Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 23ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 23ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 23ರ ದಿನಭವಿಷ್ಯ
ದಿನ ಭವಿಷ್ಯ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2022 | 5:24 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 23ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮ್ಮ ಬುದ್ಧಿ ಬಹಳ ಚುರುಕಾಗಿ ಹಾಗೂ ಸಮಯೋಚಿತವಾಗಿ ಬಳಸಿ, ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಬ್ಯಾಂಕ್‌ ಕೆಲಸಗಳನ್ನು ಬೇಗ ಬೇಗ ಮುಗಿಸುವುದಕ್ಕೆ ಮಾಡುವ ಪ್ರಯತ್ನಗಳು ಸಫಲವಾಗಲಿವೆ. ರೈಲು ಪ್ರಯಾಣ ಮಾಡುವಂಥವರು ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ನಿಮ್ಮ ವಸ್ತುಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ. ಸಾಧ್ಯವಾದಲ್ಲಿ ಪ್ರಯಾಣವನ್ನು ಮುಂದೂಡಿ.

ಜನ್ಮಸಂಖ್ಯೆ 2

ನೀವಾಡಿದ ಅಥವಾ ಆಡುವ ಮಾತಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಲಾಗುತ್ತದೆ. ದೀರ್ಘ ಕಾಲದ ಗೆಳೆಯ ಅಥವಾ ಗೆಳತಿಯರ ಬಗ್ಗೆ ಆಕ್ಷೇಪಗಳನ್ನು ಕೇಳಬೇಕಾಗುತ್ತದೆ. ಯಾರಾದರೂ ಸರಿ, ಅವರೊಂದಿಗೆ ವಾದಕ್ಕೆ ಇಳಿಯಬೇಡಿ. ನಿಮ್ಮ ಕಷ್ಟಕಾಲದಲ್ಲಿ ಆಗಿದ್ದವರು ಈಗ ಸಹಾಯ ಕೇಳಿಬಂದಲ್ಲಿ ನಿಮ್ಮಿಂದಾದ ನೆರವು ನೀಡಿ. ಈ ದಿನ ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ.

ಜನ್ಮಸಂಖ್ಯೆ 3

ಈ ದಿನ ದಯೆ- ಕರುಣೆ, ಅನುಕಂಪ ನಿಮಗೆ ಹೆಚ್ಚಾಗಿರುತ್ತದೆ. ಇನ್ನು ನಲವತ್ತು ವರ್ಷ ಮೇಲ್ಪಟ್ಟವರಿದ್ದಲ್ಲಿ ಕೆಲವು ಮೂಲಭೂತ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮುಖ್ಯವಾಗಿ ದೇಹದ ತೂಕದ ಕಡೆಗೆ ನಿಗಾ ಕೊಡಿ. ಇತರರ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಿ. ಸಾಧ್ಯವಾದಲ್ಲಿ ಸಾಯಿಬಾಬ ಮಂದಿರ ಅಥವಾ ಗುರುದ್ವಾರಕ್ಕೆ ಭೇಟಿ ನೀಡಿ.

ಜನ್ಮಸಂಖ್ಯೆ 4

ನಿಮಗೆ ಗೊತ್ತೇ ಆಗದಂತೆ ಬೆನ್ನ ಹಿಂದೆ ಏನೋ ಮಸಲತ್ತು ನಡೆಯುತ್ತಿದೆ ಎಂಬ ಗುಮಾನಿ ನಿಮಗೆ ಮೂಡುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಕೆಲವು ಬೆಳವಣಿಗೆಗಳು ಕೂಡ ಆಗಬಹುದು. ಆ ಕಾರಣಕ್ಕೆ ನಿಮ್ಮ ನೆಮ್ಮದಿ ಹಾಳುಮಾಡಿಕೊಳ್ಳದಿರಿ, ಯಾರನ್ನೂ ದೂಷಣೆ ಮಾಡದಿರಿ. ಏಕೆಂದರೆ ಇದು ತಾತ್ಕಾಲಿಕ ಅಷ್ಟೇ. ಇಂದು ಸಾಧ್ಯವಾದಲ್ಲಿ ನೀವು ಇಚ್ಛೆ ಅಥವಾ ನಂಬಿಕೆಯಂತೆ ಭಗವದ್ಗೀತೆ, ಕುರ್‌ಆನ್ ಅಥವಾ ಬೈಬಲ್ ಹೀಗೆ ಯಾವುದಾದರೂ ಪ್ರವಚನವನ್ನು ಸ್ವಲ್ಪ ಸಮಯ ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 5

