Daily Horoscope 5 November 2024: ಈ ರಾಶಿಯವರು ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ

Daily Horoscope 5 November 2024: ನವೆಂಬರ್ 05,​ 2024ರ ನರಕ ಚತುರ್ದಶಿ​​ ದಿನ ನಿಮ್ಮ ಭವಿಷ್ಯ ಹೇಗಿದೆ? ಮಂಗಳವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 5 November 2024: ಈ ರಾಶಿಯವರು ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ
ಈ ರಾಶಿಯವರು ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:09 ರಿಂದ ಸಂಜೆ 04:35 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 ರಿಂದ 10:50ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:16 ರಿಂದ 01:43 ರವರೆಗೆ.

ಮೇಷ ರಾಶಿ: ಸಾಲದ ಬಾಧೆಯಿಂದ ಸ್ವಲ್ಪ ಮುಕ್ತಿ ಸಿಗಲಿದೆ. ನಿಮ್ಮ ಪಾಲಿಗೆ ಬರಬೇಕಾದುದು ಬಂದೇಬರುತ್ತದೆ. ಇಂದು ನೀವು ವಿವಾದಗಳಿಗೆ ಆತಂಕಪಡುವಿರಿ. ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನಿಮ್ಮನ್ನು ನೌಕರರು ಹೋಗಳುವರು. ನಿಮ್ಮ ವೇಗಕ್ಕೆ ಸಹೋದ್ಯೋಗಿಗಳು ಬಾರದೇ ಇರಬಹುದು. ನಿಮ್ಮ ಇಂದಿನ‌ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ಕುಲದೇವರ ಆರಾಧನೆಯನ್ನು ನೀವು ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡುವುದು. ಯಾರನ್ನೋ ಬೀಳಿಸಲು ಹೋಗಿ ನೀವೇ ಬೀಳುವಿರಿ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ವ್ಯಯಿಸುವಿರಿ. ಅದೃಷ್ಟವನ್ನು ಮಾತ್ರ ನಂಬಿ ಕೆಲಸವನ್ನು ಮಾಡಬೇಡಿ. ವಿಪತ್ತು ಬಂದಾಗ ಸ್ನೇಹಿತರು ದೂರಾಗಬಹುದು.

ವೃಷಭ ರಾಶಿ: ನಿಃಸ್ವಾರ್ಥತೆಯನ್ನು ಕಡೆಗಣಿಸಬಹುದು. ದುಡುಕಿ ಮಾತನಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಒಂದು ಮಟ್ಟಿನ ಸೌಖ್ಯವು ಇರಲಿದೆ. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ವಾಹನ‌ದ ಖರೀದಿಗೆ ಬೆಂಬಲವು ಸಿಗಬಹುದು. ‌ನಿಮ್ಮ‌ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುವರು. ವೇಗವಾಗಿ ಆಗುವ ಕಾರ್ಯವನ್ನು ನಿಧಾನವಾಗಿ ಮಾಡುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಕುಟುಂಬದ ಸ್ಥಿರಾಸ್ತಿಯನ್ನು ಪಡೆಯಲು ಪ್ರೇರಣೆ ಪಡೆಯುವುರಿ. ಬರಬೇಕಾದ ಹಣವು ಬಾರದೇ ಇರುವುದು ಚಿಂತೆಗೊಳಿಸುವುದು. ಅತಿಯಾದ ಆಸೆಯಿಂದ ನಿಮಗೆ ಬುದ್ಧಿಗೆ ಮಂಕು ಕವಿಯಬಹುದು. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಬೇಡ.

