Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ನ. 25ರ ದಿನ ಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಈಗ ಜನ್ಮಸಂಖ್ಯೆಯ ಅನುಗುಣವಾಗಿ ನವೆಂಬರ್ 25ರ ಶುಕ್ರವಾರದ ನಿಮ್ಮ ದಿನ ಭವಿಷ್ಯ ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಿ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ನ. 25ರ ದಿನ ಭವಿಷ್ಯ
ರಾಶಿ
TV9kannada Web Team

| Edited By: Ramesh B Jawalagera

Nov 25, 2022 | 6:12 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (numerology daily horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 25ರ ಶುಕ್ರವಾರದ ದಿನ ಭವಿಷ್ಯ (daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ನ. 20ರಿಂದ 26ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಜನ್ಮಸಂಖ್ಯೆ 1

ಅನಿರೀಕ್ಷಿತ ಅತಿಥಿಗಳ ಆಗಮನ ಆಗುತ್ತದೆ. ಯಾವುದೋ ಕಾಲದಿಂದ ಪ್ರಯತ್ನ ಮಾಡುತ್ತಿದ್ದ ಸಾಲವು ದೊರೆಯುವ ಸೂಚನೆಗಳು ಸಿಗಲಿವೆ. ಸ್ನೇಹಿತರು- ಸ್ನೇಹಿತೆಯರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಜನ್ಮಸಂಖ್ಯೆ 2

ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವ ಅವಕಾಶಗಳು ಬರಲಿವೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್‌ಗಳು ವಿಸ್ತರಣೆ ಮಾಡಿಕೊಳ್ಳುವ ಅವಕಾಶಗಳಿವೆ. ಹೊಸದಾಗಿ ಪ್ರಾಜೆಕ್ಟ್‌ಗಳನ್ನು ಶುರು ಮಾಡಬೇಕು ಎಂದುಕೊಂಡವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದ್ದು, ಪ್ರಯತ್ನಗಳು ಯಶ ಕಾಣಲಿವೆ. ಪ್ರೇಮಿಗಳು ಸ್ವಲ್ಪ ಮಟ್ಟಿಗೆ ಪರೀಕ್ಷೆಯ ದಿನ. ಯಾವುದೇ ವಾದ- ವಿವಾದ ಬೇಡ.

ಜನ್ಮಸಂಖ್ಯೆ 3

ನಿಮ್ಮ ಮನಸ್ಸಿನಲ್ಲಿ ಇಂಥವರನ್ನೇ ಮದುವೆ ಆಗಬೇಕು ಎಂದು ನಿಶ್ಚಯಿಸಿ, ಈ ದಿನ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಬೇಕು ಎಂದಿದ್ದಲ್ಲಿ ಸಾಧ್ಯವಾದರೆ ಬೇರೆ ದಿನಕ್ಕೆ ಮುಂದೂಡಿ. ಏಕೆಂದರೆ ನಿಮ್ಮ ಮನೆಯಲ್ಲಿ ಒಪ್ಪಿಸುವುದು ಕಷ್ಟವಾಗುತ್ತದೆ. ಇನ್ನು ವಯೋಸಹಜ ಅನಾರೋಗ್ಯ ಸಮಸ್ಯೆ ಇರುವಂಥವರು ವೈದ್ಯರನ್ನು ಬದಲಾಯಿಸಬೇಕು ಎಂದಿದಲ್ಲಿ ಸದ್ಯಕ್ಕೆ ಬೇಡ.

ಜನ್ಮಸಂಖ್ಯೆ 4

ನಿಮ್ಮಿಂದ ಸಹಾಯ ಕೇಳಿಕೊಂಡು ಸ್ನೇಹಿತರೋ ಪರಿಯಸ್ಥರೋ ಬರುವ ಸಾಧ್ಯತೆ ಇದೆ. ಅವರಿಗೆ ಹೌದೆನ್ನಬೇಕೋ ಇಲ್ಲ ಎನ್ನಬೇಕೋ ಎಂಬುದು ತಿಳಿಯದೆ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಮಕ್ಕಳು ಹದಿಹರೆಯದವರಾಗಿದ್ದರೆ ಅವರ ಬಗ್ಗೆ ಆಕ್ಷೇಪಗಳು, ದೂರುಗಳು ಕೇಳಿಬರುತ್ತವೆ. ಈ ವಿಚಾರವನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ತೆರಳಲು ಸಾಧ್ಯವಾದಲ್ಲಿ ದರ್ಶನ ಮಾಡಿ.

ಜನ್ಮಸಂಖ್ಯೆ 5

ಈ ದಿನ ಬಹಳ ಬೇಸರ ಕಾಡುತ್ತದೆ. ಈ ಹಿಂದೆ ನೀವು ಮಾಡಿದ್ದ ತಪ್ಪುಗಳನ್ನು ಬೇಡ ಅಂದರೂ ನೆನಪಿಸಿಕೊಳ್ಳುವಂತಾಗುತ್ತದೆ. ಯಾರದೋ ನೆನಪು, ಯಾವುದೋ ಕೆಲಸ ನೆನಪಾಗಿ ಬೆನ್ನತ್ತುತ್ತಿದೆ ಅಂದರೆ ಸಾಧ್ಯವಾದಷ್ಟೂ ಕೆಲಸಗಳಲ್ಲಿ ತೊಡಗಿಕೊಳ್ಳಿ. ಅಧ್ಯಾತ್ಮ ಚಿಂತನೆ, ಧ್ಯಾನದಲ್ಲಿ ಭಾಗಿ ಆಗಿ. ಭವಿಷ್ಯದ ಬಗ್ಗೆ ವಿಪರೀತ ಯೋಚಿಸದಿರಿ.