ಈ ದಿನ ಮನಸ್ಸಿನಲ್ಲಿ ಒಂದು ಬಗೆಯ ಉತ್ಸಾಹ, ಉಲ್ಲಾಸ ಇರುತ್ತದೆ. ಮನಸ್ಸಿನಲ್ಲಿನ ಪ್ರೀತಿಯನ್ನು ಸಂಗಾತಿ ಜತೆಗೆ ಮುಕ್ತವಾಗಿ ಹಂಚಿಕೊಳ್ಳಿ. ಜತೆಯಾಗಿ ವಾಕಿಂಗ್ ಹೋಗಿಬನ್ನಿ. ಒಂದು ವೇಳೆ ಪರಸ್ಪರ ಪ್ರೇಮಿಗಳಾದರೂ ಸರಿ, ಇವತ್ತು ಸ್ವಲ್ಪ ಸಮಯ ಜತೆಗೆಯಾಗಿ ಇರಿ. ನಿಮ್ಮ ಭವಿಷ್ಯದ ಅತಿ ದೊಡ್ಡ ಕನಸು ರೂಪುಗೊಳ್ಳಬಹುದಾದ ದಿನ ಇದು. ನಿಮ್ಮ ಮೊಬೈಲ್‌ನಲ್ಲಿ ಅವಕಾಶ ಇದ್ದರೆ ಲಕ್ಷ್ಮೀ ಚಿತ್ರವನ್ನು ಸ್ಕ್ರೀನ್ ಸೇವರ್ ಮಾಡಿಕೊಳ್ಳಿ ಅಥವಾ ವಾಟ್ಸ್‌ ಆಪ್ ಡಿಪಿ ಆಗಿಯಾದರೂ ಮಾಡಿಟ್ಟುಕೊಳ್ಳಿ.

ಜನ್ಮಸಂಖ್ಯೆ 6

ಹೋಮ್ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್ ಅಥವಾ ವ್ಯಾಪಾರದ ಸಲುವಾಗಿ ಸಾಲ ಹೀಗೆ ಯಾವುದಾದರೂ ಸಾಲಕ್ಕೆ ಪ್ರಯತ್ನಿಸುವ ಅಥವಾ ಆ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ. ನಿಮ್ಮ ಅಗತ್ಯ ಅಥವಾ ಆ ಪ್ರಾಜೆಕ್ಟ್‌ಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಸಾಲ ಮಾಡಿ. ಬಡ್ಡಿ ಕಡಿಮೆ ಅಥವಾ ಇಎಂಐ ಕಡಿಮೆ ಅಂತ ಜಾಸ್ತಿ ಸಾಲಕ್ಕೆ ಹೋಗಬೇಡಿ.

ಇದನ್ನು ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 22ರ ದಿನಭವಿಷ್ಯ 

ಜನ್ಮಸಂಖ್ಯೆ 7

ಇತರರಿಗೆ ಸಲಹೆ ನೀಡುವ ಮುಂಚೆ ಅವರಿಗೆ ನಿಮ್ಮ ಬಗ್ಗೆ ಎಂಥ ಭಾವನೆ ಇದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಅಂತರಂಗದ ವಿಚಾರವನ್ನು ಹಂಚಿಕೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಯೋಚಿಸಿ, ಆ ನಂತರ ಹೇಳಿಕೊಳ್ಳಿ. ಧಾರ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ರಾತ್ರಿ ಮಲಗುವ ಮುನ್ನ ಕೆಲವು ಪುಟಗಳಷ್ಟಾದರೂ ರಾಮಾಯಣ, ಮಹಾಭಾರತ ಸೇರಿದಂತೆ ನೀವು ಇಷ್ಟ ಪಡುವ, ಓದ ಬಯಸುವ ವಿಚಾರಗಳನ್ನು ಓದಿ.

ಜನ್ಮಸಂಖ್ಯೆ 8

ನಿಮಗೆ ಕೌನ್ಸೆಲಿಂಗ್‌ನ ಅಗತ್ಯ ಇದೆ, ಸಣ್ಣ- ಪುಟ್ಟ ವಿಚಾರಗಳಿಗೂ ವಿಪರೀತ ರಿಯಾಕ್ಟ್‌ ಮಾಡುತ್ತಿದ್ದೀರಿ ಎಂದು ಯಾರಾದರೂ ನಿಮಗೆ ಹೇಳಿದಲ್ಲಿ ಅದನ್ನು ಗಂಭೀರವಾಗಿ ಆಲೋಚಿಸಿ. ಮನಸ್ಸು ಪ್ರಶಾಂತವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿ. ನನ್ನಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ನನ್ನ ಸಾಮರ್ಥ್ಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ನಿಮಗೆ ಅನಿಸುವ ಸಾಧ್ಯತೆ ಇದೆ. ನಿಮ್ಮ ಕಣ್ಣಿಗೆ ಇರುವೆಗಳ ಗುಂಪು ಕಂಡರೆ ಅವುಗಳಿಗೆ ಸಕ್ಕರೆ ಹಾಕಿ.

ಜನ್ಮಸಂಖ್ಯೆ 9

ಷೇರು ಮಾರುಕಟ್ಟೆ, ಲೋಹದ ವ್ಯಾಪಾರ, ಎಲೆಕ್ಟ್ರಿಕಲ್ ವಸ್ತುಗಳ ಮಾರಾಟ ಮಾಡುವವರಿಗೆ ಈ ದಿನ ಮಿಶ್ರ ಫಲ ಇದೆ. ನೀವೇ ಮಾಡಬೇಕಾದ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವುದಕ್ಕೆ ಹೋಗಬೇಡಿ. ಇನ್ನು ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಸಣ್ಣ- ಪುಟ್ಟ ಅನಾರೋಗ್ಯ ಆಗಬಹುದು. ಇನ್ನು ವಿದ್ಯಾರ್ಥಿಗಳು ಪ್ರಯಾಣದ ಮೂಲಕ ಹೊಸದನ್ನು ಕಲಿಯಲಿದ್ದಾರೆ.

ಎನ್‌.ಕೆ.ಸ್ವಾತಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