ಮಿಥುನ ರಾಶಿ: ವ್ಯಾವಹಾರಿಕ ಸ್ಪರ್ಧೆಯಲ್ಲಿ ಪೈಪೋಟಿ ಕೊಡಲು ಸಾಧ್ಯವಾಗದು. ಭೂಮಿಯ ವ್ಯವಹಾರವನ್ನು ಯಾವುದೋ ತೊಂದರೆಯಿಲ್ಲದೇ ಮಾಡಲಾಗದು ಎಂಬ ಮನೋಭಾವ ಬದಲಾಗುವುದು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಬಂಧುಗಳ ಮುಂದೆ ತಲೆ ಎತ್ತಿ ನಡೆಯುವುದು ಮುಖ್ಯ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಂಡು ಕೂಗಾಡಬಹುದು. ಗುರುಹಿರಿಯರ ಸೇವೆಗೆ ಅವಕಾಶ ಅನಿರೀಕ್ಷಿತವಾಗಿ ದೊರೆಯುವುದು. ಸಾಹಸ ಕಾರ್ಯಗಳನ್ನು ಮಾಡಲು ನಿಮಗೆ ಉತ್ಸಾಹವು ಬರಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ವ್ಯಾಪಾರದ ನಷ್ಟದಿಂದ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಪರೂಪದ ಬಂಧುಗಳ ಆಗಮನವು ನಿಮಗೆ ಕಷ್ಟವಾದೀತು. ಆದ್ಯತೆಗಳು ಬದಲಾಗಬಹುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ: ಪಾಲುದಾರಿಕೆಯಲ್ಲಿ ಹೊಂದಾಣಿಕೆ ಅತಿಮುಖ್ಯ. ಒಳ್ಳೆಯ ಸಂಬಂಧಗಳು ನಿಮಗೆ ಪಥ್ಯವಾಗದೇ ಇರಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸುವಿರಿ. ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಇಂದಿನ ಖರ್ಚು ವೆಚ್ಚಗಳನ್ನು ಸರಿಯಾಗಿ ಲೆಕ್ಕಿಸುವಿರಿ. ಹಿತಶತ್ರುಗಳ ಬಗ್ಗೆ ನಿಮ್ಮ ಜಾಗರೂಕತೆಯು ಸಾಕಾಗದು. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಬೇಕಾಗುವುದು. ಅಪಾತ್ರರಿಗೆ ದಾನ ಮಾಡಿ ಬೇಸರಗೊಳ್ಳುವಿರಿ. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸಬೇಕಾದೀತು. ಉದ್ಯೋಗದಲ್ಲಿ ಸ್ತ್ರೀಯರಿಗೆ ಸಹಕಾರ ಮಾಡುವಿರಿ‌. ಮನೆಯವರ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ಇಂದು ನಿಮಗೆ ಭಯವು ಕಾಡಬಹುದು. ಹೆಚ್ಚಿನ ಆದಾಯ ಸಿಗುವ ವ್ಯವಹಾರವು ತಪ್ಪಿಹೋಗಬಹುದು.

ಸಿಂಹ ರಾಶಿ: ನೀವು ಇಂದು ಯಾರ ವಿರೋಧವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾರಿರಿ. ಒಳ್ಳೆಯ ವಿಚಾರಗಳನ್ನು ಪ್ರಚಾರ ಮಾಡುವ ಬಗ್ಗೆ ಚಿಂತಿಸಿ. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಶತ್ರುಗಳಿಂದ ಆಗಿದ್ದು ನಿಮಗೆ ಪೂರಕವೇ ಆಗಬಹುದು. ದಾಂಪತ್ಯದಲ್ಲಿನ ವೈಮನಸ್ಯವು ಹಿರಿಯರ ಭೇಟಿಯಿಂದ ಸರಿಯಾಗುವುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಇಂದಿನ ಓಡಾಟದಿಂದ ಶರೀರವು ದಣಿಯಬಹುದು. ಸ್ನೇಹಸಂಧಾನವು ವಿಫಲವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು.

ಕನ್ಯಾ ರಾಶಿ: ನೀವು ಇಂದು ಇಬ್ಬಂದಿಯಾಗುವ ಸಾಧ್ಯತೆ ಇದೆ. ಒಬ್ಬರನ್ನೇ ನಂಬಿ ಕುಳಿತರೆ ನಿಮಗೆ ಆಗಬೇಕಾದುದು ಸಕಾಲಕ್ಕೆ ಆಗದು. ನೀವು ಅಧಿಕಾರವನ್ನು ಪಡೆಯಲು ಮಾರ್ಗವನ್ನು ಬದಲಿಸುವಿರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಇಷ್ಟಪಟ್ಟವರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳುವಿರಿ. ಕೆಲಸಗಳಲ್ಲಿ‌ ನೀವು ಜಯವನ್ನು ಸಾಧಿಸಬಹುದು. ಅಪೇಕ್ಷಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುವಿರಿ. ನಿಮ್ಮ ಸ್ವಲ್ಪ ಸಹಾಯವನ್ನು ಮಾಡಿ. ವಿರೋಧಿಗಳಿಗೆ ನಿಮ್ಮ ಬಲವನ್ನು ತೋರಿಸುವಿರಿ. ಹೆಚ್ಚು ಆದಾಯ ಸಿಗುವ ಕೆಲಸವನ್ನು ಹುಡುಕಲು ಬಯಸುವಿರಿ. ಮರಳಿ ಯತ್ನವ ಮಾಡಿದರೆ ಯಾವುದಾದರೂ ಒಂದು ಸಿದ್ಧವಾಗುವುದು. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಸ್ನೇಹಿತರಿಂದ‌ ಉದ್ಯೋಗವನ್ನು ನೀವು ನಿರೀಕ್ಷಿಸುವಿರಿ. ಸ್ತ್ರೀಯರ ಮಾತಿನ ಮೇಲೆ ನಿಮಗೆ ನಂಬಿಕರ ಹೋಗಬಹುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆ ಸಿಗುವುದು.