ಜನ್ಮಸಂಖ್ಯೆ 6

ನೀವು ಕೂಡಿಟ್ಟುಕೊಂಡಿದ್ದ ಹಣವನ್ನು ಖರ್ಚು ಮಾಡುವ ಅಥವಾ ಹೂಡಿಕೆ ಮಾಡುವ ದಾರಿ ಕಾಣಿಸಿಕೊಳ್ಳುತ್ತದೆ. ಈ ದಿನ ಮನಸ್ಸಿಗೆ ತೋಚುವ ಅಥವಾ ಇನ್ನೊಬ್ಬರ ಬಗ್ಗೆ ಹೊಳೆಯುವ ಸಂಗತಿಗಳನ್ನು ಉಪೇಕ್ಷೆ ಮಾಡಬೇಡಿ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ದೂರ ಇರಬೇಕು. ಅಥವಾ ವಾಟ್ಸಾಪ್ ಗ್ರೂಪ್, ಫೇಸ್‌ಬುಕ್ ಕಮ್ಯುನಿಟಿ ಹೀಗೆ ಯಾವುದರಿಂದಾದರೂ ಆಚೆ ಬರಬೇಕು ಎಂದಾದಲ್ಲಿ ಮುಲಾಜಿಲ್ಲದೆ ಹೊರಬನ್ನಿ.

ಜನ್ಮಸಂಖ್ಯೆ 7

ನಿಮ್ಮ ಬಗ್ಗೆ ನಿಮಗೆ ಅಪರಿಮಿತವಾದ ಆತ್ಮವಿಶ್ವಾಸ, ಭರವಸೆ ಮೂಡುವ ದಿನ ಇದು. ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೂಕ್ತವಾದ ದಿನ ಇದು. ಎಲ್ಲರನ್ನೂ ಜತೆಗೆ ಕರೆದುಕೊಂಡು ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಅಪೇಕ್ಷೆಗೆ ತಕ್ಕಂತೆ ಬೆಳವಣಿಗೆಗಳನ್ನು ಕಾಣಬಹುದು. ಆದರೆ ಹಣಕಾಸು ಖರ್ಚಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪಬೇಡಿ.

ಜನ್ಮಸಂಖ್ಯೆ 8

ನೀವಿಂದು ಭ್ರಮಾಧೀನ ಸ್ಥಿತಿಯಲ್ಲಿ ಇರುತ್ತೀರಿ. ಹೀಗಾದರೆ ಹಾಗದರೆ ಎಂಬ ರೆಗಳಿಂದ ದೂರ ಇರಿ. ಹಗಲುಗನಸು ಬೇಡವೇ ಬೇಡ, ವಾಸ್ತವದಲ್ಲಿ ಏನು ಸಾಧ್ಯವೋ ಅದನ್ನು ಒಪ್ಪಿಕೊಳ್ಳಿ. ನಿಮ್ಮ ಭಾವನೆ, ಅಸಹಾಯಕತೆಯನ್ನು ಬಳಸಿಕೊಂಡು ಲಾಭ ಪಡೆಯುವುದಕ್ಕೆ ಹವಣಿಸುವವರಿಗೆ ಬಲಿ ಆಗಬೇಡಿ. ನಿರಂತರ ಅಧ್ಯಯನ ಅಥವಾ ಅನುಭವ ನಿಮ್ಮನ್ನು ಕಾಪಾಡಲಿದೆ.

ಜನ್ಮಸಂಖ್ಯೆ 9

ನಿಮ್ಮ ಮನಸ್ಸಿಗೆ ಮೆಚ್ಚುವಂಥ ಜೀವನ ಸಂಗಾತಿ ದೊರೆಯುವ ಅವಕಾಶ ಹೆಚ್ಚಿದೆ. ಆದರೆ ಸ್ವಲ್ಪ ಹಿನ್ನೆಲೆ, ಅಭಿರುಚಿ ಹಾಗೂ ನಿಮ್ಮ ಮನಸ್ಥಿತಿಗೆ ಹೊಂದಾಣಿಕೆ ಆಗುತ್ತಾರೆ ಎಂದು ಪೂರ್ವಾಪರ ಚಿಂತಿಸಿ, ಮುಂದಕ್ಕೆ ಹೆಜ್ಜೆ ಇಡಿ. ಹಾಲಿನ ಪದಾರ್ಥಗಳು ಸೇವನೆ ಮಾಡುವಾಗ ಎಚ್ಚರಿಕೆ ಅಗತ್ಯ. ಲಾಂಗ್ ಡ್ರೈವ್ ಹೋಗುವ ಸಾಧ್ಯತೆ ಇದೆ. ದೇಹದ ತೂಕದ ಕಡೆಗೆ ಲಕ್ಷ್ಯ ನೀಡಿ.

ಲೇಖನ- ಎನ್‌.ಕೆ.ಸ್ವಾತಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada