲಿಕ್ಕೆ ಹೋಗಬೇಡಿ. ಭಾವನಾತ್ಮಕವಾಗಿ ತುಂಬ ಹಚ್ಚಿಕೊಂಡ ವ್ಯಕ್ತಿಯ ಅಸಹಾಯಕತೆ ನಿಮ್ಮನ್ನು ದುರ್ಬಲ ಮಾಡಿಬಿಡಬಹುದು. ಆ ವ್ಯಕ್ತಿಯ ಇಂದಿನ ಪರಿಸ್ಥಿತಿಗೆ ಕಾರಣ ಏನು ಎಂಬುದನ್ನು ವಿಶ್ಲೇಷಿ, ಆಲೋಚಿಸದ ಹೊರತು ಯಾವುದೇ ತೀರ್ಮಾನಕ್ಕೆ ಬರಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿ ಕೆಲವರಿಗೆ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ಪ್ರತ್ಯುಪಕಾರ ಎಂಬಂತೆ ನಿಮಗೆ ನೆರವಾಗಬಹುದು. ಒಂದು ವೇಳೆ ದೊಡ್ಡ ಕೆಲಸವೊಂದನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ ನಿಮ್ಮ ಬಳಿ ಇರುವಂಥ ಹಣ ಸಾಕಾಗುತ್ತಿಲ್ಲ ಎಂದು ಚಿಂತೆಗೆ ಗುರಿಯಾಗಿ, ಹಲವು ಕಡೆಗಳಲ್ಲಿ ಹಣ ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ನಿಮ್ಮ ಸ್ನೇಹಿತರ ರೆಫರೆನ್ಸ್ ಮೂಲಕ ಸಾಧ್ಯವಾಗಲಿದೆ. ನೆಟ್ ವರ್ಕ್ ಮಾರ್ಕೆಟಿಂಗ್ ನಂಥದ್ದನ್ನು ಸಹ ನಿಮಗೆ ತಗುಲಿಸುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ಆದರೆ ಅಂಥವರಿಂದ ದೂರ ಇರುವುದು ಕ್ಷೇಮ. ಹದಿನೈದು ವರ್ಷದ ಮೇಲ್ಪಟ್ಟ ವಯಸ್ಸಿನ ಮಕ್ಕಳಿರುವವರಿಗೆ ಅವರ ಶೈಕ್ಷಣಿಕ ಪ್ರಗತಿಯು ಸಮಾಧಾನ- ತೃಪ್ತಿಯನ್ನು ತರಲಿವೆ. ಇನ್ನು ನಿಮ್ಮಲ್ಲಿ ಯಾರು ಅವರ ಓದಿಗಾಗಿ ನೀವೇ ಸ್ವತಃ ಪಾಠ- ಪ್ರವಚನ ಮಾಡಿರುತ್ತೀರಿ, ಅಂಥವರಿಗೆ ಇನ್ನೂ ಹೆಮ್ಮೆ ತರುವಂಥ ದಿನ ಇದಾಗಿರುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಹಾಕಿದ ಪೋಸ್ಟ್ ಅಥವಾ ವಿಡಿಯೋದಿಂದ ಬಹಳ ಚರ್ಚೆಗೆ ಎಡೆ ಮಾಡಿಕೊಡುತ್ತೀರಿ. ನಿಮ್ಮದೇ ಸ್ನೇಹಿತರು, ಸುಮ್ಮನಿದ್ದರೆ ಆಗುತ್ತಿತ್ತು ಎಂದು ಹೇಳಲಿದ್ದಾರೆ. ನೀವು ಉದ್ದೇಶಪೂರ್ವಕವಾಗಿಯೇ ಮಾಡುತ್ತೀರೋ ಅಥವಾ ಅಂಥ ಉದ್ದೇಶವೇ ಇಲ್ಲದೆ ಮಾಡುತ್ತೀರೋ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ಸಿಟ್ಟು ಮಾಡಿಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ಮನೆಯ ಮಟ್ಟಿಗೆ ಅಂದುಕೊಂಡು ಶುರುವಾದ ಕಾರ್ಯಕ್ರಮವೊಂದರ ಖರ್ಚು ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಇತರರ ಮೇಲಿನ ಪ್ರತಿಷ್ಠೆಯಿಂದ ನೀವು ದುಬಾರಿ ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದೀರಿ. ಇದಕ್ಕಾಗಿ ಸಾಲ ಮಾಡುವುದೋ ಅಥವಾ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ, ಇಎಂಐ ಆಗಿ ಕನ್ವರ್ಟ್ ಮಾಡಿಸುವುದೋ ಹೀಗೆ ಯಾವುದಾದರೊಂದನ್ನು ಮಾಡಿ, ಆ ನಂತರ ನಿಮ್ಮ ತುರ್ತು ವೆಚ್ಚವೊಂದಕ್ಕೆ ಹಣ ಹೊಂದಿಸುವುದಕ್ಕೆ ಪರದಾಡುವಂತೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಪ್ರೀತಿಯಲ್ಲಿ ಇರುವಂಥವರು ಬಹಳ ಮುಖ್ಯವಾದ ತೀರ್ಮಾನವೊಂದನ್ನು ಮಾಡುವಂತ ದಿನ ಇದಾಗಿರುತ್ತದೆ. ಒಂದು ವೇಳೆ ಇಷ್ಟು ಸಮಯ ನಿಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿಲ್ಲ ಅಂತಾದರೆ ಈ ದಿನ ಆ ಬಗ್ಗೆ ತಿಳಿದುಬರಲಿದೆ. ಸಮಾಧಾನವಾಗಿ ಮುಗಿಯಲಿ ಎಂದುಕೊಂಡ ಆಸ್ತಿ ವ್ಯಾಜ್ಯ ವಿಚಾರಗಳು ನಿಮ್ಮ ಕೈ ಮೀರುವ ಹಂತಕ್ಕೆ ಹೋಗಬಹುದು. ಇದಕ್ಕೆ ಸಂಬಂಧಪಡದವರೆಲ್ಲ ತಲೆ ಹಾಕಿ, ರಂಕಲು ಮಾಡಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಇನ್ನೂ ನಿಮ್ಮ ಕೈ ಸೇರದ ಅಥವಾ ವ್ಯಾಜ್ಯ ಇತ್ಯರ್ಥವಾಗದ್ದನ್ನು ನೆಚ್ಚಿಕೊಂಡು ಯಾವುದೇ ಹಣಕಾಸು ತೀರ್ಮಾನ ಮಾಡುವುದಕ್ಕೆ ಹೋಗಬೇಡಿ. ನೀರಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಸರ್ಕಾರದಿಂದ ಪಡೆದುಕೊಳ್ಳಬೇಕಾದ ಪರವಾನಗಿ ಇತ್ಯಾದಿಗಳು ಇವೆಯೇ ಅಥವಾ ರಿನೀವಲ್ ಆಗಬೇಕಿದ್ದರೆ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಈ ದಿನ ನಿಮ್ಮಲ್ಲಿ ಕೆಲವರು ಒಂದಲ್ಲ ಒಂದು ವಿಚಾರಕ್ಕೆ ದಂಡ ಪಾವತಿಸುವಂಥ ಯೋಗವಿದೆ.