ತುಲಾ ರಾಶಿ: ಮೂರನೇ ವ್ಯಕ್ತಿಗಳಿಂದ ಉದ್ಯೋಗದ ಸುಳಿವು ಸಿಗುವ ಸಾಧ್ಯತೆ ಇದೆ. ನಿಮ್ಮ ತಪ್ಪಿಗೆ ಯಾವುದೋ ಒಂದು ರೀತಿಯಲ್ಲಿ ಪ್ರಾಯಶ್ಚಿತ್ತವಾಗಲಿದೆ. ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ಮಾತಿನಲ್ಲಿ ಹಿಡಿತವಿಲ್ಲದೇ ಮನ ಬಂದಂತೆ ಮಾತನಾಡುವಿರಿ. ದಾಖಲೆಗಳ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ನಿಮ್ಮ ಬಗ್ಗೆ ಪ್ರೀತಿಯುಳ್ಳವರು ನಿಮ್ಮನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ. ಏನಾದರೂ ಸಾಧಿಸಲು ಸ್ವಲ್ಪ ರಾಜಕಾರಣ ಮಾಡಬೇಕಾಗಬಹುದು. ಮಾಡಬೇಕಾಗುತ್ತದೆ. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ನಿಮ್ಮ ಮಾತಿನಿಂದ ನೀವು ಹಗುರಾಗುವಿರಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ.

ವೃಶ್ಚಿಕ ರಾಶಿ: ಸಾಹಿತ್ಯ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ಸಾಗುವುದು. ವ್ಯವಸ್ಥೆಯನ್ನು ಸರಿ ಮಾಡುವ ಉದ್ದೇಶವೇ ನಿಮ್ಮಲ್ಲಿ ಇರುವುದು. ನಿಮಗೆ ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು. ನಿಮ್ಮ ಚಾಣಾಕ್ಷತೆಯು ಜೊತೆಗಾರರಿಗೆ ಗೊತ್ತಾಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡವನ್ನು ಹೇಳಬಹುದು. ನಿಮ್ಮ ಸ್ನೇಹ ಬಳಗವು ದೊಡ್ಡದಾಗುವುದು. ಭೂಮಿಯ ಖರೀದಿಗೆ ಇಂದು ಸ್ಥಳವನ್ನು ಪರಿಶೀಲಿಸುವಿರಿ. ಪ್ರಮುಖ ದಾಖಲೆಗಳು ಕಣ್ಮರೆಯಾದೀತು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ನಾಯಕರಾಗುವ ಸಾಧ್ಯತೆ ಇದೆ.

ಧನು ರಾಶಿ: ಅಧಿಕಾರಿಗಳು ಸಹನೆಯನ್ನು ಇಟ್ಟುಕೊಳ್ಳಬೇಕಾಗುವುದು. ಹಿರಿಯರಿಗೆ ನಿಮ್ಮ‌ ಮೇಲೆ ಸದಭಿಪ್ರಾಯ ಮೂಡದೇ ಇರಬಹುದು. ನಿಮ್ಮ ಸಹೋದರರಿಂದ ನಿಮಗೆ ಆಕಸ್ಮಿಕವಾಗಿ ಸಹಾಯ ಸಿಗಬಹುದು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿ. ಮೇಲಧಿಕಾರಿಗಳು ನಿಮ್ಮ ಮೇಲೆ‌ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ನಿಮಗೆ ವ್ಯಥೆಯು ಇರಲಿದೆ. ಆಡಂಬರವು ನಿಮಗೆ ಖುಷಿಕೊಡುಬುದು. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ. ಮನೆಯ ಕೆಲಸವನ್ನು ಮಾಡಲು ಉತ್ಸಾಹವೇ ಇರದು. ಸಣ್ಣ ಪಾಲು ಕೈತಪ್ಪಬಹುದು. ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.

