Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 27ರ ದಿನ ಭವಿಷ್ಯ
ನಿಮ್ಮ ಜನ್ಮಸಂಖ್ಯೆಯ ಆಧಾರದ ಮೇಲೆ ನವೆಂಬರ್ 27ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 27ರ ದಿನಭವಿಷ್ಯ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 27ರ ಭಾನುವಾರದ ದಿನ ಭವಿಷ್ಯ(numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ನಿಮ್ಮ ಸವಾಲುಗಳನ್ನು ಮೀರಿ ನಿಲ್ಲುತ್ತೀರಿ. ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ಸಾಲ ಇದ್ದಲ್ಲಿ ತೀರಿಸಿಕೊಳ್ಳುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ತರುತ್ತೀರಿ. ಈ ಹಿಂದೆ ನೀವು ನೀಡಿದ್ದ ಮಾತು- ಭರವಸೆಗಳ ಕಡೆಗೆ ಗಮನ ನೀಡಿ. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 2
ವಿನಾಕಾರಣ ಶತ್ರುತ್ವ ಬೆಳೆಯುವಂತೆ ಆಗುತ್ತದೆ. ವಾಹನಗಳು ಪದೇ ಪದೇ ರಿಪೇರಿಗೆ ಬರುತ್ತವೆ. ಸಾಧ್ಯವಾದಷ್ಟೂ ವಾಹನಗಳನ್ನು ಬೇರೆಯವರಿಗೆ ನೀಡದಿರಿ. ಅಥವಾ ನೀವೇ ಚಲಾಯಿಸುವಾಗ ಕೂಡ ಹೆಚ್ಚಿನ ನಿಗಾ ಮಾಡಿ. ದೇವರ ಮೇಲೆ ನಂಬಿಕೆ ಕಳೆದುಕೊಳ್ಳದಿರಿ ಹಾಗೂ ತಪ್ಪು ವಿಚಾರಗಳಿಗೆ ಮನಸ್ಸು ಕೊಡದಿರಿ.
ಜನ್ಮಸಂಖ್ಯೆ 3
ಹಣಕಾಸಿನ ಹರಿವು ಚೆನ್ನಾಗಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅದು ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುತ್ತಾ ಬರುತ್ತಿರುವುದು ಅನುಭವಕ್ಕೆ ಬರಲಿದೆ. ದೊಡ್ಡ ಮಟ್ಟದ ಪ್ರಾಜೆಕ್ಟ್‌ಗಳಿಗೆ ಕೈ ಹಾಕುವುದಿದ್ದಲ್ಲಿ, ಸಾಲ ಮಾಡುವುದಿದ್ದಲ್ಲಿ ಸಾವಿರ ಬಾರಿ ಆಲೋಚನೆ ಮಾಡಿ. ನಿಮ್ಮಿಂದ ಸಾಧ್ಯ ಆಗುವಂಥದ್ದರ ಬಗ್ಗೆ ಮಾತ್ರ ಮಾತು ನೀಡಿ, ಇಲ್ಲದಿದ್ದರೆ ಮಾತು ತಪ್ಪುವಂತಾಗುತ್ತದೆ.
ಜನ್ಮಸಂಖ್ಯೆ 4
ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಸಂಬಳ ಹೆಚ್ಚಳ, ಬಡ್ತಿ, ಹೊಸ ವ್ಯಾಪಾರದ ಆಲೋಚನೆಗಳು ಬರಲಿದೆ. ವ್ಯಾಪಾರವನ್ನು ಹೊಸದಾಗಿ ಆರಂಭಿಸಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ದೊರೆಯಲಿದೆ.
ಜನ್ಮಸಂಖ್ಯೆ 5
ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ.
ಜನ್ಮಸಂಖ್ಯೆ 6
ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ಆ ಮೂಲಕ ಕೆಲವು ಕಠಿಣವಾದ ಕೆಲಸ ಸಹ ಸಲೀಸಾಗಿ ಮಾಡಿ ಮುಗಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತದೆ.
ಜನ್ಮಸಂಖ್ಯೆ 7
ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡದಿರಿ. ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ ಇರುತ್ತದೆ. ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು
ಜನ್ಮಸಂಖ್ಯೆ 8
ನೀವು ಹೇಳುವ ವಿಚಾರಕ್ಕೆ ನಾನಾ ಬಣ್ಣ ಕಟ್ಟಿ ದುರಭಿಪ್ರಾಯ ಮೂಡಿಸಲಾಗುತ್ತದೆ. ಆಲಸ್ಯದಿಂದಲೋ ಅಸಡ್ಡೆಯಿಂದಲೋ ನೀವು ನಡೆದುಕೊಳ್ಳುವ ರೀತಿಗೆ ಸಮಸ್ಯೆ ತಂದುಕೊಳ್ಳುತ್ತೀರಿ. ಮನೆಯಲ್ಲಿ ನೆಮ್ಮದಿ ವಾತಾವರಣ, ಸಜ್ಜನರ ಸಹವಾಸ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳನ್ನು ಕಾಣಲಿದ್ದೀರಿ.
ಜನ್ಮಸಂಖ್ಯೆ 9
ತಂದೆ ಅಥವಾ ತಂದೆಗೆ ಸಮಾನರಾದವರು ಅಂದರೆ, ದೊಡ್ಡಪ್ಪ- ಚಿಕ್ಕಪ್ಪ, ಮಾವ ಇವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಗಳು ಅತ್ಯುತ್ತಮ ಲಾಭವನ್ನು ನೀಡುತ್ತವೆ. ಸೈಟು ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವುಗಳನ್ನು ಕಾಣುತ್ತೀರಿ.
ಲೇಖನ- ಎನ್.ಕೆ.ಸ್ವಾತಿ