ಮಕರ ರಾಶಿ: ಸ್ನೇಹಿತರ ಸಹಕಾರದಿಂದ ಕೌಟುಂಬಿಕ ಸಮಸ್ಯೆಯನ್ನು ಸರಿಮಾಡಿಕೊಳ್ಳಬಹುದು. ಯಾರದ್ದಾರೂ ಮಾತು ನಿಮಗೆ ಖುಷಿಕೊಡುವುದಾದರೆ ಅಂತಹುದನ್ನು ಕೇಳಿ. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ದ್ರವ ಪದಾರ್ಥಗಳ‌ ಮಾರಾಟವನ್ನು ನೀವು ಮಾಡುವಿರಿ. ನಿಮ್ಮ‌ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು.‌ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ ಹೋಗುವ ಮನಸ್ಸು ಮಾಡುವಿರಿ. ಸುಲಭವಾದ ಮಾರ್ಗವನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ದೈವಭಕ್ತಿಯು ಅಧಿಕವಾಗುವುದು. ಇಂದು ಸಂಯಮವು ಮುಖ್ಯ. ಹಿರಿಯರ ಮಾತಿಗೆ ಬೆಲೆ ಇರಲಿ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಆದಾಯಕ್ಕೆ ಹೊಸ ಯೋಜನೆಯನ್ನು ರೂಪಿಸುವಿರಿ. ಕಷ್ಟವೆಂದುಕೊಂಡ ಕಾರ್ಯವು ಗೊತ್ತಾಗದೇ ಮುಗಿದುಹೋದೀತು. ಬೇಕಾದಷ್ಟು ಕೆಲಸಗಳಿದ್ದರೂ ನೀವು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ.

ಕುಂಭ ರಾಶಿ: ಒತ್ತಾಯದ ಮೇರೆಗೆ ಇಷ್ಟವಿಲ್ಲದ ಉದ್ಯೋಗಕ್ಕೆ ಸೇರಿಕೊಳ್ಳಬೇಕಾಗುವುದು. ಸಾಲಕೂಪವೂ ದಿನದಿಂದ ದಿನಕ್ಕೆ ಹೆಚ್ಚಾದಂತೆ ತೋರುತ್ತದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇರುವುದು. ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಸಮಸ್ಯೆಯನ್ನು ದೊಡ್ಡದು ಅಂದುಕೊಳ್ಳುವುದಕ್ಕಿಂತ ಪರಿಹರಿಸಲು ದಾರಿಯನ್ನು ಕಂಡುಕೊಳ್ಳಿ. ಇಂದಿನ‌ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವ್ಯಾಪಾರವು ಮಧ್ಯಮ‌ ಲಾಭವನ್ನು ಗಳಿಸಬಹುದು. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು.

ಮೀನ ರಾಶಿ: ಅದೃಷ್ಟ ಬದಲಾದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳಬಹುದು. ಆದರೆ ಅದನ್ನು ನಿಮ್ಮಿಂದ ಬದಲಿಸಲು ಆಗದು. ನಿಮ್ಮ ಹಣವು ಒಳ್ಳೆಯ ಕಾರ್ಯಕ್ಕೆ ಉಪಯೋಗವಾದರೆ ಖುಷಿಪಡಿ. ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ನಿಮ್ಮ‌ ಮಾತುಗಳಿಗೆ ತೂಕವು ಕಡಿಮೆ‌ ಆಗಬಹುದು. ಸರ್ಕಾರದ ಕಾರ್ಯಕ್ಕೆ ತಡೆಗಳು ಹೆಚ್ಚು. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ನೀವು ಇಂದು‌ ಪ್ರೀತಿಯನ್ನು ಹೇಳಿಕೊಳ್ಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಖರ್ಚು ಮಾಡುವಿರಿ. ಯಾವುದನ್ನಾದರೂ ಪೂರ್ಣ ಮನಸ್ಸಿನಿಂದ ಮಾಡಿ. ಬಹಳ ದಿನಗಳ ಅನಂತರ ಚಿಕ್ಕ ಕುಟುಂಬದ ಜೊತೆ ಪ್ರಯಾಣ ಮಾಡುವಿರಿ.‌

ಲೋಹಿತ ಹೆಬ್ಬಾರ್ – 8762924271 (what’s app